Brain Fog: ಮೆದುಳಿಗೆ ಮಂಕು ಕವಿದರೆ ಯಾವೆಲ್ಲಾ ಸಮಸ್ಯೆಗಳಾಗುತ್ತವೆ ಗೊತ್ತಾ? ಅದಕ್ಕೆ ಕಾರಣಗಳೇನು?
ಕೆಲವೊಮ್ಮೆ ನಾವು ಏನು ಕೆಲಸ ಮಾಡುತ್ತಿದ್ದೇವೆ ಎನ್ನುವ ಅರಿವೇ ಇರುವುದಿಲ್ಲ. ಕೆಲ ಕ್ಷಣಗಳ ಕಾಲ ಮಬ್ಬು ಕವಿದ ಅನುಭವವಾಗುತ್ತದೆ ಇದು ಮೆದುಳಿಗೆ ಮಂಕು ಕವಿದಿದೆ ಎನ್ನುವ ಲಕ್ಷಣವಾಗಿದೆ. ಇದನ್ನು ವೈದ್ಯರು Brain fog ಎಂದು ಕರೆಯುತ್ತಾರೆ.
ಕೆಲವೊಮ್ಮೆ ನಾವು ಏನು ಕೆಲಸ ಮಾಡುತ್ತಿದ್ದೇವೆ ಎನ್ನುವ ಅರಿವೇ ಇರುವುದಿಲ್ಲ. ಕೆಲ ಕ್ಷಣಗಳ ಕಾಲ ಮಬ್ಬು ಕವಿದ ಅನುಭವವಾಗುತ್ತದೆ ಇದು ಮೆದುಳಿಗೆ ಮಂಕು ಕವಿದಿದೆ ಎನ್ನುವ ಲಕ್ಷಣವಾಗಿದೆ. ಇದನ್ನು ವೈದ್ಯರು Brain fog ಎಂದು ಕರೆಯುತ್ತಾರೆ. ಕೆಲವೊಮ್ಮೆ ಮಾಡುವ ಕೆಲಸದಲ್ಲಿ ಗೊಂದಲ, ಯಾವುದು ಮೊದಲು ಮಾಡಬೇಕು, ಯಾವುದು ಬಿಡಬೇಕು ಎನ್ನುವ ಕನ್ಫ್ಯೂಷನ್, ಯಾವುದೇ ವಿಚಾರದ ಬಗ್ಗೆ ಏಕಾಗ್ರತೆ ಇಲ್ಲದೇ ಇರುವುದನ್ನು Brain fog ಅಥವಾ ಮೆದುಳಿಗೆ ಮಂಕು ಕವಿದಿದೆ ಎನ್ನುತ್ತಾರೆ. ಇದು ಕೊರೋನಾ ಲಕ್ಷಣಗಳೇನು ಅಲ್ಲ ಹೆದರದಿರಿ. ಆದರೆ ನೆನಪಿಡಿ ಈ ರೀತಿ ಮೆದುಳಿಗೆ ಮಬ್ಬು ಆವರಿಸುವುದು ಬೇರೆ ಯಾವುದೋ ರೋಗದ ಲಕ್ಷಣವಿರಬಹುದು. ದೀರ್ಘಕಾಲ ಈ ರೀತಿ ಮುಂದುವರೆದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಹಾಗಾದರೆ Brain fog ಇದ್ದರೆ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ?
ಏಕಾಗ್ರತೆಯ ನಷ್ಠ Brain fog ಆವರಿಸಿದರೆ ನೀವು ಮಾಡುವ ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ. ಮಾಡುವ ಕೆಲಸವನ್ನು ಬಿಟ್ಟು ಇನ್ಯಾವುದೋ ಅಸಂಭದ್ಧ ಯೋಚನೆಗಳಿಗೆ ಮೊರೆಹೋಗಿ ಸಮಯ ವ್ಯರ್ಥ ಮಾಡಬೇಕಾಗುತ್ತದೆ. ಅನಗತ್ಯ ಕಲ್ಪನೆಗಳನ್ನು ಮನಸಿನಲ್ಲಿ ಮೂಡಿಸಿಕೊಂಡು ವಿಚಿತ್ರ ಆಲೋಚನೆಗಳು ನಿಮ್ಮ ಬೆನ್ನುಹತ್ತಬಹುದು. ಹೀಗಾಗಿ ಏಕಾಗ್ರತೆಯ ಕೊರೆತೆಯಾದರೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.
ಖಿನ್ನತೆಗೆ ಒಳಗಾಗಬಹುದು ಮೆದುಳಿಗೆ ಮಂಕು ಕವಿದರೆ ನಿಮಗೆ ಅರಿವಿಲ್ಲದಂತೆ ನೀವು ಖಿನ್ನತೆಗೆ ಒಳಗಾಗಬಹುದು. ಅನಗತ್ಯ ಚಿಂತೆಗಳು ಕಾಡಬಹುದು, ಎದುರಿಗುವವರಿಗೆ ಸರಿಯಾಗಿ ಪ್ರತಿಕ್ರಿಯಸದೇ ಇರುವುದು ಕೂಡ ಖಿನ್ನತೆಯ ಲಕ್ಷಣವಾಗಿದೆ. ಹೀಗಾಗಿ ನಿಮ್ಮ ನಡುವಳಿಕೆಯ ಬಗ್ಗೆ ನೀವು ಎಚ್ಚರವಹಿಸುವುದು ಅಗತ್ಯವಾಗಿದೆ.
ಹಾರ್ಮೋನ್ಗಳಲ್ಲಿ ವ್ಯತ್ಯಾಸ ಮೆದುಳಿಗೆ ಮಂಕು ಕವಿದಿದ್ದರೆ ಹಾರ್ಮೋನುಗಳಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಇದರಿಂದ ತಲೆನೋವು, ಒತ್ತಡ ಉಂಟಾಗುತ್ತದೆ. ಹಾರ್ಮೋನುಗಳ ವ್ಯತ್ಯಾಸ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಹಾಗೆಂದು ನಿರ್ಲಕ್ಷಿಸಬೇಡಿ. ಒತ್ತಡ, ತಲೆನೋವು ತೀವ್ರ ಗೊಂದಲಗಳಾಗುತ್ತಿದ್ದರೆ ವ್ಯದ್ಯರನ್ನು ಸಂಪರ್ಕಿಸಿ.
Brain fogಗೆ ಕಾರಣಗಳೇನು?
ವಿಶ್ರಾಂತಿ ಮತ್ತು ನಿದ್ದೆಯ ಕೊರತೆ ಆರೋಗ್ಯಯುತ ಜೀವನ ನಿರ್ವಹಣೆಗೆ ಪ್ರತಿದಿನ 8 ರಿಂದ 9 ಗಂಟೆಗಳ ನಿದ್ದೆ ಬೇಕು. ಅಲ್ಲದೆ ನಿಮ್ಮ ಕೆಲಸದ ನಡುವೆ ವಿಶ್ರಾಂತಿ ಪಡೆಯುವುದು ಕೂಡ ಅತೀ ಮುಖ್ಯವಾಗಿದೆ. ಸರಿಯಾದ ನಿದ್ದೆ ಮತ್ತು ವಿಶ್ರಾಂತಿಯ ಕೊರೆತೆಯಾದರೆ Brain fog ಅಥವಾ ಮೆದುಳಿಗೆ ಮಬ್ಬು ಕವಿಯುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಡಯೆಟ್ನಲ್ಲಿ ವ್ಯತ್ಯಾಸ ಆರೋಗ್ಯಯುತ ಡಯೆಟ್ ಅಭ್ಯಾಸ ನಿಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಆದರೆ ನೆನಪಿಡಿ ನಿಮ್ಮ ಅನಾರೋಗ್ಯಕರ ಡಯೆಟ್ ಅಭ್ಯಾಸ ಮೆದುಳಿಗೆ ಕಬ್ಬು ಕವಿಯುವಂತೆ ಮಾಡುತ್ತದೆ. ಕಾರಣ ನಿಮ್ಮ ದೇಹಕ್ಕೆ ಸರಿಯಾದ ಪ್ರೋಟೀನ್ ಅಂಶ ದೊರೆಯದೇ ಇರುವುದು. ಅನಾರೋಗ್ಯಕರ ಡಯೆಟ್ ಅಭ್ಯಾಸ ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಡಯೆಎಟದದ ಪಟ್ಟಿ ಮಾಡುವಾಗ ಎಚ್ಚರಿಕೆಯಿಂದಿರಿ.
ಒತ್ತಡ ಪ್ರತಿದಿನ ಅನೇಕ ಒತ್ತಡದ ಸಂದರ್ಭಗಳಿಗೆ ಒಡ್ಡಿಕೊಳ್ಳುತ್ತೇವೆ. ಅದು ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನ ಒತ್ತಡದಿಂದ ಮೆದುಳು ನಿಮಗೆ ಸರಿಯಾದ ಸಂದೇಶ ಕೊಡುವುದನ್ನು ನಿಲ್ಲಿಸುತ್ತದೆ. ಆಗ ನಿಮಗೆ ಗೊಂದಲಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹೆಚ್ಚು ಒತ್ತಡಕ್ಕೆ ಒಳಗಾಗುವುದರಿಂದ Brain fog ಅಥವಾ ಮೆದುಳಿಗೆ ಮಬ್ಬು ಕವಿಯುವಂತೆ ಮಾಡುತ್ತದೆ.
ಇದನ್ನೂ ಓದಿ:
ಕೊವಿಡ್-19 ರೋಗಿಗಳಿಗೆ ಇನ್ನೂ 14 ದಿನಗಳ ಕ್ವಾರಂಟೈನ್ ಅಗತ್ಯವಿದೆಯೇ?: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?