Christmas 2021: ಕ್ರಿಸ್​ ಮಸ್​ ಆಚರಣೆಗೆ ಸಜ್ಜಾದ ಜನ: ಕ್ರಿಸ್​ಮಸ್​ ಆಚರಣೆಯ ಇತಿಹಾಸ, ಮಹತ್ವದ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ ಇಲ್ಲಿದೆ

2021 ಮುಗಿಯುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಇರುವ ಇಡೀ ಜಗತ್ತು ಸಂಭ್ರಮದ ಆಚರಣೆಗೆ ಎದುರು ನೋಡುತ್ತಿದೆ. ಈ ನಡುವೆ ಕ್ರಿಸ್​ಮಸ್​ ಹೊಸ ವರ್ಷದ ಆಚರಣೆಗೆ ಮತ್ತಷ್ಟು ಮೆರಗು ನೀಡುತ್ತಿದೆ.

Christmas 2021: ಕ್ರಿಸ್​ ಮಸ್​ ಆಚರಣೆಗೆ ಸಜ್ಜಾದ ಜನ: ಕ್ರಿಸ್​ಮಸ್​ ಆಚರಣೆಯ ಇತಿಹಾಸ, ಮಹತ್ವದ ಕುರಿತಾದ ಇಂಟ್ರಸ್ಟಿಂಗ್​ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Dec 24, 2021 | 11:17 AM

2021 ಮುಗಿಯುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ಇರುವ ಇಡೀ ಜಗತ್ತು ಸಂಭ್ರಮದ ಆಚರಣೆಗೆ ಎದುರು ನೋಡುತ್ತಿದೆ. ಈ ನಡುವೆ ಕ್ರಿಸ್​ಮಸ್​ ಹೊಸ ವರ್ಷದ ಆಚರಣೆಗೆ ಮತ್ತಷ್ಟು ಮೆರಗು ನೀಡುತ್ತಿದೆ. ಡಿ.25ರಂದು ಏಸುಕ್ರಿಸ್ತನ ಜನ್ಮದಿನವನ್ನು ಕ್ರಿಸ್​ಮಸ್​ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಗೆಟ್​ ಟುಗೇದರ್​ಗಳಲ್ಲಿ ಭಾಗವಹಿಸಿ, ಸ್ನೇಹಿತರನ್ನು ಭೇಟಿಯಾಗಿ ನೆನಪಿನ ಬುತ್ತಿಗೆ ಮತ್ತಷ್ಟು ಸಮಯಗಳನ್ನು ಸೇರಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಶ್ಚಿಯನ್​ ಸಮುದಾಯದವರಿಗೆ ಇರುವ ವರ್ಷದ ಏಕೈಕ ಹಬ್ಬ ಕ್ರಿಸ್​ಮಸ್​. ಡಿಸೆಂಬರ್​ 25ರಂದು ಆಚರಿಸುವ ಈ ಹಬ್ಬದ ಸಂಭ್ರಮ ಡಿಸೆಂಬರ್ 24ರ ರಾತ್ರಿಯಿಂದಲೇ ಆರಂಭಗೊಳುತ್ತದೆ. ಇದನ್ನು ಕ್ರಿಸ್​ಮಸ್​ ಈವ್​ ಎಂದು ಕರೆಯುತ್ತಾರೆ. ಕ್ರಿಶ್ಚಿಯನ್ ಸಮುದಾಯದವರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆಯನ್ನು ದೀಪಗಳ ಮೂಲಕ ಅಲಂಕರಿಸಿ, ಕ್ರಿಸ್​ಮಸ್​ ಟ್ರೀಗೆ ಲೈಟ್​ಗಳನ್ನು ಹಾಕಿ, ರಿಬ್ಬನ್​ಗಳನ್ನು ಕಟ್ಟಿ, ಕೇಕ್​, ವೈನ್​ ಸೇರಿದಂತೆ ಸಿಹಿತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ಕ್ರಿಸ್​ಮಸ್​ ಹಬ್ಬದ ಇತಿಹಾಸ ಏಸುಕ್ರಿಸ್ತನ ಜನ್ಮದಿನ ಕ್ರಿಶ್ಚಿಯನ್​ರ ಸಾಮೂಹಿಕ ದಿನವಾಗಿದೆ. ಕ್ರಿಸ್​ಮಸ್​ ಎನ್ನುವುದು ಇತ್ತೀಚೆಗೆ ಬಳಸಲ್ಪಟ್ಟ ಪದವಾಗಿದೆ. ಆದರೂ ವಿವಿಧ ದೇಶಗಳಲ್ಲಿ ಕ್ರಿಸ್​ಮಸ್​ಅನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಉದಾಹರಣೆಗೆ ಜರ್ಮನಿಯಲ್ಲಿ ಯುಲೈಟೆಡ್​, ಸ್ಪಾನಿಷ್​ನಲ್ಲಿ ನ್ಯಾವಿಡೆಡ್​ ಎಂದು ಕರೆದರೆ ಇಟಾಲಿಯನ್​ನಲ್ಲಿ ನಟಾಲ್​ ಮತ್ತು ಪ್ರಂಚ್​ನಲ್ಲಿ ನೋಯಲ್​ ಎಂದು ಕರೆಯುತ್ತಾರೆ.

ಅನೇಕ ಶತಮಾನಗಳ ಹಿಂದೆ ಯುರೋಪಿನಲ್ಲಿ ಚಳಿಗಾಲದ ಸಂದರ್ಭದಲ್ಲಿ ದೀರ್ಘವಾದ ರಾತ್ರಿಯಲ್ಲಿ ಏಸುವಿನ ಜನನವಾಗಿತ್ತು. ಜೀಸಸ್ ಕ್ರೈಸ್ಟ್​ ಮೇರಿ ಮತ್ತು ಜೋಸೆಫ್​ ದಂಪತಿಗೆ ಲೆಹಮ್​ನ ಮ್ಯಾಂಗರ್​ನಲ್ಲಿ ಏಸು ಜನಿಸಿದ್ದ. ಆಗ ಗ್ರೆಗೋರಿಯನ್​ ಕ್ಯಾಲೆಂಡರ್​ ಬಳಸುತ್ತಿದ್ದ ಕಾರಣ ಡಿಸೆಂಬರ್25ಕ್ಕೇ ಏಸುವಿನ ಜನನವಾಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಬೈಬಲ್​ನಲ್ಲಿ ಕೂಡ ಏಸುವಿನ ಜನ್ಮ ದಿನಾಂಕವನ್ನು ಕೂಡ ಉಲ್ಲೇಖಿಸಿಲ್ಲ. ಚಕ್ರವರ್ತಿ ಕಾನ್ಸ್ಟೈನ್​ ಮೊದಲ ಬಾರಿಗೆ ಡಿಸೆಂಬರ್ 25ರಂದು ಕ್ರಿಸ್​ಮಸ್​ ಆಚರಿಸಬೇಕೆಂದು ಘೋಷಿಸಿದ್ದರು. ಕೆಲವು ವರ್ಷಗಳ ಬಳಿಕ ಪೋಪ್​ ಜೂಲಿಯನ್​ 1 ಕೂಡ ಡಿಸೆಂಬರ್25ನ್ನು ಕ್ರಿಸ್ತನ ಜನ್ಮದಿನವೆಂದು ಘೋಷಿಸಿದರು. ಆರಂಭಿಕ ದಿನಗಳಲ್ಲಿ ಏಸು ಹುತಾತ್ಮನೆಂದು ನಂಬಿದ್ದ ಜನ ಕ್ರಿಸ್ತನದ ಜನನ ದಿನದ ಆಚರಣೆಯನ್ನು ವಿರೋಧಿಸಿದ್ದರು. ನಂತರ ಹುತಾತ್ಮರನ್ನು ಗೌರವಿಸುವ ಸಲುವಾಗಿ ಕ್ರಿಸ್​ಮಸ್ ಅನ್ನು ರಜಾದಿನವೆಂದು ಘೋಷಿಸಿ ಆಚರಣೆಗೆ ತರಲಾಯಿತು.

ಕ್ರಿಸ್ ಮಸ್​​ ಅಚರಣೆಯ ಮಹತ್ವ ಕ್ರಿಸ್​ಮಸ್ ಕ್ರಿಶ್ಚಿಯನ್ ಸಮುದಾಯದ ಪಾಲಿಗೆ ವಿಶೇಷ ದಿನ. ದೇವರು ತನ್ನ ಮಗನನ್ನು ಭೂಮಿಯಲ್ಲಿರುವ ಜನತೆಗೆ ತ್ಯಾಗ ಮತ್ತು ಮಾನವೀಯ ಗುಣಗಳನ್ನು ತಿಳಿಸಲು ಕಳುಹಿಸಿದ್ದಾರೆ. ಜನರಿಗೋಸ್ಕರ ತ್ಯಾಗ ಮಾಡಿ ಏಸುಕ್ರಿಸ್ತ ಶಿಲುಬೆಗೆ ಏರಿದ್ದಾನೆ ಎಂದು ನಂಬಲಾಗಿದೆ.

ಆಧುನಿಕ ಪ್ರಪಂಚದಲ್ಲಿ ಯುಎಸ್​ ಮತ್ತು ಇತರ ದೇಶಗಳಲ್ಲಿ ಸಾಂತಾ ಕ್ಲಾಸ್​ ಎನ್ನುವ ವ್ಯಕ್ತಿಯ ಪರಿಕಲ್ಪನೆಯಿದೆ. ಆತ ಪ್ರತೀ ವರ್ಷ ಕಿಸ್​ ಮಸ್​ ಸಮಯದಲ್ಲಿ ಮಕ್ಕಳಿಗೆ ಉಡುಗೊರೆಯನ್ನು ತರುತ್ತಾನೆ. ಉತ್ತರ ದ್ರುವದಲ್ಲಿ ವಾಸಿಸುವ ಸಾಂತಾ ಕ್ರಿಸ್​ ಮಸ್​ ಹಿಂದಿನ ದಿನ ಜಗತ್ತಿನಲ್ಲಿರುವ ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ.

ಕ್ರಿಸ್​ ಮಸ್​ ಹಿಂದಿನ ದಿನ ರಾತ್ರಿ ಕ್ರಿಸ್​ ಮಸ್ ಈವ್​ ಅನ್ನು ಆಚರಿಸಲು ಕ್ರಿಶ್ಚಿಯನ್ ಸಮುದಾಯದ ಜನರೆಲ್ಲರೂ ಚರ್ಚ್ ನಲ್ಲಿ ಸೇರುತ್ತಾರೆ. ಕ್ಯಾರೋಲೆಲ್​ಗಳನ್ನು ಹಾಡುವ ಮೂಲಕ ಪ್ರಸ್ತುತ ವರ್ಷಕ್ಕೆ ಅಂತ್ಯ ಹೇಳಿ ಹೊಸವರ್ಷವನ್ನು ಸ್ವಾಗತಿಸುತ್ತಾರೆ. ಪರಸ್ಪರ ಆಶೀರ್ವಾದಿಸಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ:

Relationship Tips: ಸಂಗಾತಿಯೊಂದಿಗಿನ ಸುಂದರ ಬದುಕಿನ ಪುಸ್ತಕಕ್ಕೆ ಈ ಅಂಶಗಳನ್ನು ಸೇರಿಸಿಕೊಳ್ಳಿ:ಖುಷಿಯ ದಿನಗಳನ್ನು ವೆಲ್​ಕಮ್​ ಮಾಡಿ

Published On - 11:16 am, Fri, 24 December 21