World Paper Bag Day 2023: ವಿಶ್ವ ಪೇಪರ್ ಬ್ಯಾಗ್ ದಿನದ ಇತಿಹಾಸ, ಮಹತ್ವ ಇಲ್ಲಿದೆ

ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಲು ಪ್ಲಾಸ್ಟಿಕ್ ಬದಲಿಗೆ ಪೇಪರ್ ಬ್ಯಾಗ್ ಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸಲು ಜುಲೈ 12 ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ. ಪೇಪರ್ ಬ್ಯಾಗ್ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ತಿಳಿಯೋಣ.

World Paper Bag Day 2023: ವಿಶ್ವ ಪೇಪರ್ ಬ್ಯಾಗ್ ದಿನದ ಇತಿಹಾಸ, ಮಹತ್ವ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 11, 2023 | 4:47 PM

ಪ್ಲಾಸ್ಟಿಕ್ ಬಳಕೆ ಪ್ರಕೃತಿಗೆ ಎಷ್ಟು ಮಾರಕ ಎಂಬುವುದು ಎಲ್ಲರಿಗೂ ತಿಳಿದಿದೆ. ಹಾಗಿದ್ದರೂ ಕೂಡಾ ಹೆಚ್ಚಿನವರು ಇಂದಿಗೂ ಪ್ಲಾಸ್ಟಿಕ್ ಚೀಲಗಳನ್ನೇ ಬಳಕೆ ಮಾಡುತ್ತಿದ್ದಾರೆ. ಮತ್ತು ಎಲ್ಲೆಂದರಲ್ಲಿ ಅವುಗಳನ್ನು ಎಸೆಯುತ್ತಾರೆ. ಈ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳು ಮಣ್ಣಿನಲ್ಲಿ ಕರಗಲು ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಇದು ಮಣ್ಣಿನ ಮಾಲಿನ್ಯಕ್ಕೂ ಕಾರಣಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯ ಮತ್ತು ನೈಸರ್ಗಿಕ ಪರಿಸರಕ್ಕೆ ಅದು ಉಂಟುಮಾಡುವ ಗಂಭೀರ ಅಪಾಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಪೇಪರ್ ಬ್ಯಾಗ್ ದಿನವನ್ನು (World Paper Bag Day) ಪ್ರತಿ ವರ್ಷ ಜುಲೈ 12 ರಂದು ಆರಿಸಲಾಗುತ್ತದೆ. ಪೇಪರ್ ಬ್ಯಾಗ್ ಗಳನ್ನು ನವೀಕರಿಸಬಹುದಾದ ಕಚ್ಚಾ ವಸ್ತುಗಳಿಂದ ತಯಾರಿಸಲಾಗುತ್ತದೆ, ಹಾಗೂ ಇವುಗಳು ಮರುಬಳಕೆ ಮಾಡಬಹುದಾದ ಮತ್ತು ಜೈವಿಕ ವಿಘಟನೀಯವಾಗಿದೆ. ಹೆಚ್ಚು ಹೆಚ್ಚು ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಗಳ ಬಳಕೆ ಮಾಡಿದಾಗ ಪ್ಲಾಸ್ಟಿಕ್ ಚೀಲಗಳ ಬಳಕೆಯು ಕಡಿಮೆಯಾಗುತ್ತದೆ. ಮತ್ತು ಇದರಿಂದ ಪರಿಸರಕ್ಕೆ ಆಗುವ ಹಾನಿಯನ್ನು ಕೂಡಾ ತಪ್ಪಿಸಬಹುದು.

ವಿಶ್ವ ಪೇಪರ್ ಬ್ಯಾಗ್ ದಿನ 2023: ಇತಿಹಾಸ

ಪೇಪರ್ ಬ್ಯಾಗ್ ಹೇಗೆ ಬಳಕೆಗೆ ಬಂತೆಂಬ ಇತಿಹಾಸ ನೋಡುವುದಾದರೆ, ಪೇಪರ್ ಬ್ಯಾಗ್ ಯಂತ್ರದ ಆರಂಭವನ್ನು 1852 ರಲ್ಲಿ ಅಮೇರಿಕಾದ ಫ್ರಾನ್ಸಿಸ್ ವೋಲ್ ಎಂಬವರು ಪ್ರಾರಂಭಿಸಿದರು. ಮತ್ತೆ 1871 ರಲ್ಲಿ ಮಾರ್ಗರೇಟ್ ಇ ನೈಟ್ ಎಂಬವರು ಕಾಗಗದ ಚೀಲದ ಉತ್ಪಾದನಾ ಯಂತ್ರವನ್ನು ಸ್ಥಾಪಿಸಿದರು. ಈ ಯಂತ್ರದಿಂದ ಫ್ಲಾಟ್-ಬಾಟಮ್ ಪೇಪರ್ ಬ್ಯಾಗ್​ಗಳನ್ನು ತಯಾರಿಸಲಾಯಿತು. ಅದು ಎಷ್ಟು ಜನಪ್ರಿಯವಾಯಿತೆಂದರೆ ನೈಟ್ ಅವರನ್ನು ‘ದಿನಸಿ ಚೀಲಗಳ ತಾಯಿ’ ಎಂದು ಕರೆಯಲಾಯಿತು. ನಂತರ 1883 ರಲ್ಲಿ ಚಾರ್ಲ್ಸ್ ಸ್ವಿಲ್ವೆಲ್ ಚೌಕಾಕಾರದ ತಳಭಾಗದ ಚೀಲಗಳನ್ನು ತಯಾರಿಸಿದರು. 1912 ರಲ್ಲಿ, ವಾಲ್ಟರ್ ಬಬ್ನರ್ ಎಂಬವರು ಚೀಲಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗಲು ಸುಲಭವಾಗುವಂತೆ ಹ್ಯಾಂಡಲ್ ಹೊಂದಿರುವ ಕಾಗದದ ಚೀಲವನ್ನು ಸಿದ್ಧಪಡಿಸಿದರು. ಕಾಲಾನಂತರದಲ್ಲಿ ಪೇಪರ್ ಬ್ಯಾಗ್ ಗಳಲ್ಲಿ ಹಲವಾರು ಮಾರ್ಪಾಡುಗಳಾಗಿವೆ. ಪ್ರಸ್ತುತ ಹಲವು ವಿನ್ಯಾಸಗಳು ಮತ್ತು ಬಣ್ಣಗಳನ್ನೊಳಗೊಂಡ ಪೇಪರ್ ಬ್ಯಾಗ್ ಗಳು ಲಭ್ಯವಿದೆ.

ಇದನ್ನೂ ಓದಿ:World Population Day 2023: ವಿಶ್ವ ಜನಸಂಖ್ಯಾ ದಿನದ ಆಚರಣೆಯ ಹಿಂದಿನ ಕಾರಣ, ಮಹತ್ವ

ಜುಲೈ 12 ರಂದು ಪೇಪರ್ ಬ್ಯಾಗ್ ದಿನವನ್ನು ಏಕೆ ಆಚರಿಸಲಾಗುತ್ತದೆ:

ಪೇಪರ್ ಬ್ಯಾಗ್ ದಿನವನ್ನು ಈ ದಿನದಂದು ಆಚರಿಸುವ ನಿಖರವಾದ ಇತಿಹಾಸ ತಿಳಿದಿಲ್ಲ. ಆದರೆ ಈ ದಿನವು ವಿಲಿಯಂ ಗುಡೆಲ್ ರಚಿಸಿದ ಪೇಪರ್ ಬ್ಯಾಗ್ ಯಂತ್ರಕ್ಕೆ ಪೇಟೆಂಟ್ ಸಿಕ್ಕ ದಿನವನ್ನು ನೆನಪಿಸುತ್ತದೆ. ಅವರ ಪೇಪರ್ ಬ್ಯಾಗ್ ತಯಾರಿಸುವ ಯಂತ್ರಕ್ಕೆ 12 ನೇ ಜುಲೈ 1859 ರಂದು ಪೇಟೆಂಟ್ ನೀಡಲಾಯಿತು. ಆದ್ದರಿಂದ ಈ ನೆನಪಿಗಾಗಿ ಪ್ರತಿವರ್ಷವೂ ಈ ದಿನದಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ.

ಪೇಪರ್ ಬ್ಯಾಗ್ ದಿನದ ಮಹತ್ವ:

ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಬಿಟ್ಟು ಪೇಪರ್ ಬ್ಯಾಗ್ ಗೆ ಬದಲಾದ ಲಕ್ಷಾಂತರ ಜನರು ಜಗತ್ತಿನಲ್ಲಿದ್ದಾರೆ. ಆದರೆ ಇನ್ನೂ ಕೋಟಿಗಟ್ಟಲೆ ಜನರು ಪ್ಲಾಸ್ಟಿಕ್ ಚೀಲ ಇತ್ಯಾದಿಗಳನ್ನು ಮನಬಂದಂತೆ ಬಳಸುತ್ತಿದ್ದಾರೆ. ಹಾಗಾಗಿ ಪ್ರತಿವರ್ಷ ಜುಲೈ 12 ರಂದು ಪೇಪರ್ ಬ್ಯಾಗ್ ಡೇ ಆಚರಿಸುವ ಮೂಲಕ ಪ್ಲಾಸ್ಟಿಕ್ ಚೀಲಗಳ ಬಳಕೆ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಕಾಗದ ಚೀಲಗಳು 100% ಮರುಬಳಕೆ ಮಾಡಬಹುದಾದವು ಮತ್ತು ಮುಖ್ಯವಾಗಿ ಅವುಗಳು ಒಂದೇ ತಿಂಗಳಲ್ಲಿ ಭೂಮಿಯಲ್ಲಿ ಕೊಳೆಯಬಲ್ಲದು. ಪ್ಲಾಸ್ಟಿಕ್ ಚೀಲಗಳ ತಯಾರಿಕೆಗೆ ಹೋಲಿಸಿದರೆ, ಕಾಗದದ ಚೀಲಗಳನ್ನು ತಯಾರಿಸಲು ಕಡಿಮೆ ಶಕ್ತಿಯ ಬಳಕೆಯಾಗುತ್ತದೆ. ಪ್ಲಾಸ್ಟಿಕ್ ಚೀಲಗಳಂತೆ ಪೇಪರ್ ಬ್ಯಾಗ್ ಗಳು ಪ್ರಾಣಿಗಳಿಗೆ ಹಾಗೂ ಪರಿಸರಕ್ಕೆ ಹಾನಿಕಾರಕವಲ್ಲ. ಹಾಗಾಗಿ ಈ ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಗಳ ಬಳಕೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ.

ಪೇಪರ್ ಬ್ಯಾಗ್ ಪ್ರಯೋಜನಗಳು:

• ಕಾಗದದ ಚೀಲಗಳ ಬಳಕೆ ಪರಿಸರ ಸ್ನೇಹಿಯಾಗಿದೆ.

• ಕಾಗದದ ಚೀಲಗಳು ಜೈವಿಕ ವಿಘಟನೀಯ ಮತ್ತು ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡುವುದಿಲ್ಲ.

• ಕಾಗದದ ಚೀಲಗಳನ್ನು ಸುಲಭವಾಗಿ ಮರುಬಳಕೆ ಮಾಡಬಹುದು ಮತ್ತು ಕಾಗದದ ಚೀಲಗಳನ್ನು ಸುಲಭವಾಗಿ ಗೊಬ್ಬರವಾಗಿ ಪರಿವರ್ತಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:47 pm, Tue, 11 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ