Relationship Tips : ಎಲ್ಲವನ್ನು ನಿಭಾಯಿಸುವ ಮುದ್ದಿನ ಸೊಸೆ ಆಗುವುದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: Digi Tech Desk

Updated on: Jun 06, 2024 | 3:49 PM

ವೈವಾಹಿಕ ಜೀವನವು ಸುಲಭವಾಗಿ ಸಾಗಬೇಕೆಂದರೆ ಅತ್ತೆ ಸೊಸೆ ಸಂಬಂಧವು ಚೆನ್ನಾಗಿರಬೇಕು. ಅತ್ತೆಯನ್ನು ಅಮ್ಮನಂತೆ ಕಾಣುವ ಸೊಸೆ, ಸೊಸೆಯನ್ನು ಮಗಳಂತೆ ಕಾಣುವ ಅತ್ತೆಯಿದ್ದರೆ ಸ್ವರ್ಗವೇ ಧರೆಗೆ ಇಳಿದ್ದಂತೆ. ಆದರೆ, ಮದುವೆಯಾಗಿ ಬಂದ ಸೊಸೆಯೂ ಮನೆಯ ಆಚಾರ ವಿಚಾರಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಈ ಕೆಲವೂ ವಿಚಾರಗಳನ್ನು ನಿಮಗೆ ತಿಳಿದಿದ್ದರೆ ನಿಮ್ಮ ಪತಿ ಹಾಗೂ ಅತ್ತೆ ಮಾವನ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ವರ್ಷಗಳು ಕಳೆದಂತೆ ಎಲ್ಲವನ್ನು ನಿಭಾಯಿಸಿಕೊಂಡು ಉತ್ತಮ ಸೊಸೆಯೂ ನೀವಾಗುವುದರಲ್ಲಿ ಸಂದೇಹ ವಿಲ್ಲ.

Relationship Tips : ಎಲ್ಲವನ್ನು ನಿಭಾಯಿಸುವ ಮುದ್ದಿನ ಸೊಸೆ ಆಗುವುದು ಹೇಗೆ ? ಇಲ್ಲಿದೆ ಸಿಂಪಲ್ ಟಿಪ್ಸ್
Follow us on

ಆಧುನಿಕ ಜಗತ್ತಿನಲ್ಲಿ ಅತ್ತೆ ಮತ್ತು ಸೊಸೆ ಸಂಬಂಧವನ್ನು ಎಣ್ಣೆ ಸೀಗೆಕಾಯಿಗೆ ಹೋಲಿಸುತ್ತಾರೆ. ಅತ್ತೆ ಸೊಸೆಯೂ ಎಂದೆಂದಿಗೂ ಅನ್ಯೋನ್ಯವಾಗಿರಲು ಸಾಧ್ಯವಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಮನೆಗೆ ಸೊಸೆಯಾಗಿ ಬಂದ ಪ್ರಾರಂಭದಲ್ಲಿಯೇ ಎಲ್ಲವನ್ನು ನಿಭಾಯಿಸಿಕೊಂಡು ಹೋಗಲಿ ಎಂದು ಅತ್ತೆಯೂ ಬಯಸುವುದು ತಪ್ಪು. ಆಕೆಗೂ ಹೊಂದಿಕೊಳ್ಳಲು ಸ್ವಲ್ಪ ಸಮಯವೂ ಬೇಕಾಗುತ್ತದೆ. ಅದಲ್ಲದೇ ದಿನ ಕಳೆಯುತ್ತ ಹೋದಂತೆ ಆಕೆಯು ತನ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಮನೆ ನಿಭಾಯಿಸುವ ಬೆಸ್ಟ್ ಸೊಸೆಯಾಗಬಹುದು.

ಬೆಸ್ಟ್ ಸೊಸೆಯಾಗಲು ಇಲ್ಲಿದೆ ಸರಳ ಸಲಹೆಗಳು

* ಧನಾತ್ಮಕ ಯೋಚನೆ ಇರಲಿ : ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟಾಗ ಅಲ್ಲಿನ ಆಚಾರ ವಿಚಾರ, ಸಂಪ್ರದಾಯಗಳು ವಿಭಿನ್ನವಾಗಿರಬಹುದು. ಈ ವೇಳೆಯಲ್ಲಿ ಧನಾತ್ಮಕವಾಗಿ ಯೋಚಿಸಿ. ಯಾವುದೇ ವ್ಯಕ್ತಿಯ ಬಗ್ಗೆ ಪೂರ್ವಗ್ರಹವಿಟ್ಟುಕೊಂಡು ನಿಮ್ಮ ಅತ್ತೆಯ ಮನೆಗೆ ಹೋಗುವುದು ಸರಿಯಲ್ಲ. ನೀವು ಎಲ್ಲವನ್ನೂ ನಿಭಾಯಿಸುತ್ತೀರಿ ಎಂಬ ಸಂಪೂರ್ಣ ನಂಬಿಕೆಯನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ.

* ಎಲ್ಲರನ್ನು ಗೌರವದಿಂದ ಕಾಣಿರಿ : ಮನೆಯಲ್ಲಿರುವ ಸದಸ್ಯರನ್ನು ತನ್ನವರೆಂದು ಒಪ್ಪಿಕೊಳ್ಳುವುದು ಅಗತ್ಯ. ಗಂಡ, ಅತ್ತೆ, ಹಾಗೂ ಮಾವ ಹೀಗೆ ಎಲ್ಲಾ ಸದಸ್ಯರನ್ನು ಗೌರವಿಸಬೇಕು. ಅತ್ತೆ-ಮಾವಂದಿರನ್ನು ನಿಮ್ಮ ತಂದೆ ತಾಯಿಯರಂತೆ ಮತ್ತು ಮನೆಯಲ್ಲಿ ಕಿರಿಯರನ್ನು ನಿಮ್ಮ ಸಹೋದರ ಸಹೋದರಿಯರಂತೆ ಪರಿಗಣಿಸಿದಾಗ ಮಾತ್ರ ನಿಮ್ಮ ಮನೆ ಎನ್ನುವ ಭಾವನೆಯೂ ಮೂಡುತ್ತದೆ. ಹೀಗಾದಾಗ ಮಾತ್ರ ಸೊಸೆಯಾದವಳು ಎಲ್ಲವನ್ನು ನಿಭಾಯಿಸಿಕೊಂಡು ಹೋಗಲು ಸಾಧ್ಯ.

* ಅತ್ತೆಯಿಂದ ಸಂಪ್ರದಾಯಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ: ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಾಗ ಅಲ್ಲಿಯ ಸಂಪ್ರದಾಯಗಳು ಹೊಸದಾಗಿರುತ್ತದೆ. ಹೀಗಾಗಿ ಅತ್ತೆಯ ಬಳಿ ಇಲ್ಲಿನ ಆಚಾರ ವಿಚಾರ, ಸಂಪ್ರದಾಯಗಳ ಬಗ್ಗೆ ತಿಳಿಯುವುದು ಮುಖ್ಯ. ಒಳ್ಳೆಯ ಸೊಸೆಯಾಗಲು, ನೀವು ನಿಮ್ಮ ಗಂಡನ ಮನೆಯ ಹೊಸ ಸಂಸ್ಕೃತಿಗೆ ಹೊಂದಿಕೊಂಡು ಎಲ್ಲವನ್ನು ಕಲಿಯಬೇಕಾಗುತ್ತದೆ.

* ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿ : ಮದುವೆಯ ನಂತರ ಅನೇಕ ಸಂಬಂಧಗಳು ಬದಲಾಗುತ್ತವೆ. ಅತ್ತೆಗೆ ತನ್ನ ಮಗನು ಸೊಸೆಯ ಮಾತನ್ನು ಕೇಳುತ್ತಿದ್ದಾನೆ ಎಂದೆನಿಸಬಹುದು. ಹೀಗೆನಾದರೂ ನಿಮ್ಮ ಅತ್ತೆಯೂ ಅಂದುಕೊಂಡಿದ್ದರೆ ಮಾತುಕತೆಯ ಮೂಲಕ ಎಲ್ಲವನ್ನು ನಿಭಾಯಿಸಿಕೊಂಡು ಹೋಗಿ. ಆದರೆ ಮೊದಲಿಗೆ ಶಾಂತವಾಗಿದ್ದು ಎಲ್ಲವನ್ನು ಗಮನಿಸಿ, ಸಮಯ ನೋಡಿಕೊಂಡು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಒಳ್ಳೆಯದು.

ಇದನ್ನೂ ಓದಿ: ಮದುವೆಯಾದ ಹೆಣ್ಮಕ್ಕಳು ಪದೇ ಪದೇ ಅಮ್ಮನ ಮನೆಗೆ ಬರಬೇಡಿ, ಯಾಕೆ ಗೊತ್ತಾ?

* ಪತಿಗೆ ಆರ್ಥಿಕ ಬೆಂಬಲವನ್ನು ನೀಡಿ : ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂದರೆ ಮನೆಯವರ ಅನುಮತಿಯ ಮೇರೆಗೆ ಕೆಲಸಕ್ಕೆ ತೆರಳಿ. ಆದರೆ ಬಿಡುವಿನ ಸಮಯ ಹಾಗೂ ರಜಾ ದಿನಗಳಲ್ಲಿ ಅತ್ತೆಗೆ ಮನೆಗೆಲಸದಲ್ಲಿ ನೆರವಾಗಲು ಮರೆಯದಿರಿ.

*ಉಡುಗೆ ತೊಡುಗೆಯ ಬಗ್ಗೆ ಗಮನವಿರಲಿ : ಪ್ರತಿಯೊಂದು ಕುಟುಂಬಕ್ಕೆ ಅವರದ್ದೇ ಆದ ಉಡುಗೆ ತೊಡುಗೆ ರೀತಿ ರಿವಾಜುಗಳು ಇರುತ್ತದೆ. ತೀರಾ ಮಾಡ್ರನ್ ಆಗಿ ಯೋಚಿಸುವ ಕುಟುಂಬವಲ್ಲದಿದ್ದರೆ ಮನೆಯ ಗೌರವಕ್ಕೆ ಧಕ್ಕೆ ತರುವಂತಹ ಹಾಗೂ ಕುಟುಂಬದ ಸದಸ್ಯರಿಗೆ ಅಸಮಾಧಾನ ಉಂಟು ಮಾಡುವಂತಹ ಬಟ್ಟೆಗಳನ್ನು ಧರಿಸದಿರಿ. ಆ ಮನೆಯ ಸೊಸೆಯಾಗಿ ನಿಮ್ಮ ಉಡುಗೆಯ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Published On - 3:37 pm, Thu, 6 June 24