Sweating: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ

ನಮ್ಮ ದೇಹವು ಶಾಖ, ಶುಷ್ಕತೆ, ಆರ್ದ್ರತೆ ಮತ್ತು ಬೇಸಿಗೆಯ ಸುಡು ಶಾಖದಿಂದಾಗಿ ಹೆಚ್ಚು ಬೆವರುತ್ತದೆ. ಈ ಬೆವರು ನಮ್ಮ ದೇಹದಲ್ಲಿ ದುರ್ಗಂಧವನ್ನು ಸಹ ಉಂಟು ಮಾಡಬಹುದು. ಈ ಬೇಸಿಗೆಯ ಅಧಿಕ ಬೆವರುವಿಕೆಯನ್ನು ತಡೆಗಟ್ಟಲು ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Sweating: ಈ ಬೇಸಿಗೆಯಲ್ಲಿ ಅತಿಯಾಗಿ ಬೆವರುವುದನ್ನು ತಡೆಗಟ್ಟುವುದು ಹೇಗೆ? ಇಲ್ಲಿದೆ ಸಲಹೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 19, 2023 | 5:21 PM

ಬೇಸಿಗೆ ಕಾಲದಲ್ಲಿನ ಬಿಸಿಯ ಶಾಖವು ಎಷ್ಟಿರುತ್ತದೆ ಎಂದರೆ, ಬಿಸಿಲಿಗೆ ಸ್ವಲ್ಪ ಹೊತ್ತು ಹೊರಗಡೆ ಹೋದರೆ ಬಿಸಿಯ ಶಾಖಕ್ಕೆ ದೇಹವು ಬೆವರಿ ಬಟ್ಟೆಯೆಲ್ಲಾ ಒದ್ದೆಯಾಗಿಬಿಡುತ್ತದೆ. ಮತ್ತು ದೇಹವು ಬೆವರಿನ ಕಾರಣದಿಂದ ಅಂಟು ಅಂಟು ಆಗುತ್ತದೆ. ಜೊತೆಗೆ ಈ ಬೆವರುವಿಕೆಯಿಂದ ದೇಹದಲ್ಲಿ ದುರ್ಗಂಧ ಉಂಟಾಗುತ್ತದೆ. ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಈ ಸಮಸ್ಯೆಯನ್ನು ಅನುಭವಿಸುತ್ತಾ ಇದ್ದೇವೆ. ಈಗಿನ ಬಿಸಿಲಿನ ಶಾಖಕ್ಕೆ ಮನೆಯೊಳಗಿದ್ದರೂ ನಾವು ಬೆವರಿ ಒದ್ದೆಯಾಗಿ ಬಿಡುತ್ತೇವೆ. ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಅವರು ಬೇಸಿಯಲ್ಲಿ ನಾವೆಲ್ಲರೂ ಅನುಭವಿಸುವ ಅಧಿಕ ಬೆವರುವಿಕೆಯನ್ನು ತಡೆಗಟ್ಟಲು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಬೇಸಿಗೆಯಲ್ಲಿ ಅಧಿಕ ಬೆವರುವಿಕೆಯನ್ನು ಕಡಿಮೆ ಮಾಡುವ ಸಲಹೆಗಳು

ಬೇಸಿಗೆಯ ಪಾನೀಯಗಳು: ಸಾಮಾನ್ಯವಾಗಿ ನಮ್ಮ ದೇಹವು ಬೆವರಿನ ಮೂಲಕ ಕಳೆದುಕೊಳ್ಳುವ ನೀರನ್ನು ದೇಹವು ಮರಳಿ ಪಡೆಯಲು ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ಒಳ್ಳೆಯದು. ಹಾಗೂ ಬೇಸಿಗೆಯಲ್ಲಿ ಮಜ್ಜಿಗೆ, ಹಣ್ಣಿನ ಜ್ಯೂಸ್ ಗಳನ್ನು ಕೂಡಾ ಕುಡಿಯಬಹುದು. ಆಹಾರ ತಜ್ಞರ ಪ್ರಕಾರ ಹೀಗೆ ಮಾಡುವುದರಿಂದ ನಮ್ಮ ದೇಹವು ತಂಪಾಗಿರುತ್ತದೆ.

ಕೆಫೀನ್ ಕುಡಿಯುವುದನ್ನು ತಪ್ಪಿಸಿ: ಹೆಚ್ಚಿನ ಜನರಿಗೆ ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಮತ್ತು ಕೆಲವರು ದಿನದಲ್ಲಿ 4 ರಿಂದ 5 ಬಾರಿ ಕಾಫಿ ಕುಡಿಯುವವರೂ ಇದ್ದಾರೆ. ಈ ಕೆಫಿನ್ ಮೂತ್ರಜನಕಾಂಗದ ಗ್ರಂಥಿಗಳನ್ನು ಉತ್ತೇಜಿಸುವ ಮೂಲಕ ನಮ್ಮ ಅಂಗೈ, ಪಾದಗಳು ಮತ್ತು ಕಂಕುಳಲ್ಲಿ ಹೆಚ್ಚು ಬೆವರುವಿಕೆಯನ್ನು ಉಂಟುಮಾಡುತ್ತದೆ ಆದ್ದರಿಂದ ಆದಷ್ಟು ಕೆಫೀನ್ ಸೇವನೆ ಕಡಿಮೆ ಮಾಡಬೇಕೆಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.

ಮಸಾಲೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ: ನಾವು ಸೇವಿಸುವ ಆಹಾರಕ್ಕೆ ಹೆಚ್ಚಿನ ಪ್ರಮಾಣದ ಮಸಾಲೆ ಅಥವಾ ಖಾರವನ್ನು ಸೇರಿಸುವುದನ್ನು ತಪ್ಪಿಸಬೇಕು. ಖಾರವನ್ನು ಸೇವನೆ ಮಾಡಿದಾಗ ನಮ್ಮ ದೇಹವು ಹೆಚ್ಚು ಬೆವರುತ್ತದೆ ಆದ್ದರಿಂದ ಮಸಾಲೆಯುಕ್ತ ಖಾರವಾದ ಆಹಾರವನ್ನು ಬೇಸಿಗೆಯಲ್ಲಿ ಆದಷ್ಟು ಸೇವಿಸದಿರುವುದು ಉತ್ತಮ.

ಇದನ್ನೂ ಓದಿ: Excessive Sweating: ಅಗತ್ಯಕ್ಕಿಂತ ಹೆಚ್ಚು ಬೆವರುವುದು ಹಲವು ರೋಗಗಳ ಮುನ್ಸೂಚನೆ ಎಂಬುದು ತಿಳಿದಿದೆಯೇ?

ಆಂಟಿಪೆರ್ಸ್ಪಿರಂಟ್ಸ್ ಸ್ಪ್ರೇ ಬಳಸಿ: ಆಂಟಿಪೆರ್ಸ್ಪಿರಂಟ್ಸ್ ಸ್ಪ್ರೇ ಗಳನ್ನು ಬೆವರು ಕಡಿಮೆ ಮಾಡಲೆಂದು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಬೆವರಿನ ದುರ್ಗಂಧವನ್ನು ತಡೆಗಟ್ಟಲು ಈ ಸ್ಪ್ರೇ ಬಳಸಿ.

ಶಾಂತವಾಗಿರಿ: ನಮ್ಮ ದೇಹದಲ್ಲಿರುವ ಬೆವರು ಗ್ರಂಥಿಗಳು ನಾವು ಹೆಚ್ಚು ಭಯಭೀತರಾದಾಗ ಅಥವಾ ಒತ್ತಡದಲ್ಲಿದ್ದಾಗ ಸಕ್ರಿಯಗೊಳ್ಳುತ್ತವೆ. ಇದು ದೇಹದಲ್ಲಿ ಹೆಚ್ಚು ಬೆವರು ಉಂಟಾಗುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಅತಿಯಾದ ಬೆವರುವಿಕೆಯನ್ನು ತಪ್ಪಿಸಲು ಶಾಂತವಾಗಿರುವುದು ಮುಖ್ಯ.

Published On - 5:20 pm, Wed, 19 April 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ