ಈ ಬೇಸಿಗೆಯಲ್ಲಿ ಹೆಲ್ಮೆಟ್ ಧರಿಸಿದರೆ ಕಿರಿಕಿರಿಯಾಗುತ್ತದೆಯೇ? ಹಾಗಾದ್ರೆ ಹೀಗೆ ಮಾಡಿ
ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇದು ಅಪಘಾತದಿಂದ ಸವಾರನ ರಕ್ಷಣೆ ಮಾಡುವ ಸಾಧನವೂ ಆಗಿದೆ. ಆದರೆ ಸಂಚಾರಿ ನಿಯಮವನ್ನು ಗಾಳಿಗೆ ತೂರುವವರೇ ಹೆಚ್ಚು. ಅದರಲ್ಲಿಯೂ ಈ ಬೇಸಿಗೆಯ ಋತುವಿನಲ್ಲಿ ಹೆಲ್ಮೆಟ್ ಧರಿಸುವುದೆಂದರೆ ತಲೆನೋವಿನ ಕೆಲಸ . ಸುಡುವ ಬಿಸಿಲಿಗೆ ಹೆಲ್ಮೆಟ್ ಧರಿಸಿದರೆ ಕಿರಿಕಿರಿಯೆನಿಸುತ್ತದೆ. ಹೀಗಾಗಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ದಂಡ ಕಟ್ಟುವವರು ಇದ್ದಾರೆ. ಉರಿ ಸೆಕೆಯ ನಡುವೆ ಹೆಲ್ಮೆಟ್ ಧರಿಸುವುದು ಕಿರಿಕಿರಿಯೆನಿಸಿದರೆ ಈ ಕೆಲವು ಟಿಪ್ಸ್ ಅನುಸರಿಸುವುದು ಒಳ್ಳೆಯದು.

ಸಾಂದರ್ಭಿಕ ಚಿತ್ರ
ಅನೇಕ ಮಂದಿ ಯುವಕರಿಗೆ ಬೈಕ್ ರೈಡಿಂಗ್ (Bike Riding) ಅಂದ್ರೆ ಬಹಳ ಇಷ್ಟ. ಆದರೆ ಈ ಸುಡುವ ಬಿಸಿಲಿಗೆ ಹೆಲ್ಮೆಟ್ (Helmet) ಧರಿಸಿದ ಬೈಕ್ ಚಲಾಯಿಸುವುದೆಂದರೆ ಕಷ್ಟದ ಕೆಲಸ. ಬಿಸಿಲಿನ ಶಾಖಕ್ಕೆ ಹೆಲ್ಮೆಟ್ ಧರಿಸಿದರೆ ತಲೆಯೆಲ್ಲಾ ಬೆವರಿ ಹೋಗುತ್ತದೆ, ಒಂತರ ಕಿರಿಕಿರಿ ಅನುಭವವಾಗುತ್ತದೆ. ಹೀಗಾಗಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರೇ ಹೆಚ್ಚು. ಯಾರಪ್ಪ ದಂಡ ಕಟ್ಟುತ್ತಾರೆ ಎಂದು ಕಿರಿಕಿರಿಯಾದರೂ ಸರಿಯೇ ಕಷ್ಟಪಟ್ಟು ಹೆಲ್ಮೆಟ್ ಧರಿಸಿ ವಾಹನ ಓಡಿಸುವುದನ್ನು ನೋಡಿರಬಹುದು. ನೀವೇನಾದ್ರು ಈ ಬಿಸಿಬಿಸಿ ವಾತಾವರಣದಲ್ಲಿ ಹೆಲ್ಮೆಟ್ ಧರಿಸಿದ ವಾಹನ ಓಡಿಸುತ್ತಿದ್ದರೆ ಈ ಕೆಲವು ಟಿಪ್ಸ್ ನಿಮಗೆ ಅನುಕೂಲವಾಗಬಹುದು.
ಹೆಲ್ಮೆಟ್ ಧರಿಸುವವರಿಗೆ ಇಲ್ಲಿದೆ ಕೆಲ ಟಿಪ್ಸ್
- ಈ ಬಿಸಿ ವಾತಾವರಣದಲ್ಲಿ ಹೆಲ್ಮೆಟ್ ಧರಿಸುವುದು ಕಿರಿಕಿರಿಯೆನಿಸುತ್ತದೆ ಎಂದಾದರೆ ಒಂದು ತೆಳು ಬಟ್ಟೆ ತಲೆಗೆ ಕಟ್ಟಿಕೊಂಡು ಅದರ ಮೇಲೆ ಹೆಲ್ಮೆಟ್ ಧರಿಸುವುದು ಸೂಕ್ತ.
- ಹೆಚ್ಚು ಹೊತ್ತು ಹೆಲ್ಮೆಟ್ ಧರಿಸಿದರೆ ಬೆವರು ಹೆಲ್ಮೆಟ್ ನಲ್ಲಿ ಶೇಖರಣೆಯಾಗುತ್ತದೆ, ಹೀಗಾಗಿ ಕೂದಲು ಮುಚ್ಚಲು ಕ್ಯಾಪ್ ಅಥವಾ ತೆಳುವಾದ ಬಟ್ಟೆ ಧರಿಸಿ, ಇದು ಬೆವರನ್ನು ಹೀರಿಕೊಳ್ಳುತ್ತದೆ.
- ಬೇಸಿಗೆಯಲ್ಲಿ ಬಿಗಿಯಾದ ಹೆಲ್ಮೆಟ್ ಧರಿಸುವುದನ್ನು ಆದಷ್ಟು ತಪ್ಪಿಸಿ ಗಾಳಿಯ ಹರಿವು ಕಡಿಮೆಯಾಗುತ್ತದೆ. ಇದರಿಂದ ಇದು ಕೊಳಕು ಮತ್ತು ಬೆವರನ್ನು ಹಿಡಿದಿಟ್ಟುಕೊಳ್ಳುತ್ತದೆ.
- ಹೆಲ್ಮೆಟ್ ನನ್ನು ಸ್ವಚ್ಛಗೊಳಿಸುವ ಅಭ್ಯಾಸವಿರಲಿ. ಧೂಳು, ಕೊಳಕನ್ನು ತೆಗೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆದರೆ ಹೆಲ್ಮೆಟ್ ತೊಳೆದ ನಂತರದಲ್ಲಿ ಹೇರ್ ಡ್ರೈಯರ್ ನಿಂದ ಒಣಗಿಸುವುದನ್ನು ತಪ್ಪಿಸಿ. ಹೀಗೆ ಮಾಡಿದರೆ ಗಮ್ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.
- ಹೆಲ್ಮೆಟ್ ನನ್ನು ಎಲ್ಲೆಂದರಲ್ಲಿ ಇಡಬೇಡಿ, ಇದರಲ್ಲಿ ಧೂಳು ಸೇರಿಕೊಳ್ಳುತ್ತದೆ. ಅದೇ ಹೆಲ್ಮೆಟ್ ಧರಿಸಿದರೆ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
- ಬೇಸಿಗೆಯಲ್ಲಿ ಬೆವರಿನಿಂದ ಹೆಲ್ಮೆಟ್ ಒಳಗೆ ವಾಸನೆ ಬರಲು ಶುರುವಾಗುತ್ತದೆ. ಹೀಗಾಗಿ ಹೆಲ್ಮೆಟ್ ದುರ್ವಾಸನೆ ಹೊಂದಿದ್ದರೇ ಹೆಲ್ಮೆಟ್ ಡಿಯೋಡರೈಸರ್ ಬಳಸಿ ಸ್ವಚ್ಚಗೊಳಿಸಿ.
- ಕೂದಲನ್ನು ತೇವಗೊಳಿಸಿ ಹೆಲ್ಮೆಟ್ ಧರಿಸಿ, ಇದು ಹೆಲ್ಮೆಟ್‌ನ ಒಳ ಪದರ ಮತ್ತು ನಿಮ್ಮ ಕೂದಲಿನ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ