Event Calendar March 2024: ಮಾರ್ಚ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ

2024 ರ ಮೂರನೇ ತಿಂಗಳಾದ ಮಾರ್ಚ್ ತಿಂಗಳಲಿನಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳನ್ನು ವಿಶ್ವದಾದಂತ್ಯ ಆಚರಿಸಲಾಗುತ್ತದೆ. ಒಂದೊಂದು ದಿನವು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಹಾಗಾದ್ರೆ ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಾಚರಣೆಗಳ ಸಂಪೂರ್ಣ ಮಾಹಿತಿಯು ಈ ಕೆಳಗಿದೆ.

Event Calendar March 2024: ಮಾರ್ಚ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 28, 2024 | 10:24 AM

ಕಣ್ಣು ಮುಚ್ಚಿ ಬಿಡುವುದರೊಳಗೆ ಈ ವರ್ಷದ ಮೂರನೇ ತಿಂಗಳಾದ ಮಾರ್ಚ್ ಗೆ ಕೆಲವೇ ದಿನಗಳು ಬಾಕಿಯಿವೆ. ಮಾರ್ಚ್ ತಿಂಗಳಿನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ವಿಶೇಷ ದಿನಗಳನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಹೀಗೆ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಗಳನ್ನು ಒಳಗೊಂಡಿದ್ದುದ್ದು, ಆ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

  1. ಮಾರ್ಚ್ 01, ಶೂನ್ಯ ತಾರತಮ್ಯ ದಿನ: ಮಾರ್ಚ್ 2014 ರಂದು ಯುಎನ್ ಮೊಟ್ಟ ಮೊದಲ ಬಾರಿಗೆ ಶೂನ್ಯ ತಾರತಮ್ಯ ದಿನವನ್ನು ಆಚರಿಸಿತು. ಪ್ರತಿಯೊಬ್ಬರೂ ವಯಸ್ಸು, ಲಿಂಗ, ಜನಾಂಗೀಯತೆ, ಬಣ್ಣ, ಎತ್ತರ, ತೂಕ ಈ ಎಲ್ಲವನ್ನು ಮರೆತು ಒಬ್ಬರಿಗೊಬ್ಬರು ಗೌರವವನ್ನು ನೀಡುವುದು ಈ ದಿನದ ಉದ್ದೇಶವಾಗಿದೆ.
  2. ಮಾರ್ಚ್ 01, ವಿಶ್ವ ನಾಗರಿಕ ರಕ್ಷಣಾ ದಿನ:  ನಾಗರಿಕ ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ 1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.
  3. ಮಾರ್ಚ್ 03, ವಿಶ್ವ ವನ್ಯಜೀವಿ ದಿನ:

    ಈ ದಿನವನ್ನು ಜಾಗತಿಕವಾಗಿ ಮಾರ್ಚ್ 3 ರಂದು ಆಚರಿಸಲಾಗುತ್ತದೆ. ಈ ದಿನಾಚರಣೆಯ ಮುಖ್ಯ ಉದ್ದೇಶವೇನೆಂದರೆ ಸುಸ್ಥಿರ ಅಭಿವೃದ್ಧಿ ಗುರಿ 12 ರೊಂದಿಗೆ ನಿಕಟವಾಗಿ ಕೈ ಜೋಡಿಸಿದೆ. ಪರಿಸರದ ಸಮತೋಲನಕ್ಕೆ ವನ್ಯಜೀವಿಗಳ ಮಹತ್ವ ಹಾಗೂ ಅವುಗಳ ಸಮಸ್ಯೆಗಳನ್ನು ಎತ್ತಿ ತೋರಿಸುವುದಾಗಿದೆ.

  4. ಮಾರ್ಚ್ 04, ವಿಶ್ವ ಶ್ರವಣ ದಿನ:

    ಪ್ರಪಂಚದಾದ್ಯಂತ ಶ್ರವಣದ ಆರೋಗ್ಯವನ್ನು ಕಾಪಾಡುವುದು ಹೇಗೆ ಹಾಗೂ l ಕಿವುಡುತನವನ್ನು ಹೇಗೆ ತಡೆಗಟ್ಟುವುದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.

  5. ಮಾರ್ಚ್ 04, ರಾಷ್ಟ್ರೀಯ ಭದ್ರತಾ ದಿನ:

    ರಾಷ್ಟ್ರೀಯ ಸುರಕ್ಷತಾ ದಿನವನ್ನು ಭಾರತದಲ್ಲಿ ಮಾರ್ಚ್ 4 ರಂದು ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಆಚರಿಸಲಾಗುತ್ತದೆ. ಜೀವನದಲ್ಲಿನ ಸಮಸ್ಯೆಗಳಿಂದ ರಕ್ಷಿಸಿ ಭದ್ರತೆಯನ್ನು ನೀಡುವುದು ಈ ದಿನದ ಉದ್ದೇಶವಾಗಿದೆ.

  6. ಮಾರ್ಚ್ 04, ನೌಕರರ ಮೆಚ್ಚುಗೆಯ ದಿನ:

    ಯಾವುದೇ ಯಶಸ್ವಿ ವ್ಯಾಪಾರ ವ್ಯವಹಾರಕ್ಕಾಗಿ ಕೌಶಲ್ಯಆಧಾರಿತ ಉದ್ಯೋಗದಾತ-ಉದ್ಯೋಗಿಯು ಅಗತ್ಯ. ಹೀಗಾಗಿ ಆತನಿಗೆ ಮೆಚ್ಚುಗೆ ಸುಚಿಸುವುದು ಈ ದಿನದ ಉದ್ದೇಶ.

  7. ಮಾರ್ಚ್ 08, ಅಂತರಾಷ್ಟ್ರೀಯ ಮಹಿಳಾ ದಿನ:

    ಪ್ರತಿ ವರ್ಷ ಮಾರ್ಚ್ 8 ರಂದು ಜಾಗತಿಕವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳಿಗೆ ಬೆಂಬಲ ನೀಡುವುದಾಗಿದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವು ಉದ್ದೇಶವನ್ನು ಹೊಂದಿದೆ.

  8. ಮಾರ್ಚ್ 10, CISF ರೈಸಿಂಗ್ ಡೇ:

    ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ರೈಸಿಂಗ್ ಡೇ ಅನ್ನು ಪ್ರತಿ ವರ್ಷ ಮಾರ್ಚ್ 10 ರಂದು ಆಚರಿಸಲಾಗುತ್ತದೆ. ಸಿಐಎಸ್ಎಫ್ ಅನ್ನು 1969 ರಲ್ಲಿ ಭಾರತದ ಸಂಸತ್ತಿನ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾಯಿತು.

  9. ಮಾರ್ಚ್ 12, ರಾಮಕೃಷ್ಣ ಜಯಂತಿ:

    ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ, ರಾಮಕೃಷ್ಣರು ಫಾಲ್ಗುಣ ಮಾಸದ ಶುಕ್ಲ ಪಕ್ಷದ ದ್ವಿತಿಯಂದು ಜನಿಸಿದರು. ಪ್ರತಿ ವರ್ಷ ಅವರ ಜನ್ಮ ದಿನಾಚರಣೆಯನ್ನು ಎಲ್ಲಾ ರಾಮಕೃಷ್ಣ ಮಠಗಳಲ್ಲಿ ಆಚರಿಸಲಾಗುತ್ತದೆ.

  10. ಮಾರ್ಚ್ 13, ಧೂಮಪಾನ ರಹಿತ ದಿನ:

    ಧೂಮಪಾನದ ಮೂಲಕ ತಂಬಾಕಿನ ಹಾನಿಕಾರಕ ಆರೋಗ್ಯ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ ಎರಡನೇ ಬುಧವಾರದಂದು ಧೂಮಪಾನ ರಹಿತ ದಿನವನ್ನು ಆಚರಿಸಲಾಗುತ್ತದೆ.

  11. ಮಾರ್ಚ್ 14, ಪೈ ದಿನ:

    ಪ್ರಪಂಚದಾದ್ಯಂತ ಪೈ ದಿನವನ್ನು ಆಚರಿಸಲಾಗುತ್ತಿದ್ದು, ಪೈ ಎಂಬುದು ಗಣಿತದಲ್ಲಿ ಸ್ಥಿರವನ್ನು ಪ್ರತಿನಿಧಿಸಲು ಬಳಸುವ ಸಂಕೇತವಾಗಿದೆ.

  12.  ಮಾರ್ಚ್ 14, ನದಿಗಳಿಗಾಗಿ ಅಂತರಾಷ್ಟ್ರೀಯ ಕ್ರಿಯೆಯ ದಿನ:

    ಈ ಅಂತರಾಷ್ಟ್ರೀಯ ದಿನದಂದು ನದಿಗಳನ್ನು ರಕ್ಷಿಸಲು ಮತ್ತು ನದಿಗಳ ನೀತಿಗಳನ್ನು ಸುಧಾರಿಸಲು ಒತ್ತಾಯಿಸಲು ಧ್ವನಿ ಎತ್ತುವ ಉದ್ದೇಶವನ್ನು ಹೊಂದಿದೆ.

  13. ಮಾರ್ಚ್ 15, ವಿಶ್ವ ಗ್ರಾಹಕ ಹಕ್ಕುಗಳ ದಿನ:

    ಈ ದಿನವನ್ನು ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ.

  14. ಮಾರ್ಚ್ 16, ರಾಷ್ಟ್ರೀಯ ಲಸಿಕೆ ದಿನ:

    ಭಾರತದಲ್ಲಿ ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸಲಾಗುತ್ತಿದ್ದು, ಪೋಲಿಯೊ ನಿರ್ಮೂಲನೆಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಹೊಂದಿದೆ.

  15. ಮಾರ್ಚ್ 18, ಆರ್ಡಿನೆನ್ಸ್ ಫಾಕ್ಟರಿ ದಿನ:

    ಈ ದಿನವನ್ನು ಆರ್ಡಿನೆನ್ಸ್ ಫ್ಯಾಕ್ಟರಿ, ಫೀಲ್ಡ್ ಗನ್ ಫ್ಯಾಕ್ಟರಿ, ಸಣ್ಣ ಶಸ್ತ್ರಾಸ್ತ್ರ ಕಾರ್ಖಾನೆ, ಆರ್ಡನೆನ್ಸ್ ಪ್ಯಾರಾಚೂಟ್ ಫ್ಯಾಕ್ಟರಿ ಮತ್ತು ಆರ್ಡನೆನ್ಸ್ ಸಲಕರಣೆ ಕಾರ್ಖಾನೆಗಳು ದಿನವನ್ನು ಅಂಗೀಕರಿಸುತ್ತವೆ.

  16. ಮಾರ್ಚ್ 20, ವಿಶ್ವ ಗುಬ್ಬಚ್ಚಿ ದಿನ:

    ವಿಶ್ವ ಗುಬ್ಬಚ್ಚಿ ದಿನ ಗುಬ್ಬಚ್ಚಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 20 ರಂದು ವಿಶ್ವದಾದ್ಯಂತ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.

  17. ಮಾರ್ಚ್ 20, ಇಂಟರ್ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್:

    ವಿಶ್ವಸಂಸ್ಥೆಯು 2013 ರಿಂದ, ಪ್ರಪಂಚದಾದ್ಯಂತದ ಜನರ ಜೀವನದಲ್ಲಿ ಸಂತೋಷದ ಮಹತ್ವವನ್ನು ತಿಳಿಪಡಿಸಲು ಈ ದಿನವನ್ನು ಆಚರಿಸಿದೆ.

  18. ಮಾರ್ಚ್ 21, ವಿಶ್ವ ಅರಣ್ಯ ದಿನ:

    1971 ರಲ್ಲಿ, ಯುರೋಪಿಯನ್ ಕಾನ್ಫೆಡರೇಶನ್ ಆಫ್ ಅಗ್ರಿಕಲ್ಚರ್ನ 23 ನೇ ಸಾಮಾನ್ಯ ಸಭೆಯಲ್ಲಿ ವಿಶ್ವ ಅರಣ್ಯ ದಿನವನ್ನು ಘೋಷಿಸಲಾಯಿತು. ಈ ದಿನದಂದು ಕಾಡುಗಳ ಮೌಲ್ಯಗಳು, ಮಹತ್ವ ಹಾಗೂ ಕೊಡುಗೆಗಳ ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವುದಾಗಿದೆ.

  19. ಮಾರ್ಚ್ 21, ವಿಶ್ವ ಕಾವ್ಯ ದಿನ:

    1999 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋದ 30 ನೇ ಅಧಿವೇಶನದಲ್ಲಿ ಮಾರ್ಚ್ 21 ರಂದು ಈ ದಿನವನ್ನು ಆಚರಿಸಲು ಅಂಗೀಕರಿಸಲಾಯಿತು. ಮಾನವ ಮನಸ್ಸಿನ ಸೃಜನಶೀಲ ಚೈತನ್ಯವನ್ನು ಕಾವ್ಯದ ಮೂಲಕ ಸೆರೆ ಹಿಡಿಯುವ ಸಾಮರ್ಥ್ಯವನ್ನು ಜನರಿಗೆ ತಿಳಿಯಪಡಿಸುವುದಾಗಿದೆ.

  20. ಮಾರ್ಚ್ 22, ವಿಶ್ವ ಜಲ ದಿನ:

    ಸಿಹಿನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಿಹಿನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಪ್ರತಿಪಾದಿಸಲು ವಾರ್ಷಿಕವಾಗಿ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.\

  21. ಮಾರ್ಚ್ 23, ವಿಶ್ವ ಹವಮಾನ ದಿನ:

    ವಿಶ್ವ ಹವಾಮಾನ ದಿವನ್ನು ಮಾರ್ಚ್ 23, 1950 ರಂದು ವಿಶ್ವ ಹವಾಮಾನ ಸಂಸ್ಥೆ ಜಾರಿಗೆ ಬಂದಿತು. ಹವಾಮಾನದಲ್ಲಾಗುವ ಏರುಪೇರಿನಿಂದಾಗಿ ಜೀವನದ ಮೇಲೆ ಆಗುವ ಪರಿಣಾಮಬಿರುತ್ತದೆ ಎನ್ನುವುದನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.

  22. ಮಾರ್ಚ್ 24, ವಿಶ್ವ ಕ್ಷಯರೋಗ ದಿನ:

    1882 ರಲ್ಲಿ ಟಿಬಿಗೆ ಕಾರಣವಾಗುವ ಬ್ಯಾಸಿಲಸ್ ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲಸ್ ಅನ್ನು ಡಾ. ರಾಬರ್ಟ್ ಕೋಚ್ ಅವರು ಕಂಡುಹಿಡಿದ ದಿನಾಂಕದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

  23. ಮಾರ್ಚ್ 27, ವಿಶ್ವ ರಂಗಭೂಮಿ ದಿನ:

    “ರಂಗಭೂಮಿ” ಎಂಬ ಕಲಾ ಪ್ರಕಾರದ ಪ್ರಾಮುಖ್ಯತೆಯನ್ನು ಹೆಚ್ಚಿಸಲು 1962 ರಿಂದ ವಾರ್ಷಿಕವಾಗಿ ವಿಶ್ವ ರಂಗಭೂಮಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

  24. ಮಾರ್ಚ್ 30, ರಾಮ ನವಮಿ:

    ರಾಮ ನವಮಿಯು ಭಗವಾನ್ ರಾಮನ ಜನ್ಮವನ್ನು ಆಚರಿಸುವ ಜನಪ್ರಿಯ ಹಿಂದೂ ಹಬ್ಬವಾಗಿದೆ. ಪ್ರತಿ ವರ್ಷ ಚೈತ್ರ ನವರಾತ್ರಿಯ ಒಂಬತ್ತನೇ ದಿನದಂದು ಈ ದಿನವನ್ನು ಆಚರಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Tue, 27 February 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್