ಮಾರ್ಚ್ 8 ರಂದು, ಪ್ರಪಂಚವು ಅಂತರಾಷ್ಟ್ರೀಯ ಮಹಿಳಾ ದಿನ(International Women’s Day) ವನ್ನು ಆಚರಿಸುತ್ತದೆ. ಈ ದಿನ ಮಹಿಳಾ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ವಿಶೇಷ ದಿನವಾಗಿದೆ. ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಹಿಂದೆ ಮೂರು ಗೋಡೆಗಳ ಸೀಮಿತವಾಗಿದ್ದ ಮಹಿಳೆಯನ್ನು ಸಮಾಜದಲ್ಲಿ ಮುಂಚೂಣೆಗೆ ತಂದು, ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಆಕೆ ಪುರುಷರಿಗೆ ಪೈಪೋಟಿ ನೀಡುವಷ್ಟು ಬೆಳೆದು ನಿಂತಿದ್ದಾಳೆ. ಆದರೆ ಇಂದು ಕೂಡ ಹೆಣ್ಣು ಮಗುವೆಂದರೆ ಹೊರೆ ಎನ್ನುವ ಜನರು ಸಮಾಜದಲ್ಲಿ ಇರುವುದನ್ನು ಕಾಣಬಹುದು.
1975ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾರ್ಚ್ 8 ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆಗೆ ತಂದಿತು. ಅದರೆ 1908ರ ಫೆಬ್ರವರಿಯಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗಿತ್ತು. ಫೆಬ್ರವರಿ 28, 1908 ರಂದು, ಸೋಷಿಯಲಿಸ್ಟ್ ಪಾರ್ಟಿ ಆಫ್ ಅಮೇರಿಕಾ ನ್ಯೂಯಾರ್ಕ್‌ನಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಸ್ಥಾಪಿಸಿತು. ಗಾರ್ಮೆಂಟ್ಸ್ ಕಾರ್ಮಿಕರ ವಿರುದ್ಧ ನಗರದಾದ್ಯಂತ ಪ್ರತಿಭಟನೆಗಳನ್ನು ಸ್ಮರಿಸಲು ಕಾರ್ಮಿಕ ಕಾರ್ಯಕರ್ತೆ ಥೆರೆಸಾ ಮಲ್ಕಿಲ್ ಈ ದಿನವನ್ನು ಪ್ರಸ್ತಾಪಿಸಿದರು. ಅದೇ ವರ್ಷದ ನಂತರ, ಅಮೇರಿಕನ್ ಸಮಾಜವಾದಿಗಳಿಂದ ಸ್ಫೂರ್ತಿ ಪಡೆದ ಜರ್ಮನ್ ಪ್ರತಿನಿಧಿಗಳು ಮಹಿಳಾ ದಿನದ ಕಲ್ಪನೆಯನ್ನು ಪ್ರಸ್ತಾಪಿಸಿದರು, ಆದರೂ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ.
ವಿಶ್ವಸಂಸ್ಥೆಯು 1975 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು ಮತ್ತು 1977 ರಲ್ಲಿ ಯು ಎನ್ ಜನರಲ್ ಅಸೆಂಬ್ಲಿಯು ಮಹಿಳೆಯರ ಹಕ್ಕುಗಳು ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು. ಅಂದಿನಿಂದ, ವಿಶ್ವಸಂಸ್ಥೆಯು ಪ್ರತಿ ವರ್ಷ ಒಂದು ವಿಷಯವನ್ನು ಸ್ಥಾಪಿಸುವ ಮೂಲಕ ದಿನವನ್ನು ಸ್ಮರಿಸುತ್ತದೆ.
ಇದನ್ನೂ ಓದಿ: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ
ಲಿಂಗ ಸಮಾನತೆಯನ್ನು ಎತ್ತಿಹಿಡಿಸುವ, ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದು ಈ ದಿನದ ಮಹತ್ವವಾಗಿದೆ. ಜೊತೆಗೆ ಮಹಿಳಾ ಸಾಧಕೀಯರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆಯತ್ತ ಮುನ್ನುಗ್ಗಲು ಫ್ರೋತ್ಸಾಹವನ್ನು ನೀಡುವುದು, ಜೊತೆಗೆ ಜೊತೆಗೆ ವಿವಿಧ ಸ್ತ್ರೀ-ಕೇಂದ್ರಿತ ದತ್ತಿಗಳಿಗೆ ನಿಧಿಸಂಗ್ರಹಿಸುತ್ತದೆ ಈ ದಿನದ ಗುರಿಯಾಗಿದೆ.
DigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ
ಈ ವರ್ಷದ ಮಹಿಳಾ ದಿನದ ವಿಷಯವು “DigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ” ಎಂಬುದು 2023 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾಗಿದೆ. ಇದು ಮಹಿಳೆಯರ ಸ್ಥಿತಿಗತಿಯ ಆಯೋಗದ ಮುಂಬರುವ 67 ನೇ ಅಧಿವೇಶನದ ಆದ್ಯತೆಯ ವಿಷಯದೊಂದಿಗೆ (CSW-67) ಸಂಯೋಜಿಸಲ್ಪಟ್ಟಿದೆ. ಅಂದರೆ “ನಾವೀನ್ಯತೆ ಮತ್ತು ತಾಂತ್ರಿಕ ಬದಲಾವಣೆ, ಮತ್ತು ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹುಡುಗಿಯರ ಸಬಲೀಕರಣವನ್ನು ಸಾಧಿಸಲು ಡಿಜಿಟಲ್ ಯುಗದಲ್ಲಿ ಶಿಕ್ಷಣ”.
ಅಂತರರಾಷ್ಟ್ರೀಯ ಮಹಿಳಾ ದಿನದ ಗುರಿಯು ಮಹಿಳಾ ಸಾಧನೆಗಳನ್ನು ಆಚರಿಸುವುದು ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸುವುದು. ಈ ದಿನವು ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅಂದರೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಗೆ ಸಮಾನ ಅವಕಾಶಗಳನ್ನು ನೀಡುವುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:35 pm, Wed, 1 March 23