AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಳಿಗಾಲದ ಸೋಮಾರಿತನ ನಿಮ್ಮ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗುತ್ತಿದೆಯಾ? ಹಾಗಾದರೆ ಹೀಗೆ ಮಾಡಿ

ನಿರ್ದಿಷ್ಟ ವಾತಾವರಣಕ್ಕೆ ಹೊಂದಿಕೊಂಡ ನಮ್ಮ ದೇಹವು, ತಾಪಮಾನ ಕಡಿಮೆಯಾಗುತ್ತಿದ್ದ ಹಾಗೆಯೇ ಜನರಲ್ಲಿ ಸೋಮಾರಿತನ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮನೆಯೊಳಗೆ ಇರಲು ಇಷ್ಟಪಡುತ್ತಾರೆ. ಆದರೆ ಇಂತಹ ಜಡ ಅಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಈ ನಿರ್ಲಕ್ಷ್ಯ ನಿಮ್ಮ ತೂಕ ಏರಿಕೆಗೆ ಕಾರಣವಾಗಬಹುದು. ಜೊತೆಗೆ ಬೊಜ್ಜಿನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದ ಸೋಮಾರಿತನವನ್ನು ಎದುರಿಸಲು ಮತ್ತು ಆರೋಗ್ಯವಾಗಿರಲು ಈ ಸರಳ ಮಾರ್ಗಗಗಳನ್ನು ಅಳವಡಿಸಿಕೊಳ್ಳುವುದು ಒಳಿತು.

ಚಳಿಗಾಲದ ಸೋಮಾರಿತನ ನಿಮ್ಮ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗುತ್ತಿದೆಯಾ? ಹಾಗಾದರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 01, 2023 | 6:13 PM

Share

ಒಂದು ನಿರ್ದಿಷ್ಟ ವಾತಾವರಣಕ್ಕೆ ಹೊಂದಿಕೊಂಡ ನಮ್ಮ ದೇಹವು, ತಾಪಮಾನ ಕಡಿಮೆಯಾಗುತ್ತಿದ್ದ ಹಾಗೆಯೇ ಜನರಲ್ಲಿ ಸೋಮಾರಿತನ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಜನರು ಮನೆಯೊಳಗೆ ಇರಲು ಇಷ್ಟಪಡುತ್ತಾರೆ. ಯಾವುದೇ ಕೆಲಸಕ್ಕೂ ಆಸಕ್ತಿ ತೋರಿಸದಿರುವುದು. ಇದರರ್ಥ ಬೆಚ್ಚಗಿನ ಕಂಬಳಿ ಹೊದ್ದು ಆರಾಮವಾಗಿ ಮಲುಗುವುದು ಮತ್ತು ವ್ಯಾಯಾಮ ಮಾಡದಿರುವುದು. ಇಂತಹ ಜಡ ಅಭ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಇಂತಹ ನಿರ್ಲಕ್ಷ್ಯ, ನಿಮ್ಮ ತೂಕ ಏರಿಕೆಗೆ ಕಾರಣವಾಗಬಹುದು. ಜೊತೆಗೆ ಬೊಜ್ಜಿನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಚಳಿಗಾಲದ ಸೋಮಾರಿತನವನ್ನು ಎದುರಿಸಲು ಮತ್ತು ಆರೋಗ್ಯವಾಗಿರಲು ಈ ಸರಳ ಮಾರ್ಗಗಗಳನ್ನು ಅಳವಡಿಸಿಕೊಳ್ಳುವುದು ಒಳಿತು.

ಚಳಿಗಾಲದ ಸೋಮಾರಿತನವು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಕಡಿಮೆಯಾಗುವುದು ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗುತ್ತದೆ, ಇದು ಕಡಿಮೆ ಸಿರೊಟೋನಿನ್ ಮಟ್ಟಕ್ಕೆ ಕಾರಣವಾಗುತ್ತದೆ ಎಂದು ಆಂತರಿಕ ಔಷಧ ತಜ್ಞ ಡಾ. ಪಿ.ವೆಂಕಟ ಕೃಷ್ಣನ್ ಹೇಳುತ್ತಾರೆ. ತಂಪಾದ ತಾಪಮಾನವು ನಿಮ್ಮ ದೈಹಿಕ ಚಟುವಟಿಕೆಯಲ್ಲಿ ಬದಲಾವಣೆಗಳನ್ನು ತರಬಹುದು. ಋತುಗಳಿಗೆ ಸಂಬಂಧಿಸಿದ ಒಂದು ರೀತಿಯ ಖಿನ್ನತೆಯಾದ ಕಾಲೋಚಿತ ಪರಿಣಾಮ ಅಸ್ವಸ್ಥತೆ (ಎಸ್ಎಡಿ) ಸಹ ಚಳಿಗಾಲದ ಆಲಸ್ಯಕ್ಕೆ ಕಾರಣವಾಗಬಹುದು.

ಹಾಗಾದರೆ ಚಳಿಗಾಲದ ಸೋಮಾರಿತನವನ್ನು ಸೋಲಿಸುವ ಮಾರ್ಗಗಳು ಯಾವುವು? ಸೋಮಾರಿತನವು ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು, ಇದಕ್ಕೆ ಜೀವನಶೈಲಿ ಆಯ್ಕೆಗಳು ಮಹತ್ವದ ಪಾತ್ರವಹಿಸುತ್ತವೆ. ಜಡ ಅಭ್ಯಾಸಗಳು, ಕಳಪೆ ಪೌಷ್ಠಿಕಾಂಶ, ಅಸಮರ್ಪಕ ನಿದ್ರೆ ಮತ್ತು ಹೆಚ್ಚಿನ ಒತ್ತಡವು ಸೋಮಾರಿತನಕ್ಕೆ ಕಾರಣವಾಗಬಹುದು. ಸೋಮಾರಿತನವನ್ನು ಎದುರಿಸಲು ನೀವು ಏನು ಮಾಡಬಹುದು ಎಂಬುದು ಇಲ್ಲಿದೆ.

1. ಆದಷ್ಟು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ

ಈ ಚಳಿಗಾಲದ ತಿಂಗಳುಗಳಲ್ಲಿ ನಿಮ್ಮ ಕಂಬಳಿ ನಿಮಗೆ ಉತ್ತಮ ಗೆಳೆಯ ಎನಿಸಬಹುದು. ಇನ್ನು ಎಲ್ಲಾ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಕಚೇರಿಯಲ್ಲಿ ಕೆಲಸ ಮಾಡುವುದರಿಂದ ಶೀತ ಗಾಳಿಯಿಂದ ನಿಮ್ಮನ್ನು ರಕ್ಷಿಸಸಿಕೊಳ್ಳಬಹುದು. ಆದರೆ ಹಗಲು ಹೊತ್ತಿನಲ್ಲಿ ಹೊರಾಂಗಣದಲ್ಲಿ ಸಮಯ ಕಳೆಯುವುದು ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಇದು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಜೊತೆಗೆ ನಿಮ್ಮ ಮನಸ್ಥಿತಿ ಮತ್ತು ದೇಹದ ಶಕ್ತಿಯನ್ನು ಸುಧಾರಿಸುತ್ತದೆ. ಹಾಗಾಗಿ ನಿಮ್ಮ ವಾಸಸ್ಥಳಕ್ಕೆ ನೈಸರ್ಗಿಕ ಬೆಳಕು ಬರಲು ಅನುವು ಮಾಡಿಕೊಡುವುದನ್ನು ಮರೆಯಬೇಡಿ.

2. ಮನೆಯೊಳಗೆ ಸಕ್ರಿಯರಾಗಿರಿ

ಹೊರಾಂಗಣಕ್ಕೆ ಹೋಗುವ ಆಯ್ಕೆಗಳು ಸೀಮಿತವಾಗಿದ್ದಾಗ ದೈಹಿಕ ಚಟುವಟಿಕೆಯ ಮಟ್ಟವನ್ನು ಎಂದಿನಂತೆ ಕಾಪಾಡಿಕೊಳ್ಳಲು ಯೋಗ, ಮನೆ ವ್ಯಾಯಾಮ ಅಥವಾ ನೃತ್ಯದಂತಹ ಒಳಾಂಗಣ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಉತ್ತಮ ಪ್ರಮಾಣದ ದೈಹಿಕ ಚಲನೆಯನ್ನು ಒಳಗೊಂಡಿರುವ ಮನೆ ಕೆಲಸವನ್ನು ಸಹ ನೀವು ಮಾಡಬಹುದು.

3. ಸ್ಥಿರವಾದ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು

ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳುವ ಮೂಲಕ ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಿ. ಏಕೆಂದರೆ ಚೆನ್ನಾಗಿ ವಿಶ್ರಾಂತಿ ಪಡೆದ ದೇಹಕ್ಕೆ ಆಲಸ್ಯದ ಭಾವನೆಗಳನ್ನು ಎದುರಿಸುವ ಸಾಧ್ಯತೆಯಿರುತ್ತದೆ.

4. ಹೈಡ್ರೇಟ್ ಆಗಿರಿ ಮತ್ತು ಒಳ್ಳೆಯ ಆಹಾರವನ್ನು ಸೇವಿಸಿ

ಒಟ್ಟಾರೆ ಆರೋಗ್ಯಕ್ಕೆ ನೀರು ಮತ್ತು ಸಮತೋಲಿತ ಆಹಾರವು ನಿರ್ಣಾಯಕವಾಗಿದೆ. ಪೋಷಕಾಂಶ ಭರಿತ ಆಹಾರಗಳು ಸುಸ್ಥಿರ ಶಕ್ತಿಯನ್ನು ಒದಗಿಸುತ್ತವೆ, ಇದು ಮಂದಗತಿಯನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಬೆಚ್ಚಗೆ ಮತ್ತು ಆರೋಗ್ಯವಾಗಿರಲು ನೀವು ಚಳಿಗಾಲದಲ್ಲಿ ತರಕಾರಿ ಸೂಪ್ ಗಳನ್ನು ಸಹ ಸೇವಿಸಬಹುದು.

ಇದನ್ನೂ ಓದಿ: ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರುವಾಗಲಿದೆ

5. ಸಾಮಾಜಿಕವಾಗಿ ಬೆರೆಯಿರಿ

ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ, ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಾಗಿದ್ದರೆ ಈ ಅಭ್ಯಾಸವನ್ನು ಆದಷ್ಟು ಮೊಟಕುಗೊಳಿಸಿ. ಏಕೆಂದರೆ ಇದು ಆರೋಗ್ಯಕರವಲ್ಲ. ಆದಷ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಸಾಮಾಜಿಕ ಸಂವಹನಗಳು ನಿಮ್ಮ ಮನಸ್ಥಿತಿಯನ್ನು ಉನ್ನತೀಕರಿಸುತ್ತದೆ ಮತ್ತು ಭಾವನಾತ್ಮಕವಾಗಿ ನಿಮಗೆ ಬೆಂಬಲವನ್ನು ನೀಡುತ್ತದೆ ಎಂದು ಡಾ. ಕೃಷ್ಣನ್ ಹೇಳುತ್ತಾರೆ.

6. ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮರೆಯಬೇಡಿ.

ಧ್ಯಾನ ಅಥವಾ ಆಳವಾದ ಉಸಿರಾಟದಂತಹ ಮೈಂಡ್ಫುಲ್ನೆಸ್ ತಂತ್ರಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

7. ಹೊಸ ಹವ್ಯಾಸಗಳನ್ನು ಪ್ರಯತ್ನಿಸಿ

ನಿಮ್ಮ ದಿನಚರಿ ಕೆಲಸದ ಒತ್ತಡದಿಂದ ತುಂಬಿರಬಹುದು, ಆದರೆ ಚಳಿಗಾಲವು ಚಿತ್ರಕಲೆ, ಓದುವುದು ಅಥವಾ ಹೊಸ ಕೌಶಲ್ಯವನ್ನು ಕಲಿಯುವುದು ಮುಂತಾದ ಒಳಾಂಗಣ ಹವ್ಯಾಸಗಳನ್ನು ಅನ್ವೇಷಿಸಲು ಅತ್ಯುತ್ತಮ ಸಮಯವಾಗಿದೆ. ಹಾಗಾಗಿ ಹೊಸ ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

8. ಸ್ವಲ್ಪ ದಿನ ಬಿಡುವು ಮಾಡಿಕೊಂಡು ಸಣ್ಣ ವಿರಾಮ ತೆಗೆದುಕೊಳ್ಳಿ

ಸಾಧ್ಯವಾದರೆ, ಸ್ವಲ್ಪ ದಿನ ಬಿಡುವು ಮಾಡಿಕೊಂಡು ಬೆಚ್ಚಗಿರುವ ಸ್ಥಳಕ್ಕೆ ಸ್ವಲ್ಪ ದಿನದ ಮಟ್ಟಿಗೆ ಹೋಗಿ ಬನ್ನಿ. ಇದು ನಿಮಗೆ ಬದಲಾವಣೆ ನೀಡುವುದಲ್ಲದೆಯೇ ಮಾನಸಿಕ ಆರೋಗ್ಯವನ್ನುಒದಗಿಸಲು ಸಹ ಸಹಾಯ ಮಾಡುತ್ತದೆ.

ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ದೈಹಿಕ, ಮಾನಸಿಕ ಅಂಶಗಳನ್ನು ಪರಿಹರಿಸಿಕೊಳ್ಳಬಹುದು. ಈ ಮೂಲಕ ಚಳಿಗಾಲದ ಸೋಮಾರಿತನವನ್ನು ನಿವಾರಿಸಿಕೊಳ್ಳಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ