ಕಾವೇರಿ ಬೆಂಗಳೂರು ರನ್; ನವೆಂಬರ್ 14 ರಿಂದ 20 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನೀವೂ ಪಾಲ್ಗೊಳ್ಳುವಿರಾ? ಇಲ್ಲಿದೆ ಮಾಹಿತಿ

ಕಾವೇರಿ ಬೆಂಗಳೂರು ರನ್; ನವೆಂಬರ್ 14 ರಿಂದ 20 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನೀವೂ ಪಾಲ್ಗೊಳ್ಳುವಿರಾ? ಇಲ್ಲಿದೆ ಮಾಹಿತಿ
ಕಾವೇರಿ ಬೆಂಗಳೂರು ರನ್

ಕಾವೇರಿ ಬೆಂಗಳೂರು ರನ್​ ವರ್ಚುವಲ್​ ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸುವುದಾದರೆ ಈ ಕೆಲವು ನಿಯಮಗಳು ನೆನಪಿನಲ್ಲಿರಲಿ. ಆರೋಗ್ಯ ಸಮಸ್ಯೆ ತಡೆಗಟ್ಟುವ ಕುರಿತಾದ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

TV9kannada Web Team

| Edited By: shruti hegde

Oct 29, 2021 | 1:57 PM

ಬೆಂಗಳೂರು: ಭಾರತದಲ್ಲಿ 1,33 ಶತಕೋಟಿ ಜನಸಂಖ್ಯೆಯಲ್ಲಿ 11.2 ಪ್ರತಿಶತದಷ್ಟು ಜನರು ಮಧುಮೇಹಿಗಳು ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ವಯಸ್ಸಾದಂತೆಯೇ ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿ ಗ್ಲುಕೋಸ್ ಮಟ್ಟವು ದೇಹದ ಅಂಗಾಂಗಗಳನ್ನು ಹಾನಿಗೊಳಿಸುತ್ತದೆ. ಕೆಲವು ಬಾರಿ ಆರೋಗ್ಯ ಸಮಸ್ಯೆಯು ದೊಡ್ಡ (ಮ್ಯಾಕ್ರೋವಾಸ್ಕುಲರ್) ಮತ್ತು ಸಣ್ಣ (ಮೈಕ್ರೋವಾಸ್ಕುಲರ್) ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆಗೆ ಹಾಗೂ ಮೂತ್ರಪಿಂಡ, ಕಣ್ಣುಗಳು, ಒಸಡುಗಳು, ಪಾದ ಮತ್ತು ನರಗಳ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಗಳಿರುತ್ತದೆ. ಮಧುಮೇಹ ಮತ್ತು ಆರೋಗ್ಯ ಸಮಸ್ಯೆಯನ್ನು ತಡೆಗಟ್ಟುವ ಕುರಿತಾಗಿ ಜಾಗೃತಿ ಮೂಡಿಸಲು ಕಾವೇರಿ ಹಾಸ್ಪಿಟಲ್ಸ್ ಬೆಂಗಳೂರು ಕಾವೇರಿ ಬೆಂಗಳೂರು ರನ್ ವರ್ಚುವಲ್ ಮ್ಯಾರಥಾನ್ ಅನ್ನು ಘೋಷಿಸಿದೆ. ಇದು ನವೆಂಬರ್ 14ರಿಂದ ಆರಂಭಗೊಳ್ಳಲಿದ್ದು ನವೆಂಬರ್ 20 ರವರೆಗೆ ನಡೆಯಲಿದೆ.

ಒತ್ತಡ ಜೀವನಶೈಲಿಯಲ್ಲಿ ಬಹುತೇಹ ಎಲ್ಲರನ್ನೂ ಆರೋಗ್ಯ ಸಮಸ್ಯೆಗಳು ಆವರಿಸಿಕೊಂಡಿದೆ. ಅದರಲ್ಲಿಯೂ ಹೆಚ್ಚಿನ ಜನರಲ್ಲಿ ಮಧುಮೇಹ ಸಮಸ್ಯೆ ಕಾಡುತ್ತಿದೆ. ಸಾಮಾಜಿಕ ಭದ್ರತೆಯ ಭಾಗವಾಗಿ ಆರೋಗ್ಯ ಸಮಸ್ಯೆ ತಡೆಗಟ್ಟುವ ಕುರಿತಾದ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ದೈಹಿಕ ಚಟುವಟಿಕೆ ಮತ್ತು ರೋಗವನ್ನು ತಡೆಗಟ್ಟುವ ಕ್ರಮಗಳನ್ನು ಎಲ್ಲಾ ಮನಸ್ಥಿತಿಯ ಮತ್ತು ಎಲ್ಲಾ ವಯಸ್ಸಿನ ಜನರಿಗೆ ತಿಳಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯಭಾಸ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಆರೋಗ್ಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಮಾನದಂಡಗಳ ಆಧಾರದ ಮೇಲೆ ಕಾವೇರಿ ಬೆಂಗಳೂರು ರನ್ ಕಾರ್ಯಕ್ರಮ ನಡೆಯುತ್ತಿದೆ. ಭಾಗವಹಿಸುವವರು ಸುರಕ್ಷಿತ ಸ್ಥಳದಲ್ಲಿ ಮತ್ತು ಅವರಿಗೆ ಸೂಕ್ತವಾದ ಸಮಯದಲ್ಲಿ ಓಟವನ್ನು ನಡೆಸಲಾಗುತ್ತದೆ. ಎಲ್ಲಾ ವಯೋಮಾನದ ಜನರ ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸಲು ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾವೇರಿ ಆಸ್ಪತ್ರೆಯ ಸೌಲಭ್ಯ ನಿರ್ದೇಶಕ ವಿಲ್ಫ್ರೆಡ್ ಸ್ಯಾಮ್ಸನ್ ಹೇಳಿದ್ದಾರೆ.

ಭಾಗವಹಿಸುವವರು ಓಟಕ್ಕೆ ಸೇರಲು ಈವೆಂಟ್ ವೆಬ್ಸೈಟ್ http://kauverybangalorerun.com/ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಓಟವನ್ನು ನಾಲ್ಕು ವಿಭಾಗಗಳಲ್ಲಿ ಅಂದರೆ 21.1K, 10K, 5K ಮತ್ತು 2K ಎಂದು ವಿಂಗಡಿಸಲಾಗಿದೆ. ಪ್ರತಿಯೊಂದು ವಿಭಾಗಗಳಲ್ಲಿ ಅಗ್ರ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ಕೂಡಾ ಪ್ರಮಾಣಪತ್ರವನ್ನು ಸ್ವೀಕರಿಸುವ ಮೂಲಕ ಪದಕವನ್ನು ಪಡೆದುಕೊಳ್ಳುತ್ತಾರೆ. 500 ರೂ. ನಾಮಮಾತ್ರ ನೋಂದಣಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಇದು ವಿಶೇಷವಾಗಿ ಸಮಾಜದಲ್ಲಿ ಹಿಂದುಳಿದ ವರ್ಗದ ಜನರಿಗೆ ಮಧುಮೇಹ ತಪಾಸಣೆ ಶಿಬಿರವನ್ನು ಆಯೋಜಿಸಲು ಬಳಸಲಾಗುತ್ತದೆ.

ನಿಯಮಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಸಮಯ ಮತ್ತು ದೂರವನ್ನು ಟ್ರ್ಯಾಕ್ ಮಾಡುವ ಟ್ರ್ಯಾಕಿಂಗ್ ಅಪ್ಲಿಕೇಶನ್ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಅಥವಾ ಸ್ಮಾರ್ಟ್ ವಾಚ್ಅನ್ನು ಬಳಸಬೇಕು

ತಮ್ಮದೇ ಆದ ಓಟದ ಮಾರ್ಗವನ್ನು ಯೋಜಿಸಬೇಕು ಮತ್ತು ಫಲಿತಾಂಶವನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು.

ಲಾರ್ಯಕ್ರಮದಲ್ಲಿ ಬಾಗವಹಿಸುವವರು ಫೋಟೋಗಳನ್ನು ಮತ್ತು ವಿಡಿಯೊಗಳನ್ನು ಇತರ ಭಾಗವಹಿಸುತ್ತಿರುವ ಜನರೊಂದಿಗೆ ಹಂಚಿಕೊಳ್ಳಬಹುದು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಗಮನವಿರಬೇಕು

ಇದನ್ನೂ ಓದಿ:

Health Tips: ಈ 5 ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

Health Tips: ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು

Follow us on

Related Stories

Most Read Stories

Click on your DTH Provider to Add TV9 Kannada