Vastu Tips: ಮನೆಯಲ್ಲಿ ಹಣ ಹೆಚ್ಚಾಗಲು ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ

Vastu Tips: ಮನೆಯಲ್ಲಿ ಹಣ ಹೆಚ್ಚಾಗಲು ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ
ಸಾಂಕೇತಿಕ ಚಿತ್ರ

ಲಕ್ಷ್ಮಿ ದೇವಿಯ ಕೃಪೆ 2022ರಲ್ಲಿ ನಿಮ್ಮ ಮೇಲೆ ಇರಲು ಮತ್ತು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಪಡೆಯಲು ಈ ಸರಳ ಮಾರ್ಗಗಳನ್ನು ಪಾಲಿಸಿ. ಈ ಅಭ್ಯಾಸ ಮನೆಯಲ್ಲಿ ಸದಾ ಕಾಲ ಹಣ ಇರುವಂತೆ ಮಾಡುತ್ತದೆ.

TV9kannada Web Team

| Edited By: preethi shettigar

Dec 27, 2021 | 1:56 PM

ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. 2021ರಲ್ಲಿ ಹಣದ (Money) ಕೊರತೆ ಅಥವಾ ಆರ್ಥಿಕವಾಗಿ ಅನೇಕ ಸಮಸ್ಯೆಗಳು ನಿಮಗೆ ಎದುರಾಗಿರಬಹುದು. ಇದರಿಂದ ನಿಮ್ಮ ಸಮೃದ್ಧಿಗೆ ಕುಂದು ಬಂದಿರಬಹುದು. ಆದರೆ ಚಿಂತಿಸುವ ಅಗತ್ಯ ಇಲ್ಲ. 2021ರಲ್ಲಿನ ಎಲ್ಲಾ ಆರ್ಥಿಕ ದೋಷಗಳನ್ನು ಮುಂಬರುವ ವರ್ಷದಲ್ಲಿ ಸರಿಪಡಿಸಿಕೊಳ್ಳಬಹುದು. ಲಕ್ಷ್ಮಿ ದೇವಿಯ ಕೃಪೆ 2022ರಲ್ಲಿ ನಿಮ್ಮ ಮೇಲೆ ಇರಲು ಮತ್ತು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಪಡೆಯಲು ಈ ಸರಳ ಮಾರ್ಗಗಳನ್ನು ಪಾಲಿಸಿ. ಈ ಅಭ್ಯಾಸ ಮನೆಯಲ್ಲಿ ಸದಾ ಕಾಲ ಹಣ ಇರುವಂತೆ ಮಾಡುತ್ತದೆ.

ಚಿಪ್ಪುಮೀನು (ಕಪ್ಪೆ ಚಿಪ್ಪು) ಮತ್ತು ಕೇಸರಿ ಶುಕ್ರವಾರದಂದು ಹಳದಿ ಬಟ್ಟೆಯಲ್ಲಿ 5 ಕಪ್ಪೆ ಚಿಪ್ಪುಗಳು, ಬೆಳ್ಳಿಯ ನಾಣ್ಯ ಮತ್ತು ಸ್ವಲ್ಪ ಕುಂಕುಮವನ್ನು ಹಾಕಿ ಕಟ್ಟಿಕೊಳ್ಳಿ. ಇದನ್ನು ಹಣ ಇಡುವ ಜಾಗ ಅಥವಾ ಇನ್ನಿತರ ಸುರಕ್ಷಿತ ಸ್ಥಳದಲ್ಲಿ ಅರಿಶಿಣದ ಉಂಡೆಯೊಂದಿಗೆ ಇಡಿ.

ಭೋಜಪತ್ರ ಮತ್ತು ರಕ್ತಚಂದನ ರಕ್ತಚಂದನವನ್ನು ನೀರಿನಲ್ಲಿ ಕರಗಿಸಿ ಮತ್ತು ಭೋಜಪತ್ರ ಎಲೆಗಳ ಮೇಲೆ ನವಿಲು ಗರಿಗಳಿಂದ ಶ್ರೀ ಎಂದು ಬರೆಯಿರಿ. ನಂತರ ಈ ಭೋಜಪತ್ರವನ್ನು ಸುರಕ್ಷಿತವಾಗಿ ಮನೆಯಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣ ಹೆಚ್ಚಾಗುತ್ತದೆ.

ಆಮೆ ಮೂರ್ತಿ ಬೆಳ್ಳಿ, ಹಿತ್ತಾಳೆ ಅಥವಾ ಕಂಚಿನ ಲೋಹದಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಷ್ಟೇ ಅಲ್ಲ ಹಣವೂ ಹೆಚ್ಚಾಗುತ್ತದೆ

ಶಂಖ ಶಂಖವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದನ್ನು ಹಣ ಇಡುವ ಕಪಾಟಿನಲ್ಲಿಟ್ಟಾಗ, ತಾಯಿ ಲಕ್ಷ್ಮಿಯೇ ಅದರ ಕಡೆಗೆ ಆಕರ್ಷಿತಳಾಗುತ್ತಾಳೆ ಮತ್ತು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೇ ಸಮಯದಲ್ಲಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಅಡಿಕೆ ವೀಳ್ಯದೆಲೆ ಅಡಿಕೆಯನ್ನು ಗೌರಿ ಗಣೇಶನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಜತೆಗೆ ಗಣೇಶ ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ತಾಯಿ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ:

Vastu Tips: ವಾಸ್ತು ಪ್ರಕಾರ ಅಡುಗೆ ಕೋಣೆಯಿಂದ ಅತಿಥಿಗಳ ಕೋಣೆ ತನಕ ಈ ಬಣ್ಣ ಇದ್ದರೆ ಒಳಿತು

Vastu Tips: ನೀವು ಮಲಗುತ್ತಿರುವುದು ವಾಸ್ತು ಪ್ರಕಾರ ಸರಿ ಇದೆಯೇ? ಮನಸ್ಸಿಗೆ ಕಿರಿಕಿರಿ ಇದ್ದರೆ ಇವುಗಳನ್ನು ಪಾಲಿಸಿ ನೋಡಿ

Follow us on

Related Stories

Most Read Stories

Click on your DTH Provider to Add TV9 Kannada