Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮಿಚ್ಛೆಗೆ ವಿರುದ್ಧವಾಗಿ ಮಕ್ಕಳು ಮದುವೆಯಾದ್ರೆ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ?

ಕೆಲ ಪೋಷಕರಿಗೆ ತಮ್ಮ ಮಕ್ಕಳು ಲವ್‌ ಮ್ಯಾರೇಜ್‌ ಆಗೋದು ಇಷ್ಟವಿರುವುದಿಲ್ಲ. ಇನ್ನೂ ತಮ್ಮ ಮಾತನ್ನು ಧಿಕ್ಕರಿಸಿ ಮದುವೆಯಾದ ಮಕ್ಕಳೊಂದಿಗೆ ಪೋಷಕರು ಸಂಬಂಧವನ್ನೇ ಕಡಿದುಕೊಂಡ ಉದಾಹರಣೆ ಇದೆ. ಹೀಗೆ ಸಂಬಂಧವನ್ನು ಕಡಿದುಕೊಂಡ ಮೇಲೂ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕೇ? ಹೆತ್ತವರು ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಕ್ಕಳಿಗೆ ಪಾಲನ್ನು ನೀಡಲು ನಿರಾಕರಿಸಬಹುದೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿರಬಹುದು. ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡೋಣ ಬನ್ನಿ.

ತಮ್ಮಿಚ್ಛೆಗೆ ವಿರುದ್ಧವಾಗಿ ಮಕ್ಕಳು ಮದುವೆಯಾದ್ರೆ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Apr 13, 2025 | 12:13 PM

ತಮ್ಮ ಮಕ್ಕಳ ಮದುವೆ ವಿಚಾರದಲ್ಲಿ ಪೋಷಕರು (parents) ಸಾಕಷ್ಟು ಕನಸನ್ನು ಕಂಡಿರುತ್ತಾರೆ. ನನ್ನ ಮಗಳಿಗೆ ರಾಜ ಕುಮಾರನಂತಹ ಹುಡುಗನ ಜೊತೆ ಮದುವೆ ಮಾಡಬೇಕು, ಮಗನಿಗೆ ಒಂದೊಳ್ಳೆ ಸಂಸ್ಕಾರಯುತ ಹುಡುಗಿಯ ಜೊತೆ ಮದುವೆ ಮಾಡಿಸಬೇಕು ಹೀಗೆ ಸಾಕಷ್ಟು ಕನಸನ್ನು ಕಂಡಿರುತ್ತಾರೆ. ಆದ್ರೆ ಕೆಲ ಮಕ್ಕಳು ತಮ್ಮ ಪೋಷಕರ ಮಾತಿಗೆ ವಿರುದ್ಧವಾಗಿ ಪ್ರೇಮ ವಿವಾಹವಾಗಲು (Love marriage) ಬಯಸುತ್ತಾರೆ. ಅದೆಷ್ಟೋ ಜನ ತಂದೆ ತಾಯನ್ನು ತೊರೆದು ತಾವು ಪ್ರೀತಿಸಿದವರೊಂದಿಗೆ ಓಡಿ ಹೋಗಿ ಮದುವೆಯಾದ ಉದಾಹರಣೆಯೂ ಇದೆ. ಇಂತಹ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಜೊತೆಗೆ ಆಸ್ತಿಯಲ್ಲಿ (property) ಅವನಿಗೆ ನಯಪೈಸೆ ಕೂಡಾ ಕೊಡಲ್ಲ ಎಂಬ ಮಾತನ್ನು ಹೇಳುತ್ತಾರೆ. ಆದ್ರೆ ಕಾನೂನಿನ ಪ್ರಕಾರ ಮಕ್ಕಳು ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಅಂತಹ ಸಂದರ್ಭದಲ್ಲಿ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ಕೊಡುವುದನ್ನು ನಿರಾಕರಿಸಬಹುದೇ? ಈ ಬಗ್ಗೆ ಕಾನೂನು ಏನು ಹೇಳುತ್ತೆ ನೋಡಿ.

ತಮ್ಮಿಚ್ಛೆಗೆ ವಿರುದ್ಧವಾಗಿ ಮಕ್ಕಳು ಲವ್‌ ಮ್ಯಾರೇಜ್‌ ಆದ್ರೆ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ:

ಮಗ ಅಥವಾ ಮಗಳು ತಮ್ಮ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ, ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ? ಅವರ ಆಸ್ತಿ ಹಕ್ಕುಗಳನ್ನು ಕಸಿದುಕೊಳ್ಳಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.  ಮಕ್ಕಳು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರೂ ಅಥವಾ ಬೇರೆ ಯಾವುದೋ  ಕಾರಣಕ್ಕಾಗಿ ಮಕ್ಕಳು ತಮ್ಮೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದರೂ ಸಹ ಪೋಷಕರು ತಮ್ಮ ಮಕ್ಕಳಿಗೆ ತಾವು ಸ್ವಂತವಾಗಿ ಗಳಿಸಿದ ಆಸ್ತಿಯ ಹಕ್ಕನ್ನು ನೀಡಲು ನಿರಾಕರಿಸಬಹುದು. ಉತ್ತರಾಧಿಕಾರವನ್ನು ಕಸಿದುಕೊಳ್ಳಬಹುದು. ಆದರೆ ಪೂರ್ವಜರ ಆಸ್ತಿಯಲ್ಲಿ ಮಾತ್ರ ಮಕ್ಕಳಿಗೂ ಹಕ್ಕಿದೆ ಎಂದು 2016 ರಲ್ಲಿ ದೆಹಲಿ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಪೋಷಕರು ತಾವು ಗಳಿಸಿದ ಆಸ್ತಿಯನ್ನು ತಾವು ಯಾರಿಗೆ ಕೊಡಬೇಕು ಎಂಬ ಸಂಪೂರ್ಣ ಹಕ್ಕನ್ನು ಅವರೇ ಹೊಂದಿರುತ್ತಾರೆ. ಉದಾಹರಣೆಗೆ ಪೋಷಕರು ತಾವು ಕಷ್ಟಪಟ್ಟು ಗಳಿಸಿದ ಮನೆ, ಜಮೀನು ಇತ್ಯಾದಿ ಆಸ್ತಿಯ ಸಂಪೂರ್ಣ ಹಕ್ಕು ಅವರ ಮೇಲೆಯೇ ಇದೆ. ಮತ್ತು ಈ ಎಲ್ಲಾ ಆಸ್ತಿಯನ್ನು ಯಾರಿಗೆ ನೀಡಬೇಕು ಎಂಬ ನಿರ್ಧಾರ ಕೂಡಾ ಅವರದ್ದೇ ಆಗಿರುತ್ತದೆ. ಮಕ್ಕಳು ಏನಾದರೂ ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಅಂತಹ ಸಂದರ್ಭದಲ್ಲಿ ತಾವು ಗಳಿಸಿದ ಆಸ್ತಿಯಲ್ಲಿ ಮಕ್ಕಳಿಗೆ ಯಾವುದೇ ಪಾಲನ್ನು ನೀಡದಿರುವ ಹಕ್ಕನ್ನು ಪೋಷಕರು ಹೊಂದಿರುತ್ತಾರೆ. ಮತ್ತು ಆ ಆಸ್ತಿಯನ್ನು ತಾವು ಬಯಸಿದ ಯಾರಿಗಾದರೂ ನೀಡಬಹುದು.

ಇದನ್ನೂ ಓದಿ
Image
ಬೇಸಿಗೆಯಲ್ಲೂ ಪದೇ ಪದೇ ಮೂತ್ರ ಬರುತ್ತಾ?
Image
ಭಯಬೇಡ, ತೆಂಗಿನಕಾಯಿ ತಿನ್ನುವುದರಿಂದ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ
Image
ಸಾಲ ಮಾಡಿದ ಅಪ್ಪ ತೀರಿ ಹೋದರೆ ಮಗನ ಮೇಲೆ ಬೀಳುತ್ತಾ ಆ ಸಾಲದ ಹೊರೆ?
Image
ಬಂಗಾಳದ ಬ್ಯಾನರ್ಜಿ, ಮುಖರ್ಜಿ, ಚಟರ್ಜಿ ಎಂಬ ಉಪನಾಮಗಳು ಹುಟ್ಟಿದ್ದು ಹೇಗೆ?

ಆದರೆ ಪೂರ್ವಜರ ಆಸ್ತಿ ಅಂದ್ರೆ ಅಜ್ಜ ಅಜ್ಜಿಯಿಂದ ಬಂದ ಕುಟುಂಬದ ಆಸ್ತಿಯಲ್ಲಿ ಮಕ್ಕಳ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಪೂರ್ವಜರ ಆಸ್ತಿಯನ್ನು ಪೋಷಕರು ತಮ್ಮ ಮಕ್ಕಳಿಗೆ ಬಿಟ್ಟು ಬೇರೆಯವರಿಗೆ ಕೊಡಲು ಸಾಧ್ಯವಿಲ್ಲ. ಮಕ್ಕಳನ್ನು ಆಸ್ತಿಯ ಉತ್ತರಾಧಿಕಾರದಿಂದ ಹೊರಗಿಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಸಾಲ ಮಾಡಿದ ಅಪ್ಪ ತೀರಿ ಹೋದರೆ ಮಗನ ಮೇಲೆ ಬೀಳುತ್ತಾ ಸಾಲದ ಹೊರೆ?

ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ಒಂದಷ್ಟು ಮಹತ್ವದ ತೀರ್ಪುಗಳಿವು:

  • ಸರಸ್ವತಿ ಅಮ್ಮಾಳ್ vs ರಾಜಗೋಪಾಲ್ ಅಮ್ಮಾಳ್ (1954) ಪ್ರಕರಣದಲ್ಲಿ, ಒಬ್ಬ ವ್ಯಕ್ತಿಯು ತಾನು ಕಷ್ಟಪಟ್ಟು ಗಳಿಸಿದ ಆಸ್ತಿಯ ಮೇಲೆ ತಾನು ಸಂಪೂರ್ಣ ಹಕ್ಕುಗಳನ್ನು ಹೊಂದಿರುತ್ತಾನೆ, ಆ ಆಸ್ತಿಯನ್ನು ಯಾರಿಗೆ ಕೊಡಬೇಕು ಎಂಬ ಹಕ್ಕು ಹಾಗೂ ನಿರ್ಧಾರ ಅವನದ್ದೇ ಆಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ.
  • 2011 ರಲ್ಲಿ ಕರ್ನಾಟಕ ಹೈಕೋರ್ಟ್ ಪ್ರಕರಣವೊಂದಲ್ಲಿ  ತಂದೆಯು ಸ್ವಂತವಾಗಿ  ಸಂಪಾದಿಸಿದ ಆಸ್ತಿಯಲ್ಲಿ ಯಾವುದೇ ಪಾಲನ್ನು ಮಕ್ಕಳು ಬಲವಂತವಾಗಿ  ಪಡೆಯುವಂತಿಲ್ಲ ಎಂದು ತೀರ್ಪು ನೀಡಿದೆ.
  • ದೆಹಲಿ ಹೈಕೋರ್ಟ್ 2021 ರಲ್ಲಿ ನೀಡಿದ ತೀರ್ಪಿನ ಪ್ರಕಾರ, ಮಗನು ತನ್ನ ಹೆತ್ತವರೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಅಥವಾ ಅವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪೋಷಕರು ಅವನನ್ನು ತಮ್ಮ ಆಸ್ತಿಯಿಂದ ಹೊರಹಾಕಬಹುದು ಮತ್ತು ಅವನಿಗೆ ಆಸ್ತಿಯನ್ನು ಕೊಡದೆ ಇರಬಹುದು.

ಕಾನೂನುಬದ್ಧ ಮಾರ್ಗ:

ಒಂದು ವೇಳೆ ಮಕ್ಕಳು ತಮ್ಮಿಚ್ಛೆಗೆ ವಿರುದ್ಧವಾಗಿ ಮದುವೆಯಾದರೆ, ಆ ಸಂದರ್ಭದಲ್ಲಿ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಿದೆ ಕಾನೂನುಬದ್ಧವಾಗಿ ಯಾರಿಗೆ ಏನು ಕೊಡಬಾರದು, ಯಾರಿಗೆ ಏನು ಕೊಡಬೇಕು ಎಂಬುದನ್ನು ಸ್ಪಷ್ಟವಾಗಿ ವಿಲ್‌ನಲ್ಲಿ ಬರೆಯಬೇಕು. ಎರಡನೆಯದಾಗಿ ಸಾರ್ವಜನಿಕ ನಿರಾಕರಣೆ ಸೂಚನೆ- ಪೋಷಕರು ಸ್ಥಳೀಯ ಪತ್ರಿಕೆಯಲ್ಲಿ “ನಾವು ನಮ್ಮ ಮಗ/ಮಗಳನ್ನು ನಮ್ಮ ಮನೆ ಮತ್ತು ಆಸ್ತಿಯಿಂದ ದೂರವಿಡುತ್ತಿದ್ದೇವೆ. ಅವರಿಗೆ ನಮ್ಮ ಆಸ್ತಿಯಲ್ಲಿ ಹಕ್ಕು ಮತ್ತು  ಯಾವುದೇ ಸಂಬಂಧವಿರುವುದಿಲ್ಲ” ಎಂದು ಪ್ರಕಟಣೆಯನ್ನು ಪ್ರಕಟಿಸಬಹುದು. ಆದರೆ ಈ ದಾಖಲೆಗಳು ಸ್ವಂತವಾಗಿ ಖರೀದಿಸಿದ ಆಸ್ತಿಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

ಆಸ್ತಿಯ ವಿಚಾರವಾಗಿ ಇರುವ ಪ್ರಮುಖ ಕಾನೂನು:

ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ರ ಸೆಕ್ಷನ್ 30 ರ ಪ್ರಕಾರ, ಯಾವುದೇ ಹಿಂದೂ ವ್ಯಕ್ತಿ ತನ್ನ ಆಸ್ತಿಯನ್ನು ವಿಲ್ ಮೂಲಕ ವಿತರಿಸಬಹುದು. ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ 1956 ರ ಸೆಕ್ಷನ್ 18 ರ ಪ್ರಕಾರ, ಯಾರೇ ಮಕ್ಕಳು ಶಿಸ್ತುಬದ್ಧವಾಗಿ ವರ್ತಿಸದಿದ್ದರೆ ಅಥವಾ ಪೋಷಕರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಮಕ್ಕಳಿಗೆ ಪೋಷಕರು ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಬಹುದು. ಭಾರತೀಯ ಸಂವಿಧಾನದ 300A ವಿಧಿಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಆಸ್ತಿಯನ್ನು ತಾನು ಬಯಸಿದಂತೆ ಯಾರಿಗೆ ಬೇಕಾದರೂ ಕೊಡಬಹುದು. ಆದರೆ ಅದು ಕಾನೂನಿಗೆ ಅನುಸಾರವಾಗಿದ್ದರೆ ಮಾತ್ರ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Sun, 13 April 25