ನೀವು ಕೆಲವು ಸಣ್ಣ ವಿಷಯಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳುತ್ತೀರಾ?
ನಾವು ಕೆಲವು ಸಣ್ಣಪುಟ್ಟ ಸಂಗತಿಗಳನ್ನು ಕೂಡ ಬಹಳ ಮನಸಿಗೆ ಹಚ್ಚಿಕೊಂಡು ಬಿಡುತ್ತೇವೆ. ಅದರಿಂದಾಗಿ ಆ ಸಣ್ಣ ಸಂಗತಿಗಳೇ ನಮ್ಮ ಮನಸನ್ನು ಹಾಳು ಮಾಡಿಬಿಡುತ್ತವೆ. ನಾವು ಯಾವ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಯಾವ ವಿಚಾರಗಳನ್ನು ನಿರ್ಲಕ್ಷ್ಯ ಮಾಡಬೇಕು? ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
ಬೇರೊಬ್ಬರು ನಮ್ಮ ಬಗ್ಗೆ ಆಡಿದ ಕೆಲವು ಮಾತುಗಳೋ, ಅವರ ನಡವಳಿಕೆಯೋ ನಮ್ಮ ಮೇಲೆ ಕೆಲವೊಮ್ಮೆ ಭಾರೀ ಪರಿಣಾಮ ಬೀರುತ್ತವೆ. ಅಂತಹ ಕೆಲವು ಸಂಗತಿಗಳನ್ನು ನಾವು ತೀರಾ ಪರ್ಸನಲ್ ಆಗಿ ತೆಗೆದುಕೊಳ್ಳುತ್ತೇವೆ. ಅದರಿಂದ ನಮ್ಮಲ್ಲಿ ನೆಗೆಟಿವಿಟಿ ಹೆಚ್ಚಾಗಿ, ಮನಸಿನ ಆರೋಗ್ಯವೂ ಹಾಳಾಗುತ್ತದೆ. ನಾವು ಬಹಳ ಇಷ್ಟಪಡುವ, ಚೆನ್ನಾಗಿ ಬೆರೆಯುವ ಜನರಿಂದಲೇ ಕೆಲವೊಮ್ಮೆ ಮನಸಿಗೆ ಬೇಸರವಾಗುತ್ತದೆ. ಆ ಕ್ಷಣವನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದು ಬಹಳ ಮುಖ್ಯ.
ನಾವು ಕೆಲವರಿಗೆ ಅವರ ಅರ್ಹತೆಗಿಂತಲೂ ಹೆಚ್ಚಿನ ಸ್ಥಾನ ಮತ್ತು ಪ್ರಾಮುಖ್ಯತೆಯನ್ನು ನೀಡುತ್ತೇವೆ. ಅವರಿಗೆ ಅಧಿಕಾರವನ್ನು ಕೂಡ ನೀಡುತ್ತೇವೆ. ಆದರೆ, ನೆನಪಿನಲ್ಲಿಡಿ, ಯಾರಾದರೂ ನಿಮ್ಮ ಮನಸಿಗೆ ಘಾಸಿಗೊಳಿಸಲು ಪ್ರಯತ್ನಿಸಿದಾಗ ಅದಕ್ಕೆ ತಕ್ಷಣ ಪ್ರತಿಕ್ರಿಯಿಸುವ ಬದಲು ಅವರ ಮಾತು ನಿಮಗೆ ಎಷ್ಟು ಮುಖ್ಯ, ಅವರ ವರ್ತನೆ ನಿಮಗೆಷ್ಟು ಅಗತ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಆಗ ನೀವು ಅದನ್ನು ತೀರಾ ಪರ್ಸನಲ್ ಆಗಿ ತೆಗೆದುಕೊಳ್ಳುವ ಪ್ರಮೇಯ ಬರುವುದಿಲ್ಲ.
ಇದನ್ನೂ ಓದಿ: ನಿಮ್ಮ ಸಂಬಂಧ ಮುರಿದುಬೀಳುತ್ತಿದೆ ಎಂದು ಗೊತ್ತಾಗೋದು ಹೇಗೆ?
ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವವರಿಗೆ ಕೆಲವು ಸಲಹೆಗಳು ಇಲ್ಲಿವೆ…
– ಪ್ರಚೋದನೆಗೆ ಒಳಗಾಗುವ ಬದಲು, ನಾವು ವಿರಾಮವನ್ನು ತೆಗೆದುಕೊಳ್ಳಬೇಕು. ಅವರ ಮಾತು ನಮಗೆ ಏಕೆ ಪ್ರಚೋದಿಸುತ್ತಿದೆ ಮತ್ತು ಅದು ನಮಗೆ ಏಕೆ ನೋವುಂಟುಮಾಡುತ್ತಿದೆ ಎಂಬುದನ್ನು ಯೋಚಿಸಬೇಕು.
– ವಿಷಯಗಳನ್ನು ನಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳುವ ಬದಲು, ಅದರಲ್ಲಿ ಕೆಲವು ಸಕಾರಾತ್ಮಕ ವಿಷಯಗಳಿವೆ ಎಂದು ನಾವು ಭಾವಿಸಬೇಕು. ಇದು ಪಾಸಿಟಿವಿಟಿಯನ್ನು ನೋಡಲು ನಮಗೆ ಸಹಾಯ ಮಾಡುತ್ತದೆ.
– ನಮ್ಮದೇ ಆದ ಪ್ರಚೋದಕಗಳ ಬಗ್ಗೆ ನಮಗೆ ಅರಿವು ಇರಬೇಕು. ಅವುಗಳನ್ನು ಹೇಗೆ ಗುರುತಿಸಬೇಕು ಎಂದು ನಮಗೆ ತಿಳಿದಿರಬೇಕು. ಆರೋಗ್ಯಕರ ರೀತಿಯಲ್ಲಿ ಪ್ರಚೋದಕಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಇದು ನಮಗೆ ಸಹಾಯ ಮಾಡುತ್ತದೆ.
– ಬೇರೆಯವರ ಮಾತಿಗೆ ಪ್ರತಿಕ್ರಿಯಿಸುವ ಬದಲು, ನಾವು ಇತರ ವ್ಯಕ್ತಿಯ ಬಗ್ಗೆ ಸಹಾನುಭೂತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಬೇಕು.
– ನಾವು ದಯೆ ಮತ್ತು ಸಹಾನುಭೂತಿಯಿಂದ ವರ್ತಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಮ್ಮನ್ನು ಸುತ್ತುವರೆದಿರುವ ಜನರಿಗೆ ಅವರ ಮಿತಿ ಏನು, ಅವರು ನಿಮ್ಮ ಜೀವನದಲ್ಲಿ ಎಷ್ಟು ಮಾತ್ರ ಮುಖ್ಯ ಎಂಬುದನ್ನು ತಿಳಿಸಬೇಕು.
ಇದನ್ನೂ ಓದಿ: ನಿಮ್ಮ ಸಂಗಾತಿ ಜೊತೆ ಜಗಳವಾಡಿದಾಗ ಈ ತಪ್ಪನ್ನೆಂದೂ ಮಾಡಬೇಡಿ!
– ನಾವು ಹಲವು ವಿಚಾರಗಳನ್ನು ನಮ್ಮಷ್ಟಕ್ಕೆ ನಾವೇ ಊಹೆ ಮಾಡಿಕೊಳ್ಳುತ್ತೇವೆ. ನಮ್ಮಲ್ಲಿರುವ ಆಲೋಚನೆಗಳು ಮತ್ತು ಊಹೆಗಳಿಗೆ ನಾವು ಸವಾಲು ಹಾಕಬೇಕು. ಅದರಲ್ಲಿ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು.
– ಸಂಭಾಷಣೆಯಿಂದ ಪ್ರಚೋದಿಸುವ ಬದಲು, ಅದು ನಮಗೆ ಏನು ಕಲಿಸುತ್ತದೆ ಮತ್ತು ಅದರಿಂದ ನಾವು ಏನನ್ನು ಕಲಿಯಬಹುದು ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು. ಆಗ ನಾವು ನೆಗೆಟಿವಿಟಿಗಿಂತಲೂ ಪಾಸಿಟಿವ್ ಆಗಿ ಯೋಚಿಸಲು ಆರಂಭಿಸುತ್ತೇವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Mon, 5 February 24