Sleeping Habits: ಭಾರತೀಯರು ಯಾಕೆ ಕಡಿಮೆ ನಿದ್ರೆ ಮಾಡುತ್ತಾರೆ ಗೊತ್ತಾ?

ಬಹುತೇಕ ಭಾರತೀಯರು ನಿದ್ರೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಭಾರತದ ನಾಲ್ಕರಲ್ಲಿ ಒಬ್ಬರು ನಿದ್ರಾಹೀತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಇದಕ್ಕೆ ಕಾರಣವೇನು ಗೊತ್ತಾ?

Sleeping Habits: ಭಾರತೀಯರು ಯಾಕೆ ಕಡಿಮೆ ನಿದ್ರೆ ಮಾಡುತ್ತಾರೆ ಗೊತ್ತಾ?
ನಿದ್ರೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 24, 2022 | 8:29 PM

ರಾತ್ರಿ ಆರಾಮಾಗಿ ನಿದ್ರೆ (Sleep) ಮಾಡಬೇಕೆಂದು ಹಾಸಿಗೆ ಮೇಲೆ ಮಲಗಿದರೂ ನಿದ್ರೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲವೇ? ಇವತ್ತಾದರೂ ಚೆನ್ನಾಗಿ ನಿದ್ರೆ ಬರಲಪ್ಪಾ ಎಂದು ಮನಸಿನಲ್ಲಿ ಬೇಡಿಕೊಂಡೇ ಹಾಸಿಗೆ ಮೇಲೆ ಉರುಳುವವರ ಪೈಕಿ ನೀವೂ ಒಬ್ಬರಾ? ಇಂದಿನ ಆಧುನಿಕ ಜೀವನಶೈಲಿಯಿಂದ ನಿದ್ರಾಹೀನತೆ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಬಹುತೇಕ ಭಾರತೀಯರು ನಿದ್ರೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಭಾರತದ ನಾಲ್ಕರಲ್ಲಿ ಒಬ್ಬರು ನಿದ್ರಾಹೀತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಇದಕ್ಕೆ ಕಾರಣವೇನು ಗೊತ್ತಾ?

Wakefit.coನ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ (GISS) 2022ರ ಪ್ರಕಾರ, ಕೊರೊನಾ ಸಾಂಕ್ರಾಮಿಕ ರೋಗದಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ನಿದ್ರೆಯ ಸಮಸ್ಯೆ ಹೆಚ್ಚಾಗಿದೆ. GISS ವರದಿಯು 2018ರಿಂದ ಭಾರತದ ನಿದ್ರೆಯ ಅಭ್ಯಾಸವನ್ನು ಟ್ರ್ಯಾಕ್ ಮಾಡುತ್ತಿದೆ ಮತ್ತು ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಈ ಅಧ್ಯಯನಗಳ ಪ್ರಕಾರ, ಮೆಟ್ರೋಪಾಲಿಟನ್ ನಗರಗಳಲ್ಲಿ ವಾಸಿಸುವವರಲ್ಲಿ ನಿದ್ರೆಯ ಸಮಸ್ಯೆ ಹೆಚ್ಚಾಗಿದೆ. ನಾಲ್ಕು ಭಾರತೀಯರಲ್ಲಿ ಒಬ್ಬರಿಗೆ ನಿದ್ರಾಹೀನತೆ ಸಮಸ್ಯೆ ಇದೆ ಎನ್ನಲಾಗಿದೆ.

– ಭಾರತದ ಶೇ. 59ರಷ್ಟು ಜನರು ರಾತ್ರಿ 11 ಗಂಟೆಯ ನಂತರ ಮಲಗುತ್ತಾರೆ ಮತ್ತು ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಸೋಷಿಯಲ್ ಮೀಡಿಯಾ. ಸಾಮಾಜಿಕ ಮಾಧ್ಯಮದಲ್ಲಿ ತಡರಾತ್ರಿಯವರೆಗೂ ಜನರು ಬ್ರೌಸ್ ಮಾಡುತ್ತಿರುವುದು ಕೂಡ ನಿದ್ರೆಯ ಸಮಸ್ಯೆಗೆ ಕಾರಣ.

– ಶೇ. 36ರಷ್ಟು ಜನರು ತಮ್ಮ ನಿದ್ರೆ ಡಿಜಿಟಲ್ ಮಾಧ್ಯಮದಿಂದ ಪ್ರಭಾವಿತವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

– ಶೇ. 88ರಷ್ಟು ಜನರು ಮಲಗುವ ಮುನ್ನ ತಮ್ಮ ಫೋನ್‌ಗಳಲ್ಲಿ ಸೋಷಿಯಲ್ ಮೀಡಿಯಾ ಅಕೌಂಟ್ ಮತ್ತು ಯೂಟ್ಯೂಬ್ ನೋಡುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಕಳೆದ ವರ್ಷದ ಸಮೀಕ್ಷೆಯಲ್ಲಿ ಶೇ.92ರಷ್ಟು ಜನ ರಾತ್ರಿ ಮಲಗುವ ಮುನ್ನ ಸೋಷಿಯಲ್ ಮೀಡಿಯಾ ನೋಡುತ್ತಿದ್ದರು.

ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕನಿಷ್ಠ 4 ಪ್ರತಿಶತದಷ್ಟು ಕಡಿಮೆ ಜನರು ಮಲಗುವ ಮೊದಲು ತಮ್ಮ ಫೋನ್‌ಗಳನ್ನು ಪರಿಶೀಲಿಸುತ್ತಾರೆ. ಆದರೆ, 18ರಿಂದ 24 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಇದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಅವರು ತಮ್ಮ ಕೋಣೆಯ ಪರಿಸರದಿಂದಾಗಿ ತಮ್ಮ ನಿದ್ರೆಗೆ ತೊಂದರೆಯಾಗುತ್ತದೆ ಎಂದು ದೂರಿದ್ದಾರೆ. ಶೇ. 80ರಷ್ಟು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಎದ್ದ ನಂತರ ತಾಜಾತನವನ್ನು ಅನುಭವಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಪ್ರತಿ ನಾಲ್ಕು ಭಾರತೀಯರಲ್ಲಿ ಒಬ್ಬರು ತಾವು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

ಕೋವಿಡ್ -19 ನಂತರ ರಾತ್ರಿ ಹೊತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಲ ಕಳೆಯುವ ಅಭ್ಯಾಸ ಹೊಂದಿರುವವರ ಸಂಖ್ಯೆ ಶೇ. 57ರಷ್ಟು ಹೆಚ್ಚಾಗಿದೆ.

– ಶೇ. 31ರಷ್ಟು ಮಹಿಳೆಯರು ಮತ್ತು ಶೇ. 23ರಷ್ಟು ಪುರುಷರು ನಿದ್ರೆಯ ಸಮಸ್ಯೆ ಅನುಭವಿಸುತ್ತಿದ್ದಾರೆ. – ಶೇ. 38ರಷ್ಟು ಮಹಿಳೆಯರು ಮತ್ತು ಶೇ. 31ರಷ್ಟು ಪುರುಷರು ಸಾಮಾಜಿಕ ಮಾಧ್ಯಮವು ತಮ್ಮನ್ನು ಹೆಚ್ಚು ಸಮಯ ಎಚ್ಚರವಾಗಿರಿಸುತ್ತದೆ ಎಂದಿದ್ದಾರೆ. – 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ. 50ರಷ್ಟು ಯುವಕರು ನಿದ್ರಾಹೀನತೆಯನ್ನು ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ.

ನಗರದ ಸಮೀಕ್ಷೆಗಳ ಪ್ರಕಾರ,

– ಕೋಲ್ಕತ್ತಾದಲ್ಲಿ 40% ಜನರು ಮಧ್ಯರಾತ್ರಿಯ ನಂತರ ಮಲಗುತ್ತಾರೆ. – ಹೈದರಾಬಾದ್‌ನಲ್ಲಿ 40% ಜನರು ಕೆಲಸದ ಕಾರಣ ತಡವಾಗಿ ಎಚ್ಚರಗೊಳ್ಳುತ್ತಾರೆ. – ಗುರುಗ್ರಾಮ್‌ನ 36% ಜನರು ಕೆಲಸವು ನಿದ್ರಿಸುವುದನ್ನು ವಿಳಂಬಗೊಳಿಸುತ್ತದೆ ಎನ್ನಲಾಗಿದೆ. – ಮುಂಬೈನಲ್ಲಿ 39% ಮತ್ತು ಗುರುಗ್ರಾಮ್‌ನಲ್ಲಿ 29% ಜನರು ಎಲೆಕ್ಟ್ರಾನಿಕ್ ಸಾಧನಗಳನ್ನು ನೋಡುವಾಗ ಸಾಕಷ್ಟು ಸಮಯ ವ್ಯರ್ಥವಾಗುತ್ತಿದೆ ಎಂದಿದ್ದಾರೆ – 43% ದೆಹಲಿಯ ಜನರು ಡಿಜಿಟಲ್ ಮಾಧ್ಯಮದಲ್ಲಿ ತಮ್ಮ ಸಮಯವನ್ನು ಕಡಿಮೆ ಮಾಡಬೇಕೆಂದು ಒಪ್ಪಿಕೊಂಡಿದ್ದಾರೆ. ವರದಿಯ ಪ್ರಕಾರ, ಜನರು ತಮ್ಮ ನಿದ್ರೆಯ ಜಾಗದ ಬಗ್ಗೆ ಜಾಗೃತರಾಗಿದ್ದಾರೆ ಮತ್ತು ಅದನ್ನು ಸುಗಮಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಹೊಸ ಜೀವನಶೈಲಿಯ ಕೆಲವು ಅಂಶಗಳಿಗೆ ಹೊಂದಿಕೊಳ್ಳಲು ಪ್ರಾರಂಭಿಸಿದ್ದಾರೆ. GISS 2022 ವರದಿಯು ಸುಮಾರು 74% ಜನರು ತಮ್ಮ ಮನೆಗಳಲ್ಲಿ ಮೀಸಲಾದ ನಿದ್ರೆಯ ಸ್ಥಳವನ್ನು ಹೊಂದಿದ್ದಾರೆಂದು ತೋರಿಸುತ್ತದೆ.

ಇದು ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್ ನಡೆಯುತ್ತಿರುವ ಸಮೀಕ್ಷೆಯಾಗಿದೆ. 2022 ರ ಆವೃತ್ತಿಯು 30,000ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಇದನ್ನು ಮಾರ್ಚ್ 2021ರಿಂದ ಫೆಬ್ರವರಿ 2022ರವರೆಗೆ ದಾಖಲಿಸಲಾಗಿದೆ. ಈ ಸಮೀಕ್ಷೆಯು ಕಳೆದ 5 ವರ್ಷಗಳಿಂದ ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ.

ಇದನ್ನೂ ಓದಿ: Vastu Tips: ಮಲಗುವಾಗ ಅಪ್ಪಿತಪ್ಪಿಯೂ ನಿಮ್ಮ ಬೆಡ್ ಪಕ್ಕ ಈ 5 ವಸ್ತುಗಳನ್ನು ಇಡಬೇಡಿ!

Weight Loss: ಸುಖವಾದ ನಿದ್ರೆಯಿಂದಲೂ ತೂಕ ಇಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತಾ?