Mother’s Day 2024: ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು

Mother’s Day History and Significance: ವಿಶ್ವದಾದ್ಯಂತ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ಈ ಬಾರಿ ಮೇ 12 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಿಯ ಪ್ರೀತಿ, ತ್ಯಾಗ ಹಾಗೂ ಮಹತ್ವವನ್ನು ಎಲ್ಲರಿಗೂ ತಿಳಿಸುವ ಉದ್ದೇಶವನ್ನು ಈ ದಿನ ಹೊಂದಿದೆ.

Mother’s Day 2024: ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: May 08, 2024 | 5:55 PM

ಮಗುವಿನ ಮೊದಲ ತೊದಲು ನುಡಿಯೇ ಅಮ್ಮ. ಅಮ್ಮ ಎನ್ನುವ ಎರಡು ಅಕ್ಷರಕ್ಕಿರುವ ಶಕ್ತಿಯು ಅಷ್ಟಿಷ್ಟಲ್ಲ. ಎಲ್ಲಾ ನೋವನ್ನು ಮರೆಸುವ ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲರಿಗೂ ಅಮ್ಮ ಎಂದರೆ ವಿಶೇಷವಾದ ವ್ಯಕ್ತಿಯಾಗಿರುತ್ತಾಳೆ. ಕುಟುಂಬ, ಮನೆ ಮಕ್ಕಳು, ಸಂಸಾರ ಎಂದು ರಜೆಯಿಲ್ಲದೇ ದುಡಿಯುವ ತಾಯಿಗೆ ಒಂದು ದಿನವನ್ನು ಮೀಸಲಿಡಲಾಗಿದೆ. ಹೀಗಾಗಿ ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನ ಆಚರಿಸಲಾಗುತ್ತದೆ.

ತಾಯಂದಿರ ದಿನದ ಇತಿಹಾಸ

ತಾಯಂದಿರ ದಿನವನ್ನು 1908ರಲ್ಲಿ ಅಮೆರಿಕದಲ್ಲಿ ಆಚರಿಸಲಾಯಿತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಈ ಅನಾ ಜಾರ್ವಿಸ್ ಅವರಿಗೆ ಮದುವೆಯಾಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ಆ ಬಳಿಕ ತನ್ನ ತಾಯಿ ಮೇಲಿದ್ದ ಅಪಾರವಾದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಅವರು ತಾಯಂದಿರ ದಿನವಾಗಿ ಆಚರಿಸಲು ಮುಂದಾದರು. ನಂತರದಲ್ಲಿ ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಮೇ 9, 1914ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಘೋಷಿಸಿದರು. ಆ ಬಳಿಕ ಅಮೆರಿಕ, ಭಾರತ ಸೇರಿದಂತೆ ಹಲವೆಡೆ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಅಮ್ಮಂದಿರ ದಿನಾಚರಣೆಯ ಈ ವಿಶೇಷ ದಿನದಂದು ನಿಮ್ಮ ತಾಯಿಗೆ ಈ ರೀತಿಯ ಉಡುಗೊರೆ ನೀಡಿ

ತಾಯಂದಿರ ದಿನದ ಮಹತ್ವ

ತಾಯಂದಿರಗಾಗಿ ಮೀಸಲಾಗಿರುವ ಈ ದಿನದ ಮುಖ್ಯ ಉದ್ದೇಶವೇ ಅವರ ಅಸ್ತಿತ್ವವನ್ನು ಆಚರಿಸುವುದಾಗಿದೆ. ಈ ದಿನದಂದು ಜೀವಮಾನವಿಡಿ ತಮ್ಮ ಮಕ್ಕಳ ಸಂತೋಷವನ್ನೇ ಬಯಸುವ ತಾಯಿಯಮಹತ್ವವನ್ನು ಇಡೀ ಜಗತ್ತಿಗೆ ಸಾರುವ ಉದ್ದೇಶವನ್ನು ಹೊಂದಿದೆ. ಈ ದಿನ ಮಕ್ಕಳು ತಮ್ಮ ತಾಯಂದಿರರಿಗೆ ವಿಶೇಷವಾಗಿ ಶುಭಾಶಯಗಳನ್ನು ಕೋರುತ್ತಾರೆ. ಅಮ್ಮನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಉಡುಗೊರೆಯನ್ನು ನೀಡುವ ಮೂಲಕ ಅಮ್ಮನಿರಿಗಾಗಿಯೇ ಇರುವ ವಿಶೇಷ ದಿನವನ್ನು ಆಚರಿಸುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ