Multiple Personality Disorder: ಬಹುವ್ಯಕ್ತಿತ್ವ ಅಸ್ವಸ್ಥತೆ ನಿಜವೇ? ಅದರ ಕಾರಣ, ರೋಗಲಕ್ಷಣ ಯಾವುವು?

ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಇದನ್ನು ಈಗ ಡಿಸೋಯೇಟಿವ್ ಐಡೆಂಟಿಟಿ ಡಿಸಾರ್ಡರ್(ವಿಘಟಿತ ಗುರುತಿನ ಅಸ್ವಸ್ಥತೆ) ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರತ್ಯೇಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ.

Multiple Personality Disorder: ಬಹುವ್ಯಕ್ತಿತ್ವ ಅಸ್ವಸ್ಥತೆ ನಿಜವೇ? ಅದರ ಕಾರಣ, ರೋಗಲಕ್ಷಣ ಯಾವುವು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2023 | 2:50 PM

ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ (Multiple Personality Disorder) ಇದನ್ನು ಈಗ ಡಿಸೋಯೇಟಿವ್ ಐಡೆಂಟಿಟಿ ಡಿಸಾರ್ಡರ್(ವಿಘಟಿತ ಗುರುತಿನ ಅಸ್ವಸ್ಥತೆ) ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರತ್ಯೇಕ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಇದು ಸ್ಮರಣೆಯಲ್ಲಿ ಅಂತರವನ್ನು ಉಂಟುಮಾಡಬಹುದು. ಈ ಬಹುವ್ಯಕ್ತಿತ್ವ ಅಸ್ವಸ್ಥತೆಯ ಕುರಿತ ಮಾಹಿತಿ ಇಲ್ಲಿದೆ. ಈ ಬಹುವ್ಯಕ್ತಿತ್ವ ಅಥವಾ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್‌ನ್ನು ಮನೋವೈದ್ಯಶಾಸ್ತದಲ್ಲಿ ವಿವಾದಾತ್ಮಕ ರೋಗನಿರ್ಣಯವೆಂದು ಪರಿಗಣಿಸಲಾಗಿದೆ. ಈ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರು ವಿಭಿನ್ನ ಸಮಯದಲ್ಲಿ ಬಹುವ್ಯಕ್ತಿತ್ವಗಳಿಂದ ನಿಯಂತ್ರಿಸಲ್ಪಡುತ್ತಾರೆ ಮತ್ತು ಅವರಿಗೆ ಈ ವ್ಯಕ್ತಿತ್ವಗಳ ಬಗ್ಗೆ ತಿಳಿದಿರುವುದಿಲ್ಲ.

ವಿಘಟನೆಯು ವ್ಯಕ್ತಿಯ ಆಲೋಚನೆಗಳು, ನೆನಪುಗಳು, ಭಾವನೆಗಳು, ಕ್ರಿಯೆಗಳು ಅಥವಾ ಅವರು ಯಾರೆಂಬುದರ ನಡುವಿನ ಸಂಪರ್ಕ ಕಡಿತವಾಗಿದೆ. ವಿಘಟಿತ ಗುರುತಿನ ಅಸ್ವಸ್ಥತೆಯು ಎರಡು ಅಥವಾ ಹೆಚ್ಚಿನ ವ್ಯಕ್ತಿತ್ವ ಸ್ಥಿತಿಗಳ ಪುನರಾವರ್ತನೆಯ ಜೊತೆಗೆ ಸ್ವಾಧೀನದ ಅನುಭವಗಳಿಂದ ನಿರೂಪಿಸಲ್ಪಟ್ಟಿದೆ, ಅಂದರೆ ದಿನನಿತ್ಯದಲ್ಲಿ ನಡೆಯುತ್ತಿರುವ ಘಟನೆಗಳು, ವೈಯಕ್ತಿಕ ಮಾಹಿತಿ ಅಥವಾ ಹಿಂದಿನ ಆಘಾತಕಾರಿ ಘಟನೆಗಳ ಬಗ್ಗೆ ಸ್ಮರಣೆಯಲ್ಲಿನ ಅಂತರಗಳು ಎಂದು ಬಹುವ್ಯಕ್ತಿತ್ವ ಅಸ್ವಸ್ಥತೆಯ ಕುರಿತು ಮನೋವೈದ್ಯ ಡಾ. ತ್ರಿದೀಪ್ ಚೌದರಿ ಹೇಳುತ್ತಾರೆ.

ವಿಘಟಿತ ಅಥವಾ ಬಹುವ್ಯಕ್ತಿತ್ವ ಅಸ್ವಸ್ಥತೆಯ ಕಾರಣಗಳು

ವಿಘಟಿತ ಗುರುತಿನ ಅಸ್ವಸ್ಥತೆಯು ಸಾಮಾನ್ಯವಾಗಿ ಬಾಲ್ಯದ ಸಮಸ್ಯೆಗಳು, ಆಘಾತ ಅಥವಾ ನಿಂದನೆಯಿಂದ ಉಂಟಾಗುತ್ತದೆ. ಘಟಿತ ವ್ಯಕ್ತಿತ್ವ ಅಸ್ವಸ್ಥತೆಯು ಸಾಮಾನ್ಯವಾಗಿ ತೀವ್ರವಾದ ಬಾಲ್ಯದ ಆಘಾತದೊಂದಿಗೆ ಸಂಬಂಧಿಸಿದೆ. ಅದು ದೈಹಿಕ, ಭಾವನಾತ್ಮ ಅಥವಾ ಲೈಂಗಿಕ ಸ್ವಭಾವವನ್ನು ಹೊಂದಿರಬಹುದು. ಆಘಾತಕಾರಿ ಅನುಭವದ ಸಮಯದಲ್ಲಿ, ವಿಘಟನೆಯು ವ್ಯಕ್ತಿಯು ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಭಾವನೆಯಿಂದ ಬೇರ್ಪಡಿಸಲು ಕಷ್ಟವಾಗುವುದನ್ನು ಸಹಿಸಿಕೊಳ್ಳಲು ಸಹಾಯ ಮಾಡುತ್ತದೆ. ಗುರುತಿನ ಬದಲಾವಣೆಯು ಅನೈಚ್ಛಿಕವಾಗಿ ಸಂಭವಿಸುತ್ತದೆ, ಇದು ಅನಪೇಕ್ಷಿತ ಮತ್ತು ತೊಂದರೆಯನ್ನು ಉಂಟುಮಾಡುತ್ತದೆ ಎಂದು ಡಾ. ಚೌಧರಿ ಹೇಳುತ್ತಾರೆ.

ಇದನ್ನೂ ಓದಿ; Multiple personality disorder: ಕಾಡುವ ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ

ಬಹುವ್ಯಕ್ತಿತ್ವ ಅಸ್ವಸ್ಥತೆಯ ಲಕ್ಷಣಗಳು

ಬಹು ವ್ಯಕ್ತಿತ್ವದ ಅಸ್ವಸ್ಥತೆಯಿರುವ ಜನರು ತಮ್ಮ ತಮ್ಮ ಸ್ವಂತ ಮಾತು ಮತ್ತು ಕ್ರಿಯೆಗಳ ವೀಕ್ಷಕರಾಗಿದ್ದೇವೆ ಎಂದು ಭಾವಿಸಬಹುದು ಅಥವಾ ಅವರು ವಿಭಿನ್ನವಾಗಿ ವರ್ತಿಸಬಹುದು ಉದಾಹರಣೆಗೆ ಸಣ್ಣ ಮಗುವಿನಂತೆ, ವಿರುದ್ಧ ಲಿಂಗದಂತೆ. ವಿಘಟಿತ ಗುರುತಿನ ಅಸ್ವಸ್ಥತೆಯನ್ನು ಹೊಂದಿರುವ ಜನರು ಪೋಸ್ಟ್ ಟ್ರಾಮಾಟಿಕ್ ಸ್ಟೆಸ್ ಡಿಸಾರ್ಡರ್, ಖಿನ್ನತೆ ಮತ್ತು ಆತಂಕದ ಕಾಯಿಲೆ ಹಾಗೂ ಮದ್ಯ ವ್ಯಸನ ಸಮಸ್ಯೆಗಳಂತಹ ಇತರ ಮನಸಿಕ ಸಮಸ್ಯೆಗಳನ್ನು ಹೊಂದಿರಬಹುದು ಎಂದು ಡಾ. ಚೌಧರಿ ಹೇಳುತ್ತಾರೆ.

ಇದಕ್ಕೆ ಚಿಕಿತ್ಸೆ ಹೇಗೆ?

ಇದಕ್ಕೆ ಚಿಕಿತ್ಸೆಯು ಸೈಕೋಥೆರಪಿಯನ್ನು ಒಳಗೊಂಡಿದೆ. ಇದು ಜನರು ತಮ್ಮ ವಿಘಟಿತ ಲಕ್ಷಣಗಳು ಮತ್ತು ಪ್ರಕ್ರಿಯೆಗಳ ಮೇಲೆ ನಿಯಂತ್ರಣವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಗುರುತಿನ ಅಂಶಗಳನ್ನು ಸಂಯೋಜಿಸಲು ವ್ಯಕ್ತಿಗೆ ಸಹಾಯ ಮಾಡುತ್ತದೆ. ವಿಘಟಿತ ಗುರುತಿನ ಅಸ್ವಸ್ಥತೆಗಳಿಗೆ ನೇರವಾಗಿ ಚಿಕಿತ್ಸೆ ನೀಡಲು ಯಾವುದೇ ಔಷಧಿಗಳಿಲ್ಲ. ಆದರೆ ಸರಿಯಾದ ಮಾನಸಿಕ ಚಿಕಿತ್ಸೆಯು ಸಹಾಯಕವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ