Pai Day 2024 : ಎಷ್ಟೇ ಭಾಗಿಸಿದರೂ ಪೂರ್ಣ ಭಾಗವಾಗದ ಮೌಲ್ಯವೇ ಈ ‘ಪೈ’

ಪೈ ಎನ್ನುವ ಪದವು ಸರಳವಾಗಿ ಕಂಡರೂ, ವೃತ್ತದ ಪರಿಧಿಯನ್ನು ವ್ಯಾಸದಿಂದ ಭಾಗಿಸಿದರೆ ಸಿಗುವ ಬೆಲೆಯೇ ಪೈ ಆಗಿದೆ. ಗಣಿತ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಪೈ ಎನ್ನುವ ಪದಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಪೈ ಬೆಲೆಯ ಮೌಲ್ಯವು 3.14 ಆಗಿದ್ದು ಎಷ್ಟೇ ಬಿಡಿಸಿದರೂ ಮುಂದುವರೆಯುತ್ತದೆ. ಹೀಗಾಗಿ ಈ ಪೈಯನ್ನು ಜಗತ್ತಿನ ಅದ್ಭುತ ಅನ್ವೇಷಣೆಯಲ್ಲೊಂದು ಎನ್ನಬಹುದು. ಪ್ರತಿ ವರ್ಷ ಮಾರ್ಚ್ 14 ರಂದು ವಿಶ್ವ ಪೈ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಅದ್ಭುತ ಅನ್ವೇಷಣೆಯಲ್ಲಿ ಒಂದಾದ ಈ ಪೈ ನ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

Pai Day 2024 : ಎಷ್ಟೇ ಭಾಗಿಸಿದರೂ ಪೂರ್ಣ ಭಾಗವಾಗದ ಮೌಲ್ಯವೇ ಈ 'ಪೈ'
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2024 | 4:33 PM

ಪೈ ಎನ್ನುವುದು ಗ್ರೀಕ್ ಭಾಷೆಯ ಒಂದು ಪದ. ಈ ಒಂದೇ ಒಂದು ಪದದಿಂದಾಗಿ ಗಣಿತದ ಕಠಿಣ ಸೂತ್ರಗಳನ್ನು ಬಿಡಿಸಬಹುದಾಗಿದೆ. ಪೈ ಎನ್ನುವುದು ವೃತ್ತದ ಅಳತೆಗೆ ಸಂಬಂಧಿಸಿದ್ದು, ರೇಖಾ ಗಣಿತದ ಲೆಕ್ಕಗಳನ್ನು ಈ ಈ ಪೈಯ ಬೆಲೆಯಿಂದ ಬಿಡಿಸಲು ಸಾಧ್ಯ. ಪೈಯ 22/7 ಈ ಭಿನ್ನರಾಶಿಯನ್ನು ಬಿಡಿಸುತ್ತಾ ಹೋದರೆ 3.14159 ಈ ಸಂಖ್ಯೆಯು ಬರುತ್ತದೆ. ಪೈಯ ಮೌಲ್ಯವನ್ನು ಎಷ್ಟೇ ಪ್ರಯತ್ನ ಪಟ್ಟರೂ ಪೂರ್ಣವಾಗಿ ಭಾಗಿಸಲು ಆಗುವುದೇ ಇಲ್ಲ ಎನ್ನುವುದೇ ಗಮನಾರ್ಹ ಸಂಗತಿ.

‘ಪೈ’ ಯ ಇತಿಹಾಸ

ಬ್ರಿಟಿಷ್‌ ಗಣಿತಜ್ಞ ವಿಲಿಯಮ್‌ ಜೋನ್ಸ್‌ ಪೈ ಅಕ್ಷರವನ್ನು ಅನುಪಾತವನ್ನು ಪ್ರತಿನಿಧಿಸಿದನು. 1706ರಲ್ಲಿ ಗಣಿತಶಾಸ್ತ್ರಕ್ಕೆ ಹೊಸ ಪರಿಚಯ ಎಂಬ ತಮ್ಮ ಪುಸ್ತಕದಲ್ಲಿ ಈ ಪೈ ಪದವನ್ನು ಬಳಕೆ ಮಾಡಿದನು. ಆದಾದ ಬಳಿಕ ಶ್ರೇಷ್ಠ ಗಣಿತ ಶಾಸ್ತ್ರಜ್ಞ ಸ್ವಿಜರ್ಲೆಂಡ್‌ನ ಲಿಯಾನಾರ್ಡೊ ಆಯ್ಲರ್‌ ತನ್ನ ಸಂಶೋಧನ ಲೇಖನಗಳಲ್ಲಿ ಬಳಕೆ ಮಾಡುತ್ತ ಬಂದನು. 1736ಕ್ಕೂ ಮೊದಲು ವೃತ್ತದ ಸುತ್ತಳತೆ ಮತ್ತು ಅನುಪಾತವನ್ನು ಕಂಡು ಹಿಡಿಯಲು ಸಿ ಮತ್ತು ಪಿ ಎಂಬ ಅಕ್ಷರಗಳನ್ನು ಮಾತ್ರ ಬಳಸಲಾಗುತ್ತಿತ್ತು. ಪೈ ಎಂದರೆ 22/7 ಎನ್ನುವುದನ್ನು ಪರಿಚಯಿಸಿದವನೇ ಗ್ರೀಕ್‌ನ ಗಣಿತಜ್ಞ ಹಾಗೂ ಭೌತ ವಿಜ್ಞಾನಿ ಆರ್ಕಿಮಿಡಿಸ್‌. ಈ ವಿಜ್ಞಾನಿಯು ವೃತ್ತದೊಳಗೆ ಮತ್ತು ಹೊರಗೆ ಹಿಡಿಸುವಂತೆ ಬಹುಭುಜಾಕೃತಿಯನ್ನು ಎಳೆದರೆ, ಒಳಗಿನ ಬಹುಭುಜದ ಸುತ್ತಳತೆ ಮತ್ತು ಹೊರಗಿನ ಬಹುಭುಜದ ಸುತ್ತಳತೆಯ ಬೆಲೆ ಪೈ ಆಗಿರುತ್ತದೆ ಎಂದು ಪ್ರತಿಪಾದಿಸಿದನು. ಇದರ ಬೆಲೆಯೂ 223/71 ಮತ್ತು 22/7 ಇವೆರಡರ ನಡುವೆ ಇದೆ ಎಂದಿರುತ್ತದೆ ಎಂದು ಒತ್ತಿ ಹೇಳಿದನು.

ಇದನ್ನೂ ಓದಿ: ರೋಗ ದೂರ ಮಾಡುವಲ್ಲಿ ದೊಡ್ಡ ಪತ್ರೆಯ ಗುಣ ಬಹುದೊಡ್ಡದು

ಮಾರ್ಚ್ 14 ರಂದೇ ಪೈ ದಿನವನ್ನು ಆಚರಿಸುವುದೇಕೆ?

ಗಣಿತ ಹಾಗೂ ವಿಜ್ಞಾನದಲ್ಲಿ ಬಳಸಲಾಗುವ ಪದವೇ ಈ ಪೈ. ಆದರೆ ಮಾರ್ಚ್ 14 ರಂದು ಪೈ ದಿನ ಆಚರಿಸುವುದಕ್ಕೂ ಒಂದು ಕಾರಣವಿದೆ. ಅಮೇರಿಕಾ ಸೇರಿದಂತೆ‌ ಹಲವಾರು ದೇಶಗಳಲ್ಲಿ ತಿಂಗಳನ್ನು ಮೊದಲು ಬರೆದು ದಿನಾಂಕವನ್ನು ನಂತರ ಬರೆಯುವ ಅಭ್ಯಾಸವಿದೆ. ಹೀಗಾಗಿ ಮಾರ್ಚ್ 14 ರ ದಿನಾಂಕವನ್ನು ‘3/14’ ಎಂದು ಬರೆಯುತ್ತಾರೆ. ಈ ಪೈ ಮೌಲ್ಯವು 3.14 ಆಗಿದ್ದು, ಇದು ಪೈ ಬೆಲೆಯ ಆರಂಭದ ಅಂಕೆಗಳಾಗಿದ್ದು, ಹೀಗಾಗಿ ಮಾರ್ಚ್ 14 ನ್ನು ‘ಪೈ’ ದಿನವನ್ನಾಗಿ ಆಚರಿಸುವ ಬರಲಾಯಿತು. ಅದಲ್ಲದೇ, 1879 ರಲ್ಲಿ ಗಣಿತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರಜ್ಞ ಆಲ್ಬರ್ಟ್ ಐನ್ ಸ್ಟೈನ್ ಅವರ ಜನಿಸಿದ ದಿನವೂ ಆಗಿದೆ. ಅದಲ್ಲದೇ ಸ್ಟೀಫನ್ ಹ್ಯಾಕಿಂಗ್ ಅವರ ಪುಣ್ಯತಿಥಿಯ ದಿನವು ಹೌದು.

ಪೈ ದಿನದ ಮಹತ್ವ

ಪೈ ಎಂಬುದು ಒಂದು ಸ್ಥಿರಾಂಕವಾಗಿದ್ದು, ಗಣಿತದ ಲೆಕ್ಕಾಚಾರಗಳನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಅದಲ್ಲದೇ ಗಣಿತ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ