ನೀರು ಯಾವಾಗ, ಎಷ್ಟು ಮತ್ತು ಹೇಗೆ ಕುಡಿಯಬೇಕು? ಇಲ್ಲಿದೆ ಪತಂಜಲಿ ಸೈನ್ಸ್ ಆಫ್ ಆಯುರ್ವೇದ ಸಲಹೆಗಳು
Best Time to Drink Water According to Ayurveda: ನೀರು ಕುಡಿಯುವ ಸರಿಯಾದ ಸಮಯ, ಪ್ರಮಾಣ ಮತ್ತು ಪ್ರಕಾರಗಳ ಬಗ್ಗೆ ಆಯುರ್ವೇದದಲ್ಲಿ ವಿವರಿಸಲಾಗಿದೆ. ಪತಂಜಲಿ ಸಂಸ್ಥಾಪಕರು ಬರೆದಿರುವ ದಿ ಸೈನ್ಸ್ ಆಫ್ ಆಯುರ್ವೇದ ಪುಸ್ತಕದಲ್ಲಿ ಇದರ ಬಗ್ಗೆ ಸಾಕಷ್ಟು ಮಾಹಿತಿ ಇದೆ. ಊಟದ ಮೊದಲು, ನಂತರ ಮತ್ತು ಯಾವಾಗ ಕುಡಿಯಬೇಕು ಎಂಬುದನ್ನು ವಿವರಿಸುತ್ತದೆ. ಶುದ್ಧ ನೀರಿನ ಪ್ರಾಮುಖ್ಯತೆ, ಬಿಸಿ, ತಣ್ಣೀರು ಮತ್ತು ಕೊಳಕು ನೀರಿನ ಪರಿಣಾಮಗಳನ್ನು ವಿವರಿಸುತ್ತದೆ.

ಮನುಷ್ಯನೂ ಸೇರಿದಂತೆ ಭೂಮಿ ಮೇಲಿರುವ ಎಲ್ಲಾ ಜೀವಿಗಳಿಗೂ ನೀರು ಬಹಳ ಮುಖ್ಯ. ಮನುಷ್ಯನಿಗೆ ಗಾಳಿ ಎಷ್ಟು ಮುಖ್ಯವೋ ನೀರೂ ಕೂಡ ಮುಖ್ಯ. ಆಯುರ್ವೇದ ವಿಜ್ಞಾನದ ಪ್ರಕಾರ ನೀರೂ ಕೂಡ ಒಂದು ಔಷಧವೇ. ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸಮತೋಲನಗೊಳಿಸಲು, ವಿಷವನ್ನು ದೇಹದಿಂದ ಹೊರಹಾಕಲು ಮತ್ತು ಮನಸ್ಸು ಮತ್ತು ಮೆದುಳನ್ನು ಶಾಂತವಾಗಿಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ತಪ್ಪಾದ ಸಮಯದಲ್ಲಿ ಮತ್ತು ಪ್ರಮಾಣದಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಮಾರಕವಾಗಬಹುದು.
ಇವತ್ತಿನ ಬಿಡುವಿಲ್ಲದ ಜೀವನದಲ್ಲಿ ಬಾಯಾರಿಕೆಯಾದಾಗ ಹಿಂದೆ ಮುಂದೆ ಯೋಚಿಸದೆ ನೀರು ಕುಡಿಯುತ್ತೇವೆ. ಥಂಡಿ, ಊಟದ ಮಧ್ಯೆ, ಊಟದ ನಂತರ ಹೀಗೆ ಕಾಲ ಮತ್ತು ಸಂದರ್ಭ ಎಣಿಸದೇ ನೀರು ಕುಡಿಯುತ್ತೇವೆ. ಆದರೆ ಆಯುರ್ವೇದವು ಈ ಎಲ್ಲಾ ಅಭ್ಯಾಸಗಳನ್ನು ದೇಹದ ಸಮತೋಲನಕ್ಕೆ ವಿರುದ್ಧವೆಂದು ಪರಿಗಣಿಸುತ್ತದೆ. ಕುಡಿಯುವ ನೀರಿಗಾಗಿ ಹಲವು ನಿಯಮಗಳನ್ನು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಉದಾಹರಣೆಗೆ ಯಾವ ನೀರನ್ನು ಕುಡಿಯಬೇಕು, ಯಾವ ಪಾತ್ರೆಯಲ್ಲಿ ಇಡಬೇಕು, ದಿನದ ಯಾವ ಸಮಯದಲ್ಲಿ ಅದನ್ನು ಕುಡಿಯಬೇಕು ಮತ್ತು ಊಟದ ಮೊದಲು ಅಥವಾ ನಂತರ ಕುಡಿಯಲು ಸರಿಯಾದ ಸಮಯ ಯಾವುದು ಇತ್ಯಾದಿ ಪ್ರತಿಯೊಂದು ಸಂಗತಿಯೂ ಮುಖ್ಯವಾಗುತ್ತದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಬರೆದ ‘ದಿ ಸೈನ್ಸ್ ಆಫ್ ಆಯುರ್ವೇದ’ ಪುಸ್ತಕದಲ್ಲಿ ಕುಡಿಯುವ ನೀರಿಗೆ ಸರಿಯಾದ ನಿಯಮಗಳೇನು ಎಂಬುದನ್ನು ವಿವರಿಸಲಾಗಿದೆ.
ಯಾವ ರೀತಿಯ ನೀರು ಅತ್ಯಂತ ಶುದ್ಧ?
ಆಯುರ್ವೇದದ ಪ್ರಕಾರ, ಮಳೆ, ಹರಿವ ನದಿ ನೀರು, ಅಥವಾ ಶುದ್ಧ ಬಾವಿಗಳಿಂದ ತೆಗೆದುಕೊಳ್ಳುವ ನೀರು ಉತ್ತಮ. ಅಂತಹ ನೀರು ಹಗುರ, ಸಿಹಿ ಮತ್ತು ತಂಪಾಗಿರುತ್ತದೆ. ಇದು ದೇಹಕ್ಕೆ ಪ್ರಯೋಜನ ನೀಡುತ್ತದೆ. ಬಿಸಿಲಿನಲ್ಲಿ (ತಾಮ್ರ ಅಥವಾ ಮಣ್ಣಿನ ಪಾತ್ರೆಯಲ್ಲಿ) ಇಟ್ಟ ನೀರು ದೇಹದಿಂದ ವಿಷವನ್ನು ತೆಗೆದುಹಾಕಿ ತಂಪಿರಿಸುತ್ತದೆ. ಎರಡನೇ ಮಳೆಯ ನೀರು ಅತ್ಯಂತ ನೈಸರ್ಗಿಕ ಜಲ ಎಂದು ಆಯುರ್ವೇದ ಹೇಳುತ್ತದೆ.
ಇದನ್ನೂ ಓದಿ: ಎಫ್ಎಂಸಿಜಿ ಮಾರುಕಟ್ಟೆಯ ಕಿಂಗ್ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲೂ ಮಿಂಚುತ್ತಿದೆ ಪತಂಜಲಿ
ಯಾವಾಗ ಮತ್ತು ಎಷ್ಟು ನೀರು ಕುಡಿಯುವುದು ಒಳ್ಳೆಯದು?
ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ಉದಾಹರಣೆಗೆ, ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಹಾಳಾಗಬಹುದು. ಮತ್ತೊಂದೆಡೆ, ಕಡಿಮೆ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ದೇಹದಿಂದ ಮೂತ್ರ ಮತ್ತು ತ್ಯಾಜ್ಯವನ್ನು ಸರಿಯಾಗಿ ಹೊರಹಾಕದೇ ಹೋದರೆ, ವಿಷದಂತಹ ಅಂಶಗಳು ದೇಹದೊಳಗೆ ಸಂಗ್ರಹಗೊಳ್ಳುತ್ತವೆ. ಇದು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಒಂದೇ ಬಾರಿಗೆ ಬಹಳಷ್ಟು ನೀರು ಕುಡಿಯುವ ಬದಲು, ಸಣ್ಣ ಪ್ರಮಾಣದಲ್ಲಿ ಪದೇ ಪದೇ ನೀರು ಕುಡಿಯಬೇಕು ಎಂದು ಆಯುರ್ವೇದ ಹೇಳುತ್ತದೆ. ಇದು ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನೂ ಚೆನ್ನಾಗಿ ಇಡುತ್ತದೆ. ಆಹಾರ ಜೀರ್ಣವಾಗದಿದ್ದಾಗ, ಅಂತಹ ಸಮಯದಲ್ಲಿ ನೀರು ಔಷಧಿಯಂತೆ ಕೆಲಸ ಮಾಡುತ್ತದೆ. ಆಹಾರ ಸಂಪೂರ್ಣವಾಗಿ ಜೀರ್ಣವಾದಾಗ, ಕುಡಿಯುವ ನೀರು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಊಟ ಮಾಡುವಾಗ ನೀರು ಕುಡಿಯಲು ನಿಯಮಗಳು
‘ನೀರು ಯಾವಾಗ ಕುಡಿಯಬೇಕು’ ಎಂಬುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ನೀರು ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಆಹಾರವನ್ನು ತಿನ್ನುವ ಸುಮಾರು 30 ನಿಮಿಷಗಳ ಮೊದಲು ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ ಮತ್ತು ದೇಹವು ತಿನ್ನಲು ಸಿದ್ಧವಾಗುತ್ತದೆ. ಇದು ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಆಹಾರದೊಂದಿಗೆ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕಾರಿ ರಸಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಆಹಾರವು ಅರ್ಧ ಜೀರ್ಣವಾಗಬಹುದು. ನಡುವೆ ಸ್ವಲ್ಪ ಬೆಚ್ಚಗಿನ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತೊಂದೆಡೆ, ಊಟದ ನಂತರ ತಕ್ಷಣ ನೀರು ಕುಡಿಯುವುದು ಸರಿಯಲ್ಲ. ಅಜೀರ್ಣತೆ, ಆ್ಯಸಿಡಿಟಿ, ಹೊಟ್ಟೆಭಾರದ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ತಪ್ಪಿಸಬೇಕೆಂದರೆ, ಊಟ ತಿಂದು ಕನಿಷ್ಠ 45 ನಿಮಿಷಗಳ ನಂತರ ನೀರನ್ನು ಕುಡಿಯಬೇಕೆಂದು ಆಯುರ್ವೇದ ಹೇಳುತ್ತದೆ.
ಕೋಲ್ಡ್ ನೀರು ದೇಹಕ್ಕೆ ಹಾನಿ ಮಾಡುತ್ತದೆ
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಫ್ರಿಡ್ಜ್‌ನಲ್ಲಿರುವ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಇದು ದೇಹಕ್ಕೆ ಅತ್ಯಂತ ಮಾರಕ ಅಭ್ಯಾಸಗಳಲ್ಲಿ ಒಂದೆಂದು ಆಯುರ್ವೇದ ಹೇಳುತ್ತದೆ. ತಣ್ಣೀರು ದೇಹದ ಅಗ್ನಿಯನ್ನು ಶಾಂತಗೊಳಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಮಂದಗೊಳ್ಳುತ್ತದೆ. ಇದು ಅಜೀರ್ಣ, ಗ್ಯಾಸ್ಟ್ರಿಕ್, ಸುಸ್ತು ಮತ್ತು ಆಲಸ್ಯದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಣ್ಣೀರು ಕುಡಿಯುವುದರಿಂದ ದೇಹದಲ್ಲಿ ಹೆಚ್ಚಿನ ಕಫ ಉಂಟಾಗುತ್ತದೆ. ಇದು ಶೀತ, ಕೆಮ್ಮು ಮತ್ತು ಚರ್ಮ ರೋಗಗಳನ್ನು ಹೆಚ್ಚಿಸುತ್ತದೆ. ಭಾರೀ ಊಟದ ನಂತರ ತಕ್ಷಣ ತಣ್ಣೀರು ಕುಡಿಯುವುದರಿಂದ ಈ ಸಮಸ್ಯೆಗಳು ಇನ್ನಷ್ಟು ಗಂಭೀರವಾಗಬಹುದು. ಇದಕ್ಕೆ ಬದಲಾಗಿ, ಬೆಚ್ಚಗಿನ ಅಥವಾ ರೂಮ್ ಟೆಂಪರೇಚರ್ನ ನೀರನ್ನು ಕುಡಿಯುವುದು ಯಾವಾಗಲೂ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Palm Seeds Deal: ಮಲೇಷ್ಯಾ ಜೊತೆ ಪತಂಜಲಿ ಒಪ್ಪಂದ; ದೇಶಕ್ಕೆ ಲಕ್ಷಾಂತರ ಕೋಟಿ ರೂ ಉಳಿತಾಯ
ಕೊಳಕು ಮತ್ತು ಅಶುದ್ಧ ನೀರಿನಿಂದ ಗಂಭೀರ ಹಾನಿ
ಕೊಳಕು ನೀರು ಅನೇಕ ರೋಗಗಳಿಗೆ ಎಡೆ ಮಾಡಿಕೊಡುವುದರಿಂದ ಯಾವಾಗಲೂ ಶುದ್ಧ ಮತ್ತು ಸ್ವಚ್ಛ ನೀರನ್ನು ಕುಡಿಯಬೇಕು. ನೀರಿನ ಬಣ್ಣ, ರುಚಿ, ವಾಸನೆ ಅಥವಾ ಸ್ಪರ್ಶ ವಿಚಿತ್ರವಾಗಿದ್ದರೆ ಅದು ಕುಡಿಯಲು ಯೋಗ್ಯವಲ್ಲ ಎಂದು ತಿಳಿಯಬೇಕು. ಇದಲ್ಲದೆ, ನೀರು ಸೂರ್ಯನ ಬೆಳಕು ಮತ್ತು ಚಂದ್ರನ ಬೆಳಕಿನ ಸಂಪರ್ಕಕ್ಕೆ ಬರದಿದ್ದರೆ ಅಂತಹ ನೀರನ್ನು ಸಹ ಶುದ್ಧವೆಂದು ಪರಿಗಣಿಸಲಾಗುವುದಿಲ್ಲ. ಅಶುದ್ಧ ನೀರು ಹೊಟ್ಟೆ ನೋವು, ಚರ್ಮ ರೋಗ, ಮಲಬದ್ಧತೆ, ಜೀರ್ಣಕಾರಿ ಸಮಸ್ಯೆಗಳು, ಅಲರ್ಜಿ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆಯುರ್ವೇದದ ಪ್ರಕಾರ, ಅಂತಹ ನೀರನ್ನು ಶುದ್ಧೀಕರಿಸಲು, ಅದನ್ನು ಸೂರ್ಯನ ಬೆಳಕಿನಲ್ಲಿ ಇರಿಸಿ, ತಾಮ್ರ ಅಥವಾ ಬೆಳ್ಳಿಯ ಪಾತ್ರೆಯಲ್ಲಿ ತುಂಬಿಸಿ, ಅಥವಾ ಪದೇ ಪದೇ ಫಿಲ್ಟರ್ ಮಾಡಿ.
ಬಿಸಿ ನೀರು ಕುಡಿದರೆ ಏನಾಗುತ್ತದೆ?
ಆಯುರ್ವೇದದಲ್ಲಿ, ಬಿಸಿನೀರು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಿಸಿನೀರು ಹಗುರವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಅಜೀರ್ಣ, ಗ್ಯಾಸ್, ಎಸಿಡಿಟಿ, ಬಿಕ್ಕಳಿಕೆ ಮತ್ತು ಶೀತದಂತಹ ಕಾಯಿಲೆಗಳನ್ನು ಶಮನಗೊಳಿಸುತ್ತದೆ. ಕಾಲು ಭಾಗದಷ್ಟು ಬಿಸಿ ಮಾಡಿದ ನೀರನ್ನು ಕುಡಿಯುವುದರಿಂದ ವಾತ ಮತ್ತು ಕಫ ದೋಷ ನಿವಾರಿಸಲು ಸಹಾಯವಾಗುತ್ತದೆ. ನೀರನ್ನು ಅರ್ಧದಷ್ಟು ಕುದಿಸಿ ಸೇವಿಸಿದರೆ, ಅದು ತ್ರಿದೋಷ (ವಾತ, ಪಿತ್ತ, ಕಫ) ನಿವಾರಿಸುತ್ತದೆ. ಆಸ್ತಮಾ, ಕೆಮ್ಮು, ಜ್ವರದಲ್ಲಿ ಪರಿಹಾರವನ್ನು ನೀಡುತ್ತದೆ. ಇದನ್ನು ಉಷ್ಣೋದಕ ಎಂದು ಕರೆಯಲಾಗುತ್ತದೆ. ರಾತ್ರಿಯಲ್ಲಿ ಬಿಸಿನೀರು ಕುಡಿಯುವುದು ವಿಶೇಷವಾಗಿ ಪ್ರಯೋಜನಕಾರಿ. ಇದು ದೇಹದಲ್ಲಿ ಹೆಪ್ಪುಗಟ್ಟಿದ ಕಫವನ್ನು ಕರಗಿಸುತ್ತದೆ ಮತ್ತು ವಾತವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ