Personality Test: ವೇಗ ಅಥವಾ ನಿಧಾನ; ನಡಿಗೆಯ ಶೈಲಿಯಿಂದ ತಿಳಿಯಬಹುದು ನಿಮ್ಮ ವ್ಯಕ್ತಿತ್ವದ ರಹಸ್ಯ
ಪ್ರತಿಯೊಬ್ಬರ ವಾಕಿಂಗ್ ಸ್ಟೈಲ್ ಕೂಡ ತುಂಬಾನೇ ವಿಭಿನ್ನವಾಗಿರುತ್ತದೆ. ಕೆಲವರು ತಲೆ ಬಗ್ಗಿಸಿಕೊಂಡು ನಡೆದರೆ, ಕೆಲವರು ನೇರವಾಗಿ ಗಂಭೀರದಿಂದ ನಡೆದುಕೊಂಡು ಹೋಗ್ತಾರೆ. ಇನ್ನೂ ಕೆಲವರು ವೇಗವಾಗಿ ನಡೆದರೆ, ಮತ್ತೊಂದಷ್ಟು ಜನ ತುಂಬಾ ನಿಧಾನಕ್ಕೆ ನಡೆಯುತ್ತಾರೆ. ಈ ವಾಕಿಂಗ್ ಸ್ಟೈಲ್ ಕೂಡ ವ್ಯಕ್ತಿಯ ವ್ಯಕ್ತಿತ್ವದ ರಹಸ್ಯವನ್ನು ಬಹಿರಂಗಪಡಿಸುತ್ತದಂತೆ. ನಿಮ್ಮ ವಾಕಿಂಗ್ ಸ್ಟೈಲ್ ಆಧಾರದ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ, ನೀವು ಯಾವ ರೀತಿಯ ವ್ಯಕ್ತಿ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿಯೊಬ್ಬರ ವ್ಯಕ್ತಿತ್ವ (Personality) ಭಿನ್ನವಾಗಿರುವಂತೆ ದೈಹಿಕ ಗುಣ ಲಕ್ಷಣಗಳು, ಮುಖ ಭಾವ, ಮಾತನಾಡುವ ಶೈಲಿ, ಬಟ್ಟೆ ತೊಡುವ ರೀತಿ, ಊಟ ಮಾಡುವ ರೀತಿ ಸಹ ಭಿನ್ನ ವಿಭಿನ್ನವಾಗಿರುತ್ತದೆ. ಅದೇ ರೀತಿ ನಮ್ಮ ವಾಕಿಂಗ್ ಸ್ಟೈಲ್‌ನಲ್ಲೂ ಕೂಡ ಭಿನ್ನತೆಗಳಿರುತ್ತವೆ. ಹೌದು ಕೆಲವರು ಆತುರವಾಗಿ ನಡೆದುಕೊಂಡು ಹೋದ್ರೆ, ಕೆಲವರು ಎಷ್ಟೇ ಗಡಿಬಿಡಿ ಇದ್ರೂ ಸಖತ್ ಸ್ಲೋ ಆಗಿ ನಡೆಯುತ್ತಾರೆ. ಇನ್ನೂ ಕೆಲವರು ತಲೆ ಬಗ್ಗಿಸಿಯೇ ನಡೆದುಕೊಂಡು ಹೋಗ್ತಾರೆ. ನಮ್ಮಈ ನಡಿಗೆಯ ಶೈಲಿಯು ಸಾಮಾನ್ಯ ಅಭ್ಯಾಸವಲ್ಲ, ಇದು ನಮ್ಮ ಸ್ವಭಾವ, ಮನಸ್ಥಿತಿ, ಆಲೋಚನಾ ವಿಧಾನ ಮತ್ತು ವ್ಯಕ್ತಿತ್ವದ ಬಗ್ಗೆ ಅನೇಕ ಗುಪ್ತ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ. ಹೀಗಿರುವಾಗ ನಿಧಾನವಾಗಿ ನಡೆಯುವುದು ಅಥವಾ ವೇಗವಾಗಿ ನಡೆಯುವುದು ಇದರಲ್ಲಿ ನೀವು ಯಾವ ರೀತಿ ನಡೆಯುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ವೇಗವಾಗಿ ನಡೆಯುವ ಜನರ ಸ್ವಭಾವ ಹೇಗಿರುತ್ತದೆ?
ನೀವು ವೇಗವಾಗಿ ನಡೆಯುವ ವ್ಯಕ್ತಿಯಾಗಿದ್ದರೆ, ನಿಮ್ಮ ಈ ವಾಕಿಂಗ್ ಸ್ಟೈಲ್ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಹೀಗೆ ವೇಗವಾಗಿ ನಡೆಯುವ ಜನರು ಹೆಚ್ಚು ಗುರಿಯ ಮೇಲೆ ಗಮನವನ್ನು ಕೇಂದ್ರೀಕರಿಸಿರುವ ವ್ಯಕ್ತಿಗಳಾಗುರುತ್ತಾರೆ. ಅವರು ಪ್ರತಿಯೊಂದು ಕೆಲಸವನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಇಷ್ಟಪಡುತ್ತಾರೆ. ಅವರು ಸಮಯವನ್ನು ಬಹಳ ಗೌರವಿಸುತ್ತಾರೆ. ಈ ವೇಗ ನಡಿಗೆಯ ವ್ಯಕ್ತಿಗಳು ನಿರ್ಧಾರಗಳನ್ನು ಸಹ ಬಹು ಬೇಗನೇ ತೆಗೆದುಕೊಳ್ಳುತ್ತಾರೆ ಮತ್ತು ತಮ್ಮಲ್ಲಿ ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಆದರೆ ಈ ಆತುರವು ವೇಗ ನಡಿಗೆಯ ವ್ಯಕ್ತಿಗಳನ್ನು ಕೆಲವವೊಮ್ಮೆ ಕಿರಿಕಿರಿ ಅಥವಾ ಒತ್ತಡಕ್ಕೆ ಒಳಪಡಿಸುವ ಸಾಧ್ಯತೆ ಇರುತ್ತದೆ.
ಆರಾಮವಾಗಿ ಮತ್ತು ನಿಧಾನವಾಗಿ ನಡೆಯುವ ಜನರ ವ್ಯಕ್ತಿತ್ವ ಹೇಗಿರುತ್ತದೆ?
ನೀವು ನಿಧಾನವಾಗಿ, ನಿರಾಳವಾಗಿ ನಡೆಯುವವರಾಗಿದ್ದರೆ, ನೀವು ಶಾಂತ ಮತ್ತು ತಾಳ್ಮೆಯ ಹೃದಯವನ್ನು ಹೊಂದಿರುವ ವ್ಯಕ್ತಿಗಳೆಂದು ಅರ್ಥ. ಈ ನಿಧಾನ ನಡಿಗೆಯ ವ್ಯಕ್ತಿಗಳು ಜನರು ಜೀವನವನ್ನು ತುಂಬಾ ಗಂಭೀರವಾಗಿ ಪರಿಗಣಿಸುವ ಬದಲು ಪ್ರತಿ ಕ್ಷಣವನ್ನು ಆನಂದಿಸಲು ಬಯಸುತ್ತಾರೆ. ಅವರು ಅನಗತ್ಯ ಆತುರವನ್ನು ಇಷ್ಟಪಡುವುದಿಲ್ಲ. ಜೊತೆಗೆ ಅವರು ಆಗಿ ಹೋದ ವಿಚಾರಗಳ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಚಿಂತಿಸದೆ ವರ್ತಮಾನದಲ್ಲಿ ಬದುಕುವವರಾಗಿರುತ್ತಾರೆ. ಅಲ್ಲದೆ ನಿಧಾನ ನಡಿಗೆಯ ಜನರಿಗೆ ಕೆಲಸದ ಒತ್ತಡವು ಈ ಸುಲಭವಾಗಿ ಆವರಿಸುವುದಿಲ್ಲ. ಇವರು ತಮ್ಮ ಜೀವನವನ್ನು ಸಂತೋಷದಿಂದ ಕಳೆಯಲು ಇಷ್ಟಪಡುತ್ತಾರೆ.
ಇದನ್ನೂ ಓದಿ: ಚಹಾ ಮಾಡಿದ ಬಳಿಕ ಉಳಿದ ಟೀ ಪುಡಿ ಎಸೆಯಬೇಡಿ; ಮನೆಯ ಸ್ವಚ್ಛತೆಗೆ ಹೀಗೆ ಬಳಸಿ
ಎದೆ ಎತ್ತರಿಸಿ ನೇರವಾಗಿ ನಡೆಯುವ ಜನರು ಹೇಗಿರುತ್ತಾರೆ?
ಭುಜಗಳನ್ನು ಸರಿಯಾದ ಸ್ಥಾನದಲ್ಲಿಟ್ಟುಕೊಂಡು, ಎದೆ ಎತ್ತರಿಸಿ, ನೇರವಾಗಿ ನಡೆಯುವ ಜನರು ಅತ್ಯಂತ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಂತಹ ವ್ಯಕ್ತಿಗಳು ಸ್ವಾಭಾವಿಕವಾಗಿ ಸ್ನೇಹಪರರಾಗಿರುತ್ತಾರೆ ಮತ್ತು ಎಲ್ಲರೊಂದಿಗೂ ಸುಲಭವಾಗಿ ಸಂಭಾಷಣೆಯನ್ನು ಪ್ರಾರಂಭಿಸುತ್ತಾರೆ. ಇವರು ಯಾವುದೇ ಭಯವಿಲ್ಲದೆ, ಹೆಚ್ಚಿನ ಆತ್ಮ ವಿಶ್ವಾಸದಿಂದ ಕೂಡಿರುತ್ತಾರೆ ಮತ್ತು ಇವರು ಯಾವಾಗಲೂ ಸಕಾರಾತ್ಮಕವಾಗಿರುತ್ತಾರೆ. ಇವರ ಗುಣ ಎಲ್ಲರಲ್ಲೂ ಸೆಳೆಯುತ್ತದೆ. ಅಲ್ಲದೆ ಈ ರೀತಿ ನೇರವಾಗಿ ನಡೆಯುವ ಜನರು ನಾಯಕತ್ವದ ಗುಣ ಮತ್ತು ಬಲವಾದ ಆತ್ಮ ವಿಶ್ವಾಸವನ್ನು ಸಹ ಹೊಂದಿರುತ್ತಾರೆ.
ಕೆಳಗೆ ನೋಡುತ್ತಾ ನಡೆಯುವ ಜನರ ಸ್ವಭಾವ ಹೇಗಿರುತ್ತದೆ?
ಕೆಲವರು ಕೆಳಗೆ ನೋಡುತ್ತಾ ಅಥವಾ ಭುಜವನ್ನು ಸ್ವಲ್ಪ ಬಗ್ಗಿಸಿ ನಡೆಯುತ್ತಾರೆ. ಈ ರೀತಿ ನಡೆಯುವ ಜನರು ಹೆಚ್ಚಾಗಿ ನಾಚಿಕೆ ಸ್ವಭಾವದವರಾಗಿರುತ್ತಾರೆ ಮತ್ತು ಸಂಯಮದಿಂದ ಕೂಡಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ಯಾರೊಂದಿಗೂ ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಅವರು ತಮ್ಮದೇ ಆದ ಆಲೋಚನೆಗಳಲ್ಲಿ ಕಳೆದುಹೋಗುತ್ತಾರೆ ಮತ್ತು ಎಲ್ಲದರ ಬಗ್ಗೆ ಆಳವಾಗಿ ಯೋಚಿಸುತ್ತಾರೆ. ಕೆಲವೊಮ್ಮೆ, ಈ ರೀತಿಯ ನಡಿಗೆಯ ಶೈಲಿಯು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದೆ ಎಂಬುದನ್ನು ಸೂಚಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




