ಸಿಂಪಲ್ಲಾಗಿ ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡಿ; ವಿಧಾನ ಹೀಗಿದೆ

ಸಿಂಪಲ್ಲಾಗಿ ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡಿ; ವಿಧಾನ ಹೀಗಿದೆ
ಚಿಕನ್ ಲಿವರ್ ಪೆಪ್ಪರ್ ಡ್ರೈ

ಮೊದಲು ಚಿಕನ್ ಲಿವರ್ನ ಚೆನ್ನಾಗಿ ತೊಳೆಯಬೇಕು. ನಂತರ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿ. 10 ನಿಮಿಷ ಹಾಗೇ ಬಿಡಿ. ಒಂದು ಬಾಣಲೆಗೆ ಎರಡರಿಂದ ಮೂರು ಚಮಚ ಕೊಬ್ಬರಿ ಎಣ್ಣೆ ಹಾಕಿ.

TV9kannada Web Team

| Edited By: sandhya thejappa

Jan 09, 2022 | 8:45 AM

ಚಿಕನ್.. ವಾವ್! ಬಾಯಲ್ಲಿ ನೀರು ಬರುತ್ತೆ ಅಲ್ವಾ? ಮಾಂಸ ಪ್ರಿಯರಿಗೆ ಚಿಕನ್ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಚಿಕನ್ಗೆ ಸಂಬಂಧಿಸಿದ ಅಡುಗೆಯಲ್ಲಿ ಒಂದಲ್ಲ ಒಂದು ಪ್ರಯೋಗಗಳು ನಡೆಯುತ್ತಲೆ ಇರುತ್ತವೆ. ಆದರೆ ಬಹುತೇಕರಿಗೆ ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡುವ ವಿಧಾನ ತಿಳಿದಿಲ್ಲ. ಸಿಂಪಲ್ಲಾಗಿ, ಟೇಸ್ಟಿಯಾಗಿರುವ ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ. ಕಡಿಮೆ ಸಮಯದಲ್ಲಿ ಖಾರ ಖಾರವಾದ ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡಿ ಸವಿಯಿರಿ.

ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಸಮಾಗ್ರಿಗಳು ಹೀಗಿದೆ ಅರ್ಧ ಕೆಜಿ ಚಿಕನ್ ಲಿವರ್ ಕಾಳು ಮೆಣಸಿನ ಪುಡಿ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್- ಎರಡು ಚಮಚ ಸಣ್ಣ ಗಾತ್ರದ ಈರುಳ್ಳಿ- ಒಂದು ಸಣ್ಣ ಗಾತ್ರದ ಟೊಮ್ಯಾಟೋ- ಒಂದು ಹಸಿಮೆಣಸಿನಕಾಯಿ- ಎರಡು ಖಾರದ ಪುಡಿ ಕೊತ್ತಂಬರಿ ಸೊಪ್ಪು ಅರಿಶಿನ ಪುಡಿ ನಿಂಬೆಹಣ್ಣು ಉಪ್ಪು

ಚಿಕನ್ ಲಿವರ್ ಪೆಪ್ಪರ್ ಡ್ರೈ ಮಾಡುವ ವಿಧಾನ ಮೊದಲು ಚಿಕನ್ ಲಿವರ್​ನ ಚೆನ್ನಾಗಿ ತೊಳೆಯಬೇಕು. ನಂತರ ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿ. 10 ನಿಮಿಷ ಹಾಗೇ ಬಿಡಿ. ಒಂದು ಬಾಣಲೆಗೆ ಎರಡರಿಂದ ಮೂರು ಚಮಚ ಕೊಬ್ಬರಿ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ. ಈರುಳ್ಳಿ ಗೋಲ್ಡನ್ ಬಣ್ಣ ಬರುವವರೆಗೂ ಫ್ರೈ ಮಾಡಿ. ಬಳಿಕ ಹಸಿಮೆಣಸಿನಕಾಯಿ ಹಾಕಿ. 30 ಸೆಕೆಂಡುಗಳ ನಂತರ ಟೊಮ್ಯಾಟೋ ಹಾಕಿ ಫ್ರೈ ಮಾಡಿ.

ಟೊಮ್ಯಾಟೋ ಫ್ರೈ ಆದ ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ. ಫ್ರೈ ಆಗುತ್ತಿದ್ದಂತೆ ಚಿಕನ್ ಲಿವರ್ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಅರಿಶಿನ ಪುಡಿ ಹಾಕಿ ಬೇಯಿಸಿ. ಬೇಯಿಸುವಾಗ ನೀರು ಹಾಕಬಾರದು. 10 ನಿಮಿಷದ ಒಳಗೆ ಚಿಕನ್ ಲಿವರ್ ಬೇಯುತ್ತದೆ. ಜಾಸ್ತಿ ಬೆಂದರೆ ಲಿವರ್ ಪುಡಿಪುಡಿಯಾಗುತ್ತದೆ. ಹೀಗಾಗಿ ಆಗಾಗ ನೋಡ್ತಾ ಇರಬೇಕು.

ಚಿಕನ್ ಲಿವರ್ ಬೆಂದ ಬಳಿಕ ಕಾಳು ಮೆಣಸಿನ ಪುಡಿ ಹಾಕಿ. ಒಂದು ನಿಮಿಷದ ನಂತರ ಖಾರದ ಪುಡಿ ಹಾಕಿ. ನಿಮಗೆ ಅಗತ್ಯವಿದ್ದಷ್ಟು ಖಾರ ಹಾಕಿ. ಖಾರ ಹಾಕಿ 2ರಿಂದ 3 ನಿಮಿಷಗಳ ನಂತರ ನಿಂಬೆಹಣ್ಣಿನ ರಸ ಸೇರಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ತಳಿಯಿರಿ. ಈಗ ಖಾರ ಖಾರವಾದ ಚಿಕನ್ ಲಿವರ್ ಪೆಪ್ಪರ್ ಡ್ರೈ ರೆಡಿ ಟೂ ಈಟ್. ಇದು ಅಕ್ಕಿ ರೊಟ್ಟಿಗೆ ಹೇಳಿ ಮಾಡಿಸಿದ ಕಾಂಬಿನೇಷನ್. ಚಪಾತಿಯೊಂದಿಗೂ ಸೇವಿಸಬಹುದು.

ಇದನ್ನೂ ಓದಿ

ಹೆಂಡತಿ ಬಿಟ್ಟುಹೋದ ನೋವು, ಆರ್ಥಿಕ ಸಂಕಷ್ಟ; ಆತ್ಮಹತ್ಯೆಗೆ ಯತ್ನಿಸಿದ ‘ದಿ ಕಪಿಲ್​ ಶರ್ಮಾ ಶೋ’ ಹಾಸ್ಯನಟ

ನಿಯಮ ಮೀರಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ; ಕಾಂಗ್ರೆಸ್ ನಾಯಕರಿಗೆ ರಾಮನಗರ ಎಸ್​ಪಿ ಎಚ್ಚರಿಕೆ

Follow us on

Related Stories

Most Read Stories

Click on your DTH Provider to Add TV9 Kannada