2021 ಕಳೆದು 2022ಕ್ಕೆ ಕಾಲಿಡಲು ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ. ಆದರೆ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್ಗೆ ಕರ್ನಾಟಕ ಸರ್ಕಾರ ಬ್ರೇಕ್ ಹಾಕಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಾರಿ ಮನೆಯಲ್ಲೇ ಹೊಸ ವರ್ಷ ಆಚರಿಸುವ ಪರಿಸ್ಥಿತಿ ಎದುರಾಗಿದೆ. ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಜ್ಜಾಗಿದ್ದವರಿಗೆ ಬೇಸರ ಮೂಡಿದೆ. ಸದ್ಯ ಮನೆಯಲ್ಲೇ ಹೊಸ ವರ್ಷ ಆಚರಿಸುವ ಅನಿವಾರ್ಯ ಇರುವುದರಿಂದ ನ್ಯೂ ಇಯರ್ಗೆ ವಿಶೇಷವಾಗಿ ಮೊಝ್ಝಾರೆಲ್ಲಾ ಸ್ಟಿಕ್ಸ್ (Mozzarella Sticks) ಮಾಡಿ ಸವಿಯಿರಿ.
ರುಚಿ ರುಚಿಯಾದ ಮೊಝ್ಝಾರೆಲ್ಲಾ ಸ್ಟಿಕ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ 8 ಮೊಝ್ಝಾರೆಲ್ಲಾ ಸ್ಟಿಕ್ಸ್ ಆಲ್ ಪರ್ಪಸ್ ಫ್ಲೋರ್- 80 ಗ್ರಾಂ ಎರಡು ಮೊಟ್ಟೆ 200 ಗ್ರಾಂ ಬ್ರೆಡ್ ಕ್ರಂಬ್ಸ್ 1 ಚಮಚ ಒರೆಗಾನೂ 1 ಚಮಚ ಬೆಳ್ಳುಳ್ಳಿ ಪುಡಿ ಎಣ್ಣೆ 1 ಚಮಚ ಒಣ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ ಮೊದಲು ಬ್ರೆಡ್ ಕ್ರಂಬ್ಸ್ಗೆ ಬೆಳ್ಳುಳ್ಳಿ ಪುಡಿ, ಒರೆಗಾನೂ, ಒಣ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮೊಝ್ಝಾರೆಲ್ಲಾ ಸ್ಟಿಕ್ಸ್ನ ಹಿಟ್ಟಿನಲ್ಲಿ ಮುಳುಗಿಸಿ ತೆಗೆಯಿರಿ. ಅಂದರೆ ಚೆನ್ನಾಗಿ ಹಿಟ್ಟು ಹಿಡಿದುಕೊಳ್ಳುವಂತೆ ಹೊರಳಾಡಿಸಿ. ಬಳಿಕ ಮೊಟ್ಟೆಯೊಂದಿಗೆ ನೆನೆಸಿ. ಆಮೇಲೆ ಬ್ರೆಡ್ ಕ್ರಂಬ್ಸ್ ಮಿಶ್ರಣಕ್ಕೆ ಹಾಕಿ ಹೊರಳಾಡಿಸಿ. ಪುನಃ ಮೊಟ್ಟೆಗೆ ಹಾಕಿ ತೆಗೆಯಿರಿ. ಮತ್ತೆ ಬ್ರೆಡ್ ಕ್ರಂಬ್ಸ್ಗೆ ಹಾಕಿ ತೆಗೆಯಿರಿ. ಕೊನೆಯದಾಗಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಇದನ್ನ ಸಂಜೆ ಸ್ನಾಕ್ ರೀತಿ ತಿನ್ನಬಹುದು.
ಇದನ್ನೂ ಓದಿ
Marriage Tips: ಸುಂದರ ದಾಂಪತ್ಯ ಬದುಕಿಗೊಂದಿಷ್ಟು ಸಿಂಪಲ್ ಟಿಪ್ಸ್