Relationship Tips: ಯಾರೊಂದಿಗಾದರೂ ಸುರಕ್ಷಿತ ಭಾವನೆ ಮೂಡಲು ಕಾರಣವಾಗುವ ಸೂಚಕಗಳೇನು? ತಜ್ಞರು ಏನನ್ನುತ್ತಾರೆ? ಇಲ್ಲಿದೆ ಮಾಹಿತಿ

ನಿಮ್ಮ ನೈಜ ವ್ಯಕ್ತಿತ್ವದಿಂದ ಹಿಡಿದು ನಿಮ್ಮ ಅಭದ್ರತೆಯನ್ನು ಮರೆಮಾಚದಿರುವವರೆಗೆ, ಯಾರೊಂದಿಗಾದರೂ ಸುರಕ್ಷಿತ ಭಾವನೆಯನ್ನು ಅನುಭವಿಸುವ ಕೆಲವು ಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ.

Relationship Tips: ಯಾರೊಂದಿಗಾದರೂ ಸುರಕ್ಷಿತ ಭಾವನೆ ಮೂಡಲು ಕಾರಣವಾಗುವ ಸೂಚಕಗಳೇನು? ತಜ್ಞರು ಏನನ್ನುತ್ತಾರೆ? ಇಲ್ಲಿದೆ ಮಾಹಿತಿ
Relationship TipsImage Credit source: Northeast Now
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: May 10, 2023 | 7:56 AM

ಯಾವ ಸಂಬಂಧವೂ ಪರಿಪೂರ್ಣವಲ್ಲ. ಪ್ರತಿಯೊಂದು ಸಂಬಂಧವು ತನ್ನದೇ ಆದ ಏರಿಳಿತಗಳನ್ನು ಹೊಂದಿರುತ್ತದೆ. ಆದರೆ ನಮ್ಮ ಬದುಕಿನಲ್ಲಿ ಯಾವುದಾದರೂ ವ್ಯಕ್ತಿಯ ಪರಿಚಯವಾದಾಗ, ನಾವು ಅವರನ್ನು ಪ್ರೀತಿಸಬಹುದು ಅಥವಾ ಅವರು ನಮಗೆ ಸುರಕ್ಷಿತರಾ? ಇದೆಲ್ಲ ತಿಳಿಯುವುದು ತುಂಬಾ ಮುಖ್ಯವಾಗಿದೆ. ಬೇರೆಯವರ ಸಂಬಂಧಗಳ ಬಗ್ಗೆ ನಮ್ಮ ನಿರೀಕ್ಷೆಗಳು ಸಾಮಾನ್ಯವಾಗಿ ಹೆಚ್ಚಿರುತ್ತವೆ. ಹಾಗಾಗಿ ಅವರನ್ನು ನೋಡಿ ನೋಡಿ ನಮಗೂ ನಿರೀಕ್ಷೆಗಳು ಜಾಸ್ತಿಯಾಗುತ್ತದೆ. ಕೆಲವರಿಗೆ ಅದಕ್ಕಿಂತ ಚೆನ್ನಾಗಿರುವುದು ಬೇಕು ಎಂದೆಲ್ಲ ಅನಿಸುವುದು ಸಹಜ. ಆದರೆ ನಿಮಗೆ ನಿಮ್ಮ ಸಂಬಂಧದಲ್ಲಿ ನಂಬಿಕೆ ಇರಬೇಕು. ಏಕೆಂದರೆ ಜೀವನ ಎಲ್ಲರಿಗೂ ಒಂದೇ ರೀತಿಯಲ್ಲಿರುವುದಿಲ್ಲ. ಅವು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ ಎಂದು ನೆನಪಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಹಾಗಾಗಿ ನಾವು ಮೊದಲು ಸುರಕ್ಷಿತ, ಆರೋಗ್ಯಕರ ಮತ್ತು ಸುಭದ್ರವಾಗಿರಬೇಕೆಂದು ಬಯಸಬೇಕು ಎನ್ನುತ್ತಾರೆ ಥೆರಪಿಸ್ಟ್ ಎಲಿಜಬೆತ್ ಫೆಡ್ರಿಕ್.

ನೀವು ನಿಮ್ಮ ಸಂಗಾತಿಯೊಂದಿಗೆ ಇರುವಾಗ ನೀವು ಅನುಭವಿಸಬೇಕಾದ ಪ್ರಾಥಮಿಕ ಭಾವನೆಗಳಲ್ಲಿ ಸುರಕ್ಷತೆಯೂ ಒಂದು. “ಸುರಕ್ಷತೆಯು ಆರೋಗ್ಯಕರ ಸಂಬಂಧದ ಅತ್ಯಂತ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ ಮತ್ತು ಇದು ನಿಜವಾಗಿಯೂ ಅನ್ಯೋನ್ಯತೆ ಮತ್ತು ಸಂಪರ್ಕಕ್ಕೆ ಅಡಿಪಾಯವಾಗಿದೆ” ಎಂದು ಎಲಿಜಬೆತ್ ಹೇಳುತ್ತಾರೆ. ಅವರ ಪ್ರಕಾರ ಇವೆಲ್ಲದರ ಜೊತೆಗೆ ಯಾರೊಂದಿಗಾದರೂ ಸುರಕ್ಷಿತವಾಗಿರುವಾಗ ನಮಗೆ ಏನೆಲ್ಲ ಅನಿಸುತ್ತದೆ ಅಥವಾ ಯಾರೊಂದಿಗಾದರೂ ಸುರಕ್ಷಿತ ಭಾವನೆ ಮೂಡಲು ಕಾರಣವಾಗುವ ಸೂಚಕಗಳೇನು? ಎಂಬುದರ ಕೆಲವು ಲಕ್ಷಣಗಳ ಬಗ್ಗೆ ಹಂಚಿಕೊಂಡಿದ್ದಾರೆ:

ಶಾಂತತೆಯ ಪ್ರಜ್ಞೆ:

ಯಾರೋ ನಮ್ಮ ಜೊತೆ ಇದ್ದಾಗ ಏನೋ ಒಂದು ಸುರಕ್ಷಾ ಭಾವ. ಅವರು ಸುತ್ತ ಮುತ್ತ ಇದ್ದಾರೆ ಎಂಬ ಭಾವನೆ ನಮಗೆ ನಮ್ಮ ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ. ಅಂತಹ ಶಾಂತ ಪ್ರಜ್ಞೆ ಎಲ್ಲರ ಜೊತೆಯಲ್ಲೂ ಸಿಗುವುದಿಲ್ಲ.

ನಿಜವಾದ ವ್ಯಕ್ತಿತ್ವ:

ಯಾವುದೇ ಸಂದರ್ಭದಲ್ಲೂ ನಟಿಸುವ ಅಗತ್ಯವಿಲ್ಲ. ಬದಲಾಗಿ, ನಾವು ನಮ್ಮ ನೈಜ ವ್ಯಕ್ತಿತ್ವಕ್ಕೆ ಬದ್ಧರಾಗಿದ್ದೇವೆ. ಯಾವ ಅವಮಾನದ ಭಯವಿಲ್ಲದೆ ನಾವು ಹೇಗಿದ್ದೇವೆ ಎಂಬುದನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಇಂತಹ ವ್ಯಕ್ತಿತ್ವ ಎಲ್ಲರಲ್ಲಿಯೂ ಇರುವುದಿಲ್ಲ.

ಪ್ರಯೋಗ:

ವ್ಯಕ್ತಿಯೊಂದಿಗೆ ಹೊಸ ವಿಷಯಗಳನ್ನು ಪ್ರಯೋಗಿಸಲು ಮತ್ತು ಪ್ರಯತ್ನಿಸಲು ಮುಕ್ತರಾಗಿರುವುದು.

ಅನುಭವಗಳು:

ನಾವು ಇನ್ನು ಮುಂದೆ ಯಾರ ವಿಷಯವನ್ನು ಮರೆಮಾಚುವುದಿಲ್ಲ. ಬದಲಿಗೆ ನಾವು ಅವರ ಬಗ್ಗೆ ಮುಕ್ತವಾಗಿರಬಹುದು ಮತ್ತು ಅವರ ಬಗ್ಗೆ ನಾವು ಹೇಗೆ ಭಾವಿಸುತ್ತೇವೆ ಎಂಬುದನ್ನು ಯಾವಾಗಲೂ ಚರ್ಚಿಸಬಹುದು.

ಇದನ್ನೂ ಓದಿ: ನಿಮ್ಮ ದಾಂಪತ್ಯ ಸಂಬಂಧದಲ್ಲಿ ಈ ಕಷ್ಟ ಎದುರಾಗಬಹುದು? ಇದಕ್ಕೆ ಕಾರಣ ಇಲ್ಲಿದೆ

ಅಭದ್ರತೆ:

ಅದು ದೈಹಿಕ, ಮಾನಸಿಕ ಅಥವಾ ಭಾವನಾತ್ಮಕವಾಗಿರಲಿ, ನಾವು ಇನ್ನು ಮುಂದೆ ನಮ್ಮ ಅಭದ್ರತೆಯನ್ನು ಮರೆಮಾಡುವುದಿಲ್ಲ. ಬದಲಾಗಿ, ಅವರು ಅವುಗಳನ್ನು ಪರಿಹರಿಸಲು ಒತ್ತಾಯಿಸುತ್ತಾರೆ. ಹಾಗಾಗಿ ಯಾವುದನ್ನೂ ಮರೆ ಮಾಚುವುದಿಲ್ಲ.

ನಿಲುವು:

ಅವರು ನಮ್ಮಲ್ಲಿರುವ ನಿಲುವುಗಳನ್ನು ಗೌರವಿಸುತ್ತಾರೆ ಮತ್ತು ಅದನ್ನು ಅನುಸರಿಸಲು ಸಿದ್ಧರಿದ್ದಾರೆ. ಎಂಬುದು ಕೂಡ ಮುಖ್ಯ ವಾಗುತ್ತದೆ.

ಪ್ರತಿಕ್ರಿಯೆ:

ಅವರ ಕಡೆಯಿಂದ ಪ್ರತಿಕ್ರಿಯೆ ಅಥವಾ ಟೀಕೆಗಳು ಬಂದಾಗ, ಕೋಪಗೊಳ್ಳುವುದಿಲ್ಲ, ಬದಲಿಗೆ ನಾವು ಅದನ್ನು ಪ್ರೀತಿಯಿಂದ ಬರುವ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ.

ಹಂಚಿಕೊಳ್ಳುವಿಕೆ:

ನಾವು ಅವರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುತ್ತೇವೆ . ಅದು ಕಷ್ಟವಿರಲಿ ಸುಖವಿರಲಿ ಎಲ್ಲದರಲ್ಲೂ ಒಟ್ಟಿಗೆ ನಿಂತು ಪರಿಹರಿಸುತ್ತೇವೆ. ಇವೆಲ್ಲವೂ ಒಂದು ಸಂಬಂಧದ ಬುನಾದಿಗೆ ಅಗತ್ಯವಾದದ್ದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ; 

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್