Side effects of pickles: ಉಪ್ಪಿನಕಾಯಿಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೇ? ಇದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: Oct 14, 2023 | 7:11 AM

ನಾವೆಲ್ಲರೂ ಉಪ್ಪಿನಕಾಯಿಯ ಗಾಢ ಪರಿಮಳವನ್ನು ಇಷ್ಟಪಡುತ್ತೇವೆ, ಆದರೆ ಅದನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯಾ? ಉಪ್ಪಿನಕಾಯಿಯ ಕೆಲವು ಅಡ್ಡಪರಿಣಾಮಗಳು ಮತ್ತು ನೀವು ಅವುಗಳನ್ನು ತಿನ್ನುವುದನ್ನು ಏಕೆ ತಪ್ಪಿಸಬೇಕು ಎಂಬುದರ ಬಗ್ಗೆ ಕೆಲವು ಮಾಹಿತಿಗಳನ್ನು ತಜ್ಞರು ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

Side effects of pickles: ಉಪ್ಪಿನಕಾಯಿಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವೇ? ಇದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ
Side effects of pickles
Follow us on

ನೀವು ಉಪ್ಪಿನಕಾಯಿಯ ರುಚಿಯನ್ನು ಇಷ್ಟಪಡುತ್ತೀರಾ? ಹಾಗಾದರೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇ ಬೇಕು. ಭಾರತೀಯರಾದ ನಾವು, ಮಸಾಲೆಗಳು ಮತ್ತು ತರಕಾರಿಗಳು ಅಥವಾ ಹಣ್ಣುಗಳ ಉಪ್ಪಿನಕಾಯಿಯ ಮಿಶ್ರ ರುಚಿಯನ್ನು ತಲೆಮಾರುಗಳಿಂದ ಆನಂದಿಸುತ್ತಾ ಬಂದಿದ್ದೇವೆ. ಮಾವು, ನಿಂಬೆ, ಆಮ್ಲಾ, ಎಲೆಕೋಸು, ಕ್ಯಾರೆಟ್, ಮೂಲಂಗಿ ಮತ್ತು ಹಾಗಲಕಾಯಿ ಹೀಗೆ ನಾನಾ ರೀತಿಯ ಉಪ್ಪಿನಕಾಯಿಯನ್ನು ನಾವು ಸವಿದಿದ್ದೇವೆ. ಕೆಲವೊಮ್ಮೆ ನಮಗೆ, ಎಷ್ಟು ರುಚಿಕರವಾದ ಭಕ್ಷ್ಯಗಳಿದ್ದರೂ ಕೂಡ ಇನ್ನಷ್ಟು ರುಚಿ ಸೇರಿಸಲು ಇದನ್ನು ಹೆಚ್ಚಾಗಿ ಸೇವಿಸುತ್ತೇವೆ, ಪ್ರೀತಿಸುತ್ತೇವೆ. ಆದರೆ ಇದೆಲ್ಲದರ ಜೊತೆ ಜೊತೆಗೆ ನಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಅಗತ್ಯ. ಜೊತೆಗೆ ನಮ್ಮ ಮನಸ್ಸನ್ನು ಹೆಚ್ಚು ಆರೋಗ್ಯಕರ ಆಹಾರದ ಕಡೆಗೆ ತಿರುಗಿಸಲು ಮನವೊಲಿಸುವುದು ಕೂಡ ಮುಖ್ಯವಾಗುತ್ತದೆ. ಅಲ್ಲದೆ, ಹೆಚ್ಚು ಉಪ್ಪಿನಕಾಯಿ ತಿನ್ನುವ ಅಭ್ಯಾಸವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಹಾಗಾಗಿ ಉಪ್ಪಿನಕಾಯಿಯ ಕೆಲವು ಅಡ್ಡಪರಿಣಾಮಗಳನ್ನು ನೀವು ತಿಳಿದುಕೊಳ್ಳಬೇಕು. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಉಪ್ಪಿನಕಾಯಿಯ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ:

1. ಕಡಿಮೆ ಪೌಷ್ಠಿಕಾಂಶದ ಮೌಲ್ಯ:

ಉಪ್ಪಿನಕಾಯಿ ತಯಾರಿಸುವ ಪ್ರಕ್ರಿಯೆಯು ಮುಖ್ಯವಾಗಿ ಹಣ್ಣುಗಳು ಅಥವಾ ತರಕಾರಿಗಳನ್ನು ಕತ್ತರಿಸಿ ಒಣಗಿಸುವುದನ್ನು ಒಳಗೊಂಡಿರುವುದರಿಂದ ಮತ್ತು ಹಣ್ಣುಗಳು ಅಥವಾ ತರಕಾರಿಗಳಲ್ಲಿ ಯಾವುದೇ ನೀರಿನ ಅಂಶ ಇಲ್ಲದಿರುವುದರಿಂದ, ಜೊತೆಗೆ ಸೂರ್ಯನ ಬೆಳಕಿನಲ್ಲಿ ಒಣಗಿಸುವುದು ಹೆಚ್ಚಿನ ಪೋಷಕಾಂಶಗಳನ್ನು ನಾಶಪಡಿಸುತ್ತದೆ. ಒಣಗಿಸುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಉಪ್ಪಿನ ಲೇಪನವನ್ನು ಸಹ ಮಾಡಲಾಗುತ್ತದೆ, ಇದು ಆ ಪದಾರ್ಥಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಉಪ್ಪಿನಕಾಯಿ ತಯಾರಿಸುವ ಪ್ರಕ್ರಿಯೆಯು ಅದರ ಪೌಷ್ಠಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ.

2. ರಕ್ತದೊತ್ತಡವನ್ನು ಹೆಚ್ಚಿಸಬಹುದು:

ಹಣ್ಣುಗಳು ಅಥವಾ ತರಕಾರಿಗಳನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸುವ ಸಮಯದಲ್ಲಿ ಹೆಚ್ಚುವರಿ ಉಪ್ಪನ್ನು ಹಾಕಲಾಗುತ್ತದೆ ಮತ್ತು ತಯಾರಿಸುವ ಪ್ರಕ್ರಿಯೆಯಲ್ಲಿಯೂ ಕೂಡ ಮತ್ತಷ್ಟು ಉಪ್ಪನ್ನು ಸೇರಿಸಲಾಗುತ್ತದೆ. ಹೀಗೆ ಉಪ್ಪಿನಕಾಯಿಗಳಲ್ಲಿನ ಸೇರಿಸುವ ಹೆಚ್ಚುವರಿ ಉಪ್ಪು ಅವುಗಳಲ್ಲಿ ಸೋಡಿಯಂ ಅಂಶವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಉಪ್ಪಿನಕಾಯಿಯಂತಹ ಹೆಚ್ಚು ಉಪ್ಪು ಸೇರಿರುವ ಆಹಾರಗಳು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಜೊತೆಗೆ ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಒಂದೆರಡು ಬಾರಿ ಉಪ್ಪಿನಕಾಯಿ ತಿನ್ನುವುದು ಹಾನಿಕಾರಕವಲ್ಲವಾದರೂ, ಹೆಚ್ಚುವರಿ ಸೋಡಿಯಂನ ನಿಯಮಿತ ಸೇವನೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಜೀರ್ಣಕ್ರಿಯೆಯ ಸಮಯದಲ್ಲಿ ನಮ್ಮ ಕರುಳುಗಳು ಸೋಡಿಯಂ ಅನ್ನು ಹೀರಿಕೊಳ್ಳುತ್ತವೆ, ಇದರಿಂದಾಗಿ ಸೋಡಿಯಂ ಎಲೆಕ್ಟ್ರೋಲೈಟ್ಗಳು ಹೆಚ್ಚಾಗುತ್ತವೆ. ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಏಕಕಾಲದಲ್ಲಿ ಎರಡು ಶ್ವಾಸಕೋಶಗಳ ಶಸ್ತ್ರಚಿಕಿತ್ಸೆ ಯಶಸ್ವಿ; ಭಾರತದಲ್ಲಿ ನಡೆದ ಮೊದಲ ಪ್ರಯೋಗವಿದು

3. ನಿಮ್ಮ ಮೂತ್ರಪಿಂಡಗಳಿಗೆ ಹಾನಿಕಾರಕ:

ಸಾಮಾನ್ಯ ಮಧ್ಯಮ ಗಾತ್ರದ ಮಾವಿನ ಉಪ್ಪಿನಕಾಯಿಯಲ್ಲಿ 569 ಮಿಗ್ರಾಂ ಸೋಡಿಯಂ ಇರುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಮೆರಿಕದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ನಮ್ಮ ದೇಹದ ದೈನಂದಿನ ಅವಶ್ಯಕತೆ 2,300 ಮಿಗ್ರಾಂ. ಉಪ್ಪಿನಕಾಯಿಯಲ್ಲಿ ಉಪ್ಪಿನ ಅತಿಯಾದ ಬಳಕೆಯು ನಮ್ಮ ಆಹಾರದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ನೀರಿನ ಧಾರಣ, ಉಬ್ಬರ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡಗಳ ಮೇಲೆ ಕೆಲಸದ ಹೊರೆಯಂತಹ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಾಲಿಕ್ಯುಲರ್ ಸೈನ್ಸಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉಪ್ಪು ಅಧಿಕವಾಗಿರುವ ಆಹಾರವು ದ್ರವದ ಓವರ್ಲೋಡ್ಗೆ ಕಾರಣವಾಗುತ್ತದೆ ಮತ್ತು ಹೃದಯ, ನಾಳೀಯ ವ್ಯವಸ್ಥೆ ಮತ್ತು ಮೂತ್ರಪಿಂಡಗಳಿಗೆ ವಿಷಕಾರಿ ಎಂದು ಸಾಬೀತುಪಡಿಸುತ್ತದೆ.

4. ಅಧಿಕ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗುತ್ತದೆ:

ಉಪ್ಪಿನಕಾಯಿ ತಯಾರಿಸುವ ಪ್ರಕ್ರಿಯೆಯು ತರಕಾರಿಗಳಿಗೆ ಎಣ್ಣೆ ಹಾಕುವುದನ್ನು ಸಹ ಒಳಗೊಂಡಿದೆ, ಇದು ತೇವಾಂಶದ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ. ಈ ಎಣ್ಣೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ, ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಅಥವಾ ಹದಗೆಡಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಜೊತೆಗೆ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವು ದೀರ್ಘಾವಧಿಯಲ್ಲಿ ಯಕೃತ್ತಿಗೆ ಹಾನಿ ಮಾಡುತ್ತದೆ ಎಂದು ಅಧ್ಯಯನಗಳು ಕಂಡು ಕೊಂಡಿವೆ. ಜೊತೆಗೆ, ಉಪ್ಪಿನಕಾಯಿ ತಯಾರಿಸಲು ಬಳಸುವ ಎಣ್ಣೆಯು ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತದೆ, ಇದು ಹೈಡ್ರೋಜನೀಕರಣದಿಂದಾಗಿ ಸಂಭವಿಸುತ್ತದೆ. ಟ್ರಾನ್ಸ್ ಕೊಬ್ಬು ಉಪ್ಪಿನಕಾಯಿಯ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸುತ್ತದೆ, ಆದರೆ ಎಲ್ಡಿಎಲ್ ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್) ಅನ್ನು ಹೆಚ್ಚಿಸುತ್ತದೆ ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ (ಉತ್ತಮ ಕೊಲೆಸ್ಟ್ರಾಲ್) ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇವು ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತವೆ. ಹಾಗಾಗಿ ಉಪ್ಪಿನಕಾಯಿ ಸೇವನೆ ಮಿತವಾಗಿರಲಿ. ಅಥವಾ ತ್ಯಜಿಸುವುದು ಕೂಡ ಉತ್ತಮವೇ ಆಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: