ಒಬ್ಬ ವ್ಯಕ್ತಿಯ ನಿದ್ರೆಯ ಗುಣಮಟ್ಟ ಎಷ್ಟಿರಬೇಕು. ಯಾವ ಸಮಯದಲ್ಲಿ ಎಷ್ಟು ನಿದ್ದೆ ಮಾಡಬೇಕು, ಇವೆಲ್ಲವನ್ನು ತಿಳಿದುಕೊಳ್ಳಬೇಕು, ಅದಕ್ಕೆ ಒಬ್ಬ ವ್ಯಕ್ತಿ ಗೂಬೆಯಂತೆ ನಿದ್ದೆ ಮಾಡಬೇಕು ಎಂದು ಅನೇಕ ತಜ್ಙರು ಹೇಳುತ್ತಾರೆ. ಅದು ಹೇಗೆ? ಮನುಷ್ಯನಿಗೆ ಎಷ್ಟೊತ್ತು ನಿದ್ದೆ ಅಗತ್ಯ ಇದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನರವಿಜ್ಞಾನಿ ಡಾ. ಸಿದ್ಧಾರ್ಥ್ ವಾರಿಯರ್ ಹೇಳುವ ಪ್ರಕಾರ 7-8 ಗಂಟೆಗಳ ನಿದ್ರೆ ಸ್ವೀಕಾರಾರ್ಹ ಎಂದು ಹೇಳುತ್ತಾರೆ. ಆದರೆ ಇತರ ತಜ್ಞರು ನಿದ್ರೆಯ ಗುಣಮಟ್ಟ (sleep quality) ಮತ್ತು ಸಮಯವು ನಿರ್ಣಾಯಕ ಎಂದು ಹೇಳುತ್ತಾರೆ. 7-8 ಗಂಟೆಗಳ ನಿದ್ರೆಯು ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಮತ್ತೊಬ್ಬ ವೈದ್ಯ ಡಾ. ತಪಸ್ವಿ ಕೃಷ್ಣ ಹೇಳುತ್ತಾರೆ. ಒಂದು ವೇಳೆ ಗೂಬೆಯಂತೆ ರಾತ್ರಿ ನಿದ್ರೆ ಮಾಡಿದ್ರೆ ಅದು ದೇಹದ ಸಿರ್ಕಾಡಿಯನ್ ಮಟ್ಟವನ್ನು ಅಡ್ಡಿಪಡಿಸುತ್ತವೆ. ಜತೆಗೆ ಇದು ಹಾರ್ಮೋನ್ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಇದರ ಜತೆಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ.
ಅತ್ಯುತ್ತಮ ಆರೋಗ್ಯಕ್ಕಾಗಿ ನಿದ್ರೆಯ ಸ್ಥಿರತೆ, ನೈಸರ್ಗಿಕವಾಗಿ ಎಷ್ಟು ಹೊತ್ತು ನಿದ್ರೆ ಮಾಡಬೇಕು, ಹಗಲಿನಲ್ಲಿ ಎಷ್ಟೊತ್ತು. ರಾತ್ರಿ ನಿದ್ರೆ ಮಾಡಬೇಕಾದ ಸಮಯ ಎಲ್ಲವನ್ನು ಹೊಂದಿಸಿಕೊಂಡು ಮಾಡಬೇಕಿದೆ. ಕ್ರಮ ಪ್ರಕಾರವಾಗಿ ನಿದ್ರೆ ಮಾಡಿಲ್ಲ ಎಂದರೆ, ಆರೋಗ್ಯಕರ ಮತ್ತು ಗುಣಮಟ್ಟದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ. ಇದು ಒತ್ತಡದ ಮಟ್ಟದ ಪರಿಣಾಮ ಬೀರುತ್ತದೆ ಮತ್ತು ದೀರ್ಘಕಾಲದ ಸ್ಥಿತಿಗಳಿಗೆ ಕಾರಣವಾಗಬಹುದು. ಹೀಗಾಗಿ, ನರವಿಜ್ಞಾನಿ ಡಾ. ಸಿದ್ಧಾರ್ಥ್ ವಾರಿಯರ್, ಅಕಾ ಫುಡ್ ಫಾರ್ಮರ್ ರೇವಂತ್ ಹಿಮತ್ಸಿಂಕಾ ಅವರು ಹೇಳುವ ಪ್ರಕಾರ ರಾತ್ರಿಯ ನಿದ್ರೆ ಉತ್ತಮ ಹಾಗೂ ಕ್ರಮ ಪ್ರಕಾರ ಇರಬೇಕು. ಅದಕ್ಕಾಗಿ ಗೂಬೆಯ ನಿದ್ರೆಯನ್ನು ಪಾಲಿಸುವುದು ಉತ್ತಮ ಎಂದು ಹೇಳುತ್ತಾರೆ.
ಡಾ. ಸಿದ್ಧಾರ್ಥ್ ವಾರಿಯರ್ 7-8 ಗಂಟೆಗಳ ನಿದ್ರೆ ಮಾಡುವುದಾದರೆ ಗೂಬೆಯಂತಿರಬೇಕು ಎಂದು ಹೇಳಿದ್ದಾರೆ. ಆದರೆ ಹೈದರಾಬಾದ್‌ನ ಲಕ್ಡಿ ಕಾ ಪುಲ್‌ನಲ್ಲಿರುವ ಗ್ಲೆನೀಗಲ್ಸ್ ಆಸ್ಪತ್ರೆಯ ನಿದ್ರೆ ಔಷಧ ತಜ್ಞ ಡಾ. ತಪಸ್ವಿ ಕೃಷ್ಣ ಹೇಳುವಂತೆ ಯಾರು ಅಡೆತಡೆಯಿಲ್ಲದೆ 7-8 ಗಂಟೆಗಳ ಕಾಲ ಸ್ಥಿರವಾಗಿ ನಿದ್ರೆ ಮಾಡುತ್ತಾರೆ. ಅವರು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಮಧ್ಯಾಹ್ನ ಅಥವಾ ಹಗಲಿನ ನಿದ್ರೆಯನ್ನು ರಾತ್ರಿಯ ನಿದ್ರೆಗೆ ಪರಿಸ್ಥಿತಿಯನ್ನು ಅನುಸರಿಬೇಕು. ಒಂದು ವೇಳೆ ಗೂಬೆಯಂತೆ ನಿದ್ರೆ ಮಾಡುವುದಾದರೆ ಜೀವನಶೈಲಿಯ ಮೇಲೆ ಅಥವಾ ಯೋಗಕ್ಷೆಮದ ಮೇಲೆ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: ಹಸಿವಾದಾಗ ನಿಮ್ಗೂ ಸಿಕ್ಕಾಪಟ್ಟೆ ಕೋಪ ಬರುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?
ನಿದ್ರೆಯ ಗುಟ್ಟಮಟ್ಟವನ್ನು ನೀವು ಎಷ್ಟು ಸಮಯ ನಿದ್ರಿಸುತ್ತೀರಿ ಮತ್ತು ಯಾವಾಗ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅನಿಯಮಿತ ನಿದ್ರೆ ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು. ರಾತ್ರಿ ಎಷ್ಟು ಮಾಡಬೇಕು ಹಾಗೂ ಹಗಲು ಎಷ್ಟು ಮಾಡಬೇಕು ಎಂಬುದನ್ನು ನೋಡಿಕೊಂಡ ನಿದ್ರೆ ಸಮಯವನ್ನು ಹೊಂದಾಣಿಕೆ ಮಾಡಬೇಕು. ಈ ಎಲ್ಲ ಕ್ರಮಗಳು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ದಿನಚರಿಯನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ನಿಮ್ಮ ಆರೋಗ್ಯ ಗಮನ ನೀಡುತ್ತಿರಬೇಕು ಹಾಗೂ ತಿಂಗಳಿಗೆ ಒಮ್ಮೆಯಾದರೂ ವೈದ್ಯರ ಬಗ್ಗೆ ನಿಮ್ಮ ಆರೋಗ್ಯ ಬಗ್ಗೆ ವಿಚಾರಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ