Sleeping Habits: ನಿದ್ರೆಯ ಅಭ್ಯಾಸ ಹೆಚ್ಚು ಕಾಲ ಬದುಕುವಂತೆ ಮಾಡುತ್ತದೆ : ವರದಿ
ಕಡಿಮೆ ಅವಧಿಯ ನಿದ್ರೆಯು ಸ್ಥೂಲಕಾಯತೆ, ಮಧುಮೇಹ, ಹೃದಯ ರಕ್ತನಾಳದ ಕಾಯಿಲೆ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸಾಕಷ್ಟು ನಿದ್ರೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.
ಒಬ್ಬ ಮನುಷ್ಯ ಆರೋಗ್ಯವಂತನಾಗಿರಲು ಅವನಿಗೆ ಸಾಕಷ್ಟು ನಿದ್ರೆಯ ಅವಶ್ಯಕತೆಯೂ ಇರುತ್ತದೆ. ನಿದ್ರೆಯ ಅಭ್ಯಾಸ ಮತ್ತು ಜೀವಿತಾವಧಿಯ ನಡುವೆ ಸಂಬಂಧವಿದೆ ಎಂದು ಹಲವು ಸಂಶೋಧನೆಗಳು ಹೇಳುತ್ತವೆ. ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ನಿದ್ರೆಯ ಅಭ್ಯಾಸಗಳು ದೀರ್ಘಾವಧಿಯ ಜೀವಿತಾವಧಿಗೆ ಸಂಬಂಧಿಸಿದೆ. ಈ ಕೆಲವು ನಿದ್ರೆಯ ಅಭ್ಯಾಸಗಳು ನಿಮ್ಮನ್ನು ಹೆಚ್ಚು ಕಾಲ ಬದುಕುವಂತೆ ಮಾಡುತ್ತದೆ. ಈ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿನಿತ್ಯ ಆರೋಗ್ಯಕರ ಹಾಗೂ ಸಾಕಷ್ಟು ಪ್ರಮಾಣದ ನಿದ್ರೆಯನ್ನು ನೀವು ಪಡೆಯಬಹುದು.
ಸಾಕಷ್ಟು ನಿದ್ರೆಯನ್ನು ಪಡೆಯುವುದು: ದಿನಕ್ಕೆ 7 ರಿಂದ 9 ಗಂಟೆಗಳ ನಿದ್ರೆ ಪಡೆಯುವುದು ಮುಖ್ಯವಾಗಿರುತ್ತದೆ. 6 ಗಂಟೆಗಳಿಗಿಂತ ಕಡಿಮೆ ನಿದ್ದೆ ಮಾಡುವುದು ಅಥವಾ 9 ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ದೆ ಮಾಡುವುದು ಅದು ಕಡಿಮೆ ಜೀವಿತಾವಧಿಗೆ ಕಾರಣವಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ವಿಶ್ರಾಂತಿಯುತ ವಾತಾವರಣವನ್ನು ಕೋಣೆಯಲ್ಲಿ ರಚಿಸುವುದು: ನಿಮ್ಮ ಮಲಗುವ ಕೋಣೆಯನ್ನು ತಂಪಾಗಿ, ಕತ್ತಲೆಯಾಗಿ ಮತ್ತು ಶಾಂತಯುವಾಗಿ ಇಡುವುದು, ಶಾಂತರೀತಿಯ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಆರಾಮದಾಯಕವಾದ ಹಾಸಿಗೆ ಮತ್ತು ತಲೆದಿಂಬುಗಳನ್ನು ಬಳಸುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.
ಸ್ಥಿರವಾದ ನಿದ್ರೆಯ ವೇಳಾಪಟ್ಟಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಎಚ್ಚರಗೊಳ್ಳುವುದು ಸೇರಿದಂತೆ ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಇಟ್ಟುಕೊಳ್ಳುವುದು, ನಿಮ್ಮ ದೇಹದ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಇದನ್ನೂ ಓದಿ: Sleeping Problem: ನಿಮಗೆ ಗೊತ್ತಿಲ್ಲದೆಯೇ ಬಾಯಿ ತೆರೆದು ಮಲಗುತ್ತೀರಾ? ಈ ಸಮಸ್ಯೆಗೆ ಇದೇ ಕಾರಣ
ಉತ್ತೇಜಕಗಳನ್ನು ತಪ್ಪಿಸುವುದು: ಮಲಗುವ ಮುನ್ನ ಕೆಫೀನ್, ನಿಕೋಟಿನ್ ಮತ್ತು ಆಲ್ಕೋಹಾಲ್ ಸೇವಿಸುವುದನ್ನು ತಪ್ಪಿಸುವ ಮೂಲಕ ನೀವು ವೇಗವಾಗಿ ನಿದ್ರೆಗೆ ಜಾರಬಹುದು ಮತ್ತು ನಿಮ್ಮ ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ.
ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡುವುದು: ಧ್ಯಾನ, ಆಳವಾದ ಉಸಿರಾಟ ಮತ್ತು ಸ್ನಾಯು ವಿಶ್ರಾಂತಿಯಂತಹ ತಂತ್ರಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
Published On - 3:02 pm, Mon, 27 March 23