Life on Venus : ಶುಕ್ರ ಗ್ರಹದಲ್ಲಿ ಪಾಸ್ಪೈನ್‌ ಅನಿಲ ಪತ್ತೆ, ಖಗೋಳಶಾಸ್ತ್ರಜ್ಞರು ಹೇಳುವುದೇನು?

ಭೂಮಿಗೆ ಹತ್ತಿರವಾಗಿರುವ ಶುಕ್ರ ಗ್ರಹದಲ್ಲಿ ಜೀವ ಜಗತ್ತು ಇರುವುದೇ? ಇಂತಹ ಚರ್ಚೆಯೊಂದು ಕಳೆದ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ ಈ ಶುಕ್ರ ಗ್ರಹದ ಮೋಡಗಳಲ್ಲಿ ಪಾಸ್ಪೈನ್‌ ಅನಿಲ ಇರುವುದನ್ನು ಎಲ್ಲರಿಗೂ ತಿಳಿದಿದೆ. ಇದೀಗ ಹೊಸ ಅಧ್ಯಯನವೊಂದರ ಪ್ರಕಾರ ಪಾಸ್ಪೈನ್‌ ಅನಿಲವು ದಟ್ಟವಾಗಿದೆ ಎನ್ನುವುದು ತಿಳಿದು ಬಂದಿದೆ. ಹಾಗಾದ್ರೆ ಈ ಅಧ್ಯಯನದ ಬಳಿಕ ಖಗೋಳಶಾಸ್ತ್ರಜ್ಞರು ಹೇಳುವುದೇನು? ಈ ಬಗೆಗಿನ ಮಾಹಿತಿಯೂ ಇಲ್ಲಿದೆ.

Life on Venus : ಶುಕ್ರ ಗ್ರಹದಲ್ಲಿ ಪಾಸ್ಪೈನ್‌ ಅನಿಲ ಪತ್ತೆ, ಖಗೋಳಶಾಸ್ತ್ರಜ್ಞರು ಹೇಳುವುದೇನು?
ಸಾಂದರ್ಭಿಕ ಚಿತ್ರ
Edited By:

Updated on: Jul 31, 2024 | 5:39 PM

ನಾವೆಲ್ಲರೂ ನೆಲೆಸಿರುವ ಈ ಭೂಮಿಯು ವಿಶ್ವದಲ್ಲಿ ಜೀವಕ್ಕೆ ನೆಲೆಯಾಗಿರುವ ಏಕೈಕ ಗ್ರಹವಾಗಿದೆ. ಆದರೆ ವಿಜ್ಞಾನಿಗಳು ಭೂಮಿಯಾಚೆಗೂ ಜೀವಿಸಲು ಕ್ಕೆ ಸೂಕ್ತವಾದ ಭೂಮಿಯಂತಹ ಗ್ರಹಕ್ಕಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ. ಕಳೆದ ಕೆಲವು ವರ್ಷಗಳಿಂದಲೇ ಭೂಮಿಗೆ ಅತ್ಯಂತ ಸಮೀಪದ ಗ್ರಹವೆನಿಸಿರುವ ಶುಕ್ರನಲ್ಲಿ ಜೀವ ಸಾಧ್ಯತೆ ಇರಬಹುದು ಎನ್ನುವ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಆದರೆ ಇದೀಗ ಸಂಶೋಧನೆಯಲ್ಲಿ, ಖಗೋಳಶಾಸ್ತ್ರಜ್ಞರು ಶುಕ್ರದ ಮೋಡಗಳಲ್ಲಿ ಭೂಮಿಯ ಮೇಲಿನ ಆಮ್ಲಜನಕಸಹಿತ ಜೀವನಕ್ಕೆ ಸಂಬಂಧಿಸಿದ ಫಾಸ್ಫೈನ್ ಎಂಬ ಅನಿಲದ ಉಪಸ್ಥಿತಿಯೂ ದಟ್ಟವಾಗಿದೆ ಎಂದಿದ್ದಾರೆ.

ಗ್ರೀವ್ಸ್ ಮತ್ತು ಅವರ ಸಹೋದ್ಯೋಗಿಗಳು ಇಂಗ್ಲೆಂಡ್‌ನ ಹಲ್‌ನಲ್ಲಿ ಈ ವರ್ಷದ ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ ಸಭೆಯಲ್ಲಿ, ವೈಜ್ಞಾನಿಕ ಪ್ರಬಂಧಕ್ಕಾಗಿ ತಾಜಾ ಪುರಾವೆಗಳನ್ನು ಪ್ರಸ್ತುತಪಡಿಸಿದ್ದಾರೆ. ಭೂಮಿಯ ವಾತಾವರಣಕ್ಕೂ ಶುಕ್ರನ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದರೂ, ಶುಕ್ರನ ಮೋಡಗಳಲ್ಲಿ ಫಾಸ್ಫೈನ್ ಅನಿಲವು ಇದೆ ಎಂಬುದಕ್ಕೆ ಇನ್ನೂ ಬಲವಾದ ಪುರಾವೆಗಳನ್ನು ಸಿಕ್ಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅದಲ್ಲದೇ, ಕಾರ್ಡಿಫ್ ವಿಶ್ವವಿದ್ಯಾನಿಲಯದ ಖಗೋಳಶಾಸ್ತ್ರಜ್ಞ ಪ್ರೊ ಜೇನ್ ಗ್ರೀವ್ಸ್ ನೇತೃತ್ವದ ಮತ್ತೊಂದು ತಂಡವು ಶುಕ್ರದ ಮೋಡಗಳಲ್ಲಿ ಅಮೋನಿಯದ ಅನಿಲವಿರುವ ಬಗ್ಗೆ ಸುಳಿವುವನ್ನು ಕಂಡುಹಿಡಿದಿದೆ. ಫಾಸ್ಫೈನ್ ಅನಿಲವು ಕೊಳೆಯುವ ಸಾವಯವ ವಸ್ತು ಅಥವಾ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ವಿಷಕಾರಿ ಅನಿಲವಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?

ಆದರೆ ಅಮೋನಿಯಾವು ಬಣ್ಣರಹಿತ ಅನಿಲವಾಗಿದ್ದು, ವಿಶಿಷ್ಟವಾದ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಇದು ಪರಿಸರದಲ್ಲಿ ನೈಸರ್ಗಿಕವಾಗಿ ಸಂಭವಿಸುತ್ತದೆ. ಇದು ಪ್ರಾಥಮಿಕವಾಗಿ ಸಸ್ಯ ಮತ್ತು ಪ್ರಾಣಿಗಳ ತ್ಯಾಜ್ಯದ ವಿಭಜನೆಯ ಸಮಯದಲ್ಲಿ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುತ್ತದೆ. ಇದೀಗ ಇದರ ಪತ್ತೆಹಚ್ಚುವಿಕೆ ಪ್ರಾಥಮಿಕವಾಗಿದೆ, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕೆಂದು ಎಂದು ಸಮರ್ಥಿಸಿದ್ದಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:13 pm, Tue, 30 July 24