ಕಫ-ಜ್ವರದಿಂದ ಮುಕ್ತರಾಗಬೇಕೆ? ಚಳಿಗಾಲದಲ್ಲಿ ತಪ್ಪದೇ ಇವನ್ನು ಸೇವಿಸಿ

ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ತುಂಬಾನೇ ಪ್ರಾಮುಖ್ಯತೆ ವಹಿಸುತ್ತದೆ. ಹಾಗಾದರೆ, ಈ ಅವಧಿಯಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಅದಕ್ಕೆ ಇಲ್ಲಿದೆ ಉತ್ತರ.

  • TV9 Web Team
  • Published On - 6:38 AM, 24 Dec 2020
1/6
ಚಳಿಗಾಲ ಬಂದ ಕೂಡಲೇ ಅನೇಕರಿಗೆ ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚಳಿಗಾಲ ಪೂರ್ಣಗೊಳ್ಳುವವರೆಗೂ ಅನೇಕರು ಕಫದಿಂದ ಬಳಲುತ್ತಾರೆ. ಇನ್ನೂ ಕೆಲವರಿಗೆ ಚಳಿ-ಜ್ವರ ಕೂಡ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಹಾಲು-ಮೊಸರನ್ನು ಅತಿಯಾಗಿ ಸೇವನೆ ಮಾಡಿದರೂ ಕಫ ಉಂಟಾಗುತ್ತದೆ. ಹೀಗಾಗಿ, ನೀವು ಸೇವಿಸುವ ಆಹಾರ ಇಲ್ಲಿ ತುಂಬಾನೇ ಪ್ರಾಮುಖ್ಯತೆ ವಹಿಸುತ್ತದೆ. ಹಾಗಾದರೆ, ಚಳಿಗಾಲದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಅದಕ್ಕೆ ಇಲ್ಲಿದೆ ಉತ್ತರ.
2/6
ಗಾಢ ಬಣ್ಣದ ತರಕಾರಿ-ಹಣ್ಣುಗಳಿರಲಿ: ನಿತ್ಯ ನಾವು ಸಾಕಷ್ಟು ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡುತ್ತೇವೆ. ಚಳಿಗಾಲದಲ್ಲಿ ಹೆಚ್ಚು ಗಾಢ ಬಣ್ಣದ ತರಕಾರಿ ಹಾಗೂ ಹಣ್ಣಿಗೆ ಆದ್ಯತೆ ನೀಡಿ. ಸಿಹಿ ಗೆಣಸು, ಬಿಟ್ರೂಟ್​, ಕಲ್ಲಂಗಡಿ ಹಣ್ಣು ತಿನ್ನಿ. ಇವುಗಳಲ್ಲಿ ಬೀಟಾ ಕೆರೋಟಿನ್ ಅಂಶ ಇರುತ್ತದೆ. ಇದನ್ನು ನಮ್ಮ ದೇಹ ವಿಟಾಮಿನ್​ ಎ ಆಗಿ ಪರಿವರ್ತನೆ ಮಾಡುತ್ತದೆ. ವಿಟಾಮಿನ್​ ನಮ್ಮ ಮೂಗು ಮತ್ತು ಶ್ವಾಸಕೋಶದಲ್ಲಿನ ಮ್ಯೂಕೋಸಲ್ ಲೈನಿಂಗ್‌ಗಳನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
3/6
ಬೆಳ್ಳುಳ್ಳಿ-ಶುಂಠಿಗಿರಲಿ ಆದ್ಯತೆ: ಚಳಿಗಾಲದಲ್ಲಿ ಶುಂಟಿ ಹಾಗೂ ಬೆಳ್ಳುಳ್ಳಿ ನಿಮ್ಮ ಆಹಾರದಲ್ಲಿರಲೇಬೇಕು. ಇವುಗಳಲ್ಲಿರುವ ಅಂಶವು ದೇಹವನ್ನು ವೈರಾಣುಗಳಿಂದ ರಕ್ಷಣೆ ಮಾಡುತ್ತದೆ.
4/6
ವಿಟಾಮಿನ್ ಸಿ: ವಿಟಾಮಿನ್​ ಸಿ ಅಂಶ ಇರುವ ಆಹಾರಗಳ ಸೇವನೆ ಮಾಡಿದರೆ ನೀವು ರೋಗ ಮುಕ್ತ ಆಗಬಹುದು. ಬಿಳಿ ರಕ್ತ ಕಣಗಳು ವೈರಾಣುವಿನ ವಿರುದ್ಧ ಹೋರಾಡಲು ವಿಟಾಮಿನ್​ ಸಿ ಅಂಶವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತವೆ.
5/6
ವಿಟಾಮಿನ್​ ಡಿ: ಸೂರ್ಯನ ಕಿರಣಗಳಿಂದ ನಮಗೆ ಸಾಕಷ್ಟು ವಿಟಾಮಿನ್​ ಡಿ ಸಿಗಲಿದೆ. ಇದರ ಜೊತೆಹೆ ಮೊಟ್ಟೆ, ಅಣಬೆಗಳಲ್ಲಿ ಹೇರಳವಾಗಿ ವಿಟಾಮಿನ್​ ಡಿ ಇರಲಿದೆ. ಈ ಅಂಶ ಇರುವವರ ದೇಹ ರೋಗ ಮುಕ್ತವಾಗಿರುತ್ತದೆ.
6/6
ನೀರಿನ ಉನೀರು ಕುಡಿಯಿರಿ: ಬೇಸಿಗೆಯಲ್ಲಿ ಬಾಯಾರಿಕೆ ಆಗುತ್ತದೆ. ಈ ಕಾರಣಕ್ಕೆ ನಾವು ಹೆಚ್ಚು ನೀರು ಕುಡಿಯುತ್ತೇವೆ. ಆದರೆ, ಚಳಿಗಾಲದಲ್ಲಿ ನೀರು ಕುಡಿಯುವ ಪ್ರಮಾಣ ಕಡಿಮೆ. ಆದರೆ, ಚಳಿಗಾಲದಲ್ಲಿ ಹೆಚ್ಚೆಚ್ಚು ನೀರು ಕುಡಿಯಲೇ ಬೇಕು ಎನ್ನುವುದು ವೈದ್ಯರ ಸಲಹೆ. ಪವಾಸ