ಎಚ್ಚರ! ದಿನನಿತ್ಯದಲ್ಲಿ ಬಳಸುವ ಈ ಐದು ಆಹಾರಗಳು ಕ್ಯಾನ್ಸರ್​ ತರಬಹುದು

ಕ್ಯಾನ್ಸರ್​ ಅನ್ನೋದು ತುಂಬಾನೇ ಅಪಾಯಕಾರಿ. ಕ್ಯಾನ್ಸರ್ ದೇಹದಲ್ಲಿ ಕಾಣಿಸಿಕೊಂಡರೆ ಅದು ಸದ್ದಿಲ್ಲದೆ ಬೆಳೆಯುತ್ತದೆ. ಕೊನೆಗೆ ನಿಮ್ಮನ್ನೇ ಕೊಂದು ಬಿಡುತ್ತದೆ. ಹೀಗಾಗಬಾರದೆಂದರೆ ಈ ಐದು ಆಹಾರಗಳನ್ನು ತ್ಯಜಿಸಿ.

  • Skanda
  • Published On - 6:26 AM, 7 Dec 2020
ಎಚ್ಚರ! ದಿನನಿತ್ಯದಲ್ಲಿ ಬಳಸುವ ಈ ಐದು ಆಹಾರಗಳು ಕ್ಯಾನ್ಸರ್​ ತರಬಹುದು
ಸಾಂದರ್ಭಿಕ ಚಿ್ತ್ರ

ನಾವು ನಿತ್ಯ ಸೇವನೆ ಮಾಡುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ನಮ್ಮ ದೇಹಕ್ಕೆ ನಿತ್ಯ ಒಳ್ಳೆಯ ಆಹಾರ ನೀಡಿದರೆ, ನಾವು ಆರೋಗ್ಯವಾಗಿ ಹೆಚ್ಚು ವರ್ಷಗಳ ಕಾಲ ಬದುಕುತ್ತೇವೆ. ಆದರೆ, ನಾವು ಸೇವನೆ ಮಾಡುವ ಆಹಾರಕ್ರಮ ಸರಿಯಿಲ್ಲ ಎಂದರೆ ನಮಗೆ ಅಪಾಯ ಕಟ್ಟಿಟ್ಟಬುತ್ತಿ. ಅದರಲ್ಲೂ ದಿನ ನಿತ್ಯ ನೀವು ಬಳಕೆ ಮಾಡುವ ಆಹಾರ ಕ್ಯಾನ್ಸರ್​ ಕಾರಕ ಕೂಡ ಆಗಿರಬಹುದು ಎನ್ನುತ್ತಾರೆ ತಜ್ಞರು.

ಕ್ಯಾನ್ಸರ್​ ಅನ್ನೋದು ತುಂಬಾನೇ ಅಪಾಯಕಾರಿ. ಕ್ಯಾನ್ಸರ್ ದೇಹದಲ್ಲಿ ಕಾಣಿಸಿಕೊಂಡರೆ ಅದು ಸದ್ದಿಲ್ಲದೆ ಬೆಳೆಯುತ್ತದೆ. ಕೊನೆಗೆ ನಿಮ್ಮನ್ನೇ ಕೊಂದು ಬಿಡುತ್ತದೆ. ಹೀಗಾಗಬಾರದೆಂದರೆ ಈ ಐದು ಆಹಾರಗಳನ್ನು ತ್ಯಜಿಸಿ. ಹಾಗಾದರೆ, ಯಾವುದು ಆ ಐದು ಆಹಾರಗಳು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಆಲೂಗಡ್ಡೆ ಚಿಪ್ಸ್​
ಆಲೂಗಡ್ಡೆ ಚಿಪ್ಸ್​ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಿಪ್ಸ್​ ಎಂದರೆ ಪಂಚಪ್ರಾಣ. ಆದರೆ, ಇದರ ಅತಿಯಾದ ಬಳಕೆ ಕ್ಯಾನ್ಸರ್​ ತರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಇದರಲ್ಲಿ ಪರಿಷ್ಕರಿಸಿದ ಕೊಬ್ಬು ಹಾಗೂ ಅಕ್ರಿಲಾಮೈಡ್ ಹೆಸರಿನ ರಾಸಾಯನಿಕ ಇರುತ್ತದೆ. ಇವು ಕ್ಯಾನ್ಸರ್​ ತರೋ ಸಾಧ್ಯತೆ ಹೆಚ್ಚು.

ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಆರೋಗ್ಯ ದೃಷ್ಟಿಯಿಂದ ಇದರ ಸೇವನೆ ಒಳ್ಳೆಯದಲ್ಲ ಎನ್ನುತ್ತದೆ ಸಂಶೋಧನೆ. ಸಂಸ್ಕರಣೆ ವೇಳೆ ಮಾಂಸಕ್ಕೆ ಸಾಕಷ್ಟು ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಇದು ಕ್ಯಾನ್ಸರ್​ ಹುಟ್ಟಿಗೆ ಕಾರಣವಾಗಬಹುದು ಅನ್ನೋದು ತಜ್ಞರ ಎಚ್ಚರಿಕೆ.

ವನಸ್ಪತಿ
ಭಾರತದಲ್ಲಿ ವನಸ್ಪತಿ (ಸಸ್ಯಜನ್ಯ ಎಣ್ಣೆ) ಬಳಕೆ ಅಧಿಕವಾಗಿದೆ. ಆದರೆ, ಇದನ್ನು ಬಳಕೆ ಮಾಡೋರಿಗೆ ಇದರ ಅಪಾಯದ ಬಗ್ಗೆ ತಿಳಿದಿರಲಿಕ್ಕಿಲ್ಲ. ಈ ಎಣ್ಣೆಯನ್ನು ರಾಸಾಯನಿಕ ಪ್ರಕ್ರಿಯೆಯಿಂದಲೇ ಹೊರ ತೆಗೆಯಲಾಗುತ್ತದೆ. ಅಲ್ಲದೆ, ವನಸ್ಪತಿ ಎಣ್ಣೆ ಆಕರ್ಷಯುತವಾಗಿ ಕಾಣಲು ಬಳಕೆ ಮಾಡುವ ರಾಸಾಯನಿಕ ಕೂಡ ಕ್ಯಾನ್ಸರ್​ ಕಾರಕ ಎನ್ನುತ್ತಾರೆ ತಜ್ಞರು.

ಕಡಿಮೆ ಕೊಬ್ಬಿನ ಉತ್ಪನ್ನಗಳು
ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಜನರು ಕಡಿಮೆ ಕೊಬ್ಬಿರುವ ಉತ್ಪನ್ನಗಳತ್ತ ಮುಖ ಮಾಡುತ್ತಿದ್ದಾರೆ. ಈ ಉತ್ಪನ್ನಗಳ ಬಳಕೆಯಿಂದ ಹೃದಯಾಘಾತ ಆಗದೆ ಇರಬಹುದು ಆದರೆ, ಕ್ಯಾನ್ಸರ್​ ನಿಮ್ಮನ್ನು ಸುತ್ತಿಕೊಳ್ಳಬಹುದು. ಒಂದು ವಸ್ತುವಿನಲ್ಲಿರುವ ಕೊಬ್ಬನ್ನು ತೆಗೆಯೋದು ಒಂದು ದೊಡ್ಡ ರಾಸಾಯನಿಕ ಪ್ರಕ್ರಿಯೆ. ಅದರಲ್ಲೂ ಆಸ್ಪರ್ಟೇಮ್​ ಹೆಸರಿನ ರಾಸಾಯನಿಕ ಹೆಚ್ಚಾಗಿ ಇದರಲ್ಲಿ ಬಳಕೆ ಆಗಲಿದ್ದು, ಇದು ಕ್ಯಾನ್ಸರ್​ ತರಬಲ್ಲದು.

ಕೆಂಪು ಮಾಂಸ
ಪ್ರತಿನಿತ್ಯ ಕೆಂಪು ಮಾಂಸ ಸೇವನೆ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ನಿಮಗೆ ಕರುಳಿನ ಕ್ಯಾನ್ಸರ್​ ಕಾಣಿಸಿಕೊಳ್ಳಬಹುದು. ಕೆಂಪು ಮಾಂಸ ಸೇವನೆ ಹೆಚ್ಚಾದರೆ ಕ್ಯಾನ್ಸರ್​ ಕಟ್ಟಿಟ್ಟಬುತ್ತಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಪ್ರಾಣಿಹತ್ಯೆ ಮಾಡದೆ ಮಾಂಸಾಹಾರ: ಲ್ಯಾಬ್​ನಲ್ಲಿ ಉತ್ಪಾದಿಸಿದ ಮಾಂಸ ಮಾರಾಟಕ್ಕೆ ಸಿಂಗಾಪುರ ಸರ್ಕಾರ ಅನುಮತಿ