ನಿಮ್ಮ ಮಕ್ಕಳಿಗೆ ಓದಿದೆಲ್ಲವು ತಲೆಗೆ ಹತ್ತುವುದೇ ಇಲ್ವಾ, ಈ ಸಮಯದಲ್ಲಿ ಓದಿಸಿ ನೋಡಿ

ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಪೋಷಕರು ಮಕ್ಕಳಿಗೆ ಓದು ಓದು ಎಂದು ಒತ್ತಡ ಹಾಕುವುದನ್ನು ನೋಡಿರಬಹುದು. ಮಕ್ಕಳ ಮನಸ್ಥಿತಿಯ ಮೇಲಾಗುವ ಪರಿಣಾಮಗಳ ಬಗ್ಗೆ ಯಾರು ಕೂಡ ಯೋಚಿಸುವುದಿಲ್ಲ. ಕೆಲವು ಮಕ್ಕಳಿಗೆ ಎಷ್ಟೇ ಓದಿದರೂ ತಲೆಗೆ ಹತ್ತುವುದೇ ಇಲ್ಲ. ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ಓದು ಎನ್ನುವುದು ಬಿಟ್ಟರೆ ಯಾವ ಸಮಯವು ಓದಿಗೆ ಒಳ್ಳೆಯದು ಎನ್ನುವುದು ಗೊತ್ತಿರುವುದಿಲ್ಲ. ಆದರೆ ಯಾವ ಸಮಯವು ಪ್ರಶಾಂತವಾಗಿರುತ್ತದೆಯೇ ಆ ಸಮಯದಲ್ಲಿ ಓದುವುದು ಅಭ್ಯಾಸ ಬೆಳೆಸಿಕೊಳ್ಳಬೇಕು. ಆದರೆ ಒಬ್ಬೊಬ್ಬರಿಗೆ ಒಂದೊಂದು ಸಮಯವು ಉತ್ತಮವಾಗಿರುತ್ತದೆ.

ನಿಮ್ಮ ಮಕ್ಕಳಿಗೆ ಓದಿದೆಲ್ಲವು ತಲೆಗೆ ಹತ್ತುವುದೇ ಇಲ್ವಾ, ಈ ಸಮಯದಲ್ಲಿ ಓದಿಸಿ ನೋಡಿ
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Feb 28, 2024 | 7:57 PM

ಇತ್ತೀಚೆಗಿನ ದಿನಗಳಲ್ಲಿ ಕಾಂಪಿಟೇಷನ್ ಹೆಚ್ಚಾಗಿದೆ. ಹೀಗಾಗಿ ಎಷ್ಟು ಓದಿದರೂ ಕೂಡ ಕಡಿಮೆಯೇ ಎನ್ನುವಂತಾಗಿದೆ. ಹೀಗಾಗಿ ಹೆತ್ತವರಿಗೆ ತಮ್ಮ ಜೀವನದಂತೆ ಮಕ್ಕಳ ಜೀವನ ಆಗಬಾರದು. ಚೆನ್ನಾಗಿ ಓದಿ ಜೀವನದಲ್ಲಿ ಮುಂದೆ ಬರಬೇಕು, ಏನಾದರೂ ಸಾಧನೆ ಕೀರ್ತಿ ತರಬೇಕು ಎಂದು ಆಶಿಸುತ್ತಾರೆ. ಹೀಗಾಗಿಯೇ ತಂದೆ ತಾಯಿಯವರು ಲಕ್ಷಾನುಗಟ್ಟಲೆ ಫೀಸ್ ಕಟ್ಟಿ ಓದಿಸುತ್ತಾರೆ. ಇಷ್ಟೆಲ್ಲಾ ಆಸೆ ಕನಸುಗಳನ್ನು ಹೊತ್ತುಕೊಂಡ ಪೋಷಕರು ಮಕ್ಕಳ ಓದಿನ ವಿಚಾರದಲ್ಲಿ ಒತ್ತಡ ಹಾಕುವುದು ಸಹಜವೇ. ಹೀಗಾಗಿ ಮಕ್ಕಳಿಗೂ ತಂದೆ ತಾಯಿಯ ಆಸೆಯನ್ನು ಈಡೇರಿಸುವ ಜವಾಬ್ದಾರಿಯು ಇದೆ.

  1. ಮಕ್ಕಳು ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯ ಈ ಅವಧಿಯಲ್ಲಿ ಓದುವುದು ಒಳ್ಳೆಯದು. ಬೆಳಗ್ಗಿನ ಈ ಸಮಯದಲ್ಲಿ ಓದುವುದರಿಂದ ಮಕ್ಕಳು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅದಲ್ಲದೇ ನೈಸರ್ಗಿಕ ಬೆಳಕು ಇರುವ ಕಾರಣ ಈ ಸಮಯದಲ್ಲಿ ಹೆಚ್ಚು ಓದುತ್ತಾರೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ. ಅದಲ್ಲದೇ ಬೆಳಗ್ಗೆ ಪೌಷ್ಟಿಕಾಂಶಯುಕ್ತ ಆಹಾರವು ಸಿಕ್ಕಿಬಿಟ್ಟರೆ ದೇಹವು ಸದೃಢವಾಗಿದ್ದು, ಓದುವತ್ತ ಮನಸ್ಸು ವಾಲುತ್ತದೆ.
  2. ಮಕ್ಕಳು ಸಂಜೆಯಿಂದ ರಾತ್ರಿಯವರೆಗೆ ಓದುವುದಕ್ಕೆ ಪ್ರಶಸ್ತ ಸಮಯವಾಗಿದೆ. ಶಾಲೆಯಿಂದ ಮನೆಗೆ ಬಂದ ಬಳಿಕ ವಿಶ್ರಾಂತಿ ಪಡೆದುಕೊಳ್ಳಬಹುದು. ಸಂಜೆಯ ಸಮಯ ಮಕ್ಕಳ ಮೆದುಳು ಜಾಗೃತವಾಗಿದ್ದು, ಹೆಚ್ಚಿನ ವಿಷಯಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಪರೀಕ್ಷಾ ಸಮಯದಲ್ಲಿ ಸಂಜೆಯ ನಂತರ ಮಕ್ಕಳು ಓದುವಾಗ ಹೆತ್ತವರು ಪಕ್ಕದಲ್ಲೇ ಕುಳಿತು ಕೊಳ್ಳಬೇಕಾಗುತ್ತದೆ.
  3. ಬೆಳಗ್ಗಿನ ಜಾವದಲ್ಲಿ ಎದ್ದು ಓದುವುದು ಒಳ್ಳೆಯದು ಎಂದು ಹೇಳುವುದಿದೆ. ಕೆಲವರಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಓದಿದರೆ ಬಹಳ ಬೇಗ ಅರ್ಥವಾಗುತ್ತದೆ. ಈ ಸಮಯದಲ್ಲಿ ಮೆದುಳು ನಿದ್ರಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದಿರುವುದಿಲ್ಲ. ಹೀಗಾಗಿ ಮಕ್ಕಳು ಓದಲು ಕುಳಿತುಕೊಂಡರೆ ಓದುತ್ತಾ ಓದುತ್ತಾ ನಿದ್ದೆ ಜಾರುವುದೇ ಹೆಚ್ಚು. ನಿದ್ದೆಯ ಗುಂಗಿನಲ್ಲಿ ಓದಿದ್ದೆಲ್ಲವು ತಲೆಗೆ ಹತ್ತದ ಕಾರಣ ಈ ಸಮಯದಲ್ಲಿ ಮಕ್ಕಳನ್ನು ಎಬ್ಬಿಸಿ ಓದು ಎಂದು ಒತ್ತಡ ಹಾಕುವುದನ್ನು ನಿಲ್ಲಿಸಿ. ಪರೀಕ್ಷೆ ಸಮಯದಲ್ಲಿ ಹೆತ್ತವರು ಮಕ್ಕಳನ್ನು ಓದುವಂತೆ ಹುರಿದುಂಬಿಸುವಾಗ, ಮಕ್ಕಳಿಗೂ ವಿಶ್ರಾಂತಿಯ ಅಗತ್ಯವಿದೆ ಎನ್ನುವುದರ ಕಡೆಗೆ ಗಮನ ಕೊಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ