Fitness: ಆರೋಗ್ಯ ಕಾಪಾಡಿಕೊಳ್ಳಲು ನಾವು ನಡೆಯಬೇಕಾದ ಕನಿಷ್ಠ ಹೆಜ್ಜೆಗಳೆಷ್ಟು? ಇಲ್ಲಿದೆ ಬೆಂಗಳೂರಿನ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 17, 2023 | 6:59 PM

ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಮತ್ತು ರೋಗಮುಕ್ತವಾಗಿರಲು ನೀವು ಪ್ರತಿದಿನ 10,000 ಹೆಜ್ಜೆಗಳನ್ನು ಕ್ರಮಿಸಲು ಸಾಧ್ಯವಾಗದಿದ್ದರೆ, ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಕನಿಷ್ಟ ಎಷ್ಟು ಹೆಜ್ಜೆಗಳ ನಡಿಗೆಯನ್ನು ಕ್ರಮಿಸಬೇಕೆಂಬುದರ ಕುರಿತು ಫಿಟ್ನೆಸ್ ತಜ್ಞರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Fitness: ಆರೋಗ್ಯ ಕಾಪಾಡಿಕೊಳ್ಳಲು ನಾವು ನಡೆಯಬೇಕಾದ ಕನಿಷ್ಠ ಹೆಜ್ಜೆಗಳೆಷ್ಟು? ಇಲ್ಲಿದೆ ಬೆಂಗಳೂರಿನ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us on

ವಾಕಿಂಗ್ ವ್ಯಾಯಾಮದ ಒಂದು ಉತ್ತಮ ರೂಪವಾಗಿದೆ. ಜೊತೆಗೆ ಇದು ದೇಹಕ್ಕೆ ಮತ್ತು ಮನಸ್ಸಿಗೆ ಅಪಾರವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗೂ ಇದು ದೇಹ ತೂಕವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅಧ್ಯಯನಗಳ ಪ್ರಕಾರ ನಡಿಗೆಯು ರಕ್ತದೊತ್ತಡವನ್ನು ಸುಧಾರಿಸುತ್ತದೆ, ಹೃದಯದ ಬಡಿತವನ್ನು ನಿಧಾನಗೊಳಿಸುತ್ತದೆ, ಕೊಬ್ಬು ಮತ್ತು ದೇಹ ತೂಕವನ್ನು ಕಡಿಮೆ ಮಾಡುತ್ತದೆ, ಖಿನ್ನತೆಯನ್ನು ನಿವಾರಿಸುತ್ತದೆ. ನಡಿಗೆಯ ಅನೇಕ ಪ್ರಯೋಜನಗಳನ್ನು ಹಲವಾರು ಅಧ್ಯಯನಗಳು ತೋರಿಸಿವೆಯಾದರೂ, ಆರೋಗ್ಯಕರ ಜೀವನಕ್ಕಾಗಿ ಎಷ್ಟು ಹೆಜ್ಜೆ ನಡೆಯಬೇಕು ಎಂಬುದು ಸ್ಪಷ್ಟವಾಗಿಲ್ಲ.

10,000 ಹೆಜ್ಜೆಗಳ ನಡಿಗೆಯು ಹೃದಯ ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಲು, ಬುದ್ಧಿಮಾಂದ್ಯತೆ ಮತ್ತು ಕ್ಯಾನ್ಸರ್ ಇವೆರಡರ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಸೂಚಿಸುವ ಅಧ್ಯಯನಗಳಿವೆ. ಪ್ರತಿದಿನ 10,000 ಹೆಜ್ಜೆಗಳನ್ನು ನಡೆಯುವ ಗುರಿಯನ್ನು ಸಾಧಿಸುವುದು ಫಿಟ್ನೆಸ್ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ. ಅದಕ್ಕಿಂತ ಕಡಿಮೆ ಹೆಜ್ಜೆಗಳ ನಡಿಗೆ ಕೂಡಾ ಅನೇಕ ಪ್ರಯೋಜನವನ್ನು ನೀಡಬಹುದು. ಪ್ರತಿದಿನ 3,700 ಹೆಜ್ಜೆಗಳ ನಡಿಗೆಯು ಅರಿವಿನ ಕುಸಿತವನ್ನು 65% ನಷ್ಟು ಕಡಿಮೆ ಮಾಡಬಹುದು. ಮತ್ತೊಂದು ಇತ್ತೀಚಿನ ಅಧ್ಯಯನದ ಪ್ರಕಾರ ದಿನಕ್ಕೆ 7,000 ಹೆಜ್ಜೆಗಳನ್ನು ನಡೆಯುವ ಜನರು, ಪ್ರತಿದಿನ ಕಡಿಮೆ ನಡೆಯುವ ಜನರಿಗಿಂತ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ ಎಂದು ಹೇಳಿದೆ. ಅನೆಕ ಜನರು ತಮ್ಮ ಜಡ ಜೀವನಶೈಲಿಯಿಂದಾಗಿ ದಿನಕ್ಕೆ 5,000 ಅಥವಾ 7,000 ಹೆಜ್ಜೆಗಳ ನಡಿಗೆಯನ್ನು ಕ್ರಮಿಸಲು ಹೆಣಗಾಡುತ್ತಾರೆ.

ಫಿಟ್ನೆಸ್ ತಜ್ಞರು ಹೇಳುವಂತೆ, ಒಬ್ಬ ವ್ಯಕ್ತಿಯು ತಮ್ಮ ದೈನಂದಿನ ಚಟುವಟಿಕೆಯ ಮಟ್ಟವನ್ನು ಆಧರಿಸಿ ದಿನಕ್ಕೆ ಎಷ್ಟು ಹೆಜ್ಜೆ ನಡೆಯಬೇಕು ಎಂಬುದನ್ನು ನಿರ್ಧರಿಸಬೇಕು:

ದಿನಕ್ಕೆ ಕನಿಷ್ಟ 10,000 ಹೆಜ್ಜೆಗಳು ನಡೆಯುವುದರಿಂದ ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯಾವುದೇ ದೈಹಿಕ ಚಟುವಟಿಕೆಯ ಮೂಲಭೂತ ಸತ್ಯವನ್ನು ನೆನಪಿಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಅಧ್ಯಯನಗಳ ಪ್ರಕಾರ, ವ್ಯಕ್ತಿಯು ದಿನಕ್ಕೆ ಸರಾಸರಿ 5,000 ಮತ್ತು 7,500 ಹೆಜ್ಜೆಗಳನ್ನು ನಡೆಯುತ್ತಾನೆ. ಅವರು ಹೆಚ್ಚಾಗಿ ಜಡ ಜೀವನಶೈಲಿಯನ್ನು ನಡೆಸುತ್ತಿದ್ದರೂ ಸಹ. ನಿಮ್ಮ ದಿನಚರಿಯಲ್ಲಿ 30 ನಿಮಿಷಗಳ ನಡಿಗೆಯನ್ನು ಸೇರಿಸುವುದರಿಂದ ಹೆಚ್ಚುವರಿ 3,000 ದಿಂದ 4,000 ಹೆಜ್ಜೆಗಳನ್ನು ಹೆಚ್ಚಿಸಬಹುದು. ಇದು ನಿಮ್ಮನ್ನು 10,000 ನಡಿಗೆಯ ಹಂತದ ಗುರಿಯತ್ತ ತರುತ್ತದೆ” ಎಂದು ವಿಟಾಬಯೋಟಿಕ್ಸ್ ನ ಫಿಟ್ನೆಸ್ ಮತ್ತು ನ್ಯೂಟ್ರಿಷನ್ ಎಕ್ಸ್ಪರ್ಟ್ ರೋಹಿತ್ ಶೆಲಟ್ಕರ್ ಹೇಳುತ್ತಾರೆ.

ಇದನ್ನೂ ಓದಿ:Fitness Tips: ಒಂದೇ ತಿಂಗಳಲ್ಲಿ ಫಿಟ್ ಮತ್ತು ಸ್ಲಿಮ್ ಆಗಲು ಬಯಸುವವರಿಗೆ ಇಲ್ಲಿವೆ ಕೆಲ ಸರಳ ಟಿಪ್ಸ್​​

ಜಡ ಜೀವನಶೈಲಿಯ ದುಷ್ಪರಿಣಾಮಗಳನ್ನು ಎದುರಿಸಲು ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಟ 2,000 ದಿಂದ 2,200 ಹೆಜ್ಜೆಗಳನ್ನು ನಡೆಯಬೆಕಾಗುತ್ತದೆ. ಅನೇಕ ವಯಸ್ಕರರಿಗೆ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಕಾರಣ 2,000 ಹೆಜ್ಜೆಗಳನ್ನು ಬಿಡಿ 20 ಹೆಜ್ಜೆಗಳನ್ನು ನಡೆಯಲು ಕಷ್ಟಕರವಾಗಬಹುದು. ಮೆಡಿಸಿನ್ ಮತ್ತು ಸೈನ್ಸ್ ಇನ್ ಸ್ಪೋರ್ಟ್ಸ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿ 30 ನಿಮಿಷಗಳ ಕಾಲ ಕುಳಿತುಕೊಳ್ಳುವವ 5 ನಿಮಿಷಗಳ ಕಾಲ ನಡೆದರೆ, ದೀರ್ಘಾವಧಿಯಲ್ಲಿನ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಬಹುದು. ಪ್ರತಿ 30 ನಿಮಿಷಗಳಿಗೊಮ್ಮೆ 5 ನಿಮಿಷಗಳ ಕಾಲ ನಡೆಯುವುದು ತುಂಬಾ ಕಡಿಮೆ ಎಂದು ಅನ್ನಿಸಬಹುದು. ಆದರೆ ನೀವು ದಿನವಿಡೀ ನಡೆದ ಪ್ರತಿ 5 ನಿಮಿಷಗಳ ನಡಿಗೆಯನ್ನು ಒಗ್ಗೂಡಿಸಿದಾಗ, ನೀವು ಸರಾಸರಿ 40 ನಿಮಿಷಗಳ ಕಾಲ ನಡೆಯುತ್ತೀರಿ. ಅಂದರೆ ಸುಮಾರು 4,000 ಹೆಜ್ಜೆಗಳು ಎಂದು ಬೆಂಗಳೂರಿನ ಸಹಕಾರನಗರದ ಕ್ಲೌಡ್ ನೈನ್ ಗ್ರೂಫ್ ಆಪ್ ಹಾಸ್ಪಿಟಲ್ಸ್ ನ ಹಿರಿಯ ಭೌತಚಿಕಿತ್ಸಕ ಲಾಲ್ಚಾವಿಮಾವಿ ಸನೇಟ್ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: