Intermittent Fasting: ಮಧ್ಯಂತರ ಉಪವಾಸ ಎಂದರೇನು? ಪ್ರಯೋಜನಗಳೇನು? ಯಾರು ಮಾಡಬಾರದು?

Intermittent Fasting:ಮಧ್ಯಂತರ ಉಪವಾಸ( Intermittent Fasting)ವನ್ನು ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕನುಗುಣವಾಗಿ ಮಾಡುತ್ತಾರೆ. ಮಧ್ಯಂತರ ಉಪವಾಸದ ಬಗ್ಗೆ ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ಆದ ಅನುಭವವನ್ನು ಹೊಂದಿರುತ್ತಾರೆ

Intermittent Fasting: ಮಧ್ಯಂತರ ಉಪವಾಸ ಎಂದರೇನು? ಪ್ರಯೋಜನಗಳೇನು? ಯಾರು ಮಾಡಬಾರದು?
ಮಧ್ಯಂತರ ಉಪವಾಸ
Follow us
TV9 Web
| Updated By: ನಯನಾ ರಾಜೀವ್

Updated on: May 20, 2022 | 2:17 PM

ಮಧ್ಯಂತರ ಉಪವಾಸ( Intermittent Fasting)ವನ್ನು ಎಲ್ಲರೂ ತಮ್ಮ ತಮ್ಮ ಅನುಕೂಲಕ್ಕನುಗುಣವಾಗಿ ಮಾಡುತ್ತಾರೆ. ಮಧ್ಯಂತರ ಉಪವಾಸದ ಬಗ್ಗೆ ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ಆದ ಅನುಭವವನ್ನು ಹೊಂದಿರುತ್ತಾರೆ. ಉಪವಾಸದಿಂದ ಅನೇಕ ಪ್ರಯೋಜನಗಳಿವೆ. ಉಪವಾಸ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಬಹುದು ಎಂದು ಹೇಳಲಾಗುತ್ತದೆ. ತೂಕ ಇಳಿಸಿಕೊಳ್ಳಲು ಸಹ ಸಹಕಾರಿ.

ಮಧ್ಯಂತರ ಉಪವಾಸ ಎಂದರೇನು? ಉಪವಾಸದಲ್ಲಿ ಮಧ್ಯಂತರ ಉಪವಾಸ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದು ಸ್ವಯಂಪ್ರೇರಿತ ಉಪವಾಸ ಮತ್ತು ನಿರ್ದಿಷ್ಟ ಅವಧಿಯಲ್ಲಿ ಮಾಡುವ ಉಪವಾಸವಾಗಿದೆ. ಮಧ್ಯಂತರ ಉಪವಾಸಕ್ಕೆ ಇಂಥದ್ದೇ ಎನ್ನುವ ಆಹಾರಗಳ ಅಗತ್ಯವಿಲ್ಲ.

ಎಲ್ಲವನ್ನೂ ತಿನ್ನುವ ಮೂಲಕ, ನೀವು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳಬಹುದು. ಆದರೆ ಉಪವಾಸ ಇರುವ ಸಮಯದಲ್ಲಿ ಕ್ಯಾಲೋರಿ ರಹಿತ ಲಘು ಆಹಾರ ತೆಗೆದುಕೊಳ್ಳಬೇಕು. ತೂಕ ಇಳಿಸಿಕೊಳ್ಳಲು ಬಯಸುವವರು ಮಧ್ಯಂತರ ಉಪವಾಸವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

ಹೆಚ್ಚು ಕ್ಯಾಲೊರಿಗಳಿರುವ ಯಾವ ಪಾನೀಯವೂ ಬೇಡ ಕ್ಯಾಲೊರಿಗಳನ್ನು ಒಳಗೊಂಡಿರುವ ಯಾವುದೇ ಪಾನೀಯವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ಮಧ್ಯಂತರ ಉಪವಾಸವನ್ನು ಹಲವು ವಿಧಗಳಲ್ಲಿ ಮಾಡಬಹುದು. ಮಧ್ಯಂತರ ಉಪವಾಸವು ತಿನ್ನುವ ಒಂದು ಮಾದರಿಯಾಗಿದೆ. ಈ ಸಮಯದಲ್ಲಿ ನೀರು ಸೇರಿ ಕ್ಯಾಲೋರಿಗಳಿಲ್ಲದ ಪಾನೀಯಗಳನ್ನು ಸಾಮಾನ್ಯವಾಗಿ ಸೇವಿಸಬಹುದು. 4-21 ದಿನಗಳ ಕಾಲ ಉಪವಾಸ ಮಾಡಿದ 1,422 ಜನರು ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದಾರೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಏಕೆಂದರೆ ಉಪವಾಸವು ಪ್ಯಾರಸೈಪಥೆಟಿಕ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

ಉಪವಾಸದಿಂದ ಯಾರು ದೂರ ಇರಬೇಕು * ಗರ್ಭಿಣಿ ಅಥವಾ ಹಾಲುಣಿಸುವವರು – ರಾತ್ರಿ ತಿನ್ನುವ ಕಾಯಿಲೆ ಇರುವವರು – 65 ವರ್ಷ ಮೇಲ್ಪಟ್ಟವರು – 18 ವರ್ಷದೊಳಗಿನವರು – ಕಡಿಮೆ ರಕ್ತದೊತ್ತಡ ಇರುವವರು ಮಧ್ಯಂತರ ಉಪವಾಸದ ವಿಧಗಳು ಮಧ್ಯಂತರ ಉಪವಾಸದಲ್ಲಿ ಹಲವು ವಿಧಗಳಿವೆ.

ಒಂದು ಹೊತ್ತಿನ ಊಟ ಬಿಡಬೇಕು: ಈ ವಿಧಾನದ ಪ್ರಕಾರ ದಿನಕ್ಕೆ 16 ಗಂಟೆಗಳ ಕಾಲ ಉಪವಾಸ ಮಾಡುವುದು ಮತ್ತು 8 ಗಂಟೆಗಳ ಒಳಗೆ ಮಾತ್ರ ತಿನ್ನುವುದು. ಈ ವಿಧಾನ ಅನುಸರಿಸಬೇಕಾದರೆ, ನೀವು ಒಂದು ಹೊತ್ತಿನ ಊಟ ಬಿಡಬೇಕಾಗುತ್ತದೆ. 16/8 ವಿಧಾನಕ್ಕಿಂತ ಕಡಿಮೆ ಜನಪ್ರಿಯವಾಗಿರುವ ಮಧ್ಯಂತರ ಉಪವಾಸದ ಇತರ ರೂಪಗಳಿವೆ.

ಎರಡು ದಿನ ಕಡಿಮೆ ಪ್ರಮಾಣದಲ್ಲಿ ತಿನ್ನಿ ಅದರಲ್ಲಿ ಒಂದು 5: 2 ವಿಧಾನ ಎಂದರೆ ನೀವು ವಾರದ 5 ದಿನ ಹೊಟ್ಟೆ ತುಂಬ ತಿನ್ನಬಹುದು. ಉಳಿದ 2 ದಿನಗಳಲ್ಲಿ, ನೀವು ನಿಮ್ಮ ಕ್ಯಾಲೋರಿಗಳನ್ನು 500-600ಕ್ಕೆ ಮಿತಿಗೊಳಿಸಿ ತಿನ್ನಬೇಕು.

ದಿನ ಬಿಟ್ಟು ದಿನ ಉಪವಾಸ ನೀವು 24 ಗಂಟೆಗಳ ಕಾಲ ಒಂದು ಅಥವಾ ಎರಡು ಬಾರಿ ಉಪವಾಸ ಮಾಡಬೇಕು. ಹಾಗೂ ಇನ್ನೂಂದು ಪರ್ಯಾಯ ದಿನದ ಉಪವಾಸವು ಈವಿಧಾನದಲ್ಲಿ ದಿನ ಬಿಟ್ಟು ದಿನ ಉಪವಾಸ ಮಾಡಬೇಕು.

ಮಧ್ಯಂತರ ಉಪವಾಸದ ಅಡ್ಡ ಪರಿಣಾಮಗಳು ಮಧ್ಯಂತರ ಉಪವಾಸ ಕೂಡ ಅಡ್ಡ ಪರಿಣಾಮಗಳನ್ನು ಹೊಂದಿದೆ. ದೀರ್ಘಾವಧಿಯ ಉಪವಾಸದಿಂದಾಗಿ, ನೀವು ಹೆಚ್ಚಿದ ಹಸಿವು ಅನುಭವಿಸುವ ಸಾಧ್ಯತೆಯಿದೆ. ಮಧ್ಯಂತರ ಉಪವಾಸ ಮಾಡುವ ಮೊದಲ ದಿನಗಳಲ್ಲಿ ತಲೆನೋವು ಉಂಟಾಗಬಹುದು. ಹಸಿವು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಉತ್ತಮ.

ಮಧ್ಯಂತರ ಉಪವಾಸ ಸುರಕ್ಷಿತವೇ? ತೂಕ ಕಳೆದುಕೊಳ್ಳುವ ಸಲುವಾಗಿ ಈ ವಿಧಾನವನ್ನು ಜನರು ಜನಪ್ರಿಯವಾಗಿ ಬಳಸುತ್ತಾರೆ ಮತ್ತು ಜನರು ಯಶಸ್ವಿ ಫಲಿತಾಂಶಗಳನ್ನು ಕಂಡುಕೊಂಡಿದ್ದಾರೆ. ಈ ಆಹಾರದ ಹೆಚ್ಚುವರಿ ಪ್ರಯೋಜನವೆಂದರೆ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಮತ್ತು ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಹಾಗೂ ಮನೆಮದ್ದು ಆಧರಿಸಿರುತ್ತದೆ.

ಜೀವನಶೈಲಿ ಹಾಗೂ ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ