World Photography Day 2023: ವಿಶ್ವ ಛಾಯಾಗ್ರಹಣ ದಿನದ ಇತಿಹಾಸ, ಮಹತ್ವ ಏನು? ಫೋಟೋಗ್ರಾಫಿಯ ಈ ವಿಚಾರಗಳು ಗೊತ್ತಾ?

ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವಾಗಿ ಆಚರಿಸಲಾಗುತ್ತದೆ. ಛಾಯಾಗ್ರಹಣ ಒಂದೇ ದಿನದಲ್ಲಿ ಅನ್ವೇಷಣೆಯಾಗದೆ ದಿನದಿಂದ ದಿನಕ್ಕೆ ತಾನು ಬೆಳೆಯುತ್ತಾ, ಜನರಲ್ಲಿ ಛಾಯಾಚಿತ್ರದ ಅಭಿರುಚಿಯನ್ನೂ ಹೆಚ್ಚಿಸುತ್ತಾ ಬಂದಿದೆ.

World Photography Day 2023: ವಿಶ್ವ ಛಾಯಾಗ್ರಹಣ ದಿನದ ಇತಿಹಾಸ, ಮಹತ್ವ ಏನು? ಫೋಟೋಗ್ರಾಫಿಯ ಈ ವಿಚಾರಗಳು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 19, 2023 | 6:47 PM

ಫೋಟೋ ಎಂದಾಗ ಒಂದು ಬಾರಿ ಮುಖದಲ್ಲಿ ನಗು ಕಾಣುವುದು ಸಹಜ, ಕ್ಯಾಮೆರಾ ಕಂಡ ತಕ್ಷಣ ಮುಖದಲ್ಲೂ ನಗು ತಾನಾಗೆ ಮೂಡಿ ಬಿಡತ್ತೆ. ಜೀವನದ ನಗು, ಸಂತೋಷ, ನೆನಪು, ಇಷ್ಟವಾದ ಘಟನೆ ಹೀಗೆ ಎಲ್ಲವೂ ನೆನಪಿನಲ್ಲಿ ಉಳಿಯೋ ಹಾಗೆ ಕ್ಯಾಮೆರಾದಲ್ಲೂ ಕ್ಯಾಪ್ಚರ್ ಆಗಬೇಕು ಎಂದು ಬಯಸುತ್ತೇವೆ. ದೊಡ್ಡ ಕ್ಯಾಮೆರಾದಿಂದ ಹಿಡಿದು, ಚಿಕ್ಕ ಸೆಲ್ಫಿ ಕ್ಯಾಮೆರಾದವೆರೆಗೂ ಎಲ್ಲವೂ ಅಚ್ಚುಮೆಚ್ಚು. ನಮ್ಮ ಜೀವನದಲ್ಲಿ ಇಷ್ಟೆಲ್ಲಾ ಪಾತ್ರವಹಿಸೋ ಕ್ಯಾಮೆರಾಕ್ಕೆ ಧನ್ಯವಾದ ಹೇಳಬೇಕಲ್ವಾ. ಹಾಗಿದ್ರೆ ಇಂದೇ ಆ ಕೆಲಸ ಮಾಡಿ. ಯಾಕಂದರೆ ಇಂದು ವರ್ಲ್ಡ್ ಫೋಟೋಗ್ರಾಫಿ ಡೇ (World Photography Day). ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವಾಗಿ ಆಚರಿಸಲಾಗುತ್ತದೆ. ಛಾಯಾಗ್ರಹಣ ಒಂದೇ ದಿನದಲ್ಲಿ ಅನ್ವೇಷಣೆಯಾಗದೆ ದಿನದಿಂದ ದಿನಕ್ಕೆ ತಾನು ಬೆಳೆಯುತ್ತಾ, ಜನರಲ್ಲಿ ಛಾಯಾಚಿತ್ರದ ಅಭಿರುಚಿಯನ್ನೂ ಹೆಚ್ಚಿಸುತ್ತಾ ಬಂದಿದೆ.

ಜೋಸೆಫ್ ನಿಕೋರೊ ನಿಕಪ್ಪೆಯಿಂದ ಪ್ರಾರಂಭವಾದ ಫೋಟೋಗ್ರಾಫಿ ಇಂದಿನ ಸೆಲ್ಪಿಯುಗದವರೆಗೂ ತನ್ನ ವಿಸ್ತರಣೆಯನ್ನು ಬೆಳೆಸಿಕೊಂಡಿದೆ. ಫೋಟೋಗ್ರಾಫಿ ಕಾಲಕ್ಕೆ ತಕ್ಕಂತೆ ಬೆಳವಣಿಗೆ ಹೊಂದುತ್ತಿದೆ. ಡಾಗೋರೆ ಹಾಗೂ ತಂಡದವರು ಜನವರಿ 9 ರಂದು ಕಂಡುಹಿಡಿದಿದ್ದರು, ಆದರೆ ಆಗಸ್ಟ್ 19 ರಂದು ಈ ತಂತ್ರಜ್ಞಾನವು ಪೇಟೆಂಟ್ ಪಡೆದುಕೊಂಡಿದ್ದರು.

ವಿಶ್ವ ಛಾಯಾಗ್ರಣ ದಿನದ ಇತಿಹಾಸ

ವಿಶ್ವ ಛಾಯಾಗ್ರಣ ದಿನವನ್ನು ಆಗಸ್ಟ್ 19, 2010ರಂದು ಆಚರಿಸಲಾಯಿತು. ಅಂದು ಸರಾಸರಿ ನೂರು ದೇಶಗಳ 270 ಛಾಯಾಗ್ರಾಹಕರು ಆನ್ಲೈನ್ ಛಾಯಾಚಿತ್ರ ಪ್ರದರ್ಶನ ಮಾಡುವ ಮೂಲಕ ಮೊದಲ ವರ್ಷದ ಛಾಯಾಚಿತ್ರ ದಿನವನ್ನು ಯಶಸ್ವಿಯಾಗಿಸಿದ್ದರು. ಅಂದಿನಿಂದ ಇಂದಿನವರೆಗೂ ಆಗಸ್ಟ್ 19ರಂದು ವಿಶ್ವ ಛಾಯಗ್ರಹಣ ದಿನವನ್ನಾಗಿ ಆಚರಿಸಲಾಗುತ್ತಿದೆ.

ತಂತ್ರಜ್ಞಾನ ಮತ್ತು ಕಲೆಯೊಂದಿಗೆ ಬೆಳೆದ ಛಾಯಗ್ರಹಣ

ಫೋಟೋಗ್ರಾಫಿಯು ತಂತ್ರಜ್ಞಾನದ ಪರಿಣಿತಿ ಹಾಗೂ ಕಲಾವಿದನ ದೃಷ್ಟಿ ಎರಡನ್ನೂ ಅಡಕವಾಗಿದೆ. ಫೋಟೋಗ್ರಾಫಿ ಕ್ಷೇತ್ರವು ದಿನೇ ದಿನೇ ಬೆಳೆಯುತ್ತಿರುವ ಹೊಸ ತಂತ್ರಜ್ಞಾನಕ್ಕೆ ತನ್ನುನ್ನು ತಾನು ತೆರೆದಿಕೊಂಡಿದೆ. ಆದ್ದರಿಂದ ಬದಲಾಗುತ್ತಿರುವ ತಂತ್ರಜ್ಷಾನದ ಬಗ್ಗೆ ಹಾಗೂ ಅದರ ಉಪಯೋಗದ ಕುರಿತು ಅರಿವಿದ್ದಾಗ ಮಾತ್ರ ಸರಿಯಾದ ರೀತಿಯಲ್ಲಿ ಕ್ಯಾಮೆರಾದ ಉಪಯೋಗ ಸಾಧ್ಯ. ಯಾವ ಆ್ಯಂಗಲ್ ಯಾವ ರೀತಿ ರಿಸಲ್ಟ್ ನೀಡುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ಒಳ್ಳೆಯ ಫೊಟೋ ನಮ್ಮದಾಗುತ್ತದೆ. ಕಲಾವಿದನ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಫೋಟೋಗ್ರಾಫಿಯ ಆಲೋಚನೆಗಳು ಮತ್ತು ಅದರ ತಂತ್ರಗಳ ಅರಿವು ಮೂಡುತ್ತದೆ. ಈ ಕಾರಣದಿಂದ ಛಾಯಗ್ರಹಣ ತಂತ್ರಜ್ಞಾನ ಮತ್ತು ಕಲೆಯೊಂದಿಗೆ ಬೆಸೆದುಕೊಂಡಿದೆ.

ಇದನ್ನೂ ಓದಿ:  ವಿಶ್ವ ಸೊಳ್ಳೆ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಹಿಂದಿನ ಇತಿಹಾಸ ಇಲ್ಲಿದೆ

ಈ ವರ್ಷದ ವಿಷಯ ಏನು?

ಪ್ರತಿ ವರ್ಷವೂ ವರ್ಲ್ಡ್ ಫೋಟೋಗ್ರಾಫಿ ಡೇ ಹೊಸ ಥೀಮ್ ನೊಂದಿಗೆ ಜಗತ್ತಿನ ಮುಂದೆ ಬರುತ್ತದೆ. ಈ ವರ್ಷ ಲ್ಯಾಂಡ್ ಸ್ಕೇಪ್ ಫೊಟೋಗ್ರಾಫಿಯನ್ನು ವಿಷಯವನ್ನಾಗಿಟ್ಟುಕೊಂಡಿದೆ. ಕಳೆದ ವರ್ಷ ‘ಪ್ಯಾಂಡೆಮಿಕ್ ಲಾಕ್ಡೌನ್ ಥ್ರೋ ಲೆನ್ಸ್’ ಎಂಬ ವಿಷಯದ ಕುರಿತಾಗಿತ್ತು.

ಏನಿದು ಲ್ಯಾಂಡ್ ಸ್ಕೇಪ್ ಫೋಟೊಗ್ರಾಫಿ?

ಪ್ರಕೃತಿ ವಿಭಿನ್ನ ಆಯಾಮಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದೇ ಇದರ ಪ್ರಮುಖ ಉದ್ದೇಶ. ನೈಸರ್ಗಿಕ ವಿಸ್ಮಯಗಳ ಚಿತ್ರಣವನ್ನು ನಾವಿಲ್ಲಿ ನೋಡಬಹುದು. ಸೂಕ್ಷ್ಮವಾಗಿ ನೈಸರ್ಗಿಕ ಲಕ್ಷಣವನ್ನು ಸೆರೆಹಿಡಿಯುವುದು ಇದರ ಭಾಗವಾಗಿದೆ.

ಫೋಟೋಗ್ರಾಫಿಯ ಈ ವಿಷಯಗಳ ಬಗ್ಗೆ ನಿಮಗೆ ಗೊತ್ತಾ?

1.ಜಗತ್ತಿನಲ್ಲಿ ಸೆಕೆಂಡ್​ಗೆ ಸುಮಾರು 54,400 ಫೋಟೋಗಳನ್ನು ತೆಗೆಯಲಾಗುತ್ತದೆ.

2.ಪ್ರತಿನಿತ್ಯ 95 ಮಿಲಿಯನ್ ಫೊಟೊಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳಲಾಗುತ್ತವೆ.

3.ಜಗತ್ತಿನ ಮೊದಲ ಫೋಟೊವನ್ನು ಆಕಸ್ಮಿಕವಾಗಿ ತೆಗೆಯಲಾಗಿತ್ತು.

4. ಮೊದಲ ಫೋಟೋ ಪ್ರತಿಗಾಗಿ 8 ಗಂಟೆ ಕಾದಿದ್ದರು.

ನೀವೂ ಫೋಟೋ ಪ್ರಿಯರಾಗಿದ್ದರೆ ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ಲ್ಯಾಂಡ್ ಸ್ಕೇಪ್ ಫೋಟೋ ತೆಗೆಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:46 pm, Sat, 19 August 23