AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monkeypox: ಮಂಕಿಪಾಕ್ಸ್​ಗೂ ಮಂಗಗಳಿಗೂ ಸಂಬಂಧವಿದೆಯೇ? ವೈರಸ್​ಗೆ ಮಂಕಿಪಾಕ್ಸ್ ಎಂದು ಹೆಸರು ಬರಲು ಕಾರಣವೇನು?

ಕೊರೊನಾದ ಬಳಿಕ ಇಡೀ ಪ್ರಪಂಚವನ್ನೇ ಮತ್ತೊಮ್ಮೆ ಬೆಚ್ಚಿಬೀಳುವಂತೆ ಮಾಡಿದ್ದು ಮಂಕಿಪಾಕ್ಸ್, ಭಾರತದಲ್ಲಿ ಇದುವರೆಗೆ 4 ಪ್ರಕರಣಗಳು ದೃಢಪಟ್ಟಿದ್ದು, ಸುಮಾರು 72 ದೇಶಗಳಲ್ಲಿ 14,533 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ.

Monkeypox: ಮಂಕಿಪಾಕ್ಸ್​ಗೂ ಮಂಗಗಳಿಗೂ ಸಂಬಂಧವಿದೆಯೇ? ವೈರಸ್​ಗೆ ಮಂಕಿಪಾಕ್ಸ್ ಎಂದು ಹೆಸರು ಬರಲು ಕಾರಣವೇನು?
Monkeypox
TV9 Web
| Edited By: |

Updated on:Jul 25, 2022 | 6:23 PM

Share

ಕೊರೊನಾದ ಬಳಿಕ ಇಡೀ ಪ್ರಪಂಚವನ್ನೇ ಮತ್ತೊಮ್ಮೆ ಬೆಚ್ಚಿಬೀಳುವಂತೆ ಮಾಡಿದ್ದು ಮಂಕಿಪಾಕ್ಸ್, ಭಾರತದಲ್ಲಿ ಇದುವರೆಗೆ 4 ಪ್ರಕರಣಗಳು ದೃಢಪಟ್ಟಿದ್ದು, ಸುಮಾರು 72 ದೇಶಗಳಲ್ಲಿ 14,533 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ. 5 ಮಂದಿ ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಮಂಕಿಪಾಕ್ಸ್ ವೈರಸ್ ಶರೀರದ ಪರಸ್ಪರ ಸಂಪರ್ಕದಿಂದ ಹರಡುತ್ತದೆ, ಇಲಿ, ಹೆಗ್ಗಣ, ಮಂಗ ಮುಂತಾದ ಪ್ರಾಣಿಗಳು ಈ ವೈರಸ್ ವಾಹಕಗಳಾಗಿವೆ. ಮಂಕಿಪಾಕ್ಸ್ ಕಾಯಿಲೆಯಿಂದ ಬಳಲುವ ಪ್ರಾಣಿಗಳ ಮೃತದೇಹದಿಂದಲೂ ವೈರಸ್ ಹರಡಬಲ್ಲದು. ಈ ಪ್ರಾಣಿಗಳ ಜತೆಗೆ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಮಂಕಿಪಾಕ್ಸ್​ ಅನ್ನು ತಮ್ಮ ಸಂಪರ್ಕಕ್ಕೆ ಬರುವ ಇತರರಿಗೆ ಹರಡುತ್ತಾರೆ.

ಮಂಕಿಪಾಕ್ಸ್ ಎಂದು ಹೆಸರು ಬರಲು ಕಾರಣವೇನು? ಮನುಷ್ಯರ ಹೊರತಾಗಿ, ಕೋತಿಗಳು ಸಹ ಮಾರಣಾಂತಿಕ ವೈರಸ್‌ಗೆ ತುತ್ತಾಗುತ್ತಿದ್ದವು ಹಾಗಾಗಿ ಅದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಯಿತು.

1958ರಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು, ಸಂಶೋಧನೆಗಾಗಿ ಇರಿಸಿಕೊಂಡಿದ್ದ ಎರಡು ಮಂಗಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಮೊದಲು ಮಂಗಳಗಳಲ್ಲಿ ಕಾಣಿಸಿಕೊಂಡಿರುವ ಕಾಯಿಲೆಯಾದ್ದರಿಂದ ಮಂಕಿಪಾಕ್ಸ್ ಎಂದು ಕರೆಯಲಾಯಿತು.

“ಮಂಕಿಪಾಕ್ಸ್” ಎಂದು ಹೆಸರಿಡಲಾಗಿದ್ದರೂ, ರೋಗದ ಮೂಲ ತಿಳಿದಿಲ್ಲ. ಮನುಷ್ಯರಲ್ಲದ ಜೀವಿಗಳಿಂದಲೂ ಕೂಡ ಸೋಂಕು ತಗುಲಬಹುದು ಎಂದು ಆಫ್ರಿಕಾದಲ್ಲಿ ನಡೆದ ಸಂಶೋಧನೆ ತಿಳಿಸಿತ್ತು. 1970 ರಲ್ಲಿ ಮಾನವರಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಯಿತು. 2022 ರ ಮೊದಲು ಹಲವು ಮಧ್ಯ ಮತ್ತು ಪಶ್ಚಿಮ ಆಫ್ರಿಕನ್ ದೇಶಗಳ ಜನರಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು.

ಮಂಕಿಪಾಕ್ಸ್: ಲಕ್ಷಣಗಳು, ಚಿಕಿತ್ಸೆ 2-4 ವಾರಗಳ ಕಾಲ ಉಳಿಯುವ ವೈರಸ್‌ನ ಸಾಮಾನ್ಯ ಲಕ್ಷಣಗಳು:- ತಲೆನೋವು ಬೆನ್ನು ನೋವು ಜ್ವರ ಚರ್ಮದ ಗಾಯ ಊದಿಕೊಂಡ ಗ್ರಂಥಿಗಳು ಆಯಾಸ ಚಿಕಿತ್ಸೆ/ತಡೆಗಟ್ಟುವಿಕೆ ಸ್ಮಾಲ್​ಪಾಕ್ಸ್​ಗೆ ನೀಡುವ ಚುಚ್ಚುಮದ್ದನ್ನು ನೀಡಲಾಗುತ್ತಿದೆ

ಮುಂಜಾಗ್ರತಾ ಕ್ರಮಗಳು -ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ. -ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ. -ಸೋಂಕಿತ ಜನರೊಂದಿಗೆ ನಿಕಟ ಸಂಪರ್ಕ ಬೇಡ , ಚರ್ಮದಿಂದ ಚರ್ಮದ ಸಂಪರ್ಕವನ್ನು ತಪ್ಪಿಸಿ -ಸೋಂಕಿತ ವ್ಯಕ್ತಿಯ ದದ್ದು ಅಥವಾ ಹುರುಪುಗಳನ್ನು ಮುಟ್ಟಬೇಡಿ. -ಸೋಂಕಿತ ವ್ಯಕ್ತಿಯೊಂದಿಗೆ ಚುಂಬಿಸಬೇಡಿ, ತಬ್ಬಿಕೊಳ್ಳಬೇಡಿ, ಮುದ್ದಾಡಬೇಡಿ ಅಥವಾ ದೈಹಿಕ ಸಂಬಂಧವನ್ನು ಹೊಂದಿರಬೇಡಿ. -ಸೋಂಕಿತ ವ್ಯಕ್ತಿಯೊಂದಿಗೆ ಆಹಾರ, ಪಾತ್ರೆಗಳು ಅಥವಾ ಕಪ್‌ಗಳನ್ನು ಹಂಚಿಕೊಳ್ಳಬೇಡಿ. -ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿಯ ಹಾಸಿಗೆ, ಟವೆಲ್ ಅಥವಾ ಬಟ್ಟೆಗಳನ್ನು ನಿಭಾಯಿಸಬೇಡಿ ಅಥವಾ ಮುಟ್ಟಬೇಡಿ.

Published On - 6:12 pm, Mon, 25 July 22

ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್​ಗೆ ನೈಟ್ ರೈಡರ್ಸ್​
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಡಿಕೆಶಿ​ಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಅಮೆರಿಕದಲ್ಲಿ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ, ಪೈಲಟ್ ಸಾವು
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ
ಮತ್ತೆ ಅಶ್ವಿನಿ-ಗಿಲ್ಲಿ ಮಧ್ಯೆ ದೊಡ್ಡ ಫೈಟ್; ಕೊಟ್ಟ ಶಿಕ್ಷೆ ಘನಘೋರ