World Civil Defense Day: ಸಿವಿಲ್ ಸಿಬ್ಬಂದಿಗಳ ಮಹತ್ವವನ್ನು ಸಾರುವ ದಿನವೇ ಈ ‘ವಿಶ್ವ ನಾಗರಿಕ ರಕ್ಷಣಾ ದಿನ’

ಪ್ರತಿ ವರ್ಷ ಮಾರ್ಚ್ 1 ರಂದು, ಪ್ರಪಂಚದಾದ್ಯಂತ ಜನರು ಜಾಗತಿಕ ಸಿವಿಲ್‌ ಡಿಫೆನ್ಸ್‌ ದಿನಾಚರಣೆ ಅಥವಾ ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ನಾಗರಿಕ ರಕ್ಷಣಾ ಪಡೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆಯಾದರೂ, ಈ ವಿಶ್ವ ನಾಗರಿಕ ರಕ್ಷಣಾ ದಿನದ ಹಿಂದಿನ ಉದ್ದೇಶ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.

World Civil Defense Day: ಸಿವಿಲ್ ಸಿಬ್ಬಂದಿಗಳ ಮಹತ್ವವನ್ನು ಸಾರುವ ದಿನವೇ ಈ 'ವಿಶ್ವ ನಾಗರಿಕ ರಕ್ಷಣಾ ದಿನ'
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 29, 2024 | 2:46 PM

ಕೆಲವೊಮ್ಮೆ ಆಕಸ್ಮಿಕವಾಗಿ ಅವಘಡಗಳು ನಡೆಯುತ್ತವೆ. ಈ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಎಷ್ಟು ಮುಖ್ಯವೋ, ಬೇರೆಯವರನ್ನು ರಕ್ಷಿಸಿ ಅವರ ಜೀವವನ್ನು ಉಳಿಸುವುದು ಅಷ್ಟೇ ಮುಖ್ಯವಾಗುತ್ತದೆ. ಪ್ರಪಂಚದಲ್ಲಿ ಆಕಸ್ಮಿಕವಾಗಿ ಸಂಭವಿಸುವ ಪ್ರಕೃತಿ ವಿಕೋಪ, ಅಗ್ನಿ ದುರಂತ, ರಸ್ತೆ ಅಪಘಾತ, ಕಟ್ಟಡ ಕುಸಿತ ಹೀಗೆ ಅನಾಹುತಗಳಾದಾಗ ಜನರನ್ನು ರಕ್ಷಿಸುವಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳು ತಮ್ಮ ಜೀವವನ್ನೇ ಒತ್ತೆ ಇಡುತ್ತಾರೆ. ಹೀಗಾಗಿ ಜನಸಾಮಾನ್ಯರ ಜೀವ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದವರನ್ನು ಈ ದಿನದಂದು ನೆನಪಿಸಿಕೊಳ್ಳಲಾಗುತ್ತದೆ. ಸಿವಿಲ್ ಸಿಬ್ಬಂದಿಗಳ ಮಹತ್ವವನ್ನು ತಿಳಿಸುವ ಸಲುವಾಗಿ ಹಾಗೂ ನಾಗರಿಕ ರಕ್ಷಣೆಯ ಮಹತ್ವದ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಶ್ವದಾದಂತ್ಯ ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ನಾಗರಿಕ ರಕ್ಷಣಾ ದಿನದ ಇತಿಹಾಸ

1931 ರಲ್ಲಿ ಸರ್ಜನ್ ಜನರಲ್ ಜಾರ್ಜ್ ಸೇಂಟ್ ಪಾಲ್ ಅವರು ಜಿನೀವಾ ವಲಯಗಳ ಸಂಘವನ್ನು ಸ್ಥಾಪಿಸಿದರು. ಆದರೆ ಈ ಸಂಘವು ಐಎಸ್‌ಡಿಒ (ಸಿವಿಲ್ ಡಿಫೆನ್ಸ್ ಅನ್ನು ನಾಗರಿಕ ರಕ್ಷಣೆ) ಆಗಿ ಬದಲಾಯಿತು. ಇತ್ತ ಐಎಸ್‌ಡಿಒ ದ ಪ್ರಸ್ತುತ ಸಂವಿಧಾನವನ್ನು 1972 ರಲ್ಲಿ ಸಂಸ್ಥೆಯ ಸದಸ್ಯ ರಾಜ್ಯಗಳಿಂದ ಅನುಮೋದನೆಯು ಸಿಕ್ಕಿತು. ವಿಶ್ವ ನಾಗರಿಕ ರಕ್ಷಣೆ ಪಡೆ ದಿನವನ್ನು 1990 ರಲ್ಲಿ ಇಂಟರ್‌ನ್ಯಾಷನಲ್ ಸಿವಿಲ್ ಡಿಫೆನ್ಸ್ ಆರ್ಗನೈಸೇಶನ್ ಜಾಗತಿಕ ರಜಾದಿನವೆಂದು ಘೋಷಣೆ ಮಾಡಿತ್ತು. ಆದರೆ ವಿಶ್ವ ನಾಗರಿಕ ಪಡೆ ದಿನವನ್ನು ಅಂತರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ ಆರಂಭಿಸಿದ್ದು, ಹೀಗಾಗಿ ಪ್ರತಿ ವರ್ಷವೂ ಮಾರ್ಚ್ 1 ರಂದು ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಣೆ ಮಾಡಲಾಯಿತು.

ಇದನ್ನೂ ಓದಿ: ಮಾರ್ಚ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳ ಮಾಹಿತಿ ಇಲ್ಲಿದೆ

ವಿಶ್ವ ನಾಗರಿಕ ರಕ್ಷಣಾ ದಿನದ ಮಹತ್ವ

ನೈಸರ್ಗಿಕ ವಿಕೋಪಗಳಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಾಗರಿಕರಿಗೆ ಕಲಿಸುವುದು. ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆಯಲ್ಲಿ ಸೇವೆಗೈದ ಸಿಬ್ಬಂದಿಗಳ ಸಾಧನೆಗಳನ್ನು ಗೌರವಿಸುವ ದಿನವಾಗಿದೆ. ಈ ದಿನವು ಅಪಘಾತಗಳು, ವಿಪತ್ತುಗಳ ಘಟಿಸಿದಾಗ ತಮ್ಮ ಆತ್ಮರಕ್ಷಣೆ ಮತ್ತು ವಿಪತ್ತು ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಪತ್ತುಗಳು ಸಂಭಾವಿಸಿದಾಗ ಯಾವ ರೀತಿಯಲ್ಲಿ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆಯುತ್ತವೆ. ಮಾಹಿತಿ ಕಾರ್ಯಗಾರಗಳು ಹಾಗೂ ರಕ್ಷಣಾ ಸಿಬ್ಬಂದಿಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ