ಉತ್ತಮ ಆರೋಗ್ಯಕ್ಕಾಗಿ ಚಳಿಗಾಲದಲ್ಲಿ ರನ್ನಿಂಗ್ ವೇಳೆ ಈ ರೀತಿ ಮಾಡಿ

ಚಳಿಗಾಲದಲ್ಲಿ ರನ್ನಿಂಗ್ ಮಾಡುವುದಾದರೆ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಏಕೆಂದರೆ ಶೀತ ಹವಾಮಾನದಿಂದಾಗಿ ನಿಮ್ಮ ಬಾಯಾರಿಕೆಯನ್ನು ನಿಗ್ರಹಿಸಬಹುದು. ಸಾಕಷ್ಟು ಫೈಬರ್ ಮತ್ತು ನೀರಿನ ಸಮಸ್ಯೆ ಎದುರಾಗಬಾರದು ಎಂದರೆ ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು, ತರಕಾರಿಗಳನ್ನು ಸೇವಿಸಿ.

ಉತ್ತಮ ಆರೋಗ್ಯಕ್ಕಾಗಿ ಚಳಿಗಾಲದಲ್ಲಿ ರನ್ನಿಂಗ್ ವೇಳೆ ಈ ರೀತಿ ಮಾಡಿ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on:Jan 01, 2024 | 1:39 PM

ಶೀತದ ಅಲೆಯು ಹೆಚ್ಚಾಗಿದ್ದು, ಉತ್ತರ ಭಾರತದಲ್ಲಿ ಜನರು ಮನೆಯಿಂದ ಹೊರಗೆ ಬರಲು ಹಿಂಜರಿಯುವಂತಾಗಿದೆ. ಈ ಚಳಿಗಾಲದಲ್ಲಿ ವ್ಯಾಯಾಮ ಮತ್ತಿತರ ದೈಹಿಕ ಚಟುವಟಿಕೆಗಳನ್ನು ಮಾಡಲು ಸೋಮಾರಿತನ ಉಂಟಾಗುತ್ತದೆ. ಚಳಿಗಾಲದಲ್ಲಿ ರನ್ನಿಂಗ್ ಮಾಡುವುದರಿಂದ ದೇಹಕ್ಕೆ ಹೆಚ್ಚು ಚಳಿಯಾಗುವುದಿಲ್ಲ. ಆದರೆ, ಚಳಿಗಾಲದಲ್ಲಿ ರನ್ನಿಂಗ್ ಮಾಡುವಾಗ ನೀವು ಕೆಲವು ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಂಡು ರನ್ನಿಂಗ್ ಮಾಡಬೇಕು. ಈ ಸಮಯದಲ್ಲಿ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದರಿಂದ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಮತ್ತು ಚಳಿಗಾಲದಲ್ಲಿಯೂ ಸಕ್ರಿಯವಾಗಿರಲು ಸಹಾಯವಾಗುತ್ತದೆ.

ನೀವು ರನ್ನಿಂಗ್ ಮಾಡುವುದಾದರೆ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಏಕೆಂದರೆ ಶೀತ ಹವಾಮಾನದಿಂದಾಗಿ ನಿಮ್ಮ ಬಾಯಾರಿಕೆಯನ್ನು ನಿಗ್ರಹಿಸಬಹುದು. ಸಾಕಷ್ಟು ಫೈಬರ್ ಮತ್ತು ನೀರಿನ ಸಮಸ್ಯೆ ಎದುರಾಗಬಾರದು ಎಂದರೆ ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ. ರನ್ನಿಂಗ್ ಮಾಡುವಾಗ ನೋವು, ಮರಗಟ್ಟುವಿಕೆ ಅಥವಾ ಅಸ್ವಸ್ಥತೆಯ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ವ್ಯಾಯಾಮವನ್ನು ತಕ್ಷಣವೇ ನಿಲ್ಲಿಸಬೇಕು. ಓಟ ಅಥವಾ ಯಾವುದೇ ತೀವ್ರವಾದ ವ್ಯಾಯಾಮದ ಮೊದಲು ನಿಮ್ಮ ಫಿಟ್‌ನೆಸ್ ತಜ್ಞರ ಸಲಹೆಯನ್ನು ಪಡೆಯಲು ಸಹ ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ: ತೂಕ ಇಳಿಸಲು ಮನೆಯೊಳಗೇ ಮಾಡಬಹುದಾದ ವ್ಯಾಯಾಮಗಳಿವು

ಚಳಿಗಾಲದ ಚಳಿ ಶುರುವಾಗುತ್ತಿದ್ದಂತೆ, ಅನೇಕ ಫಿಟ್‌ನೆಸ್ ಉತ್ಸಾಹಿಗಳು ಓಟ ಮತ್ತು ತೀವ್ರವಾದ ವ್ಯಾಯಾಮಗಳನ್ನು ಒಳಗೊಂಡಂತೆ ತಮ್ಮ ಹೊರಾಂಗಣ ವ್ಯಾಯಾಮವನ್ನು ಮುಂದುವರಿಸುತ್ತಾರೆ. ಆದರೆ, ಚಳಿಯ ತಿಂಗಳುಗಳಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಅನುಭವವನ್ನು ಹೊಂದಲು ಕೆಲವು ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

ಸರಿಯಾಗಿ ಬೆಚ್ಚಗಿರಿ:

ಓಟ ಅಥವಾ ತೀವ್ರವಾದ ವ್ಯಾಯಾಮದ ಅವಧಿಯನ್ನು ಪ್ರಾರಂಭಿಸುವ ಮೊದಲು ವಾರ್ಮ್ ಅಪ್ ಆಗಲು ಹೆಚ್ಚುವರಿ ಸಮಯವನ್ನು ವಿನಿಯೋಗಿಸುವುದು ಅತ್ಯಗತ್ಯ. ಇಲ್ಲವಾದರೆ ಶೀತದಿಂದ ಸ್ನಾಯುಗಳು ಬಿಗಿಯಾಗಲು ಕಾರಣವಾಗಬಹುದು. ಇದು ಗಾಯಗಳ ಅಪಾಯವನ್ನು ಹೆಚ್ಚಿಸುತ್ತದೆ.

ಲೇಯರಿಂಗ್ ಮುಖ್ಯ:

ಶೀತ ವಾತಾವರಣದಲ್ಲಿ ವ್ಯಾಯಾಮ ಮಾಡುವಾಗ ಸೂಕ್ತವಾದ ಡ್ರೆಸ್ಸಿಂಗ್ ಮುಖ್ಯವಾಗಿದೆ. ಅಧಿಕ ಬಿಸಿಯಾಗದೆ ಉಷ್ಣತೆಯನ್ನು ಉಳಿಸಿಕೊಳ್ಳಲು ಲೇಯರ್ಡ್ ಬಟ್ಟೆಗಳನ್ನು ಧರಿಸಿ. ನಿಮ್ಮ ಚರ್ಮದಿಂದ ಬೆವರುವಿಕೆಯನ್ನು ದೂರವಿರಿಸಲು ತೇವಾಂಶ-ವಿಕಿಂಗ್ ಬೇಸ್ ಲೇಯರ್‌ ಧರಿಸಿ. ಚಳಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ಗಾಳಿ ನಿರೋಧಕ ಮತ್ತು ಜಲನಿರೋಧಕ ಬಟ್ಟೆಗಳನ್ನು ಹಾಕಿಕೊಳ್ಳಿ.

ಗ್ಲೌಸ್ ಧರಿಸಿ:

ಚಳಿಯಿಂದ ನಿಮ್ಮ ಕೈಗಳನ್ನು ರಕ್ಷಿಸಲು ಗ್ಲೌಸ್​ಗಳನ್ನು ಧರಿಸಿ. ನಿಮ್ಮ ಪಾದಗಳನ್ನು ಬೆಚ್ಚಗಿಡಲು ಗುಣಮಟ್ಟದ ಥರ್ಮಲ್ ಸಾಕ್ಸ್ ಮತ್ತು ಶೂಗಳನ್ನು ಹಾಕಿಕೊಳ್ಳಿ. ನಿಮ್ಮ ಕಿವಿಗಳನ್ನು ಮುಚ್ಚಲು ಟೋಪಿ ಅಥವಾ ಹೆಡ್​ಬ್ಯಾಂಡ್ ಧರಿಸಲು ಮರೆಯಬೇಡಿ.

ಇದನ್ನೂ ಓದಿ: ನಿಮ್ಮ ಕಾಲು ಹಾಗೂ ಪಾದದಲ್ಲಿ ಇಂತಹ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯಬೇಡ

ಹೈಡ್ರೇಟೆಡ್ ಆಗಿರಿ:

ತಂಪಾದ ತಾಪಮಾನದ ಹೊರತಾಗಿಯೂ ನಿಮ್ಮ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ತಂಪಾದ ಗಾಳಿಯಲ್ಲಿ ಉಸಿರಾಡುವುದರಿಂದ ನಿರ್ಜಲೀಕರಣ ಉಂಟಾಗಬಹುದು. ಆದ್ದರಿಂದ ನಿಮ್ಮ ಓಟದ ಮೊದಲು, ರನ್ನಿಂಗ್​ನ ಸಮಯದಲ್ಲಿ ಮತ್ತು ಓಟದ ನಂತರ ನೀರು ಕುಡಿಯಲು ಮರೆಯದಿರಿ.

ಸರಿಯಾದ ಚಪ್ಪಲಿಗಳನ್ನು ಆರಿಸಿ:

ಚಳಿಗಾಲದ ಸಮಸ್ಯೆಗಳು ಹಿಮ, ಮಂಜುಗಡ್ಡೆ ಅಥವಾ ಆರ್ದ್ರ ಮೇಲ್ಮೈಗಳನ್ನು ಉಂಟಾಗಬಹುದು. ಚಳಿಗಾಲದಲ್ಲಿ ಉತ್ತಮ ರೀತಿಯ ಚಪ್ಪಲಿ ಅಥವಾ ಶೂಗಳನ್ನು ಧರಿಸಿ.

ನಿಮ್ಮ ಓಟದ ನಂತರ ಕಾಲಿನ ಮತ್ತು ದೇಹದ ಬಿಗಿತ ಮತ್ತು ಗಾಯಗಳನ್ನು ತಡೆಗಟ್ಟಲು ವ್ಯಾಯಾಮದ ನಂತರದ ಚೇತರಿಕೆಗೆ ಆದ್ಯತೆ ನೀಡಿ. ಈ ಅಗತ್ಯ ನಿಯಮಗಳನ್ನು ಅನುಸರಿಸುವ ಮೂಲಕ, ಚಳಿಗಾಲದ ತಿಂಗಳುಗಳಲ್ಲಿ ಜನರು ತಮ್ಮ ಓಟವನ್ನು ಮತ್ತು ವ್ಯಾಯಾಮವನ್ನು ಸುರಕ್ಷಿತವಾಗಿ ಮುಂದುವರಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:38 pm, Mon, 1 January 24