Winter Solstice 2024: ಡಿಸೆಂಬರ್ 21 ಈ ವರ್ಷದ ಕಡಿಮೆ ಹಗಲು, ದೀರ್ಘ ರಾತ್ರಿಯುಳ್ಳ ದಿನ ಏಕೆ? ಈ ದಿನದ ವಿಶೇಷತೆಯೇನು? ಇಲ್ಲಿದೆ ಮಾಹಿತಿ
ಡಿಸೆಂಬರ್ 21 ಇಂದು ಅತಿ ಕಡಿಮೆ ಹಗಲನ್ನು ಹೊಂದಿದ ದಿನವಾಗಿದೆ. ಈ ದಿನ ಅರ್ಧ ಜಗತ್ತು ಅತಿ ಕಡಿಮೆ ಹಗಲು ಮತ್ತು ಅತಿ ಧೀರ್ಘ ರಾತ್ರಿಗೆ ಸಾಕ್ಷಿಯಾಗಲಿದೆ. ಹೌದು, ವರ್ಷದಲ್ಲಿ ಎರಡು ಬಾರಿ ಅಂದರೆ ಜೂನ್ ಹಾಗೂ ಡಿಸೆಂಬರ್ ನಲ್ಲಿ ಅಯನ ಸಂಕ್ರಾಂತಿಯೂ ಸಂಭವಿಸುತ್ತದೆ. ಈ ಬಾರಿ ಡಿಸೆಂಬರ್ 21 ರ ಈ ದಿನವನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದು ಕರೆಯುತ್ತೇವೆ. ಹಾಗಾದ್ರೆ ಇದು ನಿಜವಾಗಿ ಏಕೆ ಸಂಭವಿಸುತ್ತದೆ? ಈ ದಿನದ ವಿಶೇಷತೆಯೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಒಂದು ಪೂರ್ಣ ದಿನವಾಗಲು 12 ಗಂಟೆ ಹಗಲು ಹಾಗೂ 12 ಗಂಟೆ ರಾತ್ರಿಯಿರಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಇಂದು ಅತೀ ಕಡಿಮೆ ಹಗಲನ್ನು ಹೊಂದಿದ್ದು, ರಾತ್ರಿ ಮಾತ್ರ ದೀರ್ಘವಾಗಿರುತ್ತದೆ. ಇದನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದು ಕರೆಯುತ್ತೇವೆ. ಭೂಮಿಯ ಒಂದು ಧ್ರುವವು ಸೂರ್ಯನಿಂದ ದೂರದಲ್ಲಿದ್ದಾಗ ಉತ್ತರ ಗೋಳಾರ್ಧದ ಪ್ರದೇಶಗಳಲ್ಲಿ ಕಡಿಮೆ ಹಗಲು ಮತ್ತು ದೀರ್ಘ ರಾತ್ರಿ ಸಂಭವಿಸುತ್ತದೆ. ಪ್ರತಿ ವರ್ಷವು ಡಿಸೆಂಬರ್ 19 ರಿಂದ 23 ರೊಳಗೆ ಈ ವಿಶೇಷ ದಿನವನ್ನು ಕಾಣಬಹುದು. ಆದರೆ ಈ ಬಾರಿ ಡಿಸೆಂಬರ್ 21 ರಂದು (ಇಂದು) ಚಳಿಗಾಲದ ಅಯನ ಸಂಕ್ರಾಂತಿಯೂ ಸಂಭವಿಸುತ್ತಿದೆ. ಉತ್ತರ ಗೋಳಾರ್ಧದಲ್ಲಿ ಚಳಿಗಾಲವು ಅಧಿಕೃತವಾಗಿ ಡಿಸೆಂಬರ್ 21 ರಂದು ಚಳಿಗಾಲದ ಅಯನ ಸಂಕ್ರಾಂತಿ ಸಂಭವಿಸಿದಾಗ ಪ್ರಾರಂಭವಾಗುತ್ತದೆ.
ಅಯನ ಸಂಕ್ರಾಂತಿ ಏಕೆ ಸಂಭವಿಸುತ್ತದೆ?
ಸೂರ್ಯನು ಮಧ್ಯಾಹ್ನದ ವೇಳೆಯಲ್ಲಿ ತನ್ನ ಅತ್ಯುನ್ನತ ಅಥವಾ ಕಡಿಮೆ ಬಿಂದುವನ್ನು ತಲುಪಿದಾಗ ಸೂರ್ಯನ ಸುತ್ತ ಭೂಮಿಯ ಕಕ್ಷೆಯಲ್ಲಿರುವ ಎರಡು ಬಿಂದುಗಳನ್ನು ಅಯನ ಸಂಕ್ರಾಂತಿ ಎನ್ನಲಾಗುತ್ತದೆ. ಇದು ಜೂನ್ ಹಾಗೂ ಡಿಸೆಂಬರ್ ನಲ್ಲಿ ವರ್ಷದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯೂ ದೀರ್ಘವಾದ ದಿನ ಕಡಿಮೆ ಹಗಲನ್ನು ಹೊಂದಿದರೆ, ಡಿಸೆಂಬರ್ ತಿಂಗಳಲ್ಲಿ ಸಂಭವಿಸುವ ಚಳಿಗಾಲದ ಅಯನ ಸಂಕ್ರಾಂತಿಯಂದು ಕಡಿಮೆ ಹಗಲು ದೀರ್ಘ ರಾತ್ರಿಯನ್ನು ಹೊಂದಿರುತ್ತದೆ.
ಇದನ್ನೂ ಓದಿ: ಹೊಸ ವರ್ಷವನ್ನು ವಿದೇಶದಲ್ಲಿ ಆಚರಿಸಲು ಬಯಸುವಿರಾ?; ಬಜೆಟ್ ಸ್ನೇಹಿ ದೇಶಗಳ ಪಟ್ಟಿ ಇಲ್ಲಿದೆ
ಇಂದು ಅತೀ ಕಡಿಮೆ ಹಗಲುಳ್ಳ ದಿನ ಏಕೆ?
ಚಳಿಗಾಲದ ಅಯನ ಸಂಕ್ರಾಂತಿಯೂ ಪ್ರತಿ ವರ್ಷ ಡಿಸೆಂಬರ್ 19 ರಿಂದ 23 ರ ನಡುವೆ ಸಂಭವಿಸುತ್ತದೆ. ಈ ಬಾರಿ ಅದು ಡಿಸೆಂಬರ್ 21 ಅಂದರೆ ಇಂದು ಸಂಭವಿಸಲಿದೆ. ಈ ಚಳಿಗಾಲದ ಅಯನ ಸಂಕ್ರಾಂತಿಯಂದು ಸೂರ್ಯನಿಂದ ಭೂಮಿಗೆ ಇರುವ ಅಂತರವು ಹೆಚ್ಚಾಗಿದ್ದು, ಸೂರ್ಯನು ಬೇಗನೇ ನಿರ್ಗಮಿಸುತ್ತಾನೆ. ಹೀಗಾಗಿ ಚಂದ್ರನ ಬೆಳಕು ಭೂಮಿಯ ಮೇಲೆ ದೀರ್ಘ ಕಾಲ ಇರುವ ಕಾರಣ ರಾತ್ರಿಯೂ ಸುದೀರ್ಘವಾಗಿಯೇ ಇರುತ್ತದೆ. ಈ ದಿನ ಭೂಮಿಯು ತನ್ನ ಧ್ರುವದಲ್ಲಿ 23.4 ಡಿಗ್ರಿಗಳಷ್ಟು ಓರೆಯಾಗಿರುತ್ತದೆ. ಇಂದು ಹಗಲು ಕೇವಲ 8 ಗಂಟೆಗಳ ಕಾಲವಿದ್ದು, ಸರಿಸುಮಾರು 16 ಗಂಟೆಗಳ ಸುದೀರ್ಘ ರಾತ್ರಿಯಾಗಿರುತ್ತದೆ. ಅದಲ್ಲದೇ, ಸೂರ್ಯನ ಪ್ರಕಾಶವು ಭೂಮಿಯನ್ನು ಮೇಲೆ ಕಡಿಮೆ ಮಟ್ಟದಲ್ಲಿ ಸ್ಪರ್ಶಿಸುವ ಕಾರಣ ತಾಪಮಾನದಲ್ಲಿ ಬದಲಾವಣೆಗಳಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ