ನಿಮ್ಮ ಹಾರ್ಮೋನ್​ನಲ್ಲಿ ಏರುಪೇರಾಗಿದೆ ಎಂದು ಗೊತ್ತಾಗೋದು ಹೇಗೆ?

ಹಾರ್ಮೋನ್ ಅಸಮತೋಲನವನ್ನು ಎದುರಿಸುವಲ್ಲಿ ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ಮತ್ತು ನಮ್ಮ ಜೀವನಶೈಲಿಯನ್ನು ಉತ್ತಮವಾಗಿ ಮಾರ್ಪಡಿಸುವುದು ಅತ್ಯಗತ್ಯ ಪಾತ್ರವನ್ನು ವಹಿಸುತ್ತದೆ.

ನಿಮ್ಮ ಹಾರ್ಮೋನ್​ನಲ್ಲಿ ಏರುಪೇರಾಗಿದೆ ಎಂದು ಗೊತ್ತಾಗೋದು ಹೇಗೆ?
ಹಾರ್ಮೋನ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Jan 30, 2024 | 3:19 PM

ನಮ್ಮ ಜೀವನಶೈಲಿಯ ಬದಲಾವಣೆಗಳಿಂದಾಗಿ ವಿವಿಧ ರೋಗಗಳು ಆವರಿಸಿಕೊಳ್ಳುತ್ತವೆ. ನಮ್ಮ ದೇಹದ ಲಯವನ್ನು ನಿಯಂತ್ರಿಸುವ ಹಾರ್ಮೋನ್​ನಲ್ಲಿ ಕೆಲವೊಮ್ಮೆ ಏರುಪೇರು ಉಂಟಾಗುತ್ತದೆ. ನಮ್ಮೊಳಗಿನ ಸಿರ್ಕಾಡಿಯನ್ ರಿದಮ್ ನಮ್ಮ ದೈನಂದಿನ ಸೈಕಲ್ ಅನ್ನು ನಿಯಂತ್ರಿಸುತ್ತದೆ. ಇದು ಸೂರ್ಯನ ಬೆಳಕಿಗೆ ಪ್ರತಿಕ್ರಿಯೆಯಾಗಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ನಿದ್ರೆ ಅಥವಾ ಎಚ್ಚರ ಈ ಲಯದಿಂದ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಹಾರ್ಮೋನುಗಳು ಕೂಡ ಬೆಂಬಲವನ್ನು ನೀಡುತ್ತದೆ. ಹಾಗಾದರೆ, ನಮ್ಮ ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾಗಿದೆ ಎಂದು ತಿಳಿಯುವುದು ಹೇಗೆ? ಹಾರ್ಮೋನ್ ಬದಲಾವಣೆಯಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ?

ಮಗುವಿಗೆ ಸಮಯಕ್ಕೆ ಸರಿಯಾಗಿ ತಿನ್ನಲು ಮತ್ತು ಮಲಗಲು ಸಾಧ್ಯವಾಗದಿದ್ದಾಗ ಅವರ ಬೆಳವಣಿಗೆಯ ಅವಧಿಗೆ ಅನುಗುಣವಾಗಿ ಬೆಳವಣಿಗೆಯ ಹಾರ್ಮೋನ್ ಸ್ರವಿಸುವಿಕೆಯು ದುರ್ಬಲಗೊಳ್ಳುತ್ತದೆ. ಇದು ನಂತರ ಇನ್ಸುಲಿನ್ ತರಹದ ಬೆಳವಣಿಗೆಯ ಅಂಶದ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತದೆ. ಹೈಪರ್​ ಆ್ಯಕ್ಟಿವಿಟಿ, ಕಡಿಮೆ ಏಕಾಗ್ರತೆ ಮತ್ತು ಚಡಪಡಿಕೆ ಇವು ಹಾರ್ಮೋನ್ ಏರುಪೇರಿನ ಕೆಲವು ಲಕ್ಷಣಗಳಾಗಿವೆ.

ಇದನ್ನೂ ಓದಿ: ಪುರುಷರಿಗೂ ಋತುಬಂಧವಾಗುತ್ತದಾ? ಅದರ ಲಕ್ಷಣಗಳೇನು?

ಪ್ರೌಢಾವಸ್ಥೆಯ ಅವಧಿಯಲ್ಲಿ ಲೈಂಗಿಕ ಹಾರ್ಮೋನುಗಳು ಹೆಚ್ಚಾಗುತ್ತವೆ. ಈ ಹಾರ್ಮೋನ್‌ಗಳ ನಿಯಂತ್ರಣದಲ್ಲಿ ಲಿವರ್ ಸಹ ಸಹಾಯ ಮಾಡುತ್ತದೆ. ನಿದ್ರೆ ಮತ್ತು ಎಚ್ಚರದ ಚಕ್ರದ ಅಡಚಣೆಯು ಸಿರ್ಕಾಡಿಯನ್ ಲಯವನ್ನು ಬದಲಾಯಿಸಿದಾಗ ಲಿವರ್​ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ಕೊಬ್ಬಿನ ಅಸಮ ವಿತರಣೆಗೆ ಕಾರಣವಾಗುತ್ತದೆ. ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವದ ಉತ್ಪಾದನೆಯು ಮೊಡವೆಗಳಿಗೆ ಕಾರಣವಾಗುತ್ತದೆ. ಇದು ಅನಿಯಮಿತ ಋತುಚಕ್ರ, ಬೊಜ್ಜು ಮತ್ತು ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಸಿಓಎಸ್) ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಸಿರ್ಕಾಡಿಯನ್ ರಿದಮ್​ನಲ್ಲಿನ ಈ ಅಡಚಣೆಯು ಲಿವರ್​ನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆರಂಭಿಕ ಹಂತದ ಮಧುಮೇಹ ಉಂಟಾಗುತ್ತದೆ. ಇದಲ್ಲದೆ, ಅಧಿಕ ತೂಕ ಮತ್ತು ಬೊಜ್ಜು, ರಕ್ತದಲ್ಲಿನ ಅಧಿಕ ಮಟ್ಟದ ಕೊಲೆಸ್ಟ್ರಾಲ್ ಇತರ ಪರಿಣಾಮಗಳು ಕೂಡ ಉಂಟಾಗುತ್ತದೆ.

ಇದನ್ನೂ ಓದಿ: ಪುರುಷರಂತೆ ಮಹಿಳೆಯರಿಗೂ ಪ್ರಾಸ್ಟೇಟ್​ ಕ್ಯಾನ್ಸರ್​ ಬರುತ್ತದಾ?

ಹಾರ್ಮೋನ್ ಏರುಪೇರಾಗದಂತೆ ತಡೆಯಲು ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ:

1. ಹೈ ಗ್ಲೈಸೆಮಿಕ್ ಇಂಡೆಕ್ಸ್ ಆಹಾರಗಳನ್ನು ಸೇವಿಸುವುದನ್ನು ಆದಷ್ಟೂ ಕಡಿಮೆ ಮಾಡಿ. ಅವು ಸಂಸ್ಕರಿಸಿದ ಕಾರ್ಬೋಹೈಡ್ರೇಟ್​ಗ​ಳಾಗಿವೆ.

2. ರಾತ್ರಿಯ ಊಟವನ್ನು ಬೇಗ ಮಾಡಿ. ಸಂಜೆ 6ರಿಂದ 7 ಗಂಟೆಗೇ ರಾತ್ರಿಯ ಊಟ ಮುಗಿಸುವುದು ಉತ್ತಮ.

3. ಸಂರಕ್ಷಕಗಳನ್ನು ಹಾಕಿರುವ ಸಂಸ್ಕರಿಸಿದ ಆಹಾರವನ್ನು ಸೇವಿಸಬೇಡಿ.

4. ನಿಯಮಿತವಾಗಿ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.

5. ನಿಮ್ಮ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಕಷ್ಟು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ