World AIDS Day 2021: ಏಡ್ಸ್​ನ ರೋಗಲಕ್ಷಣ, ಹರಡುವಿಕೆ ಮತ್ತು ಚಿಕಿತ್ಸೆಯ ಕುರಿತು ಇಲ್ಲಿದೆ ಮಾಹಿತಿ

ಏಡ್ಸ್ ಗಾಳಿಯ ಮೂಲಕ ಹರಡಬಹುದು ಎಂದು ಹಲವರು ಭಾವಿಸುತ್ತಾರೆ. ಆದಾಗ್ಯೂ, ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವಗಳು ಮತ್ತು ಎದೆ ಹಾಲಿನಂತಹ ಕೆಲವು ದೇಹದ ದ್ರವಗಳೊಂದಿಗೆ ನೇರ ಸಂಪರ್ಕದ ಮೂಲಕ ಹೆಚ್‌ಐವಿ ಹರಡುತ್ತದೆ ಎಂದು ತಿಳಿಸುವುದು ಮುಖ್ಯವಾಗಿದೆ.

World AIDS Day 2021: ಏಡ್ಸ್​ನ ರೋಗಲಕ್ಷಣ, ಹರಡುವಿಕೆ ಮತ್ತು ಚಿಕಿತ್ಸೆಯ ಕುರಿತು ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Dec 01, 2021 | 11:07 AM

ಜಗತ್ತಿನಲ್ಲಿ ಮೊದಲ ಏಡ್ಸ್ ಪ್ರಕರಣ ವರದಿಯಾಗಿ ಇಂದಿಗೆ (ಡಿಸೆಂಬರ್ 01) 40 ವರ್ಷಗಳು ಕಳೆದಿವೆ. ಆದರೆ ಇನ್ನೂ ಕೂಡ ಈ ಕಾಯಿಲೆ ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಈ ಬಗ್ಗೆ ಸದಾ ಎಚ್ಚರ ವಹಿಸಿದ್ದು, 2030 ರ ವೇಳೆಗೆ ಏಡ್ಸ್ ಅನ್ನು ಕೊನೆಗೊಳಿಸಲು ಸರ್ಕಾರದೊಂದಿಗೆ ವೈದ್ಯರು ಮತ್ತು ಸಂಸ್ಥೆಗಳು ಬದ್ಧವಾಗಿವೆ. ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು (World AIDS Day 2021) ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್‌ಐವಿ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗಿತ್ತದೆ.

ಏಡ್ಸ್ ರೋಗಲಕ್ಷಣಗಳು ಹೆಚ್‌ಐವಿಯಲ್ಲಿ ಹಲವಾರು ರೋಗಲಕ್ಷಣಗಳಿವೆ ಮತ್ತು ಈ ಕಾಯಿಲೆಗೆ ಗುರಿಯಾದ ಎಲ್ಲರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಪ್ರತಿ ವ್ಯಕ್ತಿಯು ಎದುರಿಸುವ ರೋಗಲಕ್ಷಣಗಳು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅವರಿಗೆ ಇರುವ ರೋಗದ ಹಂತವನ್ನು ಅವಲಂಬಿಸಿರುತ್ತದೆ. ಕೆಲವು ಸಾಮಾನ್ಯ ರೋಗಲಕ್ಷಣಗಳು ಎಂದರೆ ಜ್ವರ, ಶೀತ, ದದ್ದುಗಳು, ಸ್ನಾಯು ನೋವು, ಗಂಟಲು ನೋವು ಮತ್ತು ಬಾಯಿ ಹುಣ್ಣುಗಳನ್ನು ಒಳಗೊಂಡಿರುತ್ತದೆ. ಈ ರೋಗಲಕ್ಷಣಗಳು ಕೆಲವು ದಿನಗಳಿಂದ ವಾರಗಳವರೆಗೆ ಇರುತ್ತದೆ. ಇನ್ನೂ ಕೆಲವರಿಗೆ ಹೆಚ್‌ಐವಿಯ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ.

ಏಡ್ಸ್ ಗಾಳಿಯ ಮೂಲಕ ಹರಡಬಹುದು ಎಂದು ಹಲವರು ಭಾವಿಸುತ್ತಾರೆ. ಆದಾಗ್ಯೂ, ರಕ್ತ, ವೀರ್ಯ, ಗುದನಾಳದ ದ್ರವ, ಯೋನಿ ದ್ರವಗಳು ಮತ್ತು ಎದೆ ಹಾಲಿನಂತಹ ಕೆಲವು ದೇಹದ ದ್ರವಗಳೊಂದಿಗೆ ನೇರ ಸಂಪರ್ಕದ ಮೂಲಕ ಹೆಚ್‌ಐವಿ ಹರಡುತ್ತದೆ ಎಂದು ತಿಳಿಸುವುದು ಮುಖ್ಯವಾಗಿದೆ. ಯಾವುದೇ ಹೆಚ್ಐವಿ ಲಕ್ಷಣಗಳಿಲ್ಲದ ಅಥವಾ ಆರೋಗ್ಯ ವ್ಯಕ್ತಿಯ ರಕ್ತಪ್ರವಾಹಕ್ಕೆ ಹೆಚ್‌ಐವಿ ಇರುವ ವ್ಯಕ್ತಿಯಿಂದ ದ್ರವದ ರೂಪದಲ್ಲಿ ಕಾಯಿಲೆ ಹರಡುತ್ತದೆ. ಇದು ಬಾಯಿ, ಯೋನಿ, ಚುಚ್ಚುಮದ್ದಿನ ಮೂಲಕ ಹರಡುತ್ತದೆ.

ಏಡ್ಸ್​ಗೆ ಚಿಕಿತ್ಸೆಗಳು

  • ಹೆಚ್​ಐವಿ ಇರುವುದು ಗೊತ್ತಾದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಸೋಂಕಿನ ಪ್ರಮಾಣ ಎಷ್ಟೇ ಇದ್ದರು ಕೂಡ ಕಡೆಗಣಿಸದೆ ಅತಿ ಶೀಘ್ರದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
  • ಹೆಚ್​ಐವಿಗೆ ಇರುವ ಮುಖ್ಯ ಚಿಕಿತ್ಸೆ ಆಂಟಿರೆಟ್ರೋವೈರಲ್ ಥೆರಪಿ, ಇದು ದೈನಂದಿನ ಔಷಧಿಗಳ ಸಂಯೋಜನೆಯಾಗಿದ್ದು, ಇದು ಸೋಂಕು ಹೆಚ್ಚಾಗುವುದನ್ನು ತಡೆಯುತ್ತದೆ.
  • ಆಂಟಿರೆಟ್ರೋವೈರಲ್ ಥೆರಪಿ ಸಿಡಿ4 ಜೀವಕಣಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಈ ರೋಗದ ವಿರುದ್ಧ ಹೊರಾಡಲು ಬೇಕಾಗುವಷ್ಟು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
  • ಆಂಟಿರೆಟ್ರೋವೈರಲ್ ಚಿಕಿತ್ಸೆಯು ಹೆಚ್​ಐವಿ ಏಡ್ಸ್​ಗೆ ಹೋಗದಂತೆ ತಡೆಯಲು ಸಹಾಯ ಮಾಡುತ್ತದೆ.
  • ಇತರರಿಗೆ ಹೆಚ್​ಐವಿ ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹ ಆಂಟಿರೆಟ್ರೋವೈರಲ್ ಥೆರಪಿ ಸಹಾಯ ಮಾಡುತ್ತದೆ.
  • ಈ ಚಿಕಿತ್ಸೆಯು ಪರಿಣಾಮಕಾರಿಯಾದಾಗ ಸೋಂಕಿನ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ವ್ಯಕ್ತಿಯು ಇನ್ನೂ ಕೂಡ ಹೆಚ್​ಐವಿ ಹೊಂದಿರುತ್ತಾನೆ ಆದರೆ ಪರೀಕ್ಷಾ ಫಲಿತಾಂಶದಲ್ಲಿ ಸೋಂಕು ಗೋಚರಿಸುವುದಿಲ್ಲ.

ಒಟ್ಟಾರೆ ಹೆಚ್​ಐವಿ ಸೋಂಕು ಒಮ್ಮೆ ದೇಹದಲ್ಲಿ ಸೇರಿದರೆ ಅದು ಹಾಗೆ ಇರುತ್ತದೆ. ಆದರೆ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಸೋಂಕಿನ ಪರಿಣಾಮ ಹೆಚ್ಚಾಗುತ್ತದೆ ಮತ್ತು ಹೆಚ್​ಐವಿ ಪುನಃ ಸಿಡಿ4 ಜೀವಕಣಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿ ದೇಹವನ್ನು ಕುಗ್ಗಿಸುತ್ತದೆ.

ಇದನ್ನೂ ಓದಿ: World AIDS Vaccine Day 2021: ಹೆಚ್​ಐವಿ ಏಡ್ಸ್​ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಇಂದು ವಿಶ್ವ ಏಡ್ಸ್ ದಿನ: ಮಿಥ್ಯೆಗಳಿಂದ ದೂರವಿರಿ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ