Sign In

By signing in or creating an account, you agree with Associated Broadcasting Company's Terms & Conditions and Privacy Policy.

World Consumer Rights Day 2025: ಭಾರತದಲ್ಲಿ ಗ್ರಾಹಕರಿಗಿರುವ ಹಕ್ಕುಗಳಾವುವು? ಇಲ್ಲಿದೆ ಮಾಹಿತಿ

ಹಣ ಕೊಟ್ಟು ವಿವಿಧ ಸಾಮಗ್ರಿಗಳನ್ನು ಖರೀದಿಸುವ ವೇಳೆ ಗ್ರಾಹಕರು ಮೋಸ ಹೋಗುತ್ತಾರೆ. ಅಂಗಡಿ ಮಾಲೀಕರಿಂದ ವಂಚಿತರಾದಾಗ ಆ ಬಗ್ಗೆ ಧ್ವನಿ ಎತ್ತುವುದೇ ಇಲ್ಲ. ಎಷ್ಟೋ ಗ್ರಾಹಕರಿಗೆ ತಮಗಿರುವ ಹಕ್ಕುಗಳ ಬಗ್ಗೆ ತಿಳಿಯುವುದೇ ಇಲ್ಲ. ಗ್ರಾಹಕರಿಗಿರುವ ಹಕ್ಕುಗಳ ಬಗ್ಗೆ ತಿಳಿಸಿಕೊಡುವ ಒಂದು ದಿನವನ್ನು ಮೀಸಲಾಗಿ ಇಡಲಾಗಿದ್ದು ಅದುವೇ ವಿಶ್ವ ಗ್ರಾಹಕ ಹಕ್ಕುಗಳ ದಿನ. ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ವಿಶ್ವ ಗ್ರಾಹಕರ ಹಕ್ಕುಗಳ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತ್ತರ ಮಾಹಿತಿ ಇಲ್ಲಿದೆ.

World Consumer Rights Day 2025: ಭಾರತದಲ್ಲಿ ಗ್ರಾಹಕರಿಗಿರುವ ಹಕ್ಕುಗಳಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 14, 2025 | 9:46 AM

ಕಾಲ ಕಳೆದಂತೆ ನಮ್ಮ ಅಗತ್ಯಗಳು ಕೂಡ ಹೆಚ್ಚುತ್ತಿವೆ. ಬಹುತೇಕರು ಮಾರುಕಟ್ಟೆಯಿಂದ ಅಥವಾ ಆನ್‌ಲೈನ್‌ (Online) ನಿಂದ ಏನನ್ನಾದರೂ ಆರ್ಡರ್ ಮಾಡುತ್ತಲೇ ಇರುತ್ತಾರೆ. ಆದರೆ, ಕೆಲವೊಮ್ಮೆ ಒಳ್ಳೆಯ ಹಾಗೂ ಗುಣಮಟ್ಟದ ವಸ್ತುಗಳೇ ಸಿಗುತ್ತದೆ ಎಂದು ಹೇಳುವುದು ಕಷ್ಟ. ಕೆಲವರು ಗೊತ್ತೋ ಗೊತ್ತಿಲ್ಲದೇ ಮೋಸ ಹೋಗುತ್ತಾರೆ. ಹೀಗಾಗಿ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ. ಗ್ರಾಹಕರ ರಕ್ಷಣೆಗಾಗಿ ಯೋಗಕ್ಷೇಮದ ದೃಷ್ಟಿಯಿಂದ ಗ್ರಾಹಕ ಹಕ್ಕುಗಳು ಮಹತ್ವದ್ದಾಗಿದೆ. ಈಗಿನ ಬಹುತೇಕ ವ್ಯಾಪಾರಿಗಳು ಲಾಭ ಗಳಿಸುವ ಉದ್ದೇಶದಿಂದಾಗಿ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನ (World Consumer Rights Day)ವನ್ನು ಆಚರಿಸಲಾಗುತ್ತದೆ.

ವಿಶ್ವ ಗ್ರಾಹಕ ಹಕ್ಕುಗಳ ದಿನದ ಇತಿಹಾಸ

ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು 1983 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತುರಿಸಲಾಯಿತು. ಹೌದು, ಮಾರ್ಚ್ 15, 1962 ರಂದು ಆಗಿನ ಯುಎಸ್ ಅಧ್ಯಕ್ಷ ಜಾನ್ ಎಫ್. ಕೆನಡಿ ಯುಎಸ್ ಕಾಂಗ್ರೆಸ್‌ಗೆ ವಿಶೇಷ ಸಂದೇಶವನ್ನು ನೀಡಿ, ಗ್ರಾಹಕರ ಹಕ್ಕುಗಳ ಸಮಸ್ಯೆಯ ವಿಚಾರದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು. ಹೀಗಾಗಿ ಗ್ರಾಹಕರ ಹಕ್ಕುಗಳ ವಿಷಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಮೊದಲ ವಿಶ್ವ ನಾಯಕ ಎನ್ನುವ ಖ್ಯಾತಿಗೆ ಪಾತ್ರರಾದರು. 1983 ರಿಂದ ಪ್ರತಿವರ್ಷ ಮಾರ್ಚ್ 15ರಂದು ಜಾಗತಿಕವಾಗಿ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಗ್ರಾಹಕರ ಹಕ್ಕುಗಳ ದಿನದ ಮಹತ್ವ ಹಾಗೂ ಆಚರಣೆ ಹೇಗೆ?

ವಿಶ್ವ ಗ್ರಾಹಕ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವೆಂದರೆ ಗ್ರಾಹಕರು ಮಾರುಕಟ್ಟೆಯಲ್ಲಿ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಯಾವುದೇ ವಂಚನೆಗೆ ಗುರಿಯಾಗಬಾರದು, ಅವರಿಗಿರುವ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಸುವುದಾಗಿದೆ. ಗ್ರಾಹಕನಾದವನು ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ವಸ್ತುವಿನ ಕೋಣೆಯ ದಿನಾಂಕವನ್ನು ಪರಿಶೀಲಿಸಿ ಕೊಂಡುಕೊಳ್ಳಬೇಕು. ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆಯೇ ಇದ್ದು, ಹೀಗಾದಾಗ ಏನು ಮಾಡಬೇಕಕು. ತಮಗಿರುವ ಗ್ರಾಹಕ ಹಕ್ಕುಗಳೇನು ಎನ್ನುವುದನ್ನು ತಿಳಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ. ವಿಶ್ವ ಗ್ರಾಹಕರ ಹಕ್ಕುಗಳ ದಿನದಂದು ಶಾಲಾ ಕಾಲೇಜುಗಳಲ್ಲಿ ವಿಚಾರ ಸಂಕಿರಣಗಳು, ಚರ್ಚಾಗೋಷ್ಠಿಗಳು, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತವೆ.

ಇದನ್ನೂ ಓದಿ
Image
ದೇಹದ ಈ ಭಾಗಕ್ಕೆ ಒತ್ತಡ ಹಾಕಿದ್ರೆ ಮಗು ಅಳುವುದನ್ನು ನಿಲ್ಲಿಸುತ್ತೆ
Image
3 ದಿನ ಸ್ಮಾರ್ಟ್‌ಫೋನ್‌ನಿಂದ ದೂರವಿದ್ದರೆ ನಿಮ್ಮ ಮೆದುಳಿಗೆ ಹೀಗಾಗುತ್ತದೆ!
Image
ಬೇಸಿಗೆಯಲ್ಲಿ ರಾತ್ರಿ ಸ್ನಾನ ಮಾಡುತ್ತೀರಾ?
Image
ಈ ಚಿತ್ರದಲ್ಲಿ ನಿಮ್ಮ ಆಯ್ಕೆಯ ವೃತ್ತವೇ ನಿಮ್ಮ ವ್ಯಕ್ತಿತ್ವ ಹೇಳುತ್ತೆ

ಇದನ್ನೂ ಓದಿ: 3.14 ಸಂಖ್ಯೆಗೂ ಪೈ ದಿನಕ್ಕೂ ಏನು ಸಂಬಂಧ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಭಾರತದಲ್ಲಿ ಗ್ರಾಹಕರಿಗಿರುವ ಹಕ್ಕುಗಳಿವು

ಭಾರತದಲ್ಲಿ ಗ್ರಾಹಕರ ಹಕ್ಕುಗಳನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರ ಅಡಿಯಲ್ಲಿ ರಕ್ಷಿಸಲಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯೂ ದೋಷಪೂರಿತ ಸರಕುಗಳು, ವ್ಯಾಪಾರದಲ್ಲಿ ಮೋಸ, ಗ್ರಾಹಕರನ್ನು ವಂಚನೆಯಿಂದ ರಕ್ಷಿಸುತ್ತದೆ. ಅದಲ್ಲದೇ ಗ್ರಾಹಕರಿಗೆ ಒಟ್ಟು ಆರು ಹಕ್ಕುಗಳಿದ್ದು, ಅವುಗಳಲ್ಲಿ ಸುರಕ್ಷತೆಯ ಹಕ್ಕು, ಆಯ್ಕೆ ಮಾಡುವ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಕೇಳುವ ಹಕ್ಕು, ಪರಿಹಾರ ಹುಡುಕುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣದ ಹಕ್ಕುಗಳು ಸೇರಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:46 am, Fri, 14 March 25

ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು