World Elephant Day 2021: ದೈತ್ಯ ಗಾತ್ರದ ಆನೆಯ ಬಗ್ಗೆ ಸಣ್ಣ ಪುಟ್ಟ ಸಂಗತಿಗಳು

ಏಷ್ಯನ್ ಆನೆಗಳಲ್ಲಿ ನಾಲ್ಕು ಪ್ರಮುಖ ವಿಧಗಳಿವೆ. ಏಷ್ಯಾದ ಪ್ರಮುಖ ತಳಿಗಳೆಂದರೆ ಶ್ರೀಲಂಕಾದ ಆನೆ, ಭಾರತೀಯ ಆನೆ, ಸುಮಾತ್ರನ್ ಏಷ್ಯನ್ ಆನೆ ಮತ್ತು ಬೊರ್ನಿಯೊ ಪಿಗ್ಮಿ ಆನೆ. ಆಫ್ರಿಕನ್ ಆನೆಗಳು ಏಷ್ಯಾದ ಆನೆಗಳಿಗಿಂತ ವಿಭಿನ್ನವಾಗಿರುತ್ತವೆ.

World Elephant Day 2021: ದೈತ್ಯ ಗಾತ್ರದ ಆನೆಯ ಬಗ್ಗೆ ಸಣ್ಣ ಪುಟ್ಟ ಸಂಗತಿಗಳು
ಶ್ರೀನಗರದ ದೃಶ್ಯ
Follow us
TV9 Web
| Updated By: Skanda

Updated on: Aug 12, 2021 | 8:24 AM

ಏಷ್ಯನ್ ಮತ್ತು ಆಫ್ರಿಕನ್ ಆನೆಗಳ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಆಗಸ್ಟ್ 12, 2012 ರಂದು ವಿಶ್ವ ಆನೆ ದಿನವನ್ನು (World Elephant Day) ಆರಂಭಿಸಲಾಯಿತು. ಭೂಮಿಯಲ್ಲಿರುವ ಅತಿದೊಡ್ಡ ಸಸ್ತನಿ ಈಗ ಅಳಿವಿನಂಚಿನಲ್ಲಿದೆ. ಇಂದು ಜಗತ್ತಿನಲ್ಲಿ ಮೂರು ರೀತಿಯ ಆನೆಗಳಿವೆ. ಏಷ್ಯನ್ ಆನೆ ( elephas maximus ) ಮತ್ತು ಎರಡು ಜಾತಿಯ ಆಫ್ರಿಕನ್ ಆನೆಗಳಿವೆ. ಅವು ಲೊಕ್ಸೊಡಂಟಾ ಆಫ್ರಿಕಾನ (Loxodanta Africana) ಮತ್ತು ಲೊಕ್ಸೊಡೊಂಟಾ ಆಫ್ರಿಕಾನಾ ಸೈಕ್ಲೋಟಿಸ್ (Loxodanta Africana cyclotis).

ಏಷ್ಯನ್ ಆನೆಗಳಲ್ಲಿ ನಾಲ್ಕು ಪ್ರಮುಖ ವಿಧಗಳಿವೆ. ಏಷ್ಯಾದ ಪ್ರಮುಖ ತಳಿಗಳೆಂದರೆ ಶ್ರೀಲಂಕಾದ ಆನೆ, ಭಾರತೀಯ ಆನೆ, ಸುಮಾತ್ರನ್ ಏಷ್ಯನ್ ಆನೆ ಮತ್ತು ಬೊರ್ನಿಯೊ ಪಿಗ್ಮಿ ಆನೆ. ಆಫ್ರಿಕನ್ ಆನೆಗಳು ಏಷ್ಯಾದ ಆನೆಗಳಿಗಿಂತ ವಿಭಿನ್ನವಾಗಿರುತ್ತವೆ. ವಿಶ್ವದ ಅತಿದೊಡ್ಡ ಆನೆಗಳು ಆಫ್ರಿಕನ್ ಸವನ್ನಾ ಮತ್ತು ಚಿಕ್ಕ ಆನೆಗಳು ಏಷ್ಯಾದ ಆನೆಗಳಾದ ಸುಮಾತ್ರನ್ ಆನೆಗಳು.

ಆನೆಗಳು ಮನುಷ್ಯರಂತೆ ಸಂಕೀರ್ಣ ಭಾವನೆಗಳು, ಬುದ್ಧಿವಂತಿಕೆ ಮತ್ತು ಉದ್ದೇಶವನ್ನು ಹೊಂದಿವೆ. ಆನೆಗಳು ಸಾಮಾನ್ಯವಾಗಿ ದೃಷ್ಟಿ ಮಂದವಾಗಿದ್ದು ಉತ್ತಮ ಶ್ರವಣ ಶಕ್ತಿ ಹೊಂದಿದೆ.

ವೈಶಿಷ್ಟ್ಯ ಆನೆಯ ಸೊಂಡಿಲಲ್ಲಿ ಮೂಗು ಮತ್ತು ಮೇಲಿನ ತುಟಿ. ದಂತವಿರುತ್ತದೆ. ಆನೆಗಳ ದೇಹದಲ್ಲಿ 282 ಮೂಳೆಗಳಿವೆ. ಸಸ್ತನಿಗಳಲ್ಲಿ ಆನೆಗಳು ಅತಿ ಹೆಚ್ಚು ಗರ್ಭ ಕಾಲ ಇವುಗಳದ್ದು. ಅವರ ಗರ್ಭಾವಸ್ಥೆಯ ಅವಧಿ 630 ದಿನಗಳು (21 ತಿಂಗಳಿಂದ 22 ತಿಂಗಳವರೆಗೆ). ಆನೆಯ ಮೇಲಿನ ತುಟಿ ಸೊಂಡಿಲು.

ಇತರ ಜೀವಿಗಳಿಂದ ಇವುಗಳು ಭಿನ್ನ ಹೇಗೆಂದರೆ ಆನೆಗಳು ಏಕ ಕಾಲದಲ್ಲಿ ಒಂದು ಬದಿಯ ಕಾಲನ್ನು ಒಟ್ಟಿಗೆ ಇಟ್ಟು ಮುಂದಕ್ಕೆ ಚಲಿಸುವ ಸಾಮರ್ಥ್ಯ. ಪೂರ್ತಿ ಬೆಳವಣಿಗೆ ಹೊಂದಿರುವ ಒಂದು ಆನೆ ಒಂದೇ ದಿನದಲ್ಲಿ 400 ಕೆಜಿ ಆಹಾರ ಮತ್ತು ಸರಾಸರಿ 150 ಲೀಟರ್ ನೀರನ್ನು ಸೇವಿಸುತ್ತದೆ. ಅಲ್ಲದೆ ತಲೆಯ ಪಾರ್ಶ್ವಗಳಲ್ಲಿರುವ ಗ್ರಂಥಿಗಳಿಂದ ಒಂದು ವಿಶಿಷ್ಟ ದ್ರವ ಸ್ರವಿಸುತ್ತಿರುತ್ತದೆ . ಅವು ಕಣ್ಣುಗಳ ಕೆಳಗೆ ಇರುವ  ಗ್ರಂಥಿ ಊದಿಕೊಂಡಾಗ ಇವುಗಳಿಗೆ ಮದವೇರುತ್ತದೆ. ಇವುಗಳು ನಾಲ್ಕು ಗಂಟೆಗಳ ಕಾಲ ವಿಶ್ರಾಂತಿ ಬಯಸುತ್ತವೆ. ಆಫ್ರಿಕನ್ ಆನೆಗಳು ವಿಶ್ರಾಂತಿಗಾಗಿ ಮಲಗುವುದಿಲ್ಲ.

ಕಾಡಾನೆಗಳು ಗುಂಪು ಗುಂಪಾಗಿ ಓಡಾಡುತ್ತವೆ. ಈ ಹಿಂಡಿನಲ್ಲಿ ಮೂವತ್ತು ಆನೆಗಳನ್ನು ಕಾಣಬಹುದು. ಏಕಾಂಗಿಯಾಗಿ ನಡೆಯುವ ಆನೆಗಳು ಒಂಟಿ ಸಲಗಗಳು. ಅವರು ಇತರ ಆನೆಗಳಿಗಿಂತ ಹೆಚ್ಚು ಆಕ್ರಮಣಕಾರಿ. ಆನೆಗಳು ಗಂಟೆಗೆ ನಲವತ್ತು ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು.

ಆನೆಗಳು ಇನ್ಫ್ರಾಸೋನಿಕ್ ಧ್ವನಿಗಳೊಂದಿಗೆ ಸಂವಹನ ನಡೆಸುತ್ತವೆ. ಆನೆಗಳಿಗೆ ಮನುಷ್ಯರಿಗೆ ಕೇಳಿಸದ ಧ್ವನಿ ತರಂಗಗಳನ್ನು ಕೇಳಬಹುದು. ಆನೆಗಳಿಗೆ ದೃಷ್ಟಿ ಕಡಿಮೆಯಾಗಿದೆ. ಕೇಳುವುದು ಹೆಚ್ಚು. ವಾಸನೆ ಮಾಡುವ ಸಾಮರ್ಥ್ಯ ಹೆಚ್ಚು. ಆನೆಗಳು ವರ್ಷಗಳವರೆಗೆ ವಿಶೇಷ ವಾಸನೆಯನ್ನು ನೆನಪಿಸಿಕೊಳ್ಳುತ್ತವೆ. ಆನೆಗಳ ಸರಾಸರಿ ಜೀವಿತಾವಧಿ 70 ವರ್ಷಗಳು.

ಆಫ್ರಿಕನ್ ಆನೆ * ವೈಜ್ಞಾನಿಕ ಹೆಸರು – ಲೋಕ್ಸೊಡಾಂಟಾ ಆಫ್ರಿಕಾನಾ * ವಿಶ್ವ ವನ್ಯಜೀವಿ ನಿಧಿಯ (WWF) ಪ್ರಕಾರ, ಆಫ್ರಿಕಾದಲ್ಲಿ ಸುಮಾರು 4,15,000 ಆನೆಗಳಿವೆ. * ವೈಶಿಷ್ಟ್ಯಗಳು: ದೊಡ್ಡ ಕಿವಿಗಳು, ಉದ್ದವಾದ ದಂತ, ಹಿಂಗಾಲುಗಳಿಗಿಂತ ಉದ್ದವಾದ ಮುಂಗಾಲುಗಳು, ದೊಡ್ಡ ಕಣ್ಣುಗಳು, ಹೆಣ್ಣಾನೆಗೂ ದಂತ * ಎತ್ತರ: 8-13 ಅಡಿಗಳು * ಉದ್ದ: 19-24 ಅಡಿಗಳು * ತೂಕ: 3000-7000 ಕೆಜಿ * ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಆಫ್ರಿಕಾದ 37 ದೇಶಗಳಲ್ಲಿ ಕಂಡುಬರುತ್ತದೆ.

ಏಷ್ಯನ್ ಆನೆ * ವೈಜ್ಞಾನಿಕ ಹೆಸರು- ಎಲಿಫಸ್ ಮ್ಯಾಕ್ಸಿಮಸ್ * ಎತ್ತರ: 6.5-11.5 ಅಡಿ * ಉದ್ದ: 21 ಅಡಿ * ತೂಕ: 5000 ಕೆಜಿ * ಏಷ್ಯಾದ 13 ದೇಶಗಳಲ್ಲಿ ಕಂಡುಬಂದಿದೆ

ಆನೆಗಳಿಗೆ ಅನಾಥಾಶ್ರಮ ಆನೆ ಅನಾಥಾಶ್ರಮವು ಶ್ರೀಲಂಕಾದ ಕೆಗಳೆ ಜಿಲ್ಲೆಯ ಪಿನ್ನವಾಲಾ ಗ್ರಾಮದಲ್ಲಿ ಇದೆ. ಆನೆಗಳ ಅಭಯಾರಣ್ಯವು ಮಹಾ ಓಯಾ ನದಿಯ ದಡದಲ್ಲಿರುವ 25 ಎಕರೆ ತೆಂಗಿನ ತೋಟದಲ್ಲಿದೆ. ಆನೆ ಅನಾಥಾಶ್ರಮವನ್ನು ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಇಲಾಖೆಯು 1975 ರಲ್ಲಿ ಸ್ಥಾಪಿಸಿತು. ಆನೆಗಳು ಇಲ್ಲಿ ನೈಸರ್ಗಿಕ ಆವಾಸಸ್ಥಾನವನ್ನು ಹೊಂದಿವೆ.

ಇತಿಹಾಸ 2011 ರಲ್ಲಿ ಕೆನಡಾದ ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಕನಾಜ್ವೆಸ್ಟ್ ಪಿಕ್ಚರ್ಸ್‌ನ ಮೈಕೆಲ್ ಕ್ಲಾರ್ಕ್ ಮತ್ತು ಥೈಲ್ಯಾಂಡ್‌ನ ಎಲಿಫೆಂಟ್ ರಿಇಂಟ್ರೊಡಕ್ಷನ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವಪೂರನ್ ದರ್ದಾನಂದ ಅವರು ಇದನ್ನು ಅಧಿಕೃತವಾಗಿ ಸ್ಥಾಪಿಸಿದರು. ಪೆಟ್ರೀಷಿಯಾ ಸಿಮ್ಸ್ ಮತ್ತು ಎಲಿಫೆಂಟ್ ರಿಇಂಟ್ರೊಡಕ್ಷನ್ ಫೌಂಡೇಶನ್‌ ಆಗಸ್ಟ್ 12, 2011ರಂದು ಪ್ರಾರಂಭಿಸಿದರು.

* ಕೇಂದ್ರ ಪರಿಸರ ಸಚಿವಾಲಯವು ಪ್ರತಿ ವರ್ಷ ಕನಿಷ್ಠ 100 ಆನೆಗಳು ಮಾನವ ಸಂಘರ್ಷದಲ್ಲಿ ಸಾಯುತ್ತವೆ ಮತ್ತು ಇದು ಕನಿಷ್ಠ 500 ಜನರನ್ನು ಆನೆ ಕೊಲ್ಲುತ್ತದೆ. * 1972 ರ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಆನೆಗಳ ಹಾನಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2500 ರೂ.ವರೆಗೆ ದಂಡ ವಿಧಿಸಲಾಗುತ್ತದೆ. 1973ರಲ್ಲಿ ಭಾರತದಲ್ಲಿ ಆನೆ ಬೇಟೆಯನ್ನು ನಿಷೇಧಿಸಲಾಗಿದ್ದು, ಭಾರತದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಆನೆಗಳನ್ನು ಎಣಿಸಲಾಗುತ್ತದೆ.

ಇದನ್ನೂ ಓದಿ:  ಜೆಪಿ ನಗರದಲ್ಲಿ ಅಪಾರ ಪ್ರಮಾಣದ ಆನೆ ದಂತ, ವನ್ಯ ಜೀವಿಗಳ ಚರ್ಮ, ಮೂಳೆ ವಶ ಆರೋಪಿ ಬಂಧನ- ಚಿತ್ರಗಳಿವೆ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ