World Environment Day 2022: ನನಗೂ ಗೊತ್ತು ಅವಳಿಗೂ ಜೀವವಿದೆ, ಅವಳಿಗೂ ನೋವಾಗುತ್ತದೆ

World Environment Day 2022: ಪ್ರಾಣಕ್ಕೆ ಹೋರಾಡುತ್ತಿರುವ ವ್ಯಕ್ತಿಯನ್ನು ICUನಲ್ಲಿ ನೋಡಿದ್ರೆ ಯಾವ ರೀತಿ ಅನಿಸುತ್ತೋ ಅಷ್ಟೆ ನೋವಾಗಿತ್ತು ನನಗೆ. ನನಗೂ ಗೊತ್ತು ಅವಳಿಗೂ ಜೀವವಿದೆ, ಅವಳಿಗೂ ನೋವಾಗುತ್ತದೆ.

World Environment Day 2022: ನನಗೂ ಗೊತ್ತು ಅವಳಿಗೂ ಜೀವವಿದೆ, ಅವಳಿಗೂ ನೋವಾಗುತ್ತದೆ
ಪ್ರಾತಿನಿಧಿ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2022 | 8:58 AM

ನನ್ನೂರು ಮಳೆರಾಯನ ತವರೂರಾದ ಕೊಡಗು, ಅಲ್ಲಿನ ಜನ ಜಿಟಿಜಿಟಿ ಮಳೆಯಲ್ಲಿ ಅರ್ಧ ವರ್ಷ ಕಳೆಯಬೇಕಾದ ಪರಿಸ್ಥಿತಿ ಇದ್ದರೂ ಅದನ್ನು ಯಾರು ಕಷ್ಟ ಅಂತ ಅಂದುಕೊಂಡಿಲ್ಲ. ಅಷ್ಟು ಮಳೆಗಾಲ ಇದ್ರು ಅವಳು ನನಗೆ ಸಿಕ್ಕಿದ್ದು ಬೇಸಿಗೆ ಕಾಲದಲ್ಲಿ, ಕಾಲೇಜು ಮುಗಿಸಿ ಮನೆಗೆ ಬರುವಾಗ ಯಾರೋ ರಸ್ತೆಯ ಪಕ್ಕದಲ್ಲಿ ಅವಳನ್ನು ಕಡಿದು ಬಿಸಾಕಿದ್ದರು . ಅವಳಾಗ ಇನ್ನು ಚಿಕ್ಕ ಗಿಡ, ಹಸಿರು ಬಣ್ಣದ ಉದ್ದನೆಯ ರೆಂಬೆ ತುತ್ತ ತುದಿಯಲ್ಲಿ ಚಿಕ್ಕ ಶ್ವೇತಬಣ್ಣದ ಮೋಗ್ಗೊಂದನ್ನು ಹೊಂದಿದ್ದ ಅವಳನ್ನು ಬಿರುಬಿಸಿಲಿನಲ್ಲಿ ರಸ್ತೆಯಲ್ಲಿ ಬಿಟ್ಟು ಬರುವ ಮನಸ್ಸಾಗಲಿಲ್ಲ. ಮನೆಗೆ ತಂದು ಅಮ್ಮನಿಗೆ ತೋರಿಸಿ , ಇದು ಯಾವ ಗಿಡ ನೋಡು ಎಂದಾಗ ಅವಳು ಅಂದಿದ್ದು ನಂದಿ ಬಟ್ಟಲು. ಅಮ್ಮ ಈ ಗಿಡವನ್ನು ನೆಡಮ್ಮ ಅಂದಾಗ ಈ ಬಿಸಿಲಿನ ಸಮಯದಲ್ಲಿ ಗಿಡ ಬರೋದಿಲ್ಲ, ಮತ್ತೆ ಈ ಗಿಡ ಬಹಳ ದೊಡ್ಡದಾಗಿ ಬೆಳೆಯುತ್ತದೆ.

ನಮ್ಮ ಮನೆಯ ಅಕ್ಕಪಕ್ಕ ಅಷ್ಟೊಂದು ಜಾಗ ಇಲ್ಲ ಅಲ್ವಾ ಅಂದಾಗ ಬಲವಂತ ಮಾಡಿ ಗಿಡ ನೆಡಸಿದ್ದು ಈಗಲೂ ನೆನಪಿದೆ. ನೆಟ್ಟಾಗ ಅವಳಿಗೆ ಬೇಕಾದಷ್ಟು ನೀರೆರೆದಿದೆ. ಒಂದೆರಡು ದಿನ ಚೆನ್ನಾಗಿದ್ದಳು ಮಾರನೇ ದಿನ ನೆಲಕ್ಕೆ ತಾಗಿ ಬಿದ್ದು ಬಿಟ್ಟಿದ್ದಳು. ಪ್ರಾಣಕ್ಕೆ ಹೋರಾಡುತ್ತಿರುವ ವ್ಯಕ್ತಿಯನ್ನು ICUನಲ್ಲಿ ನೋಡಿದ್ರೆ ಯಾವ ರೀತಿ ಅನಿಸುತ್ತೋ ಅಷ್ಟೆ ನೋವಾಗಿತ್ತು ನನಗೆ. ನನಗೂ ಗೊತ್ತು ಅವಳಿಗೂ ಜೀವವಿದೆ, ಅವಳಿಗೂ ನೋವಾಗುತ್ತದೆ. ನಾನು ಅವಳ ಬಳಿ ಯಾವಾಗಲೂ ಮಾತನಾಡುತ್ತಿದ್ದೆ, ಅಂದು ಮಾತಾಡಲು ಬಂದ್ರೆ ಕೇಳುವ ಪರಿಸ್ಥಿತಿಯಲ್ಲಿ ಅವಳಿರಲಿಲ್ಲ. ನನಗೆ ಗೊತ್ತಾಯ್ತು ಬಿಸಿಲಿನ ತೀಕ್ಷಣತೆಗೆ ಅವಳು ಸೊರಗಿದ್ದಾಳೆ ಅಂತ. ಅಲ್ಲದೇ ಉರಿಬಿಸಿಲು ನೇರವಾಗಿ ಅವಳಿಗೆ ತಾಗುತಿತ್ತು. ಯಾವುದೇ ನೆರಳು ಇರಲಿಲ್ಲ. ಎರಡು ದಿನಕ್ಕೆ ಮೊದಲೇ ಅರಳುತ್ತೆ ಎಂದು ನಂಬಿದ್ದ ಶ್ವೇತವರ್ಣದ ಹೂವು ಬಾಡಿಹೋಗಿತ್ತು. ಹೇಗಾದರೂ ಮಾಡಿ ಅವಳನ್ನು ಎತ್ತರಕ್ಕೆ ಬೇಳಸಬೇಕು ಎಂಬ ಆಸೆಯಿಂದ ಪ್ರತಿದಿನ ನೀರೆರೆಯುತ್ತಿದ್ದೆ.

ಇದನ್ನೂ ಓದಿ; ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’

ಅದು ಅವಳಿಗೆ ಸಾಕಾಗುತ್ತಿರಲಿಲ್ಲ. ಮೂಲತಹ ಪ್ಲಾಸ್ಟಿಕ್ ದ್ವೇಷಿಯಾದ ನಾನು ಅವಳಿಗಾಗಿ ಪ್ಲಾಸ್ಟಿಕ್ ಬಾಟಲ್ ನೀರು ತುಂಬಿಸಿ ಹನಿಗಳು ತೊಟ್ಟಿಕ್ಕುವಂತೆ ಮಾಡಿದ್ದೆ. ಕಾಲೇಜಿಗೆ ಹೋಗುವಾಗಲೂ ಬಂದಮೇಲೂ ಇದೇ ನನಗೆ ಕಾಯಕವಾಗಿ ಬಿಟ್ಟಿತ್ತು. ಅವಳು ಬಾರಿ ಹಠಮಾರಿ ಒಂದೆರಡು ತಿಂಗಳಲ್ಲಿ ಬೆಳೆಯಲೇ ಇಲ್ಲ. ಅವ್ಳು ಒಂದೆರಡು ಅಡಿ ಬೆಳೆದದ್ದೇ ತಡ ಎಲೆಗಳಲ್ಲಿ ಅದ್ಯಾವುದೋ ಹುಳಗಳು ಬಂದು ಸೇರಿಕೊಂಡು ಅವಳಿಗೆ ಇನ್ನಷ್ಟು ಹಿಂಸೆ ಕೊಟ್ಟಿದ್ದವು. ನಾನು ತಕ್ಕಮಟ್ಟಿಗೆ ಅವಳಿಗೆ ನೈಸರ್ಗಿಕ ಔಷಧಿ ಹಾಕಿದ್ದೆ. ಆರು ತಿಂಗಳಾದರೂ ಅವಳ ಬೆಳವಣಿಗೆ ಆಗಲಿಲ್ಲ. ಅಷ್ಟರಲ್ಲಿ ನನ್ನ ಕಾಲೇಜು ಮುಗಿದು ಉನ್ನತ ಅಭ್ಯಾಸಕ್ಕೆ ಹೋಗಬೇಕಾದ ಪರಿಸ್ಥಿತಿ. ಮಳೆಗಾಲವು ಆರಂಭವಾಗಿದ್ದರಿಂದ ಅವಳಿಗೆ ಪ್ರತಿದಿನ ಊಟ ಬಡಿಸುವ ಯೋಚನೆ ಇರಲಿಲ್ಲ. ಹೀಗೆ ಕೆಲ ತಿಂಗಳು ಕಳೆದು ಮನೆಗೆ ತೆರಳುವಾಗ ನನ್ನ ಮಗಳು ( ನಂದಿ ಬಿಟ್ಲು ಗಿಡ) ನನಗಿಂತ ಎತ್ತರ ಬೆಳೆದು ನಿಂತಿದ್ದಾಳೆ.

ಕಾಂಡಾ ದೃಢವಾಗಿದೆ ಅವಳ ರೆಂಬೆಕೊಂಬೆಗಳಲ್ಲಿ ಹತ್ತಾರು ಹೂವುಗಳು ಅಬ್ಬಾ ಅದೆಷ್ಟು ಸಂತೋಷ, ಜೀವನದಲ್ಲಿ ಅದೇನೋ ಸಾಧನೆ ಮಾಡಿದಷ್ಟು ನೆಮ್ಮದಿ. ಅವಳನ್ನು ಮೆಲ್ಲಗೆ ಮುತ್ತಿಟ್ಟು ನಾಲ್ಕೈದು ಹೂವುಗಳನ್ನು ಕಿತ್ತುಕೊಂಡು ದೇವರಿಗೆ ಇಟ್ಟಿದ್ದು ಇನ್ನೂ ನೆನಪಿದೆ. ಅವಳನ್ನು ಪರಿಚಯಿಸುವಾಗ ಅದೇನು ಹೆಮ್ಮೆ. ನೋಡಿದ್ಯ ಅಮ್ಮ ನಾನು ನೆಟ್ಟ ಗಿಡ ಎಷ್ಟು ಚೆನ್ನಾಗಿ ಬಂದಿದೆ. ಅಂದ್ರೆ ಅದನ್ನ ನಾನು ನೆಟ್ಟಿದ್ದು ಅನ್ನೋದು ನಮ್ಮ ಅಮ್ಮನ ವಾದ, ಅಮ್ಮ ನೆಟ್ಟಿದ್ದರು ನಾನು ಸಾಕಿದ್ದು ಅನೋದು ನನ್ನ ವಾದ. ನಮ್ಮ ಮಾತುಗಳನ್ನು ಕೇಳಿಸಿಕೊಂಡು ಅವರು ಒಳಗೊಳಗೆ ನಗುತ್ತಾಳೆ. ನಕ್ಕಾಗಲೆಲ್ಲ ದೇಹವನ್ನು ಅತ್ತಿಂದಿತ್ತ ವಾಲಿಸುತ್ತಾಳೆ. ಇಬ್ಬರು ಬಾಯಿ ಬಿಟ್ಟು ಹೇಳಿಲ್ಲವಷ್ಟೆ ನಮ್ಮ ನಡುವಿನ ಬಾಂಧವ್ಯವನ್ನು ಗಿಡದ ಜೊತೆ ಮಾತನಾಡುತ್ತೇನೆ ಎಂದರೆ ಎಲ್ಲರೂ ನನ್ನುನು ಭಾವ ಜೀವಿ ಎನ್ನುತ್ತಾರೆ.

ಮರಗಳ ಗಿಡಗಳ ಪರಿಸರದ ಬಗ್ಗೆ ಅವರಿಗೆ ಭಾವನೆಗಳೇ ಇಲ್ಲ ಎಂದು ಹೀಗೆ ಹೇಳಲಿ? ಇತ್ತೀಚಿಗೆ ನನ್ನ ತಂಗಿ ಫೋನ್ ಮಾಡಿದ್ದಳು ಮನೆಯ ಪಕ್ಕ ದೊಡ್ಡ ಕಾಂಕ್ರೀಟ್ ರಸ್ತೆ ಬರಲಿದೆಯಂತೆ. ಮನೆಯ ಪಕ್ಕದಲ್ಲಿರುವ ಎಲ್ಲಾ ಗಿಡಮರಗಳನ್ನು ಕಿತ್ತೆಸೆಯ ಬೇಕಂತೆ. ಈ ಹಿಂದೆ ಒಮ್ಮೆ ರಸ್ತೆ ದೊಡ್ಡದು ಮಾಡುವಾಗ ಅತ್ತು ಕರೆದು ಹೇಗೂ ಅವಳನ್ನು ಉಳಿಸಿಕೊಂಡಿದ್ದೆ. ದೊಡ್ಡ ಜೆಸಿಬಿ ಮಣ್ಣನ್ನ ಅಗೆಯುವಾಗ ಅಲ್ಲಿ ನಿಂತು ಕಾದಿದ್ದೆ. ಈಗ ನಾನಿಲ್ಲ ಏನು ಮಾಡಲಾಗುತ್ತಿಲ್ಲ. ನನ್ನ ಗಿಡ ಅದನ್ನು ಕಡೆಯ ಬೇಡಿ ಎಂದರೆ ಎಲ್ಲರೂ ನಗುತ್ತಾರೆ ಅಷ್ಟೇ. ಅವಳಿಗೂ ಜೀವವಿದೆ, ಕೆಲವೊಮ್ಮೆ ಅನಿಸುತ್ತದೆ. ಮಾನವ 100ರ ಸ್ಪಿಡಲ್ಲಿ ವಾಹನವನ್ನ ಹಾಯಾಗಿ ಚಲಾಯಿಸುತ್ತಿದ್ದೇನೆ ಎಂದರೆ ಅದೆಷ್ಟು ಮರಗಿಡಗಳ ಮಾರಣಹೋಮ ವಾಗಿರಬಹುದು. ಪರಿಸರ ದಿನಾಚರಣೆಯ ವೇಳೆಗೂ ಮೊದ್ಲೇ ನನ್ನ ಗಿಡಮರ ಸತ್ತಿರುತ್ತೆ. ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳ ಕೊಲೆ ಮಾಡುವವರಿಗೆ ನನ್ನ ಧಿಕ್ಕಾರವಿರಲಿ.

ಲೇಖನ: ವೇದಶ್ರೀ ಜಿ ಎಂ , ನಾಪೋಕ್ಲು, ಎಸ್ ಡಿ ಎಂ ಕಾಲೇಜು ಉಜಿರೆ 

ಇನ್ನಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ