World Radio Day 2024: ತಂತ್ರಜ್ಞಾನದ ಬೆಳವಣಿಗೆಯ ನಡುವೆ ಕೇಳುಗ ವರ್ಗವನ್ನು ಉಳಿಸಿಕೊಂಡಿರುವ ರೇಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 10, 2024 | 4:42 PM

ನಮ್ಮ ಅಜ್ಜ ಅಜ್ಜಿಯಂದಿರ ಕಾಲದಲ್ಲಿ ಏಕೈಕ ಮನೋರಂಜನಾ ಸಂವಹನ ಮಾಧ್ಯಮವಿತ್ತೆಂದರೆ ಅದುವೇ ಈ ರೇಡಿಯೋ. ಆದರೆ ಇಂದು ಆಧುನಿಕತೆಯ ಗಾಳಿಯು ಬೀಸಿದ್ದರೂ ರೇಡಿಯೋ ಇವತ್ತಿಗೂ ತನ್ನದೇ ವಿಶಿಷ್ಟ ಶೈಲಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಫ್ ಎಂ ರೇಡಿಯೋಗಳು ಸ್ಟೇಷನ್​​​ಗಳು ಆರಂಭವಾಗಿ ಮನೋರಂಜನೆಯ ವ್ಯಾಪ್ತಿಯು ದೊಡ್ಡದಾಗಿದೆ. ಆಧುನಿಕತೆಯಲ್ಲಿ ಪತ್ರಿಕೆಗಳು, ಟಿವಿ ಹಾಗೂ ಡಿಜಿಟಲ್ ಮಾಧ್ಯಮಗಳು ವ್ಯಾಪಕವಾಗಿ ಬೆಳೆದಿದ್ದರೂ ರೇಡಿಯೋ ಮಾತ್ರ ಇವತ್ತಿಗೂ ತನ್ನ ಕೇಳುಗ ವರ್ಗವನ್ನು ಉಳಿಸಿಕೊಂಡಿದೆ. ಪ್ರತಿ ವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.

World Radio Day 2024: ತಂತ್ರಜ್ಞಾನದ ಬೆಳವಣಿಗೆಯ ನಡುವೆ ಕೇಳುಗ ವರ್ಗವನ್ನು ಉಳಿಸಿಕೊಂಡಿರುವ ರೇಡಿಯೋ
ಸಾಂದರ್ಭಿಕ ಚಿತ್ರ
Follow us on

ಒಂದು ಕಾಲದಲ್ಲಿ ಹಳ್ಳಿ ಜನರ ದೈನಂದಿನ ಜೀವನ ಭಾಗವಾಗಿದ್ದ ಈ ರೆಡಿಯೋವು ಅನೇಕ ವಿಚಾರಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಎಷ್ಟೋ ಜನರ ದಿನ ಆರಂಭವಾಗುತ್ತಿದ್ದದ್ದೇ ರೇಡಿಯೋ ಕೇಳುವ ಮೂಲಕ. ಆದರೆ ತಂತ್ರಜ್ಞಾನವು ಬೆಳೆಯುತ್ತಿದ್ದಂತೆ ಹೊಸ ಹೊಸ ಸಾಧನಗಳು ಬಂದಂತೆ ಕೆಲವು ಜನರು ಈ ಹಳೆಯ ಸಂವಹನ ಮಾಧ್ಯಮವಾದ ರೆಡಿಯೋವನ್ನು ಮರೆತೇ ಬಿಟ್ಟರು. ಹೊಸ ಹೊಸ ವಿನ್ಯಾಸದ ರೇಡಿಯೋಗಳು ಮಾರುಕಟ್ಟೆಗೆ ಬಂದರೂ ಕೂಡ ಕೇಳುಗ ಸಂಖ್ಯೆ ಕಡಿಮೆಯೇ. ಆದರೆ ವಿಶ್ವಸಂಸ್ಥೆಯು ರೇಡಿಯೋವನ್ನು ನೆನಪಿಸುವುದಕ್ಕಾಗಿ ಪ್ರತಿ ವರ್ಷ ಫೆಬ್ರವರಿ 13 ರಂದು ರೇಡಿಯೋ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ದಿನವು ರೇಡಿಯೋದ ಮಹತ್ವ ಹಾಗೂ ಅದರ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ವಿಶ್ವ ರೇಡಿಯೋ ದಿನದ ಇತಿಹಾಸ:

2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬಗ್ಗೆ ತನ್ನ ಅಭಿಪ್ರಾಯವನ್ನು ಯುನೆಸ್ಕೋದ ಮುಂದೆ ಪ್ರಸ್ತಾಪಿಸಿತು. 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರೇಡಿಯೋ ದಿನವು ಆಚರಿಸಲು ಒಪ್ಪಿಗೆ ಸಿಕ್ಕಿತು. ಹಾಗಾಗಿ 2012ರ ಫೆಬ್ರವರಿ 13ರಿಂದ ಪ್ರತಿ ವರ್ಷವು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ನಿಮ್ಮ ಸಂಗಾತಿಗೆ ಈ ಆರು ಭರವಸೆ ನೀಡುವ ಮೂಲಕ ಪ್ರೀತಿಯ ಬಂಧವನ್ನು ಬಲಪಡಿಸಿಕೊಳ್ಳಿ

ವಿಶ್ವ ರೇಡಿಯೋ ದಿನದ ಮಹತ್ವ ;

ಗ್ರಾಮೀಣ ಜನರ ಅಚ್ಚು ಮೆಚ್ಚಿನ ಮನೋರಂಜನಾ ಮಾಧ್ಯಮವಾಗಿದ್ದ ಈ ರೇಡಿಯೋದ ಮಹತ್ವವನ್ನು ನೆನಪಿಸಿಕೊಳ್ಳುವ ಕೆಲಸವಾಗುತ್ತಿದೆ. ಹೀಗಾಗಿ ವಿಶ್ವದಾದಂತ್ಯ ಪ್ರತಿ ವರ್ಷ ಫೆಬ್ರವರಿ 13 ರಂದು ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನವೂ ರೇಡಿಯೋ ಬಳಕೆಗೆ ಹೆಚ್ಚು ಜನರನ್ನು ಪ್ರೋತ್ಸಾಹಿಸುವುದಾಗಿದೆ. ಹಳ್ಳಿಯ ಜನರು ಮಾಹಿತಿಗಾಗಿ ಅವಲಂಬಿಸಿದ್ದ ಈ ರೇಡಿಯೋದ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವುದಾಗಿದೆ. ಹೀಗಾಗಿ ರೇಡಿಯೋ ದಿನದಂದು ವಿವಿಧ ಶಾಲಾ ಕಾಲೇಜುಗಳಲ್ಲಿ ವಿಚಾರಗೋಷ್ಠಿಗಳು ಮತ್ತು ಚರ್ಚಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ಮೂಲಕ ಇಂದಿನ ಯುವ ಪೀಳಿಗೆಗೆ ರೇಡಿಯೊದ ಮಹತ್ವ ಮತ್ತು ಇತಿಹಾಸವನ್ನು ಸವಿವರವಾಗಿ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ