World Sight Day 2021: ‘ನಿಮ್ಮ ದೃಷ್ಟಿ ನಿಮ್ಮ ಶಕ್ತಿ’ ಕಣ್ಣಿನ ಒತ್ತಡ ಸಮಸ್ಯೆ ಎದುರಿಸಲು ಕೆಲವು ಸರಳ ಮಾರ್ಗಗಳು ಇಲ್ಲಿವೆ

ವಿಶ್ವ ದೃಷ್ಟಿ ದಿನ: ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ. ಯಾವಾಗಲೂ ಕಣ್ಣಿನ ಆರೋಗ್ಯ ಸಮಸ್ಯೆ ಕುರಿತಾಗಿ ನಿರ್ಲಕ್ಷ್ಯ ಬೇಡ.

World Sight Day 2021: ‘ನಿಮ್ಮ ದೃಷ್ಟಿ ನಿಮ್ಮ ಶಕ್ತಿ’ ಕಣ್ಣಿನ ಒತ್ತಡ ಸಮಸ್ಯೆ ಎದುರಿಸಲು ಕೆಲವು ಸರಳ ಮಾರ್ಗಗಳು ಇಲ್ಲಿವೆ
ವಿಶ್ವ ದೃಷ್ಟಿ ದಿನ

ಪ್ರತೀ ವರ್ಷ ಅಕ್ಟೋಬರ್ ಎರಡನೇ ಗುರುವಾರ ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಅಕ್ಟೋಬರ್ 14ನೇ ತಾರೀಕಿನಂದು ಬಂದಿರುವ ಈ ದಿನವನ್ನು ಕುರುಡುತನ ಮತ್ತು ದೃಷ್ಟಿಹೀನತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಒತ್ತಡದ ಕೆಲಸ, ಕಂಪ್ಯೂಟರ್ ಮೊಬೈಲ್ ಈ ರೀತಿಯಾದ ಉಪಕರಣಗಳ ಹೆಚ್ಚಿನ ಬಳಕೆಯಿಂದಾಗಿ ಕಣ್ಣಿನ ತುರಿಕೆ, ದೃಷ್ಟಿ ದೋಷ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಹೀಗಿರುವಾಗ ಕಣ್ಣಿನ ಆರೋಗ್ಯದ ಕುರಿತಾಗಿ ಹೆಚ್ಚಿನ ಗಮನವಹಿಸಲೇಬೇಕು.

ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನೀವು ಪ್ರತಿನಿತ್ಯ ಈ ಕೆಲವು ಮಾರ್ಗಗಳನ್ನು ಅನುಸರಿಸಬೇಕು. ನಿಮ್ಮ ದೃಷ್ಟಿ ನಿಮ್ಮ ಶಕ್ತಿ, ಹಾಗಿರುವಾಗ ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಸುಧಾರಣೆಗೆ ಅವಶ್ಯವಿರುವ ಈ ಕೆಲವು ಸಲಹೆಗಳು ನಿಮಗಾಗಿ. ಇವುಗಳನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮ ಕಣ್ಣಿನ ಸುರಕ್ಷತೆ ಮಾಡಿಕೊಳ್ಳಿ.

ಸರಿಯಾದ ಮಾರ್ಗದಲ್ಲಿ ಕುಳಿತುಕೊಳ್ಳಿ
ನೀವು ಕುಳಿತುಕೊಳ್ಳುವ ರೀತಿ ನಿಮ್ಮ ಕಣ್ಣಿನ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಈ ರೀತಿಯ ಸಾಧನಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ ಅಥವಾ ಕೆಲಸ ಮಾಡುವಾಗ ಸರಿಯಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಭುಜ ಸಡಿಲವಾಗಿರಲಿ ಮತ್ತು ಕೆಲಸ ಮಾಡುವಾಗ ನಿಮ್ಮ ಕುತ್ತಿಗೆ, ತಲೆ ಮುಂದಕ್ಕೆ ಭಾಗದಂತೆ ನೋಡಿಕೊಳ್ಳಬೇಕು.

ಆಗಾಗ ವಿರಾಮ ತೆಗೆದುಕೊಳ್ಳಿ
ಕಂಪ್ಯೂಟರ್ ಮುಂದೆ ಕುಳಿತು ಕೆಲಸ ನಿರ್ವಹಿಸುವಾಗ 20 ನಿಮಿಷಗಳಿಗೊಮ್ಮೆ ಕಂಪ್ಯೂಟರ್ ಪರದೆಯಿಂದ ದೂರವಿರಿ. ಸುಮಾರು 20 ಸೆಕೆಂಡುಗಳ ಕಾಲ ಕಾಲಾವಕಾಶ ತೆಗೆದುಕೊಳ್ಳಿ. ಆ ಸಮಯದಲ್ಲಿ ನಿಮ್ಮ ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿ ಪಡೆದುಕೊಳ್ಳಿ.

ಆಗಾಗ ಕಣ್ಣು ಮಿಟುಕಿಸಿ
ನಿಮ್ಮ ಕಣ್ಣುಗಳ ಒಣಗದಂತೆ ನೋಡಿಕೊಳ್ಳಲು ಆಗಾಗ ಕಣ್ಣು ಮಿಟುಕಿಸಿ. ಕಂಪ್ಯೂಟರ್ ಮುಂದೆ ಕುಳಿತಾಗ ಕಣ್ಣು ಮಿಟುಕಿಸುವ ಅಭ್ಯಾಸ ಕಡಿಮೆಯಾಗುತ್ತದೆ. ಆದ್ದರಿಂದ ಕಣ್ಣು ತೇವಾಂಶದಿಂದ ಕೂಡಿರಲು ಆಗಾಗ ಕಣ್ಣು ಮಿಟುಕಿಸುವ ಅಭ್ಯಾಸ ಮಾಡಿಕೊಳ್ಳಿ.

ಸರಿಯಾದ ಕನ್ನಡಕ ಧರಿಸಿ
ನೀವು ಡಿಜಿಟಲ್ ಸಾಧನಗಳನ್ನು ಬಳಸುವಾಗ ಸರಿಯಾದ ಕನ್ನಡಕವನ್ನು ಧರಿಸಿದ್ದಿರಾ? ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಧರಿಸಿರುವ ಕನ್ನಡಕದ ಗ್ಲಾಸ್​ಗಳು ಅಪ್ ಟು ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನೇತ್ರತಜ್ಞರನ್ನು ವರ್ಷಕ್ಕೆ ಒಮ್ಮೆಯಾದರೂ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ.

ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ
ನಿಮ್ಮ ಕಣ್ಣುಗಳಲ್ಲಿ ಒತ್ತಡದ ಸಮಸ್ಯೆ ಕಾಡುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸುವುದು ಒಳ್ಳೆಯದಲ್ಲ. ತಕ್ಷಣ ವೈದ್ಯರನ್ನು ಭೇಟಿ ಮಾಡಿ ನಿಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ. ಅತ್ಯಂತ ಸೂಕ್ಷ್ಮ ಭಾಗ ಕಣ್ಣಿನ ಆರೋಗ್ಯದ ಕುರಿತಾಗಿ ಯಾವಾಗಲೂ ಕಾಳಜಿ ಇರಲಿ.

ಇದನ್ನೂ ಓದಿ:

Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ

Eye Health: ಕಣ್ಣಿನ ಉರಿ ಸಮಸ್ಯೆಯೇ? ಸುರಕ್ಷತೆಗೆ ಈ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕ

Read Full Article

Click on your DTH Provider to Add TV9 Kannada