ಹೊಳೆಯಲ್ಲಿ ಜಾರಿ ಬಿದ್ದ ಅಣ್ಣನ ಮಗನ ರಕ್ಷಣೆಗೆ ಧಾವಿಸಿದ ಲಯನ್ಸ್ ಕ್ಲಬ್ ನಿರ್ದೇಶಕ ನೀರುಪಾಲು

  • KUSHAL V
  • Published On - 17:46 PM, 25 Oct 2020

ಕೊಡಗು: ಹೊಳೆಯಲ್ಲಿ ಮುಳುಗಿ ಇಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿಳಿಗೇರಿ ಬಳಿ ನಡೆದಿದೆ. ಮಡಿಕೇರಿ ಲಯನ್ಸ್ ಕ್ಲಬ್ ನಿರ್ದೇಶಕ ಬಿ.ನಂಜಪ್ಪ(50) ಹಾಗೂ ಅವರ ಅಣ್ಣನ ಮಗ ನಿರೋಷ್(10) ನೀರುಪಾಲಾದ ದುರ್ದೈವಿಗಳು.

ಹೊಳೆಯಲ್ಲಿ ಕಾಲು ತೊಳೆಯಲು ಹೋದ ವೇಳೆ ನಿರೋಷ್ ನೀರಿನೊಳಕ್ಕೆ ಜಾರಿ ಬಿದ್ದಿದ್ದಾನೆ. ಇದನ್ನು ಕಂಡು, ನಿರೋಷ್​ ರಕ್ಷಣೆಗೆ ತೆರಳಿದ್ದ ನಂಜಪ್ಪ ಸಹ ನೀರುಪಾಲಾಗಿದ್ದಾರೆ.