Simone de Beauvoir : ‘ಕೊನೆಯದಾಗಿ ಅಲ್ಲೊಂದು ಶಬ್ದ ಬರೆಯುವುದು ಬಾಕಿಯಿತ್ತು ಅದನ್ನು ನಾನು ಬರೆದುಬಿಟ್ಟೆ’

Love and Relationship : ‘ಯಾರು ನಿಮ್ಮವರಾಗುವುದಿಲ್ಲವೋ ಅವರನ್ನು ಪ್ರೀತಿಸುವುದು, ಯಾರು ಇನ್ನೊಬ್ಬರ ಪ್ರೇಮದಲ್ಲಿದ್ದಾರೋ ಅವರನ್ನು ಬಯಸುವುದು, ಯಾರ ಜೀವನದಲ್ಲಿ ನನಗೆ ಮುಖ್ಯ ಸ್ಥಾನವಿಲ್ಲವೋ ಅವರಿಗಾಗಿ ಹಂಬಲಿಸುವುದು ವ್ಯರ್ಥವೆನಿಸಿದೆ. ನೀನು ಕೆಲವೇ ವಾರಗಳ ಗೆಳತಿಯಾಗಿರುವುದು ನನಗಿಷ್ಟವಿಲ್ಲ. ಇಂಥದೊಂದು ಸ್ಥಿತಿಯ ಬಗ್ಗೆ ನನಗೆ ನಂಬಿಕೆಯಿಲ್ಲ.’ ಎಲ್​ಗ್ರೇನ್

Simone de Beauvoir : ‘ಕೊನೆಯದಾಗಿ ಅಲ್ಲೊಂದು ಶಬ್ದ ಬರೆಯುವುದು ಬಾಕಿಯಿತ್ತು ಅದನ್ನು ನಾನು ಬರೆದುಬಿಟ್ಟೆ’
ಸ್ತ್ರೀವಾದಿ ಸಿಮೊನ್ ದ ಬೋವಾ
Follow us
|

Updated on:Dec 01, 2021 | 11:05 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

ಲೇಖಕ ವಿಕ್ರಮ ವಿಸಾಜಿ ಅನುವಾದಿಸಿದ ಸ್ತ್ರೀವಾದಿ, ಮಾನವತಾವಾದಿ ಸಿಮೊನ್ ದ ಬೋವಾ ಮಾತುಕಥನದಿಂದ.

ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಸಮುದ್ರದ ದಂಡೆಯ ಮೇಲೆ ತಿರುಗುತ್ತಿದ್ದೆ. ಸೂರ್ಯನ ಕಿರಣಗಳಿಂದ ಉಸುಕು ಹೊಳೆಯುತ್ತಿತ್ತು. ನೀರಿನ ಬಣ್ಣ ಕೂಡ ಬದಲಾಗುತ್ತಿತ್ತು. ಮನಸ್ಸಿನಲ್ಲಿ ಏನೇನೋ ವಿಚಾರಗಳು. ಇನ್ನುಮುಂದೆ ಎಲ್​ಗ್ರೇನ್​ ಜೊತೆ ಭೇಟಿ ಕಷ್ಟ. ಈ ಮನೆ, ಸಮುದರ ದಂಡೆ, ಸೊಗಸಾದ ಉಸುಕು, ದಂಡೆಯಲ್ಲಿ ತಿರುಗುವ ಹಕ್ಕಿಗಳ ವೈಯ್ಯಾರ ಎಲ್ಲವುಗೊಂದಿಗೆ ನೆನಪುಗಳು ಬೆರೆತುಕೊಂಡಿದ್ದವು. ಎಲ್​ಗ್ರೇನ್ ಜೊತೆಗಿನ ಸಂಬಂಧ ಮುಗಿಯುವುದು ಗೊತ್ತಿದ್ದರೂ ಮನಸ್ಸು ಭಾರವಾಗಿತ್ತು. ಯಾಕೆ ದುಃಖ ಬಾಧಿಸುತ್ತಿದೆ ಅಂತ ಅರ್ಥ ಮಾಡಿಕೊಳ್ಳಲು ಹೆಣಗಾಡಿದೆ. ಒಬ್ಬ ವ್ಯಕ್ತಿಯನ್ನು ಕಳೆದುಕೊಳ್ಳುವುದಕ್ಕೋ? ಒಂದು ಸುಂದರ ಪರಿಸರ ಕಳೆದುಕೊಳ್ಳುವುದಕ್ಕೋ? ಅಥವಾ ನನ್ನನ್ನು ನಾನೇ ಕಳೆದಕುಕೊಂಡಿರುವುದಕ್ಕೋ? ನಿರ್ಣಯಿಸುವುದು ನಿಜಕ್ಕೂ ಕಷ್ಟ.

ನಮ್ಮಿಬ್ಬರ ಕೊನೆಯ ವಿದಾಯ ಸೌಹಾರ್ದಯುತವಾಗಿರಬೇಕೆಂದು ನಿರ್ಧರಿಸಿದ್ದೆವು. ಎಲ್​ಗ್ರೇನ್​ ನಾಳೆ ಮಧ್ಯಾಹ್ನ ರೈಲ್ವೆ ಸ್ಟೇಷನ್ನಿಗೆ ಬಿಡಲು ಬರುವವನಿದ್ದ. ಅಲ್ಲಿಂದ ರೈಲು ಹಿಡಿದು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಅಂದಿನ ಬೆಳಗ್ಗೆ ಆ ಬೇಸರ, ಸಂಕೋಚ, ವಿಷಾದದಲ್ಲಿದ್ದೆವು. ಎಷ್ಟೆಲ್ಲಾ ಹರಟೆ ಹೊಡೆಯುತ್ತಿದ್ದವರಿಗೆ ಮಾತು ಕಳೆದುಹೋಗಿದ್ದವು. ಕೊನೆಗೆ ನಾನೇ ಮಾತನಾಡಿದೆ. ನಾನಿಲ್ಲಿ ಸುಂದರ ಕ್ಷಣಗಳನ್ನು ಕಳೆದಿರುವುದಾಗಿಯೂ, ನಮ್ಮ ಸ್ನೇಹ ಚಿರಾಯುವಾಗಲೆಂದೂ ಅವನ ಕೈ ಹಿಡಿದುಕೊಂಡೆ. ಎಲ್​ಗ್ರೇನ್ ಭಾವುಕನಾಗಿದ್ದ. ಇದು ಸ್ನೇಹವಲ್ಲ ಎಂದ. ಪ್ರೇಮಕ್ಕಿಂತ ಬೇರೆ ಪದ ಹೊಳೆಯುತ್ತಿಲ್ಲವೆಂದ. ಪ್ರೇಮವಲ್ಲದೆ ನಿನಗೆ ಬೇರೇನು ಕೊಡಲಾರೆನೆಂದ. ನಮ್ಮಿಬ್ಬರ ನಡುವೆ ಮತ್ತೆ ಅಸಹನೀಯ ಮೌನ. ನೆನಪುಗಳು ನುಗ್ಗಿಬಂದವು. ನಮ್ಮ ಪ್ರೇಮ ಶಾಶ್ವತವೆಂದೆ. ಅದಕ್ಕವನು ಪ್ರೇಮ ಶಾಶ್ವತವೆಂದಾದರೆ ಇದನ್ಯಾಕೆ ಕೊನೆಯ ಕ್ಷಣವೆಂದುಕೊಳ್ಳಬೇಕು? ಅಂತ ಕೇಳಿದ. ಯಾಕೋ ಜೀವನ ವಿಚಿತ್ರ ತಳಮಳಗಳಿಗೆ ದೂಡುತ್ತಿತ್ತು. ಇನ್ನು ಅಳುವ ಸರದಿ ನನ್ನದು. ಕಣ್ಣೀರು ಹನಿಯುತ್ತಲೇ ಇತ್ತು. ಲಿಂಕನ್ ಹೋಟೆಲ್ಲಿನ ಕೋಣೆಯಲ್ಲಿ ಇಬ್ಬರ ಕಣ್ಣುಗಳು ಒದ್ದೆಯಾಗಿದ್ದವು. ನಮ್ಮ ನಡುವೆ ಎಲ್ಲವೂ ಮುಗಿಯಿತೇ? ಚಡಪಡಿಸುತ್ತ ಹೊರಡಲನುವಾದೆ.

Abhijnana daily column faminist simon de beauvoir translated by kannada writer vikram visaji

ಪಲ್ಲವ ಪ್ರಕಾಶನದಿಂದ ಇತ್ತೀಚೆಗೆ ಪ್ರಕಟವಾದ ಕೃತಿ

ಪ್ಯಾರಿಸ್ಸಿಗೆ ಬಂದಾಗ ಎಲ್ಲೆಡೆ ಹೂಗಳು ಅರಳಿ ನಿಂತಿದ್ದವು. ನನಗೆ ಉತ್ತರ ಸಿಕ್ಕಂತಾಗಿತ್ತು. ಎಲ್​ಗ್ರೇನ್​ಗೊಂದು ದೀರ್ಘ ಪತ್ರ ಬರೆದೆ. ಕೆಲ ವಾರಗಳ ನಂತರ ಆತನಿಂದ ಪತ್ರ ಬಂದಿತ್ತು; ‘ಯಾರೇ ಆಗಿರಲಿ ಹಳೆಯ ಭಾವನೆಗಳನ್ನು ಮರೆಯಲಾಗುವುದಿಲ್ಲ. ಆದರೆ ಪರಸ್ಪರರನ್ನು ನಿಯಂತ್ರಿಸುವುದಕ್ಕೆ ಅವಕಾಶವಿರುವುದಿಲ್ಲ. ಯಾರು ನಿಮ್ಮವರಾಗುವುದಿಲ್ಲವೋ ಅವರನ್ನು ಪ್ರೀತಿಸುವುದು, ಯಾರು ಇನ್ನೊಬ್ಬರ ಪ್ರೇಮದಲ್ಲಿದ್ದಾರೋ ಅವರನ್ನು ಬಯಸುವುದು, ಯಾರ ಜೀವನದಲ್ಲಿ ನನಗೆ ಮುಖ್ಯ ಸ್ಥಾನವಿಲ್ಲವೋ ಅವರಿಗಾಗಿ ಹಂಬಲಿಸುವುದು ವ್ಯರ್ಥವೆನಿಸಿದೆ. ನೀನು ಕೆಲವೇ ವಾರಗಳ ಗೆಳತಿಯಾಗಿರುವುದು ನನಗಿಷ್ಟವಿಲ್ಲ. ಇಂಥದೊಂದು ಸ್ಥಿತಿಯ ಬಗ್ಗೆ ನನಗೆ ನಂಬಿಕೆಯಿಲ್ಲ. ಇಲ್ಲಿಯವರೆಗೆ ಕಳೆದ ದಿನಗಳ ಬಗ್ಗೆ ಅಪಾರ ಸಂತೋಷವಿದೆ. ನನಗೂ ಈಗ ವಿಭಿನ್ನ ಬದುಕು ಬೇಕಾಗಿದೆ. ನನ್ನವಳೇ ಆಗಿರುವ ಹೆಣ್ಣಿನೊಂದಿಗೆ ಜೀವಿಸಬೇಕಾಗಿದೆ. ಸ್ವಂತ ಮನೆಯಲ್ಲಿ ಹೊಸ ಜೀವನ ಸಾಗಿಸಲು ಬಯಸಿರುವೆ. ಮೂರು ವರ್ಷದ ಮೊದಲೇ ನನಗೆ ಗೊತ್ತಾಗಿತ್ತು. ನಿನ್ನ ಪ್ರೀತಿ ಪ್ಯಾರಿಸ್ ಮತ್ತು ಸಾರ್ತ್ರ ಎಂದು. ಈಗ ಇದು ಕೂಡ ಹಳೆಯ ಮಾತು. ದೂರದಲ್ಲಿರುವ ನಿನ್ನಲ್ಲಿ ಮನಸ್ಸಿಟ್ಟು ಬದುಕುವುದು ಇನ್ನು ನನ್ನಿಂದಾಗುವುದಿಲ್ಲ. ನನ್ನ ಜೀವನ ಈಗ ನನಗಾಗಿ.’ ಪತ್ರ ಓದಿ ಮುಗಿಸಿದೆ. ಕೊನೆಯದಾಗಿ ಅಲ್ಲೊಂದು ಶಬ್ದ ಬರೆಯುವುದು ಬಾಕಿಯಿತ್ತು. ಅದು ‘ಮುಕ್ತಾಯ’. ಅದನ್ನು ನಾನು ಬರೆದುಬಿಟ್ಟೆ.

(ಸೌಜನ್ಯ : ಪಲ್ಲವ ಪ್ರಕಾಶನ, 8880087235)

ಇದನ್ನೂ ಓದಿ : Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’

Published On - 8:45 am, Wed, 1 December 21

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್