Basava Jayanti 2022: ನಿಮ್ಮ ಟೈಮ್​ಲೈನ್; ‘ಆನೀ ಬಿಜ್ಜಳಂಗೆ ಅಂಜುವೆನೆ?’ ಪ್ರಭುತ್ವವನ್ನು ಎದುರು ಹಾಕಿಕೊಂಡ ಬಸವಣ್ಣ

Basavanna : ಸಾಮಾಜಿಕ ಜಡ ಮೌಲ್ಯವನ್ನು ಮೀರಿ ಅದಕ್ಕೆ ಚಲನಶೀಲತೆಯನ್ನು ಸಾಮೂಹಿಕವಾಗಿ ಸಾಧಿಸಲು ಅವರು ಅಂತರ್ಜಾತಿ ವಿವಾಹಗಳನ್ನು ಜಾರಿಗೆ ತರಲು ಯತ್ನಿಸಿದರು. ಆದರೆ ಜಡಸಮಾಜದ ಅಂದಿನ ಪ್ರತಿನಿಧಿಯಾದ ಬಿಜ್ಜಳನ ಅಸಹಕಾರದಿಂದ ಅದು ದುರಂತದಲ್ಲಿ ಕೊನೆಗೊಂಡಿತು.

Basava Jayanti 2022: ನಿಮ್ಮ ಟೈಮ್​ಲೈನ್; ‘ಆನೀ ಬಿಜ್ಜಳಂಗೆ ಅಂಜುವೆನೆ?’ ಪ್ರಭುತ್ವವನ್ನು ಎದುರು ಹಾಕಿಕೊಂಡ ಬಸವಣ್ಣ
Follow us
ಶ್ರೀದೇವಿ ಕಳಸದ
|

Updated on:May 03, 2022 | 10:34 AM

Basava Jayanthi : ಯಾವುದೇ ಸಾಹಿತ್ಯ ಆ ಕಾಲದ ಪ್ರತಿಬಿಂಬ ಹಾಗೂ ಗತಿಬಿಂಬ. ಆದ್ದರಿಂದ ಅದನ್ನು ಗ್ರಹಿಸಲು ಆಯಾ ಕಾಲದ ಸ್ಥಿತಿಗತಿಗಳ ತಿಳಿವಳಿಕೆ ಅಗತ್ಯ. ವಚನ ಸಾಹಿತ್ಯದ ಕಾಲ ಹನ್ನೆರಡನೆಯ ಶತಮಾನ. ಅದು ಕರ್ನಾಟಕ ಇತಿಹಾಸದ ಪರ್ವಕಾಲ. ಅಂದಿನ ರಾಜಕೀಯ, ಧಾರ್ಮಿಕ, ಸಾಮಾಜಿಕ ಪಲ್ಲಟಗಳಿಂದ ಇದು ತಿಳಿದು ಬರುತ್ತದೆ. ರಾಜಕೀಯ ಅಸ್ತಿರತೆ , ಜೈನ, ವೈಷ್ಣವ, ಶೈವಗಳು ತಮ್ಮ ಅಸ್ತಿತ್ವಕ್ಕೆ ಹೋರಾಟದಲ್ಲಿ ತೊಡಗಿದ್ದ ಕಾಲ. ಅದರ ಪರಿಣಾವವಾಗಿ ಸಾಮಾಜಿಕ ಅಲ್ಲೋಲಕಲ್ಲೋಲ ಸ್ಥಿತಿ ನಿರ್ಮಾಣವಾಗಿತ್ತು. ಇವುಗಳ ಪರಿಣಾಮ ಸಹಜವಾಗಿ ಅದರ ಉಪಉತ್ಪನ್ನವಾದ ಸಾಹಿತ್ಯ ಸೃಷ್ಟಿಯ ಮೇಲೆ ಆಯಿತು. ಸಾಹಿತ್ಯ ಭಾಷೆಯ ಮೂಲಕ ಪ್ರಕಟವಾಗುವುದರಿಂದ ಭಾಷೆ ಅದನ್ನು ಪ್ರತಿಫಲಿಸುತ್ತದೆ. ವಚನ ಸಾಹಿತ್ಯದ ಭಾಷೆಯನ್ನು ಅದಕ್ಕಿಂತ ಮೊದಲ ಸಾಹಿತ್ಯದ ಜತೆಗೆ ಇಟ್ಟು ನೋಡಿದರೆ ಇದು ತಕ್ಷಣ ಗೋಚರಿಸುತ್ತದೆ. ಹಳಗನ್ನಡದ ‘ಪ ‘ಕಾರ ‘ಹ’ ಕಾರವಾಗಿ, ವ್ಯಂಜನಾಂತ್ಯಗಳು ಸ್ವರಾಂತ್ಯಗಳಾಗಿ ಮಾರ್ಪಾಡುಗೊಂಡವು. ಡಾ. ರಘುನಾಥ ಕೃಷ್ಣಮಾಚಾರ, ಲೇಖಕ

ಇವು ಕೇವಲ ಭಾಷೆಗೆ ಸಂಬಂಧಿಸಿದ ಬದಲಾವಣೆಗಳು ಮಾತ್ರವಲ್ಲದೆ ಸಾಮಾನ್ಯರ ಬದುಕಿನಲ್ಲಿ ಆದ ಪಲ್ಲಟಗಳ ಪರಿಣಾಮವಾಗಿದೆ. ಅದು ಛಂದೋರೂಪದಲ್ಲಿ ಆದ ಬದಲಾವಣೆಗಳಲ್ಲಿ ಕೂಡ ಕಾಣಬಹುದು. ಏಕೆಂದರೆ ವಚನಗಳಿಗೆ ಯಾವುದೇ ಛಂದೋಬಂಧನಗಳಿಲ್ಲ. ಇದು ಕೂಡ ಮೇಲಿನ ಬದಲಾವಣೆಗಳ ಸಂಕೇತ. ಆದ್ದರಿಂದ ಬದುಕಿನಲ್ಲಿ ಆದ ಬದಲಾವಣೆಗಳ ದ್ಯೋತಕವಾಗಿದೆ ಅವರ ವಚನಗಳು.

ಆನೀ ಬಿಜ್ಜಳಂಗೆ ಅಂಜುವೆನೆ? ಎನ್ನುವ ಬಸವಣ್ಣನ ಮಾತು ಪ್ರಭುತ್ವವನ್ನು ಎದುರು ಹಾಕಿಕೊಂಡ ಅವರ ದಿಟ್ಟತನಕ್ಕೆ ನಿದರ್ಶನವಾಗಿದೆ. ಅದರಂತೆ ‘ಇವನಾರವ ಇವನಾರವ ಎನಿಸದಿರಯ್ಯ ಇವ ನಮ್ಮ ನಮ್ಮವ ಎಂದೆನಿಸಯ್ಯ’ ಎಂದು ಹೇಳುವಾಗ, ಜನರನ್ನು ಅನ್ಯರೆಂದು ಪರಿಗಣಿಸುವುದನ್ನು ನಿರಾಕರಿಸಿದ, ಎಲ್ಲರನ್ನೂ ಒಳಗೊಂಡ ಅವರ ವಿಶಾಲದೃಷ್ಟಿಗೆ ನಿದರ್ಶನ. ಜಾತಿನಿಷ್ಠವಾದ ನಮ್ಮ ಸಮಾಜದ ಅಂದಿನ ‌ದಿನಗಳಲ್ಲಿ‌ ಇದು ಎಂತಹ ಕ್ರಾಂತಿಕಾರಕ ಮೌಲ್ಯ. ಅದರಂತೆ ದೇವಾಲಯದ ಸಂಸ್ಕೃತಿಯ ಅಂದಿನ ಸಂದರ್ಭದಲ್ಲಿ ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುವ ವಚನ ಸ್ಥಾವರ ಕಲ್ಪನೆಯನ್ನು ನಿರಾಕರಿಸಿ ಜಂಗಮ ಎನ್ನುವ ಚಲನಶೀಲ ಪರಿಕಲ್ಪನೆಯನ್ನು ಎತ್ತಿ ಹಿಡಿದರು.

ಇದನ್ನೂ ಓದಿ : ನಿಮ್ಮ ಟೈಮ್​ಲೈನ್: ಭಾರತದ ಭಾರಜೀವಿ ರಿಜ್ವಾನಾ ಬಾನು ‘ಬ್ಯಾಡ್ಜ್ ನಂಬರ್ ಹದಿನಾರು’

ಮಾತಿನ ಮಹತ್ವ ಸಾರುವ ಅವರ ವಚನದ ‘ಕೊನೆಯ ಸಾಲು’ ನುಡಿಯೊಳಗಾಗಿ ನಡೆಯದಿರ್ದೊಡೆ ಕೂಡಲ ಸಂಗಮ ನೆಂತೊಲಿವನಯ್ಯ’ ನಡೆ ನುಡಿಗಳ ನಡುವೆ ಇರಬೇಕಾದ ಐಕ್ಯತೆಯನ್ನು ಶ್ರುತಪಡಿಸುತ್ತದೆ. ಲೋಕದ ಡೊಂಕ ತಿದ್ದ ಹೊರಟವರಿಗೆ ಮೊದಲು ‘ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ಮನವ ಸಂತೈಸಿಕೊಳ್ಳಿ’ ಎಂದು ಆತ್ಮಾವಲೋಕನಕ್ಕೆ ಪ್ರಾಶಸ್ತ್ಯ ನೀಡುತ್ತದೆ. ಇದು ಏಕ ಕಾಲಕ್ಕೆ ಅಂತರಂಗ ಬಹಿರಂಗ ಶುದ್ಧತೆಯ. ಆವಶ್ಯಕತೆಯನ್ನು ಎತ್ತಿ ಹಿಡಿಯುತ್ತದೆ. ಮೇಲ್ಜಾತಿಯ ಭ್ರಮೆಯನ್ನು ಅವರು ಎರಡು ರೀತಿಯಲ್ಲಿ ಮೀರಲು ಪ್ರಯತ್ನ ಮಾಡಿದರು. ಒಂದು: ‘ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯ’ ಎನ್ನುವುದರ ಮೂಲಕ. ಎರಡು  ‘ಮಾದಾರ ಚೆನ್ನಯ್ಯನ ದಾಸಿಯ ಮಗ ನಾನು’ ಎಂದು ತನ್ನನ್ನು ಕೆಳಜಾತಿಯವರ ಜತೆಯಲ್ಲಿ ಗುರುತಿಸಿಕೊಳ್ಳುವ ಮೂಲಕ. ಇದು ಸಾಮಾಜಿಕ ಜಡ ಮೌಲ್ಯವನ್ನು ಮೀರಿ ಅದಕ್ಕೆ ಚಲನಶೀಲತೆಯನ್ನು ತಂದುಕೊಡಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಕ್ಕೆ ನಿದರ್ಶನ. ಅದನ್ನು ಸಾಮೂಹಿಕವಾಗಿ ಸಾಧಿಸಲು ಅವರು ಅಂತರ್ಜಾತಿ ವಿವಾಹಗಳನ್ನು ಜಾರಿಗೆ ತರಲು ಯತ್ನಿಸಿದರು. ಆದರೆ ಅಂದಿನ ಜಡ ಸಮಾಜ ಮತ್ತು ಅದರ ಪ್ರತಿನಿಧಿಯಾದ ಬಿಜ್ಜಳನ ಅಸಹಕಾರದಿಂದ ಅದು ದುರಂತದಲ್ಲಿ ಕೊನೆಗೊಂಡಿತು.

ಅದರಂತೆ ಕಾಯಕ ತತ್ವದ ಮೂಲಕ ಸ್ವಾವಲಂಬನೆಯ ಬೀಜ ಬಿತ್ತಿ ಬೆಳೆದರು. ಆಯ್ದಕ್ಕಿ ಲಕ್ಕಮ್ಮನ ‘ಈಸಕ್ಕಿ ಆಸೆ ನಿಮಗೇಕೆ’ ಎನ್ನುವ ವಚನ ಇದಕ್ಕೆ ನಿದರ್ಶನ. ಅಂದಂದಿನ ಕಾಯಕದಿಂದ ಬಂದುದನ್ನು ಮಾತ್ರ ಸ್ವೀಕರಿಸಬೇಕು ಎಂದು. ಇದು ಅಸಂಗ್ರಹ ಪ್ರವೃತ್ತಿಯ ಮಹತ್ವ ಸಾರುತ್ತದೆ. ಅಲ್ಲದೆ ಆರ್ಥಿಕ ಸಮಾನತೆಗೆ ದಾರಿಮಾಡಿಕೊಟ್ಟಿತು. ಗಂಡುಹೆಣ್ಣಿನ ನಡುವಿನ ಸಮಾನತೆಯನ್ನು ಸಾಧಿಸಲು ‘ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ’ ಎಂಬ ದಾಸಿಮಯ್ಯನ ವಚನ ಇದಕ್ಕೆ ಕನ್ನಡಿ ಹಿಡಿಯುತ್ತದೆ. ಹೀಗೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ಹಾಗೂ ವೈಯಕ್ತಿಕವಾಗಿ ಅವರು ಅಂದು ಮಾಡಿದ ಮೌಲ್ಯ ಪಲ್ಲಟಗಳು, ಇಂದಿಗೂ ಮಹತ್ವದ ಸ್ಥಾನ ಪಡೆದಿದೆ. ಇದು ವಚನ ಸಾಹಿತ್ಯದ ಮೂಲಕ ಪ್ರಕಟಗೊಂಡ ಜೀವನ ಪರ ಮೌಲ್ಯಗಳಾಗಿವೆ.

*

ಇದನ್ನೂ ಓದಿ : Pt. Rajshekhar Mansur‘s Death: ‘ಸಂಗೀತ ಕಲಿಸೋದು ಹಣ ಮಾಡುವ ವ್ಯವಹಾರವಲ್ಲ’ ಪಂ. ರಾಜಶೇಖರ ಮನ್ಸೂರ

ಗಮನಿಸಿ: ‘ನಿಮ್ಮ ಟೈಮ್​ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

Published On - 10:12 am, Tue, 3 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ