Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ಸೋಲಿಗರ ಚಿತ್ರಗಳನ್ನು ಹರವಿಟ್ಟಿದ್ದಾರೆ ಎಸ್ಆರ್ ವಿಜಯಶಂಕರ

Soliga : ‘ಹಂಚಿ ತಿನ್ನುವುದು, ದುಡಿಯಲಾಗದ ವ್ಯಕ್ತಿಯ ಆರೈಕೆ ಮುಂತಾದವನ್ನು ‘ತ್ಯಾಗ’, ‘ಪರೋಪಕಾರ’ ಅಥವಾ ‘ಸಹಕಾರ’ಎಂದು ಸೋಲಿಗರು ಭಾವಿಸುವುದಿಲ್ಲ. ಈ ಶಬ್ದಗಳೇ ಅವರ ಪರಿಭಾಷೆಯಲ್ಲಿಲ್ಲ ಎನ್ನುವ ಜಯದೇವ, ತನ್ನ ಮಗುವಿನ ಪೌಷ್ಟಿಕತೆಗಾಗಿ ಮೇಕೆ ಮರಿಗಳ ಹಾಲು ಕಸಿಯಲು ಒಪ್ಪದ ತಾಯಿಯ ಸಹಜ ತಾಯ್ತನದ ಮನಸ್ಥಿತಿಯ ಉದಾಹರಣೆ ನೀಡುತ್ತಾರೆ.’ ಎಸ್. ಆರ್. ವಿಜಯಶಂಕರ

Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ಸೋಲಿಗರ ಚಿತ್ರಗಳನ್ನು ಹರವಿಟ್ಟಿದ್ದಾರೆ ಎಸ್ಆರ್ ವಿಜಯಶಂಕರ
ವಿಮರ್ಶಕ ಎಸ್. ಆರ್. ವಿಜಯಶಂಕರ ಮತ್ತು ಲೇಖಕ ಜಿ. ಎಸ್. ಜಯದೇವ
Follow us
ಶ್ರೀದೇವಿ ಕಳಸದ
|

Updated on:Dec 30, 2021 | 5:20 PM

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

*

‘ದೀನಬಂಧು’ ಸಂಸ್ಥಾಪಕ, ಲೇಖಕ ಜಿ.ಎಸ್. ಜಯದೇವ ಅವರ ಕೃತಿ ‘ಸೋಲಿಗರ ಚಿತ್ರಗಳು’ ಕುರಿತು ವಿಮರ್ಶಕ ಎಸ್. ಆರ್. ವಿಜಯಶಂಕರ ಅವರ ಬರಹ.

*

ಕೃತಿ : ಸೋಲಿಗ ಚಿತ್ರಗಳು; ಜೀವ ಮಿಡಿಯುವ ಅನುಭವ ಕಥನ ಲೇಖಕರು : ಜಿ. ಎಸ್. ಜಯದೇವ ಪುಟ : 298 ಬೆಲೆ : ರೂ. 320 ಪ್ರಕಾಶನ : ಪರಸ್ಪರ ಪ್ರಕಾಶನ

*

ಜಿ. ಎಸ್. ಜಯದೇವ ಅವರ ಸೋಲಿಗ ಚಿತ್ರಗಳು ಎಂಬ ಪುಸ್ತಕ 2021ರಲ್ಲಿ ಪ್ರಕಟವಾಯಿತು. 1978ರಲ್ಲಿ ಡಾ. ಸುದರ್ಶನ ಅವರೊಡನೆ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಜಯದೇವ ಅವರು ಕೆಲಸ ಮಾಡಲು ಪ್ರಾರಂಭಿಸಿದ ಬಳಿಕ ಸೋಲಿಗರೊಡನೆ ಪ್ರಾರಂಭವಾದ ಒಡನಾಟದಿಂದ ತೆರೆದು ತೋರಿಸಿದ ಹಲವು ಹತ್ತಿರದ ನೋಟಗಳು ಇಲ್ಲಿವೆ. ಇಲ್ಲಿರುವ ಸೋಲಿಗರ ವ್ಯಕ್ತಿಚಿತ್ರಗಳ ಮೂಲಕವೂ ಜಯದೇವರು ಸೋಲಿಗ ಲೋಕದ ವಾಸ್ತವ ಸ್ಥಿತಿಗತಿಗಳ ಚಿತ್ರ ತೋರಿಸುತ್ತಾರೆ. ಒಂದು ಅರ್ಥದಲ್ಲಿ ಇಲ್ಲಿನ ಪ್ರತಿಯೊಂದು ಚಿತ್ರವೂ ಸೋಲಿಗ ಲೋಕದ ಕಿಟಕಿಗಳು. ಅವುಗಳ ಮೂಲಕ ಓದುಗರು ಆ ಜನ ಸಮುದಾಯದ ಅಂತರಂಗವನ್ನು ಅಲ್ಲಿನ ಸಮಾಜದ ಹಲವು ವಿವರಗಳನ್ನು ವಿಧಿವಿಧಾನಗಳನ್ನು ಕಷ್ಟ ಸುಖಗಳನ್ನೂ ಆರ್ಥಿಕ ಲೋಕದ ಏಳು ಬೀಳುಗಳನ್ನೂ ಕಾಣಬಹುದು. ಪ್ರತೀ ಚಿತ್ರವೂ ಸಾಕಷ್ಟು ವ್ಯಾಖ್ಯಾನ ವಿಶ್ಲೇಷಣೆಗಳನ್ನು ಹುಟ್ಟಿಸಬಲ್ಲ ಸಾಂದ್ರ ಅನುಭವದ ಜೀವಂತ ತುಣುಕುಗಳು.

ಸೋಲಿಗರು ನಾಡಜನರಲ್ಲ. ಹಿಂದಿನಂತೆ ತೀರಾ ಅಲೆಮಾರಿ ಕಾಡು ಜನರೂ ಅಲ್ಲ. ತಮ್ಮದೇ ಆದ ರೀತಿಯಲ್ಲಿ ಕಾಡಿನೊಳಗೆ ತಮ್ಮ ಪೋಡಿಗಳಲ್ಲಿ ನೆಲೆನಿಂತ, ಕಾಡು ಉತ್ಪನ್ನಗಳಿಂದಲೇ ಜೀವಿಸಬಲ್ಲ ಆದಿವಾಸಿಗಳು. ಕಾಲಕ್ರಮೇಣ ಸುತ್ತಮುತ್ತಲಿನ ನಾಡಜನ, ಧರ್ಮ, ದೇವರುಗಳು, ಮನರಂಜನೆ ಮೊದಲಾದವುಗಳ ಪ್ರಭಾವವೂ ಅವರ ಮೇಲಾಗಿದೆ. ಮಾದೇಶ್ವರ ಮತ್ತು ಬಿಳಿಗಿರಿ ರಂಗಸ್ವಾಮಿಯ ಕಥೆ ಹೇಳುವ ಸೋಲಿಗರು ತಾವು ಕಾರಯ್ಯನ ವಂಶಸ್ಥರೆಂದು ತಿಳಿಯುತ್ತಾರೆ. ಮಹದೇಶ್ವರನ ಕೃಪೆಯಿಂದ ಕಾರಯ್ಯ-ಬಿಲ್ಲಯ್ಯರು ಹುಟ್ಟಿ ಕಾರಯ್ಯನ ಸಂತಾನವೇ ಸೋಲಿಗರು. ಬಿಲ್ಲಯ್ಯನ ಸಂತಾನ ಮಹದೇಶ್ವರ ಬೆಟ್ಟದ ಕಡೆಯ ಬೇಡಗಂಪಣ-ಲಿಂಗಾಯತರಾದರೆಂದೂ ಹೇಳುತ್ತಾರೆ. ಸೋಲಿಗರ ಸ್ಮೃತಿಯಲ್ಲಿ ಗುರುವಿನಗದ್ದೆ ಪೋಡಿನ ಕಾಲ ಅವರ ಸುವರ್ಣಯುಗ.

ಈ ಹಿಂದಿನ ನೆನಪುಗಳೊಡನೆ ಇಂದು ಸೋಲಿಗರ ಪೋಡಿನ ವಾಸ್ತವದ ಜೊತೆ, ಹೊಸ ನಾಗರಿಕತೆ ಬೆಳೆಯುತ್ತಾ ಹೋದಂತೆ ಆ ಮೊದಲಿನ ನಿವಾಸಿಗಳ ಪಾಡು, ಬವಣೆ, ನವನಾಗರಿಕತೆಯ ಎದುರಿನ ಅಸಹಾಯಕ ಸ್ಥಿತಿಗಳನ್ನು ಭಾವಾವೇಶಕ್ಕೆ ಒಳಗಾಗದೆ ಜಯದೇವ ಕಾಣಿಸುತ್ತಾರೆ. ಹತ್ತಿರದಿಂದ ನೋಡಿದ್ದು ಮಾತ್ರವಲ್ಲದೆ ಅವರ ಜೊತೆಗಿದ್ದು ಅನುಭವಿಸಿದ್ದರಿಂದ, ಸರಕಾರಿ ಕಾರ್ಯಕ್ರಮಗಳ ಅನುಷ್ಠಾನದ ಅಸಂಗತ ಸ್ಥಿತಿ, ಜನರ ಅಸಹಾಯಕತೆ, ನಾಗರಿಕತೆಯ ಸಹಜ ಆಕ್ರಮಣ -ಎಲ್ಲವನ್ನೂ ಜಯದೇವ ಅವರು ನಿರುದ್ವಿಗ್ನರಾಗಿ ಕಾಣಿಸುತ್ತಾರೆ. ಲೇಖಕರೊಳಗೆ ಸ್ಥಾಯಿಯಾಗಿರುವ ಮಾನವೀಯ ಕಳಕಳಿ ಮತ್ತು ಜೀವಪ್ರೀತಿ ಓದುಗರಿಗೆ ಥಟ್ಟನೆ ವೇದ್ಯವಾಗುತ್ತದೆ. ಆ ಜನಗಳಿಗೆ ಪ್ರಾಮಾಣಿಕವಾಗಿ ಮಿಡಿಯುವ ಮನಸ್ಸಿಗೆ ಮಾತ್ರ ಇಂತಹ ಒಂದು ಬರೆವಣಿಗೆ ಸಿದ್ಧಿಸಲು ಸಾಧ್ಯ.

ಆದಿವಾಸಿಗಳನ್ನು ನಮ್ಮ, ಎಂದರೆ ನಾಗರಿಕ ಬದುಕಿನಿಂದಾಗಿ ತಾವು ಮುಂದುವರಿದವರೆಂದು ತಿಳಿದಿರುವವರೆ, ಎರಡನೇ ದರ್ಜೆಯ ನಕಲಾಗಿ ಪರಿವರ್ತಿಸಬಾರದು ಎಂಬ ಪಂಡಿತ ಜವಹರಲಾಲ್ ನೆಹರು ಮಾತುಗಳನ್ನು ತಮ್ಮ ಅನುಭವದ ವಿವರಗಳಿಂದಾಗಿ ಜಯದೇವ ಒಪ್ಪುತ್ತಾರೆ. ಆಧುನಿಕತೆಯ ಮೋಡಿಗೆ ಒಳಗಾಗಿ ರೋಗಕ್ಕೊಳಗಾಗುವ ಹೆಚ್ಚಿನ ಇಳುವರಿ ಬರುವ ಶುಂಠಿ, ಅರಸಿನ ಬೆಳೆಯುವ ರೈತರಿಗೆ ರೋಗರುಜಿನುಗಳಿಲ್ಲದ ಕಾಡು ಶುಂಠಿ, ಕಾಡು ಅರಸಿನ ಬೆಳೆಯಬಲ್ಲ ಸೋಲಿಗರು ಅರ್ಥವಾಗಲಾರರು. ಸೋಲಿಗರ ಬೆಳೆಯಲ್ಲಿ ಇಳುವರಿ ಕಮ್ಮಿ. ಆದರೆ ಸೋಲಿಗರ ಮೇಲೆ ಕಾಲಕ್ರಮೇಣ ಹೆಚ್ಚು ಇಳುವರಿಯ ಆಸೆ ಪ್ರಭಾವ ಬೀರಲೂಬಹುದು. ನವನಾಗರಿಕತೆ ಸಹಸ್ರಮಾನಗಳ ಕಾಲ ಆದಿಮ ಜನರನ್ನು ಸೋಲಿಸುತ್ತಾ ಬೆಳೆದ ಕ್ರಮಕ್ಕೆ ಹಲವು ರೀತಿಯ ಒಳನೋಟಗಳು ಈ ಕೃತಿಯಲ್ಲಿವೆ. ಜಯದೇವ ಅವರ ಬದುಕಿನ ನಲವತ್ತು ವರುಷಗಳ ಕಾಲದ ಅನುಭವ ಈ ಕೃತಿಯ ಪ್ರತಿ ವಿವರದಲ್ಲೂ ಹರಳುಗಟ್ಟಿದೆ. ಅಪ್ರಯತ್ನವಾಗಿ ಭಾಷೆ ಅನುಭವಕ್ಕೆ ಸಹಜವಾದ ಅಭಿವ್ಯಕ್ತಿಯನ್ನು ತಾನೇ ತಾನಾಗಿ ಪಡೆದುಕೊಂಡಿದೆ. ಲಂಟಾನಾ ಪೊದೆಗಳಿಂದಾಗಿ ಸೋಲಿಗರು ಅನುಭವಿಸುತ್ತಿರುವ ಕಷ್ಟ, ನಷ್ಟ, ಹಿಂಸೆಗಳು ವಾಸ್ತವವೂ ಹೌದು. ನಾಗರಿಕತೆ ಉಂಟು ಮಾಡುತ್ತಿರುವ ಹಲವು ರೀತಿಯ ನಾಶಗಳ ಸಾಂಕೇತಿಕ ಸತ್ಯವೂ ಹೌದು.

ಕಾಡಿನ ಪ್ರಾಣಿ, ಪಶು, ಪಕ್ಷಿಗಳ, ಗಿಡ, ಮರ ಸಸ್ಯಗಳ ಭಾಗ ಎಂದು ತಿಳಿದು ಬದುಕಿದ ಜನ ಅವರು. ಅವರ ತಿಳುವಳಿಕೆಯನ್ನು ತಮ್ಮ ಅಗತ್ಯಗಳಿಗೆ ಹೇಗೆ ಬೆಸೆದುಕೊಳ್ಳಬಹುದು ಎಂಬುದು ಉತ್ತಮ ಸರಕಾರಿ ಅಧಿಕಾರಿಗಳಿಗೆ ತಿಳಿಯುವುದಿಲ್ಲ. ಹೀಗಾಗಿ ಅವರ ಸ್ವಾತಂತ್ರ್ಯ ಸದಾ ಸರಕಾರದ ಕಡಿವಾಣದ ನಿಯಂತ್ರಣಕ್ಕೆ ಒಳಪಡುವುದರಿಂದ ಉಂಟಾಗುವ ಅನಗತ್ಯ ಹಿಂಸೆ, ಅನಾನುಕೂಲಗಳನ್ನು ಅರಿಯಲೂ ಈ ಕೃತಿ ಸಹಾಯಕ.

ಹಂಚಿ ತಿನ್ನುವುದು, ದುಡಿಯಲಾಗದ ವ್ಯಕ್ತಿಯ ಆರೈಕೆ ಮುಂತಾದವನ್ನು ‘ತ್ಯಾಗ’, ‘ಪರೋಪಕಾರ’ ಅಥವಾ ‘ಸಹಕಾರ’ಎಂದು ಸೋಲಿಗರು ಭಾವಿಸುವುದಿಲ್ಲ. ಈ ಶಬ್ದಗಳೇ ಅವರ ಪರಿಭಾಷೆಯಲ್ಲಿಲ್ಲ ಎನ್ನುವ ಜಯದೇವ, ತನ್ನ ಮಗುವಿನ ಪೌಷ್ಟಿಕತೆಗಾಗಿ ಮೇಕೆ ಮರಿಗಳ ಹಾಲು ಕಸಿಯಲು ಒಪ್ಪದ ತಾಯಿಯ ಸಹಜ ತಾಯ್ತನದ ಮನಸ್ಥಿತಿಯ ಉದಾಹರಣೆ ನೀಡುತ್ತಾರೆ.

ಈ ಪುಸ್ತಕದ ತುಂಬಾ ಉಲ್ಲೇಖಿಸಬಲ್ಲ ನೂರಾರು ಉದಾಹರಣೆಗಳಿವೆ. ತಾನು ಕಂಡ ಬದುಕಿನ ತುಣುಕುಗಳನ್ನು ತನ್ನಂತೆ ಜಿವಪರವಾಗಿ ಚಿಂತಿಸಬಲ್ಲವರ ಜೊತೆ ಹಂಚಿಕೊಳ್ಳುವುದು ಮಾತ್ರ ಜಯದೇವರ ಉದ್ದೇಶ. ಆ ಜನಕ್ಕೆ ಒಳ್ಳೆಯದಾಗಲಿ ಎಂಬ ಉದಾರಮಾನವತಾವಾದದ ಪ್ರಾಮಾಣಿಕ ಕಳಕಳಿ ಇಲ್ಲಿದೆ. ಇನ್ನೊಂದು ಜೀವಕ್ಕೆ ಸಹಜವಾಗಿ ಮಿಡಿಯುವ ಮಾನವತೆಯಿಂದ ಹುಟ್ಟುವ ಭಾವನೆಗಳ ಮೂಲಕ ಇಲ್ಲಿ ಒಂದು ಜೀವಪರ ತಾತ್ವಿಕತೆ ಒಳಮೂಡಿದೆ. ಆ ತಾತ್ವಿಕತೆ ಸೋಲಿಗರ ಚಿತ್ರಗಳನ್ನು ಒಂದು ಚೌಕಟ್ಟಿನೊಳಗೆ ಕೂರಿಸಿ-ಇದನ್ನೊಂದು ಬಹು ಅಪರೂಪದ ಕೃತಿಯನ್ನಾಗಿ ಮಾಡಿದೆ.

ಇದನ್ನೂ ಓದಿ : Odinangala: ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದಲ್ಲಿ ‘ಅನಾರ್ಕಲಿಯ ಸೇಫ್ಟಿಪಿನ್’​ ತಂದಿದ್ದಾರೆ ಡಿಎಸ್ ನಾಗಭೂಷಣ

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಅನುವಾದಕಿ ನಾಗರೇಖಾ ಗಾಂವಕರ

Published On - 3:46 pm, Thu, 30 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ