Transgender World : ಒಳಹೊರಗಣ ಅಂತರಗಳಲ್ಲಿ ಬೆಂದ ಜೀವಗಳ ಲೆಕ್ಕ ಶೂನ್ಯ

|

Updated on: Oct 26, 2021 | 7:22 PM

Male Chauvinism : ‘ನಂಗೆ ಚಿಕ್‌ ವಯಸ್ಸಿನಲ್ಲಿ ನಾನು ಗಂಡಸು ಅಂತ ಮನಸ್ಸಿಗೆ ಅನಿಸಿದ್ರೂ ಸುತ್ತಮುತ್ತ ಇರುವ ಗಂಡಸರ ಗಂಡಸುತನ ನೋಡುವಾಗ ಗಂಡಸುತನದ ಬಗ್ಗೆ ಹೇಸಿಗೆ ಹುಟ್ಟುತ್ತಿತ್ತು.’ ರೂಮಿ ಹರೀಶ್

Transgender World : ಒಳಹೊರಗಣ ಅಂತರಗಳಲ್ಲಿ ಬೆಂದ ಜೀವಗಳ ಲೆಕ್ಕ ಶೂನ್ಯ
ರೇಖಾಚಿತ್ರ : ಕನಕಾ ಮೂರ್ತಿ
Follow us on

Rumi Column ; ರೂಮಿ ಕಾಲಂ – ಒಂದು ಲಿಂಗ ದೇಹಗಳ ವ್ಯತ್ಯಾಸಗಳಾದರೆ ಇನ್ನೊಂದು ನಮ್ಮ ಮನಸ್ಸು, ಇಚ್ಚೆ, ಆಯಕೆ, ಆಸೆ, ಮತ್ತೆ ಕಲ್ಪನೆ. ಅದು ನಮ್ಮ ತಲೆ ಕೂದಲಿಂದ ಉಂಗುಷ್ಟದವರೆಗೆ ನಮ್ಮದೇ ಆಗಿರಬೇಕು. ಇದು ಅಲ್ಟಿಮೇಟ್‌ ಉದ್ದೇಶ. ಎಲ್ಲಾ ಜನರೂ ಹೀಗೇ ಬದುಕಬೇಕು ಇದು ಅವರ ಹಕ್ಕು ಅಂತ ಇದ್ದರೂ ನಾವು ಸುಮಾರು ಪಾಲು ನಮ್ಮ ಜೀವನವನ್ನು ಒಂದು ರೀತಿಯ ಸಮಾಜಕ್ಕೆ ಹೆದರಕೊಂಡೇ ಅಡ್ಜಸ್ಟ್‌ ಮಾಡ್ಕೊತಾ ಇರ್ತೇವೆ. ಸಮಾಜದ ನೈತಿಕತೆಯ ರೂಲ್ಸ್‌ ಹೇಳುತ್ತೆ; ಗಂಡಸರು ಶಕ್ತಿಶಾಲಿಗಳು, ಮಸಲ್‌ ಪವರ್‌ ಜಾಸ್ತಿ, ಹೆಂಗಸರು ತುಂಬಾ ಎಮೊಷನಲ್ಲು ಸುಲಭವಾಗಿ ಅಳ್ತಾರೆ. ಇವೆಲ್ಲಾ ತುಂಬಾ ಬೋರಿಂಗ್‌. ಎಲ್ಲಾ ಗಂಡಸರೂ ಒಂದೇ ಥರ ಅಥವಾ ಎಲ್ಲಾ ಹೆಂಗಸರೂ ಒಂದೇ ಥರ ಎಂದು ರೂಲ್‌ ಎಲ್ಲೂ ಬರೆದಿಟ್ಟಿಲ್ಲ. ಹೆಂಗಸರು ಕೂದಲು ಉದ್ದಕ್ಕೆ ಬಿಡಬೇಕು, ಗಂಡಸರಿಗೆ ಕೋಪ ಜಾಸ್ತಿ.
ರೂಮಿ ಹರೀಶ್ 

(ಅಲೆ – 1)

ನಂಗೆ 12 ವರ್ಷ ಇರುವಾಗ ಮೊದಲ ಬಾರಿ ಒಂದ್‌ ನ್ಯೂಸ್‌ ಓದಿದೆ. ಲೀಲ ಮತ್ತು ಊರ್ಮಿಳ ಎಂಬ  ಮಹಾರಾಷ್ಟ್ರದ ಪೊಲೀಸ್ ಪೇದೆಗಳು ಮದುವೆ ಮಾಡ್ಕೊಂಡ್ರು ಅಂತ. ನಾನು ಕಂಕು ಇದನ್ನ ಓದಿ ತುಂಬಾ ಖುಷಿಯಿಂದ ವಾವ್‌ ಈ ಗಂಡಸರ ಮೇಲೆ ಡಿಪೆಂಡ್‌ ಆಗೋದೇ ಬೇಡ ಅನ್ಕೊಂಡ್ವಿ. ನಂಗೆ ಚಿಕ್‌ ವಯಸ್ಸಿನಲ್ಲಿ ಮದ್ವೆ ಅಂದ್ರೆ ಏನೋ ಇರಿಸುಮುರುಸು. ಫಸ್ಟಫಾಲ್‌ ಹುಡ್ಗಿ ನೋಡೋದು, ಹುಡ್ಗಿ ನಾಚ್ಕೊಬೇಕು, ಹಾಡ್ಬೇಕು, ಕುಣಿಬೇಕು, ನಡಿಬೇಕು ಎಟ್ಸೆಟ್ರಾ ಎಟ್ಸೆಟ್ರಾ… ಮದ್ವೆ ಅನ್ನೋದಕ್ಕೆ ಇಷ್ಟೆಲ್ಲಾ ಕಷ್ಟಪಡ್ಬೇಕಾ? ಅದ್ರಲ್ಲೂ ಹುಡ್ಗನಿಗೆ ಎಷ್ಟೊಂದು ಆದ್ಯತೆ, ದುಡ್ಡು, ಎಲ್ಲಾ. ಆಗ ಚಿಕ್‌ ವಯಸ್ಸಿನಲ್ಲಿ ನಂಗೆ ತುಂಬಾ ಕನ್ಫ್ಯೂಷನ್‌ ನಾನು ಹೆಣ್ಣೋ ಗಂಡೋ ಅಂತ. ಬಾಡಿ ಪಾರ್ಟ್ಸ್​ ನೋಡಿದ್ರೆ ನಾನು ಹೆಣ್ಣು ಅಂತ ಎಲ್ರೂ ಹೇಳಿದ್ರಿಂದ ಗೊತ್ತಾಯತು. ಬಟ್‌ ನಿಜ್ವಾಗ್ಲು ನಾನು ಹೆಣ್ಣಾ? ಈ ಗಂಡು ಹೆಣ್ಣು… ವ್ಯತ್ಯಾಸ ಏನು?

ಹೇಳಿ… ನಿಜ್ವಾಗ್ಲು ಏನು ವ್ಯತ್ಯಾಸ. ಹೆಣ್ಣು ಅಂದ್ರೆ ಮೊಲೆ, ಯೋನಿ… ಗಂಡು ಅಂದ್ರೆ ಮೀಸೆ, ದಾಡಿ, ಶಿಶ್ನ. ಹೆಣ್ಣು ದೇಹಕ್ಕೆ ಗರ್ಭ ಇರುತ್ತೆ. ಇದೆಲ್ಲಾ ಎಲ್ಲರೂ ಹೇಳೋ ವ್ಯತ್ಯಾಸಗಳು. ಅದು ದೇಹ. ಅಂದ್ರೆ ಲಿಂಗಗಳು. ಅಸಲಿಗೆ 2 ಲಿಂಗ ಅಲ್ಲಾ ಇರೋದು. ಸಂತಾನೋತ್ಪತ್ತಿ ವಿಜ್ಙಾನ – ಮಕ್ಕಳನ್ನು ಹುಟ್ಟಿಸೋ ಸೈನ್ಸು, ಅದು ಯಾವ ಲಿಂಗಗಳಿಂದ ಮಕ್ಕಳು ಹುಟ್ಟುತ್ತದೋ ಅವರು ಮಾತ್ರಾ ಮನುಷ್ಯರು ಅಂತ ಹೇಳಿದ್ರಿಂದ ಲಿಂಗ ವ್ಯತ್ಯಾಸಗಳಿರುವ ದೇಹಗಳನ್ನು ಕಳಂಕ ಎಂದು ಅಥವಾ ತಪ್ಪಾಗಿರುವ ದೇಹಗಳು ಎಂದು ಮಾಡಿಬಿಟ್ಟರು. ಅಂತರ ಲಿಂಗಗಳ ವ್ಯತ್ಯಾಸಗಳು ಎಷ್ಟಿವೆ ಎಂದು ತಿಳಿದಿಲ್ಲವಾದರೂ ಅವರೂ ಎಲ್ಲಾ ಮನುಷ್ಯರಂತೆಯೇ ಮನುಷ್ಯರು. ಕೇವಲ ಮಕ್ಕಳನ್ನು ಹುಟ್ಟಿಸುವುದು ಮಾತ್ರ ಅಲ್ಲದೇ ನಾವೆಲ್ಲಾ ಬೇರೆ ಕೆಲಸಗಳನ್ನೂ ಮಾಡ್ತೀವಿ, ಸೆಕ್ಸ್‌ ಸಂತೋಷಕ್ಕೂ ಮಾಡತೀವಿ, ಪ್ರತೀಸರ್ತಿ ಮಕ್ಕಳನ್ನು ಹುಟ್ಸಕ್ಕೇ ಅಲ್ಲ.

ಈ ಗಂಡು ಹೆಣ್ಣು ವ್ಯತ್ಯಾಸಗಳಲ್ಲದೇ ಇನ್ನೂ ಅನೇಕ ಲಿಂಗಗಳಿವೆ ಮತ್ತು ಅವರೆಲ್ಲರೂ ನಾವೆಲ್ಲರೂ ಈ ಲಿಂಗ ವ್ಯತ್ಯಾಸಗಳಲ್ಲಿಯೇ ಬರೋದು. ನನ್‌ ದೋಸ್ತ್‌ ಒಬ್ರು ಅವರ ಜೀವನದಲ್ಲಿ ಬೆಳೆಯುವಾಗ ಮನೆಯಲ್ಲಿ ಅವರು ಹೆಂಗಸು ಅಂತ ಬೆಳೆಸಿ ವಯಸ್ಸಾದರೂ ಮುಟ್ಟಾಗದೆ, ಬರ್ತಾ ಬರ್ತಾ ಅವರಿಗೆ ಮೀಸೆ ದಾಡಿ ಬೆಳೆಯುತ್ತಾ ಅವರನ್ನು ವಿಮೆನ್ಸ್‌ ಹಾಸ್ಟಲ್ಲಿಂದ ತೆಗೆದು ಹಾಕಿದ್ರು. ಹೆಣ್ಣು ಎಂಬ ದೇಹದಲ್ಲಿ ಮೀಸೆ ಬಂದರೆ ಏನಕ್ಕೆ ಹೆದರಿಕೆ ಅಥವಾ ಅಸಹ್ಯ. ಯಾಕೆಂದರೆ ನಮ್ಮ ಸುತ್ತಾ ಎಲ್ಲಾ ಕಡೆ ನಾವು ಕಾಣಬೇಕಾಗಿರುವ ಬರೀ ಗಂಡು ಮತ್ತು ಹೆಣ್ಣು ದೇಹ ಎಂದು ನಮ್ಮ ಕಲ್ಚರ, ಮೀಡಿಯ, ಜಾಹಿರಾತುಗಳು, ಸಿನೆಮ ಎಲ್ಲಾ ಹೇಳ್ತಾ ಇವೆ. ನಾವೂ ಅದನ್ನ ನಂಬಿ ಲಿಂಗ ವ್ಯತ್ಯಾಸಗಳಲ್ಲಿ ಹುಟ್ಟುವ ಜನ ಇರ್ಲೇಬಾರ್ದು ಅನ್ನೋಹಾಗೆ ನಮ್ಮ ವ್ಯವಸ್ಥೆನಾ ಕಟ್ಟಿದ್ದೇವೆ. ಯಾಕೆ ನಮಗೆ ಸ್ವಲ್ಪನೂ ಬೇರೆ ಅನ್ನೋದನ್ನ ಒಪ್ಕೊಳಕ್ಕೆ ಆಗಲ್ವ? ಅಲ್ಲ ಕೆಲವು ಜನ ಬೇರೆ ಅಂತ ಮಾಡಿರೋದೇ ಇಂಥಾ ವ್ಯವಸ್ಥೆ. ಈ ವ್ಯವಸ್ಥೆಗೆ ತಕ್ಕ ಸೈನ್ಸ್.‌ ಸೋ… ಈ ವ್ಯವಸ್ಥೆ ನಮ್ಮನ್ನು ಬೇಡ ಅಂದ್ರೆ ನಾವು ಆಚೆನೇ.

ಒಳಹೊರಗಣ ಅಂತರಗಳಲ್ಲಿ
ಬೆಂದ ಜೀವಗಳ ಲೆಕ್ಕ ಶೂನ್ಯ
ನಮ್ಮದು, ನಮ್ಮ, ನನ್ನಗಳ
ವಿಸ್ತಾರಗಳೇ ಇಲ್ಲದ
ಬಂದ್‌ ಕಮ್ರಾಗಳು
ಕತ್ತಲು ಬೆಳಕುಗಳ ಅಂತರಗಳನ್ನು
ಕಾಣದೇ ಇರವು “ನಮ್ಮವರು” ಗಳೆಷ್ಟೋ
ಆದರೂ ಜನ್ಮಗಳು… ಬದುಕುಗಳು…
ನಡೆಸಲು ನೆಲೆ ಬೇಕು
ಕಾಲ್ಕೆಳಗೆ ನೆಲೆಯೇ ಕುಸಿಯುವ
ವ್ಯವಸ್ಥೆ – ಎಂಥಾ ವಿಪಾರ್ಯಾಸ…

ನಂಗೆ ಚಿಕ್‌ ವಯಸ್ಸಿನಲ್ಲಿ ನಾನು ಗಂಡಸು ಅಂತ ಮನಸ್ಸಿಗೆ ಅನಿಸಿದ್ರೂ ಸುತ್ತ ಮುತ್ತ ಇರುವ ಗಂಡಸರ ಗಂಡಸುತನ ನೋಡುವಾಗ ಗಂಡಸುತನದ ಬಗ್ಗೆ ಹೇಸಿಗೆ ಹುಟ್ಟುತ್ತಿತ್ತು. ಯಾಕೆ ಅಂದ್ರೆ ಮನೆ ಕೆಲಸ ಮಾಡದೆ ಇರೋದು, ಹುಡುಗರನ್ನ ಅಡಿಗೆ ಮನೆಯೊಳಗೆ ಹೋಗೋದನ್ನೇ ತಪ್ಪಿಸಿ ಅವರು ಕೂತ್ಕಡೆ ಅವರಿಗೆ ಎಲ್ಲಾ ಸಪ್ಲೈ ಆಗೋದು, ಅವರ ಚಡ್ಡಿ ಕೂಡ ಅವರ ಅಮ್ಮಂದ್ರು ಒಗೀತಿದ್ರು ಅವರು ಎಷ್ಟೇ ದೊಡ್ಡವರಾದ್ರೂ. ಅಫ್‌ಕೋರ್ಸ್‌ ನಾನು ನೋಡಿದ್ದು ಚಿಕ್‌ ವಯಸ್ಸಿನಲ್ಲಿ ನಮ್ಮ ರೇಲ್ವೇ ಸ್ಟೇಷನ್‌ ಥರ ಮನೆಯಲ್ಲಿ ಪುತುಪುತು ಅಂತ ಜನರು ಅವರ ಮಕ್ಳು ಅದೂ ರಜಕ್ಕೆ ಅಜ್ಜಿನ ನೋಡಕ್ಕೆ ಅಂತ ಬಂದ್ಬಿಟ್ರೆ ಅಡುಗೆ ಮನೆಗೆ ಬ್ರೇಕೇ ಇಲ್ಲ. ಕಂಕು ಎಷ್ಟೋಂದ್‌ ಸರ್ತಿ ಅತ್ತಿರೋದೂ ಇದೆ ಕೆಲಸಕ್ಕೆ ಕೂರ್ದೆ. ಕಂಕು ಅವರ ಜೊತೆ ಜಗಳ ಆಡಿ ಕಡೆಗೆ ಮನೇಲಿ ಎಲ್ರಿಗೂ ರೂಲ್‌ ಮಾಡಿದ್ರು. ಯಾರು ಮನೆ ಕೆಲಸ ಮಾಡದೇ ಇರೋಂಗಿಲ್ಲ ಮಾಡದಿದ್ರೆ ಊಟ ಇಲ್ಲ. ಅಜ್ಜಿ ಅಜ್ಜ ಮಾವ ಅತ್ತೆ ಚಿಕ್ಕಮ್ಮ ಮಕ್ಳು ಯಾರನ್ನೂ ಸ್ಪೇರ್‌ ಮಾಡಿಲ್ಲ. ಆಗ್ಲಿಂದ ನಂಗೆ ನನ್‌ ಮೇಲ್‌ ಕಸಿನ್ಸ್‌ನ ನೋಡಿ ತಪ್ಪೀ ಗಂಡಸು ಅನ್ಕೊಳ್ಳೋದು ನೈಟ್‌ ಮೇರ್.‌

ರೇಖಾಚಿತ್ರ : ಕನಕಾ ಮೂರ್ತಿ

ಒಂದು ಲಿಂಗ ದೇಹಗಳ ವ್ಯತ್ಯಾಸಗಳಾದರೆ ಇನ್ನೊಂದು ನಮ್ಮ ಮನಸ್ಸು, ಇಚ್ಚೆ, ಆಯಕೆ, ಆಸೆ, ಮತ್ತೆ ಕಲ್ಪನೆ. ಅದು ನಮ್ಮ ತಲೆ ಕೂದಲಿಂದ ಉಂಗುಷ್ಟದವರೆಗೆ ನಮ್ಮದೇ ಆಗಿರಬೇಕು. ಇದು ಅಲ್ಟಿಮೇಟ್‌ ಉದ್ದೇಶ. ಎಲ್ಲಾ ಜನರೂ ಹೀಗೆ ಬದುಕಬೇಕು ಇದು ಅವರ ಹಕ್ಕು ಅಂತ ಇದ್ದರೂ ನಾವು ಸುಮಾರು ಪಾಲು ನಮ್ಮ ಜೀವನವನ್ನು ಒಂದು ರೀತಿಯಾ ಸಮಾಜಕ್ಕೆ ಹೆದರಕೊಂಡೇ ಅಡ್ಜಸ್ಟ್‌ ಮಾಡ್ಕೊತಾ ಇರ್ತೇವೆ. ಸಮಾಜದ ನೈತಿಕತೆಯ ರೂಲ್ಸ್‌ ಹೇಳುತ್ತೆ – ಗಂಡಸರು ಶಕ್ತಿಶಾಲಿಗಳು, ಮಸಲ್‌ ಪವರ್‌ ಜಾಸ್ತಿ, ಹೆಂಗಸರು ತುಂಬಾ ಎಮೊಷನಲ್ಲು ಸುಲಭವಾಗಿ ಅಳ್ತಾರೆ. ಇವೆಲ್ಲಾ ತುಂಬಾ ಬೋರಿಂಗ್‌. ಎಲ್ಲಾ ಗಂಡಸರೂ ಒಂದೇ ಥರ ಅಥವಾ ಎಲ್ಲಾ ಹೆಂಗಸರೂ ಒಂದೇ ಥರ ಎಂದು ರೂಲ್‌ ಎಲ್ಲೂ ಬರೆದಿಟ್ಟಿಲ್ಲ. ಹೆಂಗಸರು ಕೂದಲು ಉದ್ದಕ್ಕೆ ಬಿಡಬೇಕು, ಗಂಡಸರಿಗೆ ಕೋಪ ಜಾಸ್ತಿ.

ಭಾವನೆಗಳಿಗೆ ಇದು ಹೆಣ್ಣು ದೇಹ ನಾನು ಜಾಸ್ತಿ ಅಳ್ಸಬೇಕು ಇದು ಗಂಡು ದೇಹ ನಾನು ಜಾಸ್ತಿ ಕೋಪಾ ಕೂಗಾಡೋದನ್ನು ಮಾಡಸ್ಬೇಕು ಅಂತ ಗೊತ್ತಿರುತ್ತಾ. ಸುನಿಲ ನಾನು ಈ ಜೆಂಡರ್‌ ಬಗ್ಗೆ ನಮ್ಮನ್ನು ನಾವೇ ಅರ್ಥಮಾಡಿಕೊಳ್ಳುವುದರ ಜೊತೆಗೆ ನಮ್ಮಂಥವರ ಜೊತೆ ಮಾತಾಡ್ತಾ ಮಾತಾಡ್ತಾ ಹೆಚ್ಚು ಎಕ್ಸಪ್ಲೋರ್‌ ಮಾಡಕ್ಕೆ ಶುರು ಮಾಡಿದ್ವಿ. ಆಗ ನಮಗೆ ಅನ್ಸಿದ್ದು ನಾವು ನಮಗೆ ಬೇಕಿರುವ ದೇಹವನ್ನ ಆಯ್ಕೆ ಮಾಡುತ್ತೇವೆ ಆದ್ರೆ ನಂ ಭಾವನೆ ಅಂತ ಅಥವ ನಂ ಫೀಲಿಂಗ್ಸು ಅನ್ನೋದು ಎಲ್ಲರಿಗೂ ಇದೆ. ಕೋಪ, ಸಿಟ್ಟು, ಅಳು, ಮುಜುಗುರ, ಅಂಜಿಕೆ, ಹೆದರಿಕೆ, ಕಾಂಪ್ಲೆಕ್ಸಸ್‌, ನಾಚಿಕೆ, ಸಂಕೋಚ, ನೋವು, ಖುಶಿ, ಪರಮಾನಂದ, ನಶೆ, ದುಖ, ಚೀರಾಟ, ನರಳಾಟ, ನಗು, ಅಟ್ಟಹಾಸ, ಮುಗುಳು ನಗು… ಇವೆಲ್ಲ ಗಂಡು ಹೆಣ್ಣು ಅಂತ ನೋಡಿಬರಲ್ಲ. ಇದು ಎಲ್ಲರಿಗೂ ಇದೆ. ಆಗ ನಮ್‌ ಜೆಂಡರ್‌ ಅನ್ನೋದು ನನ್ನ ದೇಹದ, ನನ್ನ ಗುಣದ ಆಯಕೆ.

ಅಂದ್ರೆ ನಾನು ಯಾವ ಥರದ ಮನುಷ್ಯ ಆಗಬೇಕು, ನಾನು ಹೇಗೆ ಈ ಸಮಾಜದ ನೈತಿಕತೆಯ ರೂಲ್‌ ಥರದ ಗಂಡಸು ಆಗ್ಬಾರ್ದು ದ ಒನ್‌ ಹು ಇಸ್‌ ಮ್ಯಾಚೋ… ಮ್ಯಾಚೊ ಅನ್ನೋದಕ್ಕೆ ಅರ್ಥನೇ ಇಲ್ಲ. ನಾನು ಈ ಸಮಾಜಕ್ಕೆ ಬೇರೆ ಹೆಸರು ಗೊತ್ತಿಲ್ಲದಿರುವ ಕಾರಣಕ್ಕೆ ಟ್ರಾನ್ಸ್‌ ಗಂಡಸು ಅಂತ ಗುರ್ತಿಸ್ತೀನಿ. ಟ್ರಾನ್ಸ್‌ ಅಂದ್ರೆ ಇಲ್ಲಿ ಲಿಂಗ ಬದಲಾಯಿಸಿರುವ ಅಂತನೂ ಆಗುತ್ತೆ ಮತ್ತೆ ನನ್ನ ಪ್ರಕಾರ ಸಮಾಜದ ಹೇಳುವ ಥರ ಗಂಡಸ ಅರ್ಥದಿಂದ ದೂರ ಹೋಗಿ ನಾನು ನನ್ನ ಆಯಕೆಯಾಗಿರುವ ಮೃದು ಸಹೃದಯೀ ಗಂಡಸು ಎನ್ನುತ್ತೇನೆ. ಬಟ್‌ ನಂಗೆ ಗಡ್ಡ ತುಂಬಾ ಇಷ್ಟ. ದಿ ಫ್ಯಾಸಿನೇಷನ್‌ ಆಫ್‌ ಬೀಯಿಂಗ್‌ ಮ್ಯಾನ್.‌

ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು. ಹದಿನೈದು ದಿನಕ್ಕೊಮ್ಮೆ ಪ್ರಕಟವಾಗುವ ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ ಸ್ವಾಗತ : tv9kannadadigital@gmail.com

ಈ ಅಂಕಣದ ಪ್ರವೇಶಿಕೆ : Transgender World : ‘ಇನ್ನೊಬ್ಬರ ಅನುಭವದ ಮೇಲೆ ಸಿದ್ಧಾಂತ ಸೃಷ್ಟಿಸಲು ನಮಗೇನು ಹಕ್ಕಿದೆ?’ ಸದ್ಯದಲ್ಲೇ ನಿರೀಕ್ಷಿಸಿ ‘ರೂಮಿ ಕಾಲಂ’

Published On - 4:58 pm, Tue, 26 October 21