Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ

War : ಅಮೆರಿಕವು ವಿಯೆಟ್ನಾಂ ವಿರುದ್ಧ ಯುದ್ಧ ಸಾರಿದಾಗ, ಅಲ್ಲಿ ನಡೆಯುತ್ತಿದ್ದ ಹತ್ಯಾಕಾಂಡವನ್ನು ಪ್ರತಿಭಟಿಸಿ ಅಮೆರಿಕನ್ ತರುಣಿಯರು, ಅನೇಕ ಅಮೆರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಹವ್ಯಾಸಿ ನಾಟಕ ತಂಡಗಳನ್ನು ಕಟ್ಟಿಕೊಂಡು ಈ ನಾಟಕವನ್ನು ಪ್ರದರ್ಶಿಸಿದ್ದರು.

Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ
ಕವಿ ವಿಲ್​ಫ್ರೆಡ್ ಓವನ್
Follow us
|

Updated on:Mar 05, 2022 | 1:21 PM

ವೈಶಾಲಿಯಾನ | Vaishaliyaana : ಹೆಕ್ಟರನ ಮಡದಿ ಯುವರಾಣಿ ಆಂಡ್ರೋಮಖೆಯನ್ನು ಅಖಿಲಸ್‌ನ ಮಗ ತನ್ನ ದಾಸಿಯೆಂದು ಎಳೆದೊಯ್ಯತ್ತಾನೆ. ಆಂಡ್ರೋಮಖೆಯ ಎಳೆಯ ಕಂದ, ಇನ್ನೂ ಮೊಲೆ ಹಾಲು ಕುಡಿಯುವ ಹಸುಳೆ ಏಸ್ಟಿಯಾನಕ್ಸ್​ನನ್ನು ಆಕೆಯಿಂದ ಬಲವಂತವಾಗಿ ಸೆಳೆದುಕೊಂಡು, ಟ್ರಾಯ್ ನಗರದ ಕೋಟೆಯ ಗೋಡೆಗಳ ಮೇಲಿಂದ ಎಸೆದು ಅಮಾನುಷವಾಗಿ ಹತ್ಯೆ ಮಾಡಲಾಗುತ್ತದೆ. ಆ ಮಗುವನ್ನು ಬೆಳೆಯಲು ಬಿಟ್ಟರೆ, ಮುಂದೆ ದೊಡ್ಡವನಾಗಿ ಗ್ರೀಕರ ವಿರುದ್ಧ ಸೇಡು ತೀರಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಅವರದು. ಮೊಮ್ಮಗನ ಕಳೇಬರವನ್ನು ನೋಡಿ ಮೂರ್ಛೆಹೋಗುವ ಹೆಕ್ಯೂಬ ರಾಣಿಗೆ ತನ್ನ ಮಗಳಾದ ರಾಜಕುಮಾರಿ ಪಾಲಿಕ್ಸೆನಾಳನ್ನು ಗ್ರೀಕರು ಮಡಿದ ತಮ್ಮ ನಾಯಕರ ಅಂತ್ಯಕ್ರಿಯೆ ಮಾಡುವಾಗ, ತಮ್ಮ ದೇವತೆಗಳಿಗೆ ನರಬಲಿಯಾಗಿ ಅರ್ಪಿಸಿದರೆಂದು ತಿಳಿಯುತ್ತದೆ. ಟ್ರೋಜನ್ನರ ಹಿರಿಯ ರಾಜಕುಮಾರಿ, ಬ್ರಹ್ಮಚಾರಿಣಿ ಹಾಗೂ ಅಥೆನಾ ದೇವತೆಯ ಪೂಜಾರಿಣಿಯಾದ ಕೆಸಾಂಡ್ರಳನ್ನು ಗ್ರೀಕರ ಮತ್ತೊಬ್ಬ ನಾಯಕ ಏಜಾಕ್ಸ್ ಬಲಾತ್ಕಾರಗೈಯುತ್ತಾನೆ. ಡಾ. ಕೆ. ಎಸ್. ವೈಶಾಲಿ (Dr. K.S Vaishali)

(ಯಾನ 5, ಭಾಗ 2)

ಶಾಪಗ್ರಸ್ತೆಯಾದ ರಾಜಕುಮಾರಿ ಕೆಸಾಂಡ್ರಳಿಗೆ ಭವಿಷ್ಯದ್ದರ್ಶನದ ಶಕ್ತಿಯಿದ್ದರೂ ಅದನ್ನು ಯಾರೂ ನಂಬಲಾರರು. ಆಕೆಯನ್ನು ರಾಜ ಅಗಮೆಮ್‌ನಾನನ ದಾಸಿಯಾಗಿ ಹರಾಜು ಮಾಡಲಾಗುತ್ತದೆ. ಹೊತ್ತಿ ಉರಿಯುವ ಟ್ರಾಯ್ ನಗರದಿಂದ, ತನ್ನ ತಂದೆ ಆಂಚೈಸಿಸ್‌ನನ್ನು, ಮಗ ಅಸ್ಕೇನಿಯಸ್‌ರನ್ನು ಹೆಗಲು ಮೇಲೆ ಹೊತ್ತು, ತಪ್ಪಿಸಿಕೊಳ್ಳುವ ರೋಮನ್ ಚಕ್ರವರ್ತಿ ಏನಿಯಾಸ್‌ನ ಸಾಹಸಗಳನ್ನು ವರ್ಜಿಲ್ ಕವಿ ತನ್ನ ಮಹಾಕಾವ್ಯವಾದ ಏನೀಡ್ ನಲ್ಲಿ ಚಿತ್ರಿಸಿದ್ದಾನೆ.

ಕ್ರಿಸ್ತಪೂರ್ವ ಕಾಲದ ಮತ್ತೊಂದು ಸ್ವಾರಸ್ಯಕರವಾದ ನಾಟಕವಾದ ಲೈಸಿಸ್ರಾಟ ಕೂಡ ಯುದ್ಧ ವಿರೋಧಿ ಮೌಲ್ಯಗಳನ್ನು ಸಾರುವ, ಅಮೋಘ ವಿಡಂಬನಾತ್ಮಕ ನಾಟಕ. ಅರಿಸ್ಟೋಫೇನಸ್ ಬರೆದ ಈ ನಾಟಕದಲ್ಲಿ, ಸಮರೋತ್ಸಾಹಿಗಳಾಗಿ, ರಕ್ತಪಿಪಾಸುಗಳಾಗಿದ್ದ, ತಮ್ಮ ಪುರುಷರನ್ನು, ಕದನ ವಿರಾಮ ಘೋಷಿಸಿ ಯುದ್ಧಕ್ಕೆ ಅಂತ್ಯ ಹಾಡುವಂತೆ ಒತ್ತಾಯಿಸಲು, ಅಲ್ಲಿಯ ಹೆಂಗಸರೆಲ್ಲ ಸೇರಿ, ಲೈಸಿಸ್ರಾಟ ಎಂಬ ಚತುರ ಮಹಿಳೆಯ ನಾಯಕತ್ವದಲ್ಲಿ ತಮ್ಮ ಗಂಡಂದಿರು, ಸಂಗಾತಿಗಳು ಯುದ್ಧ ನಿಲ್ಲಿಸುವವರೆಗೂ, ತಾವು ಅವರೊಡನೆ ಲೈಂಗಿಕ ಸಂಭೋಗದಲ್ಲಾಗಲೀ, ಸರಸ- ಸಲ್ಲಾಪ, ಪ್ರಣಯದಲ್ಲಾಗಲೀ ತೊಡಗುವುದಿಲ್ಲವೆಂದು ಮುಷ್ಕರ ಹೂಡುವ ಸೋಜಿಗದ ಪ್ರಸಂಗವನ್ನು ನಾಟಕಕಾರ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ.

ಇದನ್ನೂ ಓದಿ : ವೈಶಾಲಿಯಾನ : ಎಂಟನೇ ವಯಸ್ಸು ಬಾಲಿಕೆಯ ಮದುವೆಗೆ ಸೂಕ್ತ ಎಂದಿದ್ದ ಮನು ಮತ್ತವನ ಸ್ಮೃತಿಯ ಪರಿಣಾಮಗಳು

ಈ ನಾಟಕವನ್ನು ಪೀಲೋಪೊನ್ನೇಷಿಯನ್ ಯುದ್ಧಗಳ ಕಾಲದಲ್ಲಿಯೇ ಆತ ಬರೆದನೆಂದು ಹೇಳಲಾಗುತ್ತದೆ. ಕ್ರಿಸ್ತಪೂರ್ವದ ಈ ನಾಟಕದ ಪ್ರಭಾವ ಎಷ್ಟಿತ್ತೆಂದರೆ, ಅಮೆರಿಕವು ವಿಯೆಟ್ನಾಂ ವಿರುದ್ಧ ಯುದ್ಧ ಸಾರಿದಾಗ, ಅಲ್ಲಿ ನಡೆಯುತ್ತಿದ್ದ ಹತ್ಯಾಕಾಂಡವನ್ನು ಪ್ರತಿಭಟಿಸಿ ಅಮೆರಿಕನ್ ತರುಣಿಯರು, ಅನೇಕ ಅಮೆರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಹವ್ಯಾಸಿ ನಾಟಕ ತಂಡಗಳನ್ನು ಕಟ್ಟಿಕೊಂಡು ಈ ನಾಟಕವನ್ನು ಪ್ರದರ್ಶಿಸಿದ್ದರು. ಆ ವರದಿಗಳನ್ನು ಓದಿ ನಾನು ಪುಳಕಿತಳಾಗಿದ್ದೆ! ಹಲವಾರು ವರ್ಷಗಳ ಹಿಂದೆ, ಹೆಗ್ಗೋಡಿನ ನೀನಾಸಂ ರಂಗತಂಡದ ಕಲಾವಿದರು ಅಭಿನಯಿಸಿ, ಪ್ರದರ್ಶಿಸಿದ ಈ ನಾಟಕದ ಕನ್ನಡ ರೂಪಾಂತರವಾದ ಲೋಕೋತ್ತಮೆ ಭರ್ಜರಿ ಯಶಸ್ಸನ್ನು ಕಂಡಿತ್ತು.

ಸಾಹಿತ್ಯಕ್ಕೆ ಮನಸ್ಸುಗಳನ್ನು ಪರಿವರ್ತಿಸಲು ಬೇಕಾಗುವ ನಿಟ್ಟನಲ್ಲಿ ದಿಟವಾಗಿಯೂ ಅಪರಿಮಿತವಾದ ಶಕ್ತಿಯಿದೆಯೆಂದು ನಾನು ನಂಬಿದ್ದೇನೆ. ಮೊದಲನೆಯ ಮಹಾಯುದ್ಧದಲ್ಲಿ 26ರ ಎಳೆಯ ಪ್ರಾಯದಲ್ಲೇ ಯುದ್ಧಭೂಮಿಯಲ್ಲಿ ಗಾಯಗೊಂಡು ಸಾವನ್ನಪ್ಪಿದ ಪ್ರತಿಭಾವಂತ ಬ್ರಿಟಿಷ್ ಕವಿ ವಿಲ್‌ಫ್ರೆಡ್ ಓವನ್‌ನ ಕವನಗಳಲ್ಲಿ ಅಭಿವ್ಯಕ್ತಗೊಂಡ ಮನುಷ್ಯರ ಸಂವೇದನಾರಹಿತ ಅಮಾನವೀಯತೆಯ ಖಂಡನೆ ಮತ್ತು ಯುದ್ಧ ತಂದೊಡ್ಡುವ ದೈನ್ಯಾವಸ್ಥೆಯ ಹೃದಯ ವಿದ್ರಾವಕ ವರ್ಣನೆಗಳನ್ನು ಯಾರು ತಾನೆ ಕಡೆಗಣಿಸಲು ಸಾಧ್ಯ! ಹಿಂದಿನ ತಲೆಮಾರಿನ ಕವಿಗಳು ದೇಶಭಕ್ತಿಯಿಂದ ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರನ್ನು ಕೊಂಡಾಡಿದರೆ, ಓವನ್ ತನ್ನ ಕವನಗಳಾದ Strange Meeting, Dulce et Decorum est, Anthem for Doomed Youth, Insensibility ಮುಂತಾದವುಗಳಲ್ಲಿ ಯುದ್ಧದ ನಿರರ್ಥಕತೆ, ಕ್ರೌರ್ಯ, ಹತಾಶೆ, ಕರುಣಾಜನಕ ಅಸಹಾಯಕತೆಗಳ ಕುರಿತು ನಮ್ಮ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವಂತೆ ಬರೆದ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Ukraine Invasion: ವೈಶಾಲಿಯಾನ; ಮಹಾಕೃತಿಗಳು ಕಟ್ಟಿಕೊಟ್ಟ ಮೌಲ್ಯಗಳನ್ನು ವಿಸ್ಮೃತಿಗೊಳಗಾಗಿ ನಿರ್ಲಕ್ಷಿಸುತ್ತಿದ್ದೇವೆ

Published On - 1:19 pm, Sat, 5 March 22

ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಸಂಜು 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಅದ್ದೂರಿ, ಸಡಗರದ ದಸರಾ ಉತ್ಸವ, ಸಿದ್ದರಾಮಯ್ಯ ಸರ್ಕಾರಕ್ಕೆ ಫುಲ್ ಮಾರ್ಕ್ಸ್
ಅದ್ದೂರಿ, ಸಡಗರದ ದಸರಾ ಉತ್ಸವ, ಸಿದ್ದರಾಮಯ್ಯ ಸರ್ಕಾರಕ್ಕೆ ಫುಲ್ ಮಾರ್ಕ್ಸ್
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ