S.V. Parameshwar Bhat Birth Anniversary: ನನ್ನಂತರಂಗದಿ ನಂದದೆ ನಿಂದೀಪ ನಂದಾದೀಪವಾಗಿರಲಿ ದೀಪ ಹಚ್ಚಾ

Poetry: ‘ಇವರ ಮೊದಲ ಕವನ ಸಂಕಲನ ‘ರಾಗಿಣಿ’ ಪ್ರಕಟವಾಗಿದ್ದು 1940ರಲ್ಲಿ, ಆಗಿವರ ವಯಸ್ಸು 23. ಈ ಸಂಕಲನದಲ್ಲಿ ಹೆಚ್ಚಾಗಿರುವುದು ಪ್ರೇಮಕವಿತೆಗಳೇ. ಆದರೆ ಅವುಗಳು ಕೆ. ಎಸ್.ಎನ್​ ಅವರ ಕವಿತೆಗಳಲ್ಲಿನ ಕುಟುಂಬದ ಚೌಕಟ್ಟನ್ನೂ ಹೊಂದಿರಲಿಲ್ಲ. ಇಂದ್ರಿಯ ಆಕರ್ಷಣೆಯಂತೂ ಯಾವ ಕವಿತೆಗಳಲ್ಲೂ ಇರುತ್ತಿರಲಿಲ್ಲ. ಅವೆಲ್ಲವೂ ದೈವಿಕ ಪ್ರೇಮದ ಗೀತೆಗಳು.’ ಎನ್. ಎಸ್. ಶ್ರೀಧರಮೂರ್ತಿ

S.V. Parameshwar Bhat Birth Anniversary: ನನ್ನಂತರಂಗದಿ ನಂದದೆ ನಿಂದೀಪ ನಂದಾದೀಪವಾಗಿರಲಿ ದೀಪ ಹಚ್ಚಾ
ಹಿರಿಯ ಕವಿ ಎಸ್. ವಿ. ಪರಮೇಶ್ವರ ಭಟ್
Follow us
ಶ್ರೀದೇವಿ ಕಳಸದ
|

Updated on:Feb 08, 2022 | 2:28 PM

ಎಸ್. ವಿ. ಪರಮೇಶ್ವರ ಭಟ್ | S. V. Parameshwar Bhat : ಪರಮೇಶ್ವರ ಭಟ್ಟರ ಕವಿತೆಗಳಲ್ಲಿ ನವೋದಯದ ಕಾವ್ಯಗಳಂತೆ ಅನುರಾಗ, ಪ್ರಕೃತಿ ವರ್ಣನೆಗೆ ಮಹತ್ವ ದೊರೆತಿದ್ದರೂ ಜೀವನವೇ ಅವರ ಕಾವ್ಯದ ಪ್ರಧಾನ ವಸ್ತು. ಬದುಕಿನ ಸಂಘರ್ಷಗಳ ಕುರಿತು ಸದಾ ಚಿಂತಿಸುತ್ತಾ ಬಂದ ಅವರ ಮುಕ್ತಕ, ವಚನಗಳಲ್ಲಂತೂ ಮಾಗಿದ ಜೀವನಾನುಭವ ಧಾರೆ ಧಾರೆಯಾಗಿ ಹರಿದು ಬಂದಿದೆ. ಕನ್ನಡ ನಾಡಿನ ಕುರಿತು, ಮಹಾತ್ಮ ಗಾಂಧಿ, ಜವಾಹರಲಾಲ ನೆಹರೂ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕವಿತೆಗಳನ್ನು ಅವರು ಬರೆದಿದ್ದಾರೆ. ಪ್ರಾಚಿನ ಕವಿ ವೇದವ್ಯಾಸರಿಂದ ಹಿಡಿದು ತಮ್ಮ ಕಾಲದ ಹಿರಿಯರಾದ ವೆಂಕಣ್ಣಯ್ಯನವರವರೆಗೆ ಅವರು ವಿಪುಲ ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ತಮ್ಮ ಕಾಲದ ವೈಜ್ಞಾನಿಕ ಬೆಳವಣಿಗೆಗಳ ಕುರಿತೂ ಭಟ್ಟರು ಕವಿತೆಗಳನ್ನು ಬರೆದಿದ್ದಾರೆ. ಅದರಂತೆ ವಿಜ್ಞಾನಿಯನ್ನು ಕುರಿತೂ ಕವಿತೆಯನ್ನು ಬರೆದಿದ್ದಾರೆ. ವೈಜ್ಞಾನಿಕ ಬೆಳವಣಿಗೆಯ ಜೊತೆಗೆ ಅಧ್ಯಾತ್ಮವೂ ಸೇರ ಬೇಕು ಎನ್ನುವ ಆಶಯ ಅವರ ಕವಿತೆಗಳಲ್ಲಿ ಕಂಡು ಬಂದಿದೆ. ನವೋದಯದ ಉಗ್ರ ಪ್ರತಿಪಾದಕರಾಗಿದ್ದ ಅವರ ಕವಿತೆಗಳಲ್ಲಿ ನವ್ಯ ಸಾಹಿತ್ಯದ ಕುರಿತು ಟೀಕೆಗಳೂ ಕೂಡ ಕಂಡುಬಂದಿವೆ.

ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು

*

(ಭಾಗ – 2)

ನವ್ಯ ಸಾಹಿತ್ಯದ ಕುರಿತು ಬಂದ ಟೀಕೆಗೆ ಉದಾಹರಣೆಯಾಗಿ ಇದನ್ನು ಗಮನಿಸಿ:

ಹೆತ್ತವಳಿಗೆ ತನ್ನ ಹೆಗ್ಗಣ ಮುದ್ದಾಗಿ

ತೋರುವುದು ಖಚಿತ.

ನವ್ಯ ಕವಿಗಳಿಗೆಲ್ಲಾ ನವ್ಯ ಕಾವ್ಯ ಹಾಗೆ

ಮುದ್ದಾಗಿ ಕಾಣುವುದು ಉಚಿತ.

ಅಥವಾ

ನವ್ಯ ಕಾವ್ಯದೊಳು ಪ್ರತಿಪದವೂ ಅರ್ಥವಾಗುತ್ತದೆ

ತಾತ್ಪರ್ಯಾರ್ಥ ಮಾತ್ರ ಅರ್ಥವಾಗದೆ ಉಳಿಯುತ್ತದೆ

ಕವಿಯ ಕೇಳಿದರೆ ಆತ ಸಹ ಅರ್ಥೈಸಲಾರ.

ಎಂಥ ಅಸಹಾಯಕ ಪರಿಸ್ಥಿತಿಯಾಯಿತು ಸದಾಶಿವ ಗುರು?

ಎನ್ನುವಂತಹ ಕಟಿಕಿಗಳನ್ನು ಅವರ ಕಾವ್ಯದಲ್ಲಿ ನೋಡಬಹುದು. 

ಇದನ್ನೂ ಓದಿ : Mysore Ananthaswamy Death Anniversary : ಅವರು ಸಂಗೀತ ಹುಡುಕುತ್ತಿರಲಿಲ್ಲ, ಸಂಗೀತವೇ ಅವರನ್ನು ಹುಡುಕುತ್ತಾ ಇತ್ತು

ಪರಮೇಶ್ವರ ಭಟ್ಟರ ಮೊದಲ ಕವನ ಸಂಕಲನ ‘ರಾಗಿಣಿ’ ಪ್ರಕಟವಾಗಿದ್ದು 1940ರಲ್ಲಿ ಅದು ಕನ್ನಡದಲ್ಲಿ ನವೋದಯ ಸಾಹಿತ್ಯ ನಳನಳಿಸುತ್ತಿದ್ದ ಕಾಲ. ಆಗ ಕವಿಗೂ 23 ವರ್ಷ. ಕಾಲಮಾನವೂ ವಯೋಮಾನವೂ ಸೇರಿದಂತೆ ಈ ಸಂಕಲನದಲ್ಲಿ ಹೆಚ್ಚಾಗಿರುವುದು ಪ್ರೇಮಕವಿತೆಗಳೇ. ಆದರೆ ಅವುಗಳಲ್ಲಿ ಕೆ. ಎಸ್. ನರಸಿಂಹಸ್ವಾಮಿಯವರಲ್ಲಿ ಕಾಣುವ ಕುಟುಂಬದ ಚೌಕಟ್ಟು ಕಾಣುವುದಿಲ್ಲ. ಇಂದ್ರಿಯ ಆಕರ್ಷಣೆಯಂತೂ ಯಾವ ಕವಿತೆಗಳಲ್ಲೂ ಇಲ್ಲ. ಅವೆಲ್ಲವೂ ದೈವಿಕ ಪ್ರೇಮದ ಗೀತೆಗಳು. ಪ್ರಕೃತಿ ಈ ಪ್ರೇಮದ ಹಿನ್ನೆಲೆಯಾಗಿ ನಿಲ್ಲುವಂತಹುದು. ಇಲ್ಲಿನ ಬಹುತೇಕ ಪ್ರೇಮಗೀತೆಗಳು ಇನ್ನೊಂದು ನೆಲೆಯಲ್ಲಿ ಪ್ರಕೃತಿ ಗೀತೆಗಳೂ ಆಗಿರುವುದು ವಿಶಿಷ್ಟವಾದ ಸಂಗತಿ. ಮಲೆನಾಡಿನ ಮಳೆ ಪ್ರಿಯತಮೆಯ ನೆನಪನ್ನು ತರುತ್ತದೆ. ಮೋಡ ಬಿಸಿಲು ಮುನಿದ ಇನಿಯಳ ನೆನಪನ್ನು ತರುತ್ತದೆ. ಮಳೆಬಿಲ್ಲು ಮನದನ್ನೆಯ ಪವಳದುಟಿಯ ಚೆಂಗನ್ನೆಯ ಬಣ್ಣವಾಗಿ ಕಾಡುತ್ತದೆ. ಮಿಂಚು ಕುಪಿತೆಯ ಕಣ್ಣ ನೋಟವಾಗುತ್ತದೆ. ತನ್ನವಳಲ್ಲಿಗೆ ಹೊರಟ ಇನಿಯನನ್ನು ಎಲ್ಲಿಗೆ ಎಲ್ಲಿಗೆ ಪಯಣವೆಲ್ಲಿಗೆ ಎನ್ನುತ್ತಾ ಮಲ್ಲಿಗೆ ಗುಲಾಬಿ ಬಕುಳ ಚಂಪಕ ಮೊದಲಾದ ಪುಷ್ಟಗಳು ಕಾಡುತ್ತವೆ. ಒಲವಿನ ಯಮುನಾ ನದಿಯಂತೆ ತುಂಗೆ ಅವರ ಕವಿತೆಗಳಲ್ಲಿ ಹರಿಯುತ್ತದೆ. ಇಲ್ಲಿನ ಕವಿತೆಗಳಲ್ಲಿನ ಪ್ರೇಮ ಭಾವವಾದರೂ ದೈವಿಕವಾದದ್ದು. ‘ರಾಧಾಕೃಷ್ಣ’ರ ಒಲವು ಇಲ್ಲಿನ ಸ್ಪೂರ್ತಿ. ಇದೇ ಹೆಸರಿನ ಕವಿತೆ ಕೂಡ ಸಂಕಲನದಲ್ಲಿದೆ. ಅಲ್ಲಿನ ಈ ಸಾಲುಗಳು ಸಂಕಲನದ ಆಶಯವನ್ನೂ ಹೇಳುವಂತಿವೆ…

ಪ್ರೇಮವೆ ಮೂರ್ತೀಭವಿಸಿದ ರಾಧೆ,

ಪ್ರೇಮದ ಕಿಂಕರನಾದಾ ಕೃಷ್ಣ

ಒಲಿಸುವವರಾರೂ ಒಲಿಯುವರಾರೂ

ಒಲವಿದೆ, ಗೆಲುವಿದೆ, ಪ್ರೇಮವಿದೆ.

ಇದು ಒಂದು ರೀತಿಯಲ್ಲಿ ಸಂಕಲನದ ತಾತ್ವಿಕತೆಯನ್ನು ಹೇಳುತ್ತದೆ ಎನ್ನಬಹುದು. ಹಲವು ಗಹನ ತಾತ್ವಿಕತೆಯನ್ನು ಈ ಸಂಕಲನದಲ್ಲಿ ಪರಮೇಶ್ವರ ಭಟ್ಟರು ನೀಡಲು ಪ್ರಯತ್ನಸಿದ್ದಾರೆ. ‘ದೀಪ ಹಚ್ಚಾ’ಎನ್ನುವ ಜನಪ್ರಿಯ ಕವಿತೆಯಲ್ಲಂತೂ ಅನುರಾಗ ವಿಶಾಲ ಅಯಾಮಗಳನ್ನು ಪಡೆಯುತ್ತಾ ಹೋಗಿದೆ. ‘ಪ್ರೀತಿಯ ರತಿಗೆ ಬೆಳಕಿನ ಆರತಿಯನ್ನು’ ಸೇರಿಸಿರುವ ಕವಿ ದೀಪ ಹಚ್ಚುವ ನಲ್ಲನನ್ನು ‘ಜ್ಯೋತಿ ಸ್ವರೂಪನೆ, ಸ್ವಯಂ ಪ್ರಕಾಶನೆ, ತೇಜೋ ರೂಪನೆ’ಎನ್ನುವ ದೈವಿಕ ನೆಲೆಗೆ ಕರೆದುಕೊಂಡು ಹೋಗಿದ್ದಾರೆ. ಬಹಿರಂಗದ ದೀಪದ ಕರೆಯಾಗಿ ಆರಂಭಗೊಂಡ ಕವಿತೆ ಅಂತರಂಗದ ಬೆಳಕಿನ ಹುಡುಕಾಟವಾಗಿ ಬೆಳೆದು

ನನ್ನಂತರಂಗದಿ ನಂದದೆ ನಿಂದೀಪ

ನಂದಾದೀಪವಾಗಿರಲಿ

ದೀಪ ಹಚ್ಚಾ

ಎನ್ನುವ ವಿಶಾಲ ನೆಲೆಯನ್ನು ತಲುಪುತ್ತದೆ. ಈ ಅರ್ಥದಲ್ಲಿ ಇದನ್ನು ಪರಮೇಶ್ವರ ಭಟ್ಟರ ಮಾತ್ರವಲ್ಲ ಕನ್ನಡದ ಶ್ರೇಷ್ಠ ಕವಿತೆಗಳಲ್ಲಿ ಒಂದು ಎಂದು ಪರಿಗಣಿಸಬಹುದು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಮೊದಲ ಭಾಗ : S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು

Published On - 1:51 pm, Tue, 8 February 22

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್